ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ: ಮೋದಿ ಎಚ್ಚರಿಕೆ ಮತ್ತು ಆರೋಗ್ಯಕರ ಎಣ್ಣೆಯ ಆಯ್ಕೆ
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬೊಜ್ಜಿನ (Obesity) ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರತಿ ಎಂಟು ಜನರಲ್ಲಿ ಒಬ್ಬರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಹೈಪರ್ಟೆನ್ಷನ್ (ಅಧಿಕ ರಕ್ತದೊತ್ತಡ), ಪಾರ್ಶ್ವವಾಯು (ಸ್ಟ್ರೋಕ್) ಮತ್ತು ಕ್ಯಾನ್ಸರ್ ಅಪಾಯವೂ ಹೆಚ್ಚುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಈ ಬೆಳವಣಿಗೆಯ ಪ್ರಮುಖ ಕಾರಣಗಳಲ್ಲಿ ಅಹಿತಕರ ಆಹಾರ ಪದ್ಧತಿ, ಕಡಿಮೆ ಶಾರೀರಿಕ ಚಟುವಟಿಕೆ, ಸಂಸ್ಕರಿಸಿದ (processed) ಆಹಾರಗಳ ಬಳಕೆ, ಹಾಗೂ ಹೆಚ್ಚಿನ ಎಣ್ಣೆ ಸೇವನೆ ಪ್ರಮುಖವಾದವು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಸಿದ್ಧ ‘ಮನ್ ಕಿ ಬಾತ್’ (Man Ki Baat) ಕಾರ್ಯಕ್ರಮದ 119ನೇ ಸಂಚಿಕೆಯಲ್ಲಿ ಜನರಿಗೆ ಅಡುಗೆ ಎಣ್ಣೆ ಬಳಕೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿಕೊಳ್ಳುವ ಸಲಹೆ ನೀಡಿದ್ದಾರೆ. ನೀವು ಈ ಸಲಹೆಯನ್ನು ಪಾಲಿಸುವುದು ಅಷ್ಟೇ ಅಲ್ಲ ಇತರರಿಗೂ ಈ ವಿಚಾರದ ಬಗ್ಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದ್ದಾರೆ. ಇಂತಹ ಸಣ್ಣಪುಟ್ಟ ಜೀವನಶೈಲಿ (Lifestyle) ಬದಲಾವಣೆಗಳು ಬೊಜ್ಜಿನ ಸಮಸ್ಯೆಯನ್ನು ನಿಯಂತ್ರಿಸುವಲ್ಲಿಯೂ, ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಮುಖ್ಯ ಪಾತ್ರ ವಹಿಸಬಹುದೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತದಲ್ಲಿ ಬೊಜ್ಜಿನ ಪ್ರಮಾಣ ಏಕೆ ಹೆಚ್ಚುತ್ತಿದೆ?:
ಲ್ಯಾನ್ಸೆಟ್ ಅಧ್ಯಯನದ (Lancet study) ಪ್ರಕಾರ, 1990 ರಿಂದ 2022ರ ನಡುವೆ ಭಾರತದಲ್ಲಿ ಬೊಜ್ಜಿನ ಪ್ರಮಾಣ ಎರಡರಿಂದ ನಾಲ್ಕು ಪಟ್ಟು ಏರಿಕೆಯಾಗಿದೆ.
ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ: ಶೇಕಡಾ 1.2 ರಿಂದ ಶೇಕಡಾ 9.8ಕ್ಕೆ ಹೆಚ್ಚಾಗಿದೆ.
ಪುರುಷರಲ್ಲಿ ಬೊಜ್ಜಿನ ಪ್ರಮಾಣ: ಶೇಕಡಾ 0.5 ರಿಂದ ಶೇಕಡಾ 5.4ಕ್ಕೆ ಏರಿಕೆಯಾಗಿದೆ.
