ಭಾರತ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪರಿವರ್ತನೆ: ಹೂಡಿಕೆದಾರರಿಗೆ ಮುನ್ಸೂಚನೆ
ಚಿನ್ನ ಮತ್ತು ಬೆಳ್ಳಿ ಬೆಲೆಗಳ ನಿರಂತರ ಏರಿಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಗಮನಸೆಳೆದಿದೆ. ಹೂಡಿಕೆದಾರರು ಮತ್ತು ಆಭರಣ ಪ್ರೇಮಿಗಳಿಗೆ ಚಿನ್ನದ ದರದಲ್ಲಿ ಆಗುತ್ತಿರುವ ಸ್ಥಿತಿಗತಿ ಬಹಳ ಮುಖ್ಯವಾಗಿದ್ದು, ದೈನಂದಿನ ಬೆಲೆ ಪರಿವರ್ತನೆಗಳು ಆರ್ಥಿಕ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಯು (International market) ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಕ್ರಮೇಣ ಏರಿಕೆಯಾಗುತ್ತಿದ್ದು, ಇದರ ಹಿಂದಿನ ಪ್ರಮುಖ ಕಾರಣವೆಂದರೆ ಜಾಗತಿಕ ಆರ್ಥಿಕ (Economic) ಅನಿಶ್ಚಿತತೆ, ಚಿನ್ನದ ಮಾರುಕಟ್ಟೆಯಲ್ಲಿ ತೀವ್ರ ಚಲನೆಗಳು ಹಾಗೂ ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, 25, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 14, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿವೆ . ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಇಂದು ಚಿನ್ನದ ಬೆಲೆಯಲ್ಲಿ 18 ರೂ. ನಷ್ಟು ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,056ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,788ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,592 ಆಗಿದೆ. ಇನ್ನು, 1 ಕೆಜಿ ಬೆಳ್ಳಿ ಬೆಲೆ:1,01,100 ತಲುಪಿದೆ. ಬೆಳ್ಳಿಯ ಬೆಲೆ ನಿನ್ನೆಗೆ ಹೋಲಿಸಿದರೆ ಇಂದು ₹1000 ಏರಿಕೆಯಾಗಿದೆ.
ಫೆಬ್ರವರಿ 24, 2024, ಸೋಮವಾರ, 22 ಕ್ಯಾರಟ್ ಚಿನ್ನದ ಬೆಲೆ 10 ರೂ ಏರಿಕೆಯೊಂದಿಗೆ 8,045 ರೂನಿಂದ 8,055 ರೂಗೆ ಹೆಚ್ಚಳಗೊಂಡಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ದರವು 8,777 ರೂನಿಂದ 8,787 ರೂಗೆ ಏರಿಕೆಯಾಗಿದೆ. ಅದೇ ರೀತಿ, 18 ಕ್ಯಾರಟ್ ಚಿನ್ನದ ಬೆಲೆ 6,591 ರೂಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಸಹ ಸಣ್ಣ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 100.50 ರೂನಿಂದ 101 ರೂಗೆ ಏರಿಕೆಯಾಗಿದೆ, ಮತ್ತು ಚೆನ್ನೈನಂತಹ ಕೆಲವು ನಗರಗಳಲ್ಲಿ ಬೆಳ್ಳಿ ಬೆಲೆ 108 ರೂಗೆ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ (Gold and silver rate) :
22 ಕ್ಯಾರಟ್ ಚಿನ್ನದ 10 ಗ್ರಾಂ ದರ:
ಬೆಂಗಳೂರು: ₹80,550
ಚೆನ್ನೈ: ₹80,550
ಮುಂಬೈ: ₹80,550
ದೆಹಲಿ: ₹80,700
ಕೋಲ್ಕತಾ: ₹80,550
ಕೇರಳ: ₹80,550
ಅಹ್ಮದಾಬಾದ್: ₹80,600
ಜೈಪುರ್: ₹80,700
ಲಕ್ನೋ: ₹80,700
ಭುವನೇಶ್ವರ್: ₹80,550
24 ಕ್ಯಾರಟ್ ಚಿನ್ನದ 10 ಗ್ರಾಂ ದರ:
ಭಾರತ: ₹87,870
18 ಕ್ಯಾರಟ್ ಚಿನ್ನದ 10 ಗ್ರಾಂ ದರ:
₹65,910
ಭಾರತದ ಪ್ರಮುಖ ನಗರಗಳಲ್ಲಿನ ಬೆಳ್ಳಿ ಬೆಲೆ (100 ಗ್ರಾಂ):
ಬೆಂಗಳೂರು: ₹10,100
ಚೆನ್ನೈ: ₹10,800
ಮುಂಬೈ: ₹10,100
ದೆಹಲಿ: ₹10,100
ಕೋಲ್ಕತಾ: ₹10,100
ಕೇರಳ: ₹10,800
ಅಹ್ಮದಾಬಾದ್: ₹10,100
ಜೈಪುರ್: ₹10,100
ಲಕ್ನೋ: ₹10,100
ಭುವನೇಶ್ವರ್: ₹10,800
ಪುಣೆ: ₹10,100
ವಿದೇಶಿ ಮಾರುಕಟ್ಟೆಯಲ್ಲಿರುವ 22 ಕ್ಯಾರಟ್ ಚಿನ್ನದ 10 ಗ್ರಾಂ ದರ:
ಮಲೇಷ್ಯಾ: 4,100 ರಿಂಗಿಟ್ (₹80,820)
ದುಬೈ: 3,292.50 ಡಿರಾಮ್ (₹77,720)
ಅಮೆರಿಕಾ: 895 ಡಾಲರ್ (₹77,590)
ಸಿಂಗಾಪುರ: 1,222 ಸಿಂಗಾಪುರ್ ಡಾಲರ್ (₹79,380)
ಕತಾರ್: 3,315 ಕತಾರಿ ರಿಯಾಲ್ (₹78,850)
ಸೌದಿ ಅರೇಬಿಯಾ: 3,350 ಸೌದಿ ರಿಯಾಲ್ (₹77,440)
ಓಮನ್: 349 ಒಮಾನಿ ರಿಯಾಲ್ (₹78,590)
ಕುವೇತ್: 269.80 ಕುವೇತಿ ದಿನಾರ್ (₹75,830)
ಮಾರುಕಟ್ಟೆಯ ಪರಿಣಾಮ ಚಿನ್ನದ ಬೆಲೆಗಳಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಪರಿವರ್ತನೆಗಳು ಜಾಗತಿಕ ಆರ್ಥಿಕ (Global economic) ಪರಿಸ್ಥಿತಿಯೊಂದಿಗೆ ನಿಕಟವಾಗಿ ಜೋಡಿಸಿಕೊಂಡಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ, ಅಮೆರಿಕ ಡಾಲರ್ ನ ಬಲಪಡಿಕೆ, ಭೂರಾಜಕೀಯ ಸ್ಥಿತಿಗತಿ ಹಾಗೂ ಆರ್ಥಿಕ ನೀತಿಗಳು (Economic value) ಬೆಲೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಭಾರತದಲ್ಲಿ ಮದುವೆ ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಾಗುತ್ತಿದ್ದು, ಇದು ಬೆಲೆಗಳ ಮೇಲೂ ಪ್ರಭಾವ ಬೀರುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.