Ration Card update: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಇಲ್ಲಿದೆ ಮಾಹಿತಿ 

Picsart 25 02 08 22 20 25 807

WhatsApp Group Telegram Group

ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಮಹತ್ವದ ಪ್ರಕಟಣೆ!

ರೇಷನ್ ಕಾರ್ಡ್ (Ration Card) ಗೃಹಸ್ಥರಿಗೆ ಮಾತ್ರವಲ್ಲ, ಆಹಾರ ಭದ್ರತೆಗಾಗಿ ಅವಲಂಬಿತ ಜನರಿಗೆ ಅತ್ಯಂತ ಮುಖ್ಯವಾದ ಒಂದು ಸರ್ಕಾರದ ಪಡಿತರ ಸೌಲಭ್ಯವಾಗಿದೆ. ಸಾಮಾನ್ಯವಾಗಿ, ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ (New Members) ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ, ಆಹಾರ ಇಲಾಖೆ ಈ ನಿಯಮವನ್ನು ಸಡಿಲಿಸಿ, ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಅರ್ಜಿ (Apllication) ಸಲ್ಲಿಸಲು ನಿಗದಿಪಡಿಸಿದ್ದ ಅವಧಿಯನ್ನು ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಎಲ್ಲಿಯವರೆಗೆ ಅವಕಾಶ ಕಲ್ಪಿಸಲಾಗಿದೆ? ಹೇಗೆ ಅರ್ಜಿ ಸಲ್ಲಿಸಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ಈ ಹೊಸ ನಿರ್ಧಾರದ ಅನ್ವಯ, ಪಡಿತರ ಚೀಟಿಯ ತಿದ್ದುಪಡಿಗೆ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಫೆಬ್ರವರಿ 2025 ತಿಂಗಳ ಕೊನೆಯವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ ಅನೇಕ ಫಲಾನುಭವಿಗಳು ತಮ್ಮ ಪಡಿತರ ಚೀಟಿಯ ಅಗತ್ಯ ಬದಲಾವಣೆಗಳನ್ನು (Important Update) ಮಾಡಿಸಿಕೊಳ್ಳಲು ಹೆಚ್ಚಿನ ಅವಕಾಶ ಪಡೆಯಲಿದ್ದಾರೆ.

ಆಹಾರ ಇಲಾಖೆ (Food Department) ಪ್ರಕಟಣೆಯ ಪ್ರಕಾರ, ಕೆಲವು ಗ್ರಾಹಕರು ಮಾತ್ರ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ವಿವರ ಕೆಳಗಿನಂತಿದೆ:

1. ಪಡಿತರ ಚೀಟಿಯಲ್ಲಿನ ಸದಸ್ಯರ ಹೆಸರಿನ ತಿದ್ದುಪಡಿ:
ಈ ಅವಧಿಯಲ್ಲಿ ಸದಸ್ಯರ ಹೆಸರಿನಲ್ಲಿ ಅಕ್ಷರ ದೋಷಗಳು ಅಥವಾ ತಪ್ಪು ಹೆಸರುಗಳಿದ್ದರೆ, ಸರಿಪಡಿಸಿಕೊಳ್ಳಬಹುದು.
2. ಹೊಸ ಸದಸ್ಯರ ಸೇರ್ಪಡೆ (Adding New Members) :
ಕುಟುಂಬದ ಹೊಸ ಸದಸ್ಯರನ್ನು (ಮಕ್ಕಳು, ಪತ್ನಿ, ಪತಿ) ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
3. ಕುಟುಂಬದ ಮುಖ್ಯಸ್ಥರ ಬದಲಾವಣೆ:
ಕುಟುಂಬದ ಮುಖ್ಯಸ್ಥನ (Head of the Family) ಮಾಹಿತಿ ಬದಲಾಯಿಸಲು ಅವಕಾಶ ನೀಡಲಾಗಿದೆ.
4. ನ್ಯಾಯಬೆಲೆ ಅಂಗಡಿ ಬದಲಾವಣೆ:
ಪಡಿತರ ವಿತರಣೆ ಮಾಡುವ ಅಂಗಡಿ ಬದಲಾವಣೆಗೊಳಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ.
5. ವಿಳಾಸ ಬದಲಾವಣೆ (Address Changing) :
ಸ್ಥಳಾಂತರವಾದ ಕುಟುಂಬಗಳು ತಮ್ಮ ಹೊಸ ವಿಳಾಸವನ್ನು ಪಡಿತರ ಚೀಟಿಯಲ್ಲಿ ನವೀಕರಿಸಿಕೊಳ್ಳಬಹುದು.
6. ಇ-ಕೆವೈಸಿ (e-KYC) ಮಾಡಿಕೊಳ್ಳಲು ಅವಕಾಶ:
ಪಡಿತರ ಚೀಟಿಗೆ ಸದಸ್ಯರ e-KYC (ಆಧಾರ್ ಕಾರ್ಡ್ ಮಾನ್ಯತೆ) ಅಪ್‌ಡೇಟ್ ಮಾಡಬಹುದಾಗಿದೆ.
7. ಮೃತ ಸದಸ್ಯರ ಹೆಸರು ತೆಗೆಯುವಿಕೆ:
ಕುಟುಂಬದ ಸದಸ್ಯರು ಮರಣ ಹೊಂದಿದ್ದರೆ, ಅವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಬಹುದು.
8. ಸದಸ್ಯರ ಪೋಟೋ ಬದಲಾವಣೆ:
ಹಳೆಯ ಅಥವಾ ತಪ್ಪಾದ ಪೋಟೋಗಳನ್ನು ಹೊಸ ಫೋಟೋ ಮೂಲಕ ಅಪ್‌ಡೇಟ್ (Update) ಮಾಡಬಹುದು.

ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ (How to Apply for Amendment) ? 

ಗ್ರಾಹಕರು ತಮ್ಮ ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದಂತೆ ತಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One), ಅಥವಾ ಬೆಂಗಳೂರು ಒನ್ (Bangalore One) ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Documents) ಹೀಗಿವೆ :

ಹೊಸ ಸದಸ್ಯರ ಸೇರ್ಪಡೆಗೆ ಬೇಕಾಗುವ ಅಗತ್ಯ ದಾಖಲೆಗಳು:
ಹೊಸ ಸದಸ್ಯರ ಆಧಾರ್ ಕಾರ್ಡ್ (Adhar Card) ಪ್ರತಿ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಕುಟುಂಬದ ಪಡಿತರ ಚೀಟಿ ಪ್ರತಿ
ಮೊಬೈಲ್ ಸಂಖ್ಯೆ

6 ವರ್ಷದೊಳಗಿನ ಮಕ್ಕಳನ್ನು ಸೇರಿಸಲು:
ಜನನ ಪ್ರಮಾಣ ಪತ್ರ
ಆಧಾರ್ ಕಾರ್ಡ್ ಪ್ರತಿ ಒದಗಿಸಬೇಕು

6 ವರ್ಷಕ್ಕಿಂತ ಮೇಲ್ಪಟ್ಟ ಸದಸ್ಯರ ಸೇರ್ಪಡೆಗೆ:
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು

ವಿಳಾಸ ಬದಲಾವಣೆಗೆ:
ಹೊಸ ವಿಳಾಸಕ್ಕೆ ಸಂಬಂಧಿಸಿದ ವಿದ್ಯುತ್ ಬಿಲ್ ಅಥವಾ ಗ್ಯಾಸ್ ಕನೆಕ್ಷನ್ ಬಿಲ್ ನೀಡಬೇಕು
ಆಧಾರ್ ಕಾರ್ಡ್ (ಹೊಸ ವಿಳಾಸದೊಂದಿಗೆ)

ಕುಟುಂಬದ ಮುಖ್ಯಸ್ಥರ ಬದಲಾವಣೆಗೆ:
ಹಳೆಯ ಮತ್ತು ಹೊಸ ಮುಖ್ಯಸ್ಥರ ಆಧಾರ್ ಕಾರ್ಡ್ ಪ್ರತಿ.
ಕುಟುಂಬ ಸದಸ್ಯರ ಅನುಮೋದನೆ ಪತ್ರ ನೀಡಬೇಕು

ನ್ಯಾಯಬೆಲೆ ಅಂಗಡಿ ಬದಲಾವಣೆಗೆ:
ಹಳೆಯ ಮತ್ತು ಹೊಸ ನ್ಯಾಯಬೆಲೆ ಅಂಗಡಿ ವಿವರಗಳ ಜೊತೆಯಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮೊಬೈಲ್ ನಂಬ‌ರ್ ನೀಡಬೇಕು.