2019ರ ಲ್ಯಾನ್ಸೆಟ್ ಅಧ್ಯಯನ: ಭಾರತದಲ್ಲಿ 13.5 ಕೋಟಿ ಜನರು ಬೊಜ್ಜಿನಿಂದ ಬಳಲುತ್ತಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ (National Family Health) ಸಮೀಕ್ಷೆ ಪ್ರಕಾರ, ನಗರ ಪ್ರದೇಶದಲ್ಲಿ ಬೊಜ್ಜಿನ ಪ್ರಮಾಣ ಗ್ರಾಮೀಣ ಪ್ರದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ವಿಶೇಷವಾಗಿ 30-49 ವರ್ಷದ ಮಹಿಳೆಯರಲ್ಲಿ ಶೇಕಡಾ 50% ಕ್ಕೂ ಅಧಿಕ ಜನರು ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಮಕ್ಕಳಲ್ಲಿಯೂ ಬೊಜ್ಜಿನ ಪ್ರಮಾಣ ಗಂಭೀರವಾಗಿ ಹೆಚ್ಚುತ್ತಿದೆ, ಇದಕ್ಕೆ ಪ್ರಮುಖ ಕಾರಣ ಕಡಿಮೆ ತೂಕದ ಎಣ್ಣೆಗಳಲ್ಲಿ ಬೇಯಿಸಿದ ಆಹಾರ, ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್ ಫುಡ್ (Junk food) ಸೇವನೆ. ಇದನ್ನು ನಿಯಂತ್ರಿಸಲು ಆಹಾರ ಪದ್ಧತಿಯಲ್ಲಿ ಸರಿಯಾದ ಆಯ್ಕೆ ಮಾಡುವುದು ಅತ್ಯಂತ ಅಗತ್ಯವಾಗಿದೆ.
ಭಾರತದಲ್ಲಿ ಬೊಜ್ಜಿನ ಪ್ರಮಾಣ ಏಕೆ ಹೆಚ್ಚುತ್ತಿದೆ?
ಪ್ರಧಾನಿ ಮೋದಿಯವರ (Prime minister Modi) ಈ ಆಹ್ವಾನಕ್ಕೆ ಹೃದ್ರೋಗ ತಜ್ಞರು, ಆಹಾರ ತಜ್ಞರು ಮತ್ತು ಆರೋಗ್ಯ ತಜ್ಞರು ಹರ್ಷ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯಕರ ಎಣ್ಣೆಗಳ ಅಧಿಕ ಸೇವನೆಯು ಹೃದಯಾಘಾತ, ಪಾರ್ಶ್ವವಾಯು, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಜಾಗೃತಿಯನ್ನು ಹೆಚ್ಚು ಜನರಲ್ಲಿ ಹಂಚಿಕೊಳ್ಳಲು ಪ್ರಧಾನಿ ಅವರು ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ, ಬಾಕ್ಸರ್ ನಿಖತ್ ಜರೀನ್, ಉದ್ಯಮಿ ಆನಂದ್ ಮಹೀಂದ್ರಾ, ಪಿಸ್ತೂಲ್ ಶೂಟರ್ ಮನು ಭಾಕರ್, ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಹಾಗೂ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿಯವರನ್ನು ಇವರು ಅರೋಗ್ಯಕರ ಎಣ್ಣೆಯನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರೋಗ್ಯಕರ ಅಡುಗೆ ಎಣ್ಣೆಗಳ ಆಯ್ಕೆ: ಯಾವ ಎಣ್ಣೆ ಬಳಸಿದರೆ ಒಳ್ಳೆಯದು?:
ಐಸಿಎಂಆರ್ (ICMR) ಮಾರ್ಗಸೂಚಿಗಳ ಪ್ರಕಾರ, ಆರೋಗ್ಯವಂತ ವಯಸ್ಕರು ದಿನಕ್ಕೆ 15-20 ಮಿಲಿಗ್ರಾಂ ಗಿಂತ ಹೆಚ್ಚು ಎಣ್ಣೆ ಸೇವಿಸಬಾರದು. ಎಣ್ಣೆ ಆಯ್ಕೆ ಮಾಡುವಾಗ ಸ್ಯಾಚುರೇಟೆಡ್ ಕೊಬ್ಬಿನಂಶ ಕಡಿಮೆಯಾಗಿರುವ ಎಣ್ಣೆಗಳನ್ನು ಆಯ್ಕೆ ಮಾಡುವುದು ಉತ್ತಮ.
