ಚಿನ್ನದ ದರ ಇಳಿಕೆ: ಮಾರುಕಟ್ಟೆಯ ಪ್ರಸ್ತುತ ದರ ಹಾಗೂ ಖರೀದಿಗಾಗಿ ಪರಿಗಣಿಸಬೇಕಾದ ಅಂಶಗಳು ಹೀಗಿವೆ :
ಚಿನ್ನವು ಭಾರತದ ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕ ಜೀವನದ ಪ್ರಮುಖ ಅಂಗವಾಗಿದೆ. ಮದುವೆಗಳು, ಹಬ್ಬಗಳು, ಮತ್ತು ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಒಂದು ಪರಂಪರೆಯಾಗಿದೆ. ಪ್ರಸ್ತುತ ಮಾಘ ಮಾಸದ ಸಂದರ್ಭದಲ್ಲಿ ವಿವಾಹಗಳು, ಪೂಜೆ, ಮತ್ತು ಇತರ ಶುಭ ಕಾರ್ಯಕ್ರಮಗಳೊಂದಿಗೆ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಆದರೆ, ಗ್ರಾಹಕರು ಚಿನ್ನವನ್ನು ದೊಡ್ಡ ಶೋ ರೂಂ (Corporate Shoping Mall) ಅಥವಾ ಸಣ್ಣ ಅಂಗಡಿಗಳಲ್ಲಿ ಖರೀದಿಸಬೇಕೇ ಎಂಬುದರ ಬಗ್ಗೆ ದಿಗ್ಭ್ರಮೆಯಲ್ಲಿರುತ್ತಾರೆ. ಹಾಗಿದ್ದರೆ ಎಲ್ಲಿ ಚಿನ್ನ ಖರೀದಿ ಮಾಡಬೇಕು? ಚಿನ್ನ ಖರೀದಿಸುವ ಸಂದರ್ಭಗಳಲ್ಲಿ ಯಾವ್ಯಾವ ಅಂಶಗಳನ್ನು ಪರಿಗಣಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನ ಖರೀದಿಗೆ ಎರಡು ಪ್ರಮುಖ ಆಯ್ಕೆಗಳು ಲಭ್ಯವಿವೆ ಒಂದು, ದೊಡ್ಡ ಕಾರ್ಪೊರೇಟ್ ಶೋರೂಮ್ಗಳು ಮತ್ತು ಸಣ್ಣ ಸ್ವತಂತ್ರ ಅಂಗಡಿಗಳು. ಹಲವಾರು ಗ್ರಾಹಕರು ದೊಡ್ಡ ಬ್ರ್ಯಾಂಡ್ಗಳನ್ನೇ (Brand) ಆಯ್ಕೆ ಮಾಡುತ್ತಾರೆ, ಆದರೆ ಇನ್ನೂ ಕೆಲವರು ಕುಟುಂಬ ಪರಂಪರೆಯಿಂದ ಬಂದಿರುವ ಚಿನ್ನದ ಅಂಗಡಿಗಳಲ್ಲಿಯೇ ನಂಬಿಕೆ ಇಡುತ್ತಾರೆ. ಹೀಗಾಗಿ, ಚಿನ್ನ ಖರೀದಿಯ ಸಂದರ್ಭದಲ್ಲಿ “ಯಾವುದರಲ್ಲಿ ಖರೀದಿಸುವುದು ಉತ್ತಮ?” ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಚಿನ್ನ ಖರೀದಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು ಹೀಗಿವೆ :
ಹಾಲ್ಮಾರ್ಕ್ (Hallmark) ಪರಿಶೀಲಿಸುವುದು :
ಚಿನ್ನದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅದು BIS (Bureau of Indian Standards) ಹಾಲ್ಮಾರ್ಕ್ ಹೊಂದಿದೆಯೇ ಎಂದು ಪರಿಶೀಲಿಸಬೇಕು. 916 KDM (91.6% ಶುದ್ಧತೆ) ಅಥವಾ 750 KDM (75% ಶುದ್ಧತೆ) ಇದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.
