Gruhalakshmi : ಗೃಹಲಕ್ಷ್ಮಿ 2000/- ರೂಪಾಯಿ ಇಂದು ಜಮಾ.! ಅಕೌಂಟ್ ಚೆಕ್ ಮಾಡಿಕೊಳ್ಳಿ.!

WhatsApp Image 2025 02 21 at 11.53.42 AM

WhatsApp Group Telegram Group

ರಾಜ್ಯದಲ್ಲಿ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿಂದ ಬಂದ್ ಆಗಿತ್ತು, ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಯಜಮಾನಿಯರ ಆಕ್ರೋಶ ವ್ಯಕ್ತಪಡಿಸಿದ್ದರು, ಹೌದು ಹಲವು ಟೀಕೆಗಳ ನಂತರ ರಾಜ್ಯ ಸರ್ಕಾರ ಎಚ್ಚೆತ್ತಿದೆ, ಮೂರು ತಿಂಗಳ ಪೆಂಡಿಂಗ್ ಹಣ ಇಂದಿನಿಂದ ರಾಜ್ಯಾದ್ಯಂತ ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಜಮ ಆಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

3 ತಿಂಗಳ ಹಣ ಒಟ್ಟಿಗೆ ಜಮಾ.!

ಹೌದು ರಾಜ್ಯಾದ್ಯಂತ ಹಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ನವಂಬರ್ ತಿಂಗಳ ಗೃಹಲಕ್ಷ್ಮಿ 2000 ರೂಪಾಯಿ ಯನ್ನು ಇಂದು ಜಮಾ ಮಾಡುತ್ತಿದ್ದು, ಡಿಸೆಂಬರ್ ತಿಂಗಳ ಹಣ ಮುಂದಿನ ಸೋಮವಾರ ಫಲಾನುಭವಿಗಳ ಖಾತೆಗೆ ಹಾಕುವ ಕೆಲಸ ಆಗಲಿದೆ ಎಂದು ಹೇಳಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಜಮಾ ಪ್ರಕ್ರಿಯೆ ಬದಲಾವಣೆ ಹಿನ್ನೆಲೆಯಲ್ಲಿ ವಿಳಂಭ ವಾಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿಕೊಂಡಿದೆ.

ಹೌದು ಕಳೆದ 3 ತಿಂಗಳಿನಿಂದ ಹಣ ಜಮಾ ಆಗಿಲ್ಲ ಎಂದು ರಾಜ್ಯದ ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದೂ 3 ತಿಂಗಳ ಒಟ್ಟು 6000/- ರೂಪಾಯಿ ಮನೆ ಯಜಮಾನಿಯರಿಗೆ ಜಮಾ ಆಗಬೇಕಿದೆ. ಇನ್ನೇನು ಹಂತ ಹಂತ ವಾಗಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ 6000/- ಪೆಂಡಿಂಗ್ ಹಣ ಜಮಾ ಆಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ಜನವರಿ ತಿಂಗಳ ಅನ್ನ ಭಾಗ್ಯದ ಅಕ್ಕಿ ಹಣ ಜಮಾ

ಬಿಪಿಎಲ್ ಕಾರ್ಡ್ ಮತ್ತು ಅಂತೋದಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ದವಸ ಧಾನ್ಯಗಳ ಜೊತೆ ಉಚಿತವಾಗಿ ಹಣ ಕೂಡ ಲಭ್ಯವಾಗುತ್ತಿದೆ. ಈಗಾಗಲೇ ಕಳೆದ ಜನವರಿ ತಿಂಗಳ ಅನ್ನಭಾಗ್ಯದ 680 ರೂಪಾಯಿ ಹಣ ಬ್ಯಾಂಕ್ ಖಾತೆಗೆ ಬಂದಿರುವುದನ್ನ ನೀವು ಕೆಳಗಡೆ ಗಮನಿಸಬಹುದು.

WhatsApp Image 2025 02 02 at 7.09.11 AM

ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡುತ್ತಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಹಣದ ಬದಲಾಗಿ ಅಕ್ಕಿಯನ್ನೇ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಅಕ್ಕಿಯನ್ನು ಹೊಂದಿಸೋದು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಹಣವನ್ನು ಸರ್ಕಾರ ಯಜಮಾನಿಯ ಖಾತೆಗೆ ನೇರವಾಗಿ DBT ಮೂಲಕ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಈ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ದೇವೆಯೇ?, ಎಷ್ಟು ಹಣ ಬಂದಿದೆ?, ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿಯಲು DBT ಅಪ್ಲಿಕೇಶನ್ ಡೌನ್ಲೋಡ್ ಮಾಡಿ ನೀವು ಚೆಕ್ ಮಾಡಿಕೊಳ್ಳಿ.

ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ :

ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ  

ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.

h2

ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ  ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

h3

ಹಂತ 4: ಮುಂದುವರೆದುನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ,   ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.

OCT 1

ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!