‘ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಎಚ್ಚರ.! ಈ ವಿಡಿಯೋ ತಪ್ಪದೇ ನೋಡಿ.!

IMG 20250221 WA0024

WhatsApp Group Telegram Group

ಕಲ್ಲಂಗಡಿ ಖರೀದಿಯ ಮೊದಲು ಈ ಸರಳ ಪರೀಕ್ಷೆ ಮಾಡಿದ್ದೀರಾ?

ಬೇಸಿಗೆ (Summer) ಬಂತೆಂದರೆ ಹಣ್ಣಿನ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಣ್ಣುಗಳಲ್ಲಿ ಕಲ್ಲಂಗಡಿ ಪ್ರಮುಖವಾಗಿದೆ. ತಂಪಾದ, ರಸಭರಿತ ಮತ್ತು ನೀರಿನ ಅಂಶಗಳನ್ನು (Water content) ಹೊಂದಿರುವ ಈ ಹಣ್ಣು ದೇಹಕ್ಕೆ ತಕ್ಷಣದ ಶಕ್ತಿಯನ್ನೂ ಹಾಗೂ ದಣಿವು ನಿವಾರಿಸಿ ತಂಪು ಅನೂಭವವನ್ನೂ ನೀಡುತ್ತದೆ. ವಿಟಮಿನ್-ಸಿ, ಪೋಟ್ಯಾಸಿಯಂ (Vitamin c, Potacium) ಮತ್ತು ನೀರಿನ ಸಮೃದ್ಧ ಮೂಲವಾದ ಈ ಹಣ್ಣು ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುವುದಲ್ಲದೆ, ದೇಹದಲ್ಲಿ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದರೆ, ಕಲ್ಲಂಗಡಿ ಹಣ್ಣನ್ನು (Water melon) ಆಯ್ಕೆ ಮಾಡುವುದು ಮತ್ತು ಸೇವಿಸುವುದರ ಮೇಲೆ ಗಮನ ಹರಿಸದಿದ್ದರೆ, ಇದು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಇತ್ತೀಚಿನ ದಿನಗಳಲ್ಲಿ ಕೆಲವರು ಹಣ್ಣುಗಳನ್ನು ಬೇಗನೇ ಹಣ್ಣಾಗಲು ಮತ್ತು ಒಳಗೆ ಕೆಂಪು ಬಣ್ಣದಿಂದ ತುಂಬಿರಲು ಕೆಲವೊಂದು ಕೃತಕ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪಡೆದು, ಜನರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಒಂದು ಮಾಹಿತಿ ವೀಡಿಯೋವನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ ಕಲಬೆರಕೆ (mixing) ಮಾಡಲಾದ ಕಲ್ಲಂಗಡಿಗಳನ್ನು ಹೇಗೆ ಗುರುತಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವ ಯಾವ ಮಾಹಿತಿ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕಲಬೆರಕೆ ಕಲ್ಲಂಗಡಿಯನ್ನು ಗುರುತಿಸುವ ಸುಲಭ ವಿಧಾನ :

FSSAI ಬಿಡುಗಡೆ ಮಾಡಿದ ವೀಡಿಯೋ ಪ್ರಕಾರ, ಒಂದು ಸಣ್ಣ ಪರೀಕ್ಷೆ (small test) ಮೂಲಕ ಹಣ್ಣಿನ ಗುಣಮಟ್ಟವನ್ನು ಪರೀಕ್ಷಿಸಬಹುದು:

ಕಲ್ಲಂಗಡಿ ಖರೀದಿಸುವ ಮೊದಲು, ನೀವು ಒಂದು ತುಂಡನ್ನು ಕತ್ತರಿಸಿ ಅವರಿಗೆ ನೀಡಲು ಕೇಳಬೇಕು.
ನಂತರ, ಒಂದು ಬಟ್ಟೆ ಅಥವಾ ಟಿಷ್ಯೂ ಪೇಪರ್ (Cotton and Tissue paper) ತೆಗೆದುಕೊಂಡು ಕತ್ತರಿಸಿದ ತುಂಡಿನ ಒಳಭಾಗಕ್ಕೆ ಉಜ್ಜಿ.
ಹೀಗೆ ಮಾಡುವಾಗ ಬಟ್ಟೆ ಅಥವಾ ಹತ್ತಿ ಕೆಂಪು ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆ ಮಾಡಲಾದ ಹಣ್ಣು.
ನೈಸರ್ಗಿಕವಾಗಿ ಹಣ್ಣಾಗಿರುವ ಕಲ್ಲಂಗಡಿಯಲ್ಲಿ ಬಟ್ಟೆಯ ಬಣ್ಣ ಬದಲಾಗುವುದಿಲ್ಲ.
ಈ ಪರೀಕ್ಷೆಯ ಮೂಲಕ, ನೀವೆ ಸ್ವತಃ ಹಣ್ಣಿನ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಬಹುದು.