ನಿರ್ಧಿಷ್ಟ ದರ ಮತ್ತು ಶುಲ್ಕಗಳು:
10 ಗ್ರಾಂ (99.9% ಶುದ್ಧತೆ) ಚಿನ್ನದ ದರ ₹88,200 ಇದ್ದು, ಆಭರಣ ಚಿನ್ನದ ದರ (99.5% ಶುದ್ಧತೆ) ₹87,800 ಆಗಿದೆ.
ಬೆಳ್ಳಿಯ ದರ 1 ಕೆ.ಜಿ ₹98,200 ಆಗಿದ್ದು, ₹1,800 ಇಳಿಕೆ ಕಂಡಿದೆ.
ವಿವಿಧ ಅಂಗಡಿಗಳು ಆಭರಣ ತಯಾರಿಕೆ ವೆಚ್ಚ (Making Charge) ಮತ್ತು GST ಭಿನ್ನವಾಗಿ ವಿಧಿಸುತ್ತವೆ. ಆದ್ದರಿಂದ ದರ ಹೋಲಿಕೆ ಮಾಡಿ ಖರೀದಿ ಮಾಡುವುದು ಒಳಿತು.
ಮರು ಮಾರಾಟ ಮೌಲ್ಯ:
ಚಿನ್ನ ಖರೀದಿಸುವ ಮೊದಲು, ಅದರ ಮರು ಮಾರಾಟ ಬೆಲೆ (Resale Value) ಹೇಗಿರುತ್ತದೆ ಎಂಬುದನ್ನು ಅವಲೋಕಿಸಬೇಕು.
ದೊಡ್ಡ ಶೋ ರೂಂಗಳು ಕೆಲವೊಮ್ಮೆ ಮರು ಮಾರಾಟ ಬೆಲೆಯಲ್ಲಿ ಕಡಿಮೆಯಾಗಿ ನೀಡಬಹುದು, ಆದರೆ ಸಣ್ಣ ಅಂಗಡಿಗಳು ಹೆಚ್ಚು ಅನುಕೂಲಕರ ದರ ನೀಡತ್ತವೆ.
ವಿಶ್ವಾಸಾರ್ಹತೆಯುಳ್ಳ ಅಂಗಡಿಗಳಲ್ಲಿ ಚಿನ್ನ ಖರೀದಿಸಿ :
ದೊಡ್ಡ ಶೋ ರೂಂಗಳು ಹೆಚ್ಚು ಗುಣಮಟ್ಟದ (More Quality) ಖಾತರಿ ಮತ್ತು ಸರಿಯಾದ ಪ್ರಮಾಣದ ಚಿನ್ನ ನೀಡುವ ಸಾಧ್ಯತೆಯಿದೆ. ಸಣ್ಣ ಅಂಗಡಿಗಳಲ್ಲಿ ಕೆಲವೊಮ್ಮೆ ಗ್ರಾಹಕನ ವಿಶ್ವಾಸಕ್ಕೆ ಭಂಗ ಉಂಟುಮಾಡುವಂತಹ ಪ್ರಕರಣಗಳು ಸಂಭವಿಸಬಹುದು. ಆದ್ದರಿಂದ ಭರವಸೆಯ ಅಂಗಡಿಯನ್ನು ಆಯ್ಕೆ ಮಾಡುವುದು ಮುಖ್ಯ.
