ಭಾರೀ ಏರಿಕೆ ಕಂಡ ಬೆಳ್ಳಿ ದರ: ಗ್ರಾಹಕರಿಗೆ ಆಘಾತ, ಚಿನ್ನದ ದರ ಇಳಿಕೆ
ಹೂಡಿಕೆದಾರರು ಮತ್ತು ಗ್ರಾಹಕರನ್ನು ಆಘಾತಕ್ಕೀಡುಮಾಡುವ ರೀತಿಯಲ್ಲಿ, ಭಾರತದ ಬೆಳ್ಳಿ ಮಾರುಕಟ್ಟೆ ಭಾರೀ ಏರಿಕೆಯನ್ನು ಕಂಡಿದೆ. ದೆಹಲಿಯ ಚಿನಿವಾರ ಪೇಟೆಯ ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ಬದಲಾವಣೆಗಳು ಗಮನಾರ್ಹವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅದರ ದರ ಹೆಚ್ಚಳವಾಗಿದೆ. , ಈ ಬೆಳವಣಿಗೆ ಗ್ರಾಹಕರಿಗೆ ಆಘಾತ ಉಂಟುಮಾಡಿದೆ. ಈ ದಿನದ ಬೆಳ್ಳಿ ಹಾಗೂ ಚಿನ್ನದ ಬೆಲೆ ಯಾವ ರೀತಿಯಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆರ್ಥಿಕ ಸ್ಥಿತಿಗತಿಗಳ ನಡುವೆಯೂ ಬೆಳ್ಳಿ ಹೂಡಿಕೆ ತಂತ್ರಜ್ಞಾನ ಮತ್ತು ಉದ್ಯಮಗಳಲ್ಲಿ ನಿರಂತರ ಬೇಡಿಕೆ ಹೊಂದಿರುವ ಲೋಹವೆಂದರೆ ಅದು ಬೆಳ್ಳಿ . ಚಿನ್ನದ ದರ ಕುಸಿಯುತ್ತಿರುವಾಗಲೇ ಬೆಳ್ಳಿಯ ದರ ಏರಿಕೆ ಕಾಣುತ್ತಿರುವುದು ಹೂಡಿಕೆದಾರರ ಕುತೂಹಲಕ್ಕೆ ಕಾರಣವಾಗಿದೆ.
ಚಿನ್ನ-ಬೆಳ್ಳಿ ಬೆಲೆ ಇಂದು, 14, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 13, 2025 ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದವು. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಆದರೆ ಬೆಳ್ಳಿಯ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,981 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,706ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6530 ಆಗಿದೆ. ಬೆಳ್ಳಿ ಬೆಲೆ 1 ಕೆಜಿ: 99,400.
ಬೆಳ್ಳಿಯ ಬೆಲೆ ಭಾರೀ ಏರಿಕೆ:
ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರ ಒಂದು ಕೆಜಿ ಬೆಳ್ಳಿಯ ದರ ₹600 ಏರಿಕೆಯಾಗಿ ₹97,200 ಕ್ಕೆ ತಲುಪಿದೆ. ಆಭರಣ ತಯಾರಕರು, ಉದ್ಯಮಿಗಳು ಮತ್ತು ಹೂಡಿಕೆದಾರರಿಂದ ಈ ಬೇಡಿಕೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಚಿನ್ನದ ದರದಲ್ಲಿ ಇಳಿಕೆ:
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಅದರ ಬೆಲೆ ಇಳಿಕೆಯಾಗಿದೆ. 99.9% ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ ₹340 ಇಳಿಕೆಯಾಗಿದ್ದು ₹87,960 ಕ್ಕೆ ಮಾರಾಟವಾಗಿದೆ. ಅದೇ ರೀತಿ, 99.5% ಪರಿಶುದ್ಧತೆಯ ಆಭರಣ ಚಿನ್ನದ ದರವೂ ₹340 ಕಡಿಮೆಯಾಗಿದ್ದು ₹87,560 ಕ್ಕೆ ತಲುಪಿದೆ.
ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆ ಮತ್ತು ಇಳಿಕೆಯ ಪರಿಣಾಮ:
ಬೆಳ್ಳಿಯ ದರ ಏರಿಕೆಯಿಂದ ಉದ್ಯಮಗಳಿಗೆ ಹೊರೆ ಹೆಚ್ಚಾಗಬಹುದು, ಆದರೆ ಹೂಡಿಕೆದಾರರಿಗೆ ಇದು ಲಾಭದಾಯಕವಾಗಬಹುದು. ಇನ್ನು ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಆಭರಣ ಖರೀದಿಗೆ ಗ್ರಾಹಕರು ಮುಂದಾಗುತ್ತಿದ್ದಾರೆ. ಜಾಗತಿಕ ಆರ್ಥಿಕತೆ, ಡಾಲರ್-ರೂಪಾಯಿ ವಿನಿಮಯ ದರ, ಮಾರುಕಟ್ಟೆಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಯಾವ ರೀತಿ ಬದಲಾವಣೆಗಳನ್ನು ತರುತ್ತವೆ ಎಂಬುದನ್ನು ಕಾದುನೋಡಬೇಕಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.