ಜಿಯೋ ಹಾಟ್‌ಸ್ಟಾರ್: ಜಿಯೋ ಹಾಟ್‌ಸ್ಟಾರ್ ಅಧಿಕೃತವಾಗಿ ಇOದು ಬಿಡುಗಡೆಯಾಗಿದೆ! ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ಎರೆಡು ಸೆರಿ ಇತ್ತೀಚೆಗೆ ರೂಪುಗೊಂಡ ಜಂಟಿ ಉದ್ಯಮ ಇದಾಗಿದೆ. ಭಾರತದ ಎರೆಡು ಪ್ರತಿಷ್ಟಿತ ಒಟಿಟಿ ಪ್ಲಾಟ್‌ಫಾರ್ಮ್ಗಳಾದ ಜಿಯೋಸಿನಿಮಾ ಮತ್ತು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಇದಿಗಾ ಒಟ್ಟಾಗಿ ಒOದು ಹೊಸಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್ (ಐಸಿಸಿ, ಐಪಿಎಲ್, ಡಬ್ಲ್ಯೂಪಿಎಲ್, ಇತ್ಯಾದಿ), ಫುಟ್ಬಾಲ್ (ಲಾ ಲಿಗಾ, ಬುಂಡೆಸ್ಲಿಗಾ, ಪ್ರೀಮಿಯರ್ ಲೀಗ್), ಹಾಕಿ ಮತ್ತು ವಿಂಬಲ್ಡನ್ ನಂತಹ ಇತರ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಹೆಸರುವಾಸಿಯಾದ ಜಿಯೋಸಿನಿಮಾ, ದೇಶದ ಮತ್ತೊಂದು ಪ್ರಮುಖ ಮನರಂಜನಾ ಸ್ಟ್ರೀಮಿಂಗ್ ವೇದಿಕೆಯಾದ ಡಿಸ್ನಿಪ್ಲಸ್ ಹಾಟ್‌ಸ್ಟಾರ್‌ನೊಂದಿಗೆ ಜೊತೆಯಾಗಿ ಜಿಯೋಹಾಟ್‌ಸ್ಟಾರ್ ಭಾರತೀಯ ಒಟಿಟಿ ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ ಈ ವೇದಿಕೆಯು ಡಿಸ್ನಿ, ಎನಬಿಸಿ ಉನಿವರ್ಸಲ್ ಪಿಕೊಕ್ , ವಾರ್ನರ್ ಬ್ರೊಸ್, ಡಿಸಕವರ್ ಹೆಚ್‌ಬಿಒ, ಮತ್ತು ಪ್ಯಾರಮೌಟ್ ನಂತಹ ಪ್ರಮುಖ ಅಂತರರಾಷ್ಟ್ರೀಯ ಸ್ಟುಡಿಯೋಗಳ ವಿಷಯವನ್ನು ಸಹ ಒಳಗೊಂಡಿರುವುದು ಬೇರೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗಿOತ ವಿಶೇಷವಾಗಿದೆ.
ಎಲ್ಲಾ ಭಾರತೀಯರಿಗೆ ಪ್ರೀಮಿಯಂ ಮನರಂಜನೆಯನ್ನು ನೀಡುವ ಒಂದು ದಿಟ್ಟ ದೃಷ್ಟಿಯಲ್ಲಿ ನಮ್ಮ ‘ಅನಂತ ಸಾಧ್ಯತೆಗಳ’ ಭರವಸೆಯು ಮನರಂಜನೆಯ ಅದ್ಭುತ ಅನುಭವವಾಗುತ್ತದೆ ಎಂದು ಖಚಿತಪಡಿಸುತ್ತದೆ. ಎಐ ಆಧಾರಿತ ಶಿಫಾರಸುಗಳನ್ನು ಬಳಸಿಕೊಳ್ಳುವ ಮೂಲಕ 19 ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಷಯವನ್ನು ಕೊಡುವುದರಿOದ, ನಾವು ವೀಕ್ಷಣೆಯನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ವೈಯಕ್ತೀಕರಿಸುತ್ತಿದ್ದೇವೆ” ಎಂದು ಜಿಯೋಹಾಟ್‌ಸ್ಟಾರ್ನ ಡಿಜಿಟಲ್ ಸಿಇಒ ಕಿರಣ್ ಮಣಿ ಹೇಳಿದರು.