ದೊಡ್ಡ ಶೋ ರೂಂ ಅಥವಾ ಸಣ್ಣ ಅಂಗಡಿ ಖರೀದಿಗೆ ಯಾವುದು ಉತ್ತಮ?:
ಹಾಲ್ ಮಾರ್ಕ್ ಗುಣಮಟ್ಟ : ದೊಡ್ಡ ಶೋ ರೂಂ ಅಥವಾ ಕಾರ್ಪೊರೇ ಟ್ ಮಾಲ್ ಗಳಲ್ಲಿ BIS ಹಾಲ್ಮಾರ್ಕ್ ಇರುವ ಸಾಧ್ಯತೆ ಹೆಚ್ಚಿದ್ದು, ಸಣ್ಣ ಅಂಗಡಿಗಳಲ್ಲಿ ಕೆಲವೊಮ್ಮೆ ಲಭ್ಯವಿರುವುದಿಲ್ಲ.
ಮೇಕಿಂಗ್ ಚಾರ್ಜ್: ದೊಡ್ಡ ಶೋ ರೂಂ (Big Showroom) ಅಥವಾ ಕಾರ್ಪೊರೇ ಟ್ ಮಾಲ್ ಗಳಲ್ಲಿ ಹೆಚ್ಚಾಗಿರುತ್ತದೆ ಕನಿಷ್ಠ 10-25% ನಸ್ಟಿದ್ದು, ಸಣ್ಣ ಅಂಗಡಿಗಳಲ್ಲಿ ಕಡಿಮೆ ಮೇಕಿಂಗ್ ಚಾರ್ಜ್ 5-15% ನಷ್ಟರುತ್ತದೆ.
ಮರು ಮಾರಾಟ ಬೆಲೆ : ದೊಡ್ಡ ಶೋ ರೂಂ ಅಥವಾ ಕಾರ್ಪೊರೇ ಟ್ ಮಾಲ್ ಗಳಲ್ಲಿ ರಿಟರ್ನ್ ದರ ಕಡಿಮೆ ಇರುತ್ತದೆ. ಸಣ್ಣ ಅಂಗಡಿಗಳಲ್ಲಿ ಹೆಚ್ಚು ರಿಟರ್ನ್ ದರ (ನೇರ ಚಿನ್ನದ ದರಕ್ಕೆ ಹತ್ತಿರ)ಇರುತ್ತದೆ.
ನಂಬಿಕೆ ಮತ್ತು ಖಾತರಿ : ದೊಡ್ಡ ಶೋ ರೂಂ ಅಥವಾ ಕಾರ್ಪೊರೇ ಟ್ ಮಾಲ್ ಗಳಲ್ಲಿ ಹೆಚ್ಚು ನಂಬಿಕೆಗೆ ಅರ್ಹರಾಗಿರುತ್ತಾರೆ. ಆದರೆ ಸಣ್ಣ ಅಂಗಡಿಗಳಲ್ಲಿ ಖ್ಯಾತಿಯ ಮೇಲೆ ನಂಬಿಕೆ ಇಡಬಹುದು.
ಆಭರಣ ವಿನ್ಯಾಸ : ದೊಡ್ಡ ಶೋ ರೂಂ ಅಥವಾ ಕಾರ್ಪೊರೇ ಟ್ ಮಾಲ್ ಗಳಲ್ಲಿ ಟ್ರೆಂಡಿ, ಹೊಸ ವಿನ್ಯಾಸಗಳು ಲಭ್ಯ ವಿರುತ್ತವೆ. ಆದರೆ ಸಣ್ಣ ಅಂಗಡಿಗಳಲ್ಲಿ ತಮಟೆ ಮಾದರಿ ವಿನ್ಯಾಸಗಳು ಲಭ್ಯ ವಿರುತ್ತವೆ.