ಆನ್‌ಲೈನ್‌ (Online) ನಲ್ಲಿ ಪಡಿತರ ಚೀಟಿಯ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು :

ಅರ್ಜಿ ಸಲ್ಲಿಸಿದ ನಂತರ, ಗ್ರಾಹಕರು ತಮ್ಮ ಪಡಿತರ ಚೀಟಿಯ ತಿದ್ದುಪಡಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

Step-1:
ಅಧಿಕೃತ ಆಹಾರ ಇಲಾಖೆಯ ಜಾಲತಾಣ (Food Department Website) ಪ್ರವೇಶಿಸಬೇಕು.

https://ahara.karnataka.gov.in/Home/EServices
Step-2:
ನಂತರ ಜಾಲತಾಣದಲ್ಲಿ Menu → e-Status → Amendment Requests Status ಆಯ್ಕೆ ಮಾಡಬೇಕು.
Step-3:
ನಂತರ ನಿಮ್ಮ ಜಿಲ್ಲೆಯ ಆಯ್ಕೆಯನ್ನು (Bangalore Region / Mysore Region / Kalaburagi Region) ಮಾಡಿಕೊಳ್ಳಿ.
Step-4:
“Ration Card Amendment Request Status” ವಿಭಾಗದಲ್ಲಿ RC No (Ration Card Number) ನಮೂದಿಸಿ.
Step-5:
ನಿಮ್ಮ ಅರ್ಜಿಗೆ ಸಂಬಂಧಿಸಿದ Acknowledgment Number ನಮೂದಿಸಿ ಮತ್ತು Go ಬಟನ್ ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಗಮನಿಸಿ (Notice) :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last date for Applying Apllication) : ಫೆಬ್ರವರಿ 2025 ಕೊನೆಯ ದಿನಾಂಕ.
ಎಲ್ಲಿ ಅರ್ಜಿ ಸಲ್ಲಿಸಬಹುದು: ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಕೇಂದ್ರಗಳು.
ಅರ್ಜಿ ಸ್ಥಿತಿ ಪರಿಶೀಲನೆ: ಆನ್‌ಲೈನ್ ಮೂಲಕ ಪರಿಶೀಲಿಸಲು ಅವಕಾಶ ಒದಗಿಸಲಾಗಿದೆ.
ಅಗತ್ಯ ದಾಖಲೆಗಳು: ಆಧಾರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ ಬೇಕಾಗಬಹುದು.

ಈ ಬಾರಿ ಆಹಾರ ಇಲಾಖೆ, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಪಡಿತರ ಚೀಟಿಯ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಫೆಬ್ರವರಿ 2025 ತನಕ ಅವಕಾಶ ನೀಡಿದೆ. ಈ ಹೊಸ ಘೋಷಣೆಯಿಂದ, ಅನೇಕರು ತಮ್ಮ ಪಡಿತರ ಚೀಟಿಯ ಅಗತ್ಯ ಬದಲಾವಣೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗಲಿದೆ.
ಹೀಗಾಗಿ, ಪಡಿತರ ಚೀಟಿಯಲ್ಲಿ ತಿದ್ದುಪಡಿ ಅಥವಾ ಹೊಸ ಸದಸ್ಯರ ಸೇರ್ಪಡೆಗೆ ಆಸಕ್ತರಾದವರು ಶೀಘ್ರವೇ ಅರ್ಜಿ ಸಲ್ಲಿಸಿ, ಸರ್ಕಾರದ ಈ ಸೌಲಭ್ಯವನ್ನು (Government Facilities) ಪಡೆದುಕೊಳ್ಳಬಹುದು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!