ಹೊಸ ಚಂದಾದಾರಿಕೆ ಯೋಜನೆ ಹೇಗಿರುತ್ತದೆ?
ಹೊಸ ಚಂದಾದಾರಿಕೆ ಯೋಜನೆ ಹೇಗಿರುತ್ತದೆ?
ಮೂರು ಚಂದಾದಾರಿಕೆ ಯೋಜನೆಗಳು ಲಭ್ಯವಿದೆ:
ಮೊಬೈಲ್ ಪ್ಲಾನ್ – ಒಂದೇ ಮೊಬೈಲ್ ಸಾಧನದಲ್ಲಿ ಪ್ರವೇಶಕ್ಕಾಗಿ, ಚಂದಾದಾರಿಕೆಯು ಮೂರು ತಿಂಗಳಿಗೆ ರೂ. 149 ಅಥವಾ ಒಂದು ವರ್ಷಕ್ಕೆ ರೂ. 499 ಆಗಿದೆ. ಈ ಪ್ಲಾನ್ ಜಾಹೀರಾತುಗಳನ್ನು ಒಳಗೊಂಡಿರುತ್ತದೆ.
ಸೂಪರ್ ಪ್ಲಾನ್ – ಯಾವುದೇ ಎರಡು ಸಾಧನಗಳಲ್ಲಿ ಬಳಸಲು ಲಭ್ಯವಿದೆ, ಮೂರು ತಿಂಗಳ ಯೋಜನೆಯ ಬೆಲೆ ರೂ. 299 ಆಗಿದ್ದರೆ, ಒಂದು ವರ್ಷದ ಚಂದಾದಾರಿಕೆ ರೂ. 899 ವರೆಗೆ ಇರುತ್ತದೆ. ಈ ಯೋಜನೆಯು ಜಾಹೀರಾತುಗಳನ್ನು ಸಹ ಒಳಗೊಂಡಿರುತ್ತದೆ.
ಪ್ರೀಮಿಯಂ ಪ್ಲಾನ್ – ಮೂರು ತಿಂಗಳಿಗೆ ರೂ. 499 ಅಥವಾ ಒಂದು ವರ್ಷಕ್ಕೆ ರೂ. 1,499 ಬೆಲೆಯಲ್ಲಿ ಯಾವುದೇ ನಾಲ್ಕು ಸಾಧನಗಳಲ್ಲಿ ಪ್ರವೇಶವನ್ನು ಅನುಮತಿಸುತ್ತದೆ. ಈ ಪ್ಲಾನ್ ಜಾಹೀರಾತು-ಮುಕ್ತವಾಗಿದೆ.
ಜಿಯೋಹಾಟ್‌ಸ್ಟಾರ್: ಡಿಸ್ನಿ+ ಹಾಟ್‌ಸ್ಟಾರ್‌ನ ಅಸ್ತಿತ್ವದಲ್ಲಿರುವ ಚಂದಾದಾರರ ಬಗ್ಗೆ ಏನು?
ಅಸ್ತಿತ್ವದಲ್ಲಿರುವ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರು ಯಾವುದೇ ಬದಲಾವಣೆಗಳಿಲ್ಲದೆ ತಮ್ಮ ಪ್ರಸ್ತುತ ಯೋಜನೆಗಳೊಂದಿಗೆ ಮುಂದುವರಿಯುತ್ತಾರೆ.
ಈ ಯೋಜನೆಯು ಹಿಂದಿನ ಅಪ್ಲಿಕೇಶನ್‌ನ ಮಾದರಿಯಂತೆಯೇ ಇದ್ದರೂ, ಪ್ರೀಮಿಯಂ ಚಂದಾದಾರಿಕೆಯನ್ನು ಹೊಂದಿರುವವರು – ಈ ಹಿಂದೆ ಮೂರು ತಿಂಗಳಿಗೆ 399 ರೂ.ಗಳಾಗಿದ್ದವು – ಯೋಜನೆಯ ಉಳಿದ ಅವಧಿಗೆ ಯಾವುದೇ ಹೆಚ್ಚುವರಿ ಪಾವತಿಯಿಲ್ಲದೆ ಜಿಯೋಹಾಟ್‌ಸ್ಟಾರ್ ಪ್ರೀಮಿಯಂಗೆ ವರ್ಗಾಯಿಸಲಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.