ಚಿನ್ನದ ಬೆಲೆಯಲ್ಲಿ ಸತತ ಏರಿಕೆ ನಂತರ ಇಂದು ತುಸು ಕಡಿಮೆಯಾಗಿದೆ: ಹೂಡಿಕೆದಾರರಿಗೆ ಲಾಭ, ಗ್ರಾಹಕರಿಗೆ ಸವಾಲು!
ಇತ್ತೀಚೆಗೆ ಚಿನ್ನದ ಬೆಲೆ ಏರಿಕೆಯು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಸೆಳೆದಿದೆ. ಜಾಗತಿಕ ಮಟ್ಟದ ಯುದ್ಧಗಳು, ಆರ್ಥಿಕ ಸ್ಥಿತಿಗತಿಗಳು, ಅಮೆರಿಕದ ಹಣಕಾಸು ನೀತಿ, ಹೂಡಿಕೆದಾರರ ಸೈಕೋಲಾಜಿ ಹಾಗೂ ಸ್ಥಳೀಯ ಮಾರುಕಟ್ಟೆಯ ಒತ್ತಡ—ಇವೆಲ್ಲವೂ ಚಿನ್ನದ ಧಾರಣೆಯ ಮೇಲೂ ಪರಿಣಾಮ ಬೀರಿವೆ. ಚಿನ್ನಾಭರಣ ಮಾರಾಟಗಾರರು ಮತ್ತು ದಾಸ್ತಾನುದಾರರ ಬೇಡಿಕೆ ದುರ್ಬಲಗೊಂಡ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬರೋಬ್ಬರಿ 700ರೂಪಾಯಿ ಇಳಿಕೆ ಆಗಿದೆ. ಹಾಗಿದ್ದರೆ ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ ಬೆಲೆ ಇಂದು, 22, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 14, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದಾವೆ. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಅದೇ ರೀತಿ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡಿದೆ. ನಿನ್ನಗೆ ಹೋಲಿಸಿದರೆ ₹47 ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,024ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,754ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,565ಆಗಿದೆ. 1 ಕೆಜಿ ಬೆಳ್ಳಿ ಬೆಲೆ: 1,00,300 ತಲುಪಿದೆ. ಬೆಳ್ಳಿಯ ಬೆಲೆ ನಿನ್ನೆಗೆ ಹೋಲಿಸಿದರೆ ಇಂದು ₹100 ಇಳಿಕೆಯಾಗಿದೆ.
ಶುಕ್ರವಾರ ಚಿನಿವಾರ ಪೇಟೆಯ ವಹಿವಾಟಿನಲ್ಲಿ, 10 ಗ್ರಾಂ ಶುದ್ಧ (99.9%) ಚಿನ್ನದ ದರವು ₹80,700ಕ್ಕೆ ತಲುಪಿದೆ. ಇದು ಈವರೆಗೆ ದಾಖಲಾಗಿರುವ ಗರಿಷ್ಠ ಮಟ್ಟವಾಗಿದೆ. ಐವತ್ತು ದಿನಗಳ ಅವಧಿಯಲ್ಲಿ ಚಿನ್ನದ ಬೆಲೆ ₹10,010 ಹೆಚ್ಚಳವಾಗಿದ್ದು, ಮಾರುಕಟ್ಟೆಯಲ್ಲಿ ಈ ಬೆಳವಣಿಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಚಿನ್ನದ ಬೆಲೆ ಏರಿಕೆಯ ಪ್ರಮುಖ ಕಾರಣಗಳು ಹೀಗಿವೆ :
ಅಮೆರಿಕದ ಸುಂಕ ನೀತಿ, ಯುರೋಪಿಯನ್ ಆರ್ಥಿಕ ಕುಸಿತ, ಚೀನಾದ ವ್ಯಾಪಾರ ನೀತಿ ಬದಲಾವಣೆಗಳು—ಇವೆಲ್ಲವೂ ಹೂಡಿಕೆದಾರರನ್ನು ಭದ್ರ ಹೂಡಿಕೆಯತ್ತ ಪ್ರೇರೇಪಿಸುತ್ತಿವೆ. ಹಳದಿ ಲೋಹ ಎಂದೇ ಪ್ರಸಿದ್ಧವಾದ ಚಿನ್ನವು ಸಂಕಷ್ಟದ ಕಾಲದಲ್ಲಿ ಸದಾ ಭದ್ರ ಹೂಡಿಕೆಯಾಗಿ ಪರಿಗಣಿಸಲ್ಪಡುತ್ತದೆ. ಹೀಗಾಗಿ ಹೂಡಿಕೆದಾರರು ಹೆಚ್ಚು ಚಿನ್ನ ಖರೀದಿಸಲು ಮುಂದಾಗಿದ್ದಾರೆ.