ಬೇಗ ಹಣ್ಣಾಗಿಸಲು ಚುಚ್ಚುಮದ್ದು ಮತ್ತು ಕಾರ್ಬೈಡ್ ಬಳಕೆ:

ಇನ್ನು ಕೆಲವು ಹಣ್ಣು ಮಾರಾಟಗಾರರು ಹಣ್ಣು ಬೇಗನೆ ಹಣ್ಣಾಗಲು ಕೆಲವೊಂದು ಅಪಾಯಕಾರಿ ರಾಸಾಯನಿಕಗಳನ್ನ (A dangerous chemicals) ಬಳಸುತ್ತಾರೆ. ಇದರಲ್ಲಿ ಪ್ರಮುಖವಾಗಿ ಕಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ. ಇದು ಗ್ಯಾಸ್ ಬಿಡುಗಡೆ ಮಾಡುತ್ತಿದ್ದು, ಹಣ್ಣುಗಳ ಹಣ್ಣಾಗುವ ಕ್ರಿಯೆಯನ್ನು ವೇಗಗೊಳಿಸುತ್ತದೆ. ಆದರೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು(Danger for health), ವಿಶೇಷವಾಗಿ ಜೀರ್ಣಕ್ರಿಯೆ ಸಮಸ್ಯೆ, ತಲೆನೋವು, ಹೊಟ್ಟೆಉರಿ ಮತ್ತು ಅಲರ್ಜಿ ಉಂಟುಮಾಡುವ ಸಾಧ್ಯತೆಯಿದೆ.

ಹಾಗೆಯೇ, ಎರಿತ್ರೋಸಿನ್ ಮತ್ತು ಇತರ ಕೆಂಪು ಬಣ್ಣದ ರಾಸಾಯನಿಕಗಳು ಹಣ್ಣಿನ ಒಳಭಾಗದಲ್ಲಿ ಕೆಂಪು ಬಣ್ಣವನ್ನು ಹೆಚ್ಚಿಸಲು ಬಳಸಲಾಗುತ್ತವೆ. ಇದು ಯಕೃತ್ತಿನ (liver) ಮೇಲೆ ದುಷ್ಪರಿಣಾಮ ಬೀರಬಹುದು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಕಲ್ಲಂಗಡಿ ಖರೀದಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಯಾವುವು?:

ನಮ್ಮ ಆರೋಗ್ಯ ಸುರಕ್ಷತೆ ನಮ್ಮದೇ ಹೊಣೆಯಾಗಿದೆ. ಆದ್ದರಿಂದ, ಕಲ್ಲಂಗಡಿ ಹಣ್ಣು ಖರೀದಿಸುವಾಗ ಈ ಎಚ್ಚರಿಕೆಗಳನ್ನು ಅನುಸರಿಸಿ:
ನೈಸರ್ಗಿಕವಾಗಿ ಹಣ್ಣಾದ ಹಣ್ಣುಗಳು ಸಣ್ಣ ಹಳದಿ ಕಲೆಗಳನ್ನು ಹೊಂದಿರುತ್ತವೆ. ಆದರೆ, ಹಳದಿ ಬಣ್ಣದ ಕಲೆಗಳು ಹೆಚ್ಚಿದ್ದರೆ ಅದರಲ್ಲಿ ರಾಸಾಯನಿಕ (Chemical) ಬಳಕೆಯಾಗಿದೆ ಎಂದರ್ಥ.
ಒಳಗಿನಿಂದ ತೀವ್ರ ಕೆಂಪು ಬಣ್ಣ ಹೊಂದಿರುವ ಹಣ್ಣುಗಳನ್ನು ಖರೀದಿಸುವ ಮೊದಲು ಪರಿಶೀಲಿಸಿ. ಕೃತಕ ಬಣ್ಣ ಸೇರಿಸಿದ ಹಣ್ಣು ಹೆಚ್ಚು ಕೆಂಪಾಗಿರುತ್ತದೆ.
ಬಿಳಿ ಬಣ್ಣದ ತ್ವಚೆ ಮತ್ತು ಹಳದಿ ಕಲೆಗಳು ಇರುವ ಹಣ್ಣುಗಳು ಚುಚ್ಚುಮದ್ದು (injection) ನೀಡಿರುವ ಸಾಧ್ಯತೆ ಇದೆ.
ನೈಸರ್ಗಿಕ ಹಣ್ಣಿನ ತಂಪಾದ ಸುವಾಸನೆ ಇದ್ದರೆ, ಅದು ಉತ್ತಮ ಗುಣಮಟ್ಟದ ಹಣ್ಣು.
ಕಾಯಿ ಹಳದಿ ಬಣ್ಣದ್ದಾದರೆ, ಅದನ್ನು ಸ್ವಲ್ಪ ಸಮಯ ಉಪ್ಪು ನೀರಿನಲ್ಲಿ ನೆನೆಸಿ, ನಂತರ ತೊಳೆದು ತಿನ್ನುವುದು ಒಳಿತು.

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಶುದ್ಧ ಆಹಾರ ಸೇವಿಸಲು ಈ ಮಾಹಿತಿ ನಿಮಗೆ ಸಹಾಯಕವಾಗಲಿ. ಸದಾ ಸ್ವಚ್ಛ ಮತ್ತು ನೈಸರ್ಗಿಕ ಹಣ್ಣುಗಳನ್ನು ಆಯ್ಕೆ ಮಾಡಿ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!