ಚಿನ್ನ ಖರೀದಿಸುವ ಸ್ಥಳವನ್ನು ಆಯ್ಕೆ ಮಾಡುವ ಮೊದಲು, ಗ್ರಾಹಕರು ತಮ್ಮ ಬಜೆಟ್, ಅಗತ್ಯ, ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಯೋಚಿಸಬೇಕು. ವಿಶ್ವಾಸಾರ್ಹತೆ, ಗುಣಮಟ್ಟ, ಮತ್ತು ಬೆಲೆಯನ್ನು ಹೋಲಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕಾರ್ಪೊರೇಟ್ ಶೋ ರೂಂಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಶುದ್ಧತೆಗೆ ಒತ್ತು ನೀಡಿದರೂ, ಸಣ್ಣ ಅಂಗಡಿಗಳು ಗ್ರಾಹಕ ಸ್ನೇಹಿ (Customers Friendly) ದರ ಮತ್ತು ಮರು ಮಾರಾಟ ಲಾಭವನ್ನು ನೀಡಬಹುದು. ಆದ್ದರಿಂದ, ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಗ್ರಾಹಕರು ಸೂಕ್ತ ಆಯ್ಕೆ ಮಾಡಿಕೊಳ್ಳಬೇಕು.
ಸೋಮವಾರದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ :
ಚಿನ್ನ-ಬೆಳ್ಳಿ ಬೆಲೆ ಇಂದು, 18, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 13, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದಾವೆ. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,941 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,663ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6498 ಆಗಿದೆ. ಇನ್ನು ಬೆಳ್ಳಿಯ ಬೆಲೆಯೂ ಕೂಡ ಏರಿಕೆಯಾಗಿದ್ದು ಬರೋಬ್ಬರಿ 1200 ರೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ: 1,00,400 ತಲುಪಿದೆ. ಆದರೆ ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ 40 ರೂಪಾಯಿ ಏರಿಕೆಯಾಗಿದೆ.
ಚಿನ್ನದ ದರ ಕುಸಿತ (Gold rate Decreased) :
ಚಿನ್ನದ ದರವು ಪ್ರಮುಖ ಮಾರುಕಟ್ಟೆಗಳಲ್ಲಿ ಕುಸಿದಿದ್ದು, ದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ (ಶೇ 99.9 ಪರಿಶುದ್ಧತೆ) ದರವು ₹1,200 ಇಳಿಕೆಯಾಗಿ ₹88,200 ಆಗಿದೆ. ತಯಾರಕರಿಗೆ ಅನುಗುಣವಾವುವಂತೆ ಚಿನ್ನದ ದರ (ಶೇ 99.5 ಪರಿಶುದ್ಧತೆ) ₹87,800ಕ್ಕೆ ಇಳಿಯುವಂತೆ ಮಾಡಲಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಬೆಳ್ಳಿಯಲ್ಲೂ ಇಳಿಕೆ (Decreased in Silver) :
ಸೋಮವಾರದಂದು ಬೆಳ್ಳಿ ಕೂಡಾ ಇಳಿಕೆ ಕಂಡಿದ್ದು, ಕೆ.ಜಿಗೆ ₹1,800 ಇಳಿಕೆಯಾಗಿ ₹98,200ಕ್ಕೆ ತಲುಪಿದೆ. ಚಿನ್ನದಂತೆ ಬೆಳ್ಳಿಯಲ್ಲೂ ಬೇಡಿಕೆ ತಗ್ಗಿದ ಪರಿಣಾಮ ಈ ಕುಸಿತ ಕಂಡುಬಂದಿದೆ.
ತಜ್ಞರ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಚಿನ್ನದ ಮೇಲೆ ಬೇಡಿಕೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದೆ. ಇದೇ ಕಾರಣದಿಂದಾಗಿ ಹಳದಿ ಲೋಹದ ಮೌಲ್ಯದಲ್ಲಿ ಹಿನ್ನಡೆ ದಾಖಲಾಗಿದೆ. ಅಂತಾರಾಷ್ಟ್ರೀಯ (International) ಮಟ್ಟದಲ್ಲೂ ಮೌಲ್ಯಮಾಪನ ಮತ್ತು ಹೂಡಿಕೆದಾರರ ಹಿತಾಸಕ್ತಿ ಕಡಿಮೆಯಾಗಿರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.