ಅಂತರಾಷ್ಟ್ರೀಯ ಹಣಕಾಸು ನೀತಿಗಳ ಕಾರಣದಿಂದ ಹಲವು ದೇಶಗಳ ಕೇಂದ್ರ ಬ್ಯಾಂಕ್‌ಗಳು ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿವೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತಿದೆ. ಮದುವೆ ಹಾಗೂ ಶುಭಸಮಾರಂಭಗಳ ಮುಂಗಡ ಖರೀದಿಯು ಸ್ಥಳೀಯ ಮಾರುಕಟ್ಟೆಯ ಮೇಲೆ ಬಲವಾದ ಪರಿಣಾಮ ಬೀರುತ್ತಿದ್ದು, ಚಿನ್ನದ ಬೆಲೆ ನಿರಂತರವಾಗಿ ಏರುತ್ತಿದೆ.
ಬೆಳ್ಳಿಯೂ ಕೂಡ ಇತ್ತೀಚಿಗೆ ಏರಿಕೆ ಕಂಡಿದೆ :
ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ ಬೆಳ್ಳಿ ₹800 ಏರಿಕೆಯಾಗಿ ₹1,00,400ಕ್ಕೆ ತಲುಪಿದೆ.
ಇನ್ನು, ಹೂಡಿಕೆ ತಜ್ಞರು ಹಾಗೂ ಆರ್ಥಿಕ ವಿಶ್ಲೇಷಕರು ಈ ಏರಿಕೆಯು ಮುಂದುವರಿಯಬಹುದೆಂಬ ಮುನ್ಸೂಚನೆ ನೀಡಿದ್ದಾರೆ. ಫೆಡರಲ್ ರಿಸರ್ವ್ (ಅಮೆರಿಕದ ಕೇಂದ್ರ ಬ್ಯಾಂಕ್) ಮುಂಬರುವ ಹಣಕಾಸು ನೀತಿ ನಿರ್ಧಾರಗಳು, ಅಂತರಾಷ್ಟ್ರೀಯ ಬಂಡವಾಳ ಹೂಡಿಕೆದಾರರ ನಿಲುವು, ಭೌಗೋಳಿಕ ರಾಜಕೀಯ ಸ್ಥಿತಿಗಳು ಮುಂತಾದವು ಚಿನ್ನದ ಬೆಲೆಯ ದಿಕ್ಕನ್ನು ನಿರ್ಧರಿಸಲಿವೆ.
ಈ ಹಿನ್ನಲೆಯಲ್ಲಿ ಹೂಡಿಕೆದಾರರು ಚಿನ್ನದ ಬಂಡವಾಳ ಹೂಡಿಕೆಯನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳುವಂತೆ ತಜ್ಞರು ಸಲಹೆ ನೀಡುತ್ತಿದ್ದು, ದೀರ್ಘಕಾಲೀನ ಹೂಡಿಕೆ ಮಾಡುವ ಉದ್ದೇಶವಿದ್ದರೆ, ಚಿನ್ನದ ದರ ಏರಿಳಿತದ ತಂತ್ರವನ್ನು ಗಮನಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.