ಆರೋಗ್ಯಕರ ಅಡುಗೆ ಎಣ್ಣೆಗಳ ಪಟ್ಟಿ ಈ ಕೆಳಗಿನಂತಿದೆ :
ಆಲಿವ್ ಎಣ್ಣೆ (Olive Oil) :
ಹೃದಯ ಆರೋಗ್ಯಕ್ಕೆ ಅತ್ಯುತ್ತಮ ಆಯ್ಕೆ. ಪಾಲಿಅನ್‌ಸ್ಯಾಚುರೇಟೆಡ್ ಕೊಬ್ಬಿನಾಂಶ ಅಧಿಕ.
ಸಾಸಿವೆ ಎಣ್ಣೆ (Mustard Oil) :
ಒಮೆಗಾ-3 ಕೊಬ್ಬಿನಾಂಶ ಹೊಂದಿರುವುದು, ಉರಿಯೂತ ಕಡಿಮೆ ಮಾಡುವುದು.
ಕಡಲೆಕಾಯಿ ಎಣ್ಣೆ (Groundnut Oil) :
ಹೆಚ್ಚಿನ ಶಾಖದ ಅಡುಗೆಗೆ ಸೂಕ್ತ, ಪೋಷಕಾಂಶಗಳಿಂದ ಸಮೃದ್ಧ.
ಸೋಯಾಬೀನ್ ಎಣ್ಣೆ (Soybean Oil) :
ಒಮೆಗಾ-3, ವಿಟಮಿನ್ E ಹೆಚ್ಚಿರುತ್ತದೆ
ಸೂರ್ಯಕಾಂತಿ ಎಣ್ಣೆ (Sunflower Oil) :
ಹೃದಯ ರಕ್ತನಾಳಗಳ ಆರೋಗ್ಯಕ್ಕೆ ಉತ್ತಮ.
ಕೋಬ್ಬರಿ ಎಣ್ಣೆ (Coconut Oil) :
ಕಡಿಮೆ ಪ್ರಮಾಣದ ಕೊಬ್ಬು ಅಮ್ಲಗಳಿರುವುದರಿಂದ ಈ ಅಡುಗೆ ಎಣ್ಣೆಯೂ ಕೂಡ ಉತ್ತಮ ಎಂದು ಹೇಳಬಹುದು.
ತುಪ್ಪ (Ghee) :
ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಆದರೆ ಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ.
ಯಾವ ರೀತಿಯ ಎಣ್ಣೆಗಳನ್ನು ನಾವು ಬಳಸಬಾರದು :
ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳು (Hydrogenated Vegetable Oils) : ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
ತಾಳೆ ಎಣ್ಣೆ (Palm Oil) : ಅಧಿಕ ಸ್ಯಾಚುರೇಟೆಡ್ ಕೊಬ್ಬಿನಾಂಶ ಹೊಂದಿರುವುದರಿಂದ ನಿಯಂತ್ರಿತ ಸೇವನೆ ಅಗತ್ಯ.
ಮರುಬಳಕೆಯ ಎಣ್ಣೆ (Reused Oil) : ಪದೇ ಪದೇ ಬಿಸಿ ಮಾಡಿದರೆ ಹಾನಿಕಾರಕ ಟ್ರಾನ್ಸ್ ಕೊಬ್ಬುಗಳು, ಅಕ್ರಿಲಾಮೈಡ್ ಉತ್ಪತ್ತಿಯಾಗುತ್ತದೆ.
ಎಣ್ಣೆ ಬಳಸುವಾಗ ಎಚ್ಚರಿಕೆಯಿಂದ ಬಳಸಿ ಪದೇ ಪದೇ ಬಿಸಿ ಮಾಡಿದ ಎಣ್ಣೆಯನ್ನು ಬಳಸಬೇಡಿ :
ವೈದ್ಯರು ಮತ್ತು ಆಹಾರ ತಜ್ಞರ ಪ್ರಕಾರ, ಪದೇ ಪದೇ ಎಣ್ಣೆ ಬಿಸಿ ಮಾಡುವುದು (Reheating Oil) ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ಹಳೆಯ ಎಣ್ಣೆಯನ್ನು ಪುನಃ ಬಿಸಿ ಮಾಡಿದರೆ ಟ್ರಾನ್ಸ್ ಕೊಬ್ಬುಗಳು (Trans Fats), ಸ್ವತಂತ್ರ ರಾಡಿಕಲ್‌ಗಳು (Free Radicals) ಮತ್ತು ಅಕ್ರಿಲಾಮೈಡ್ (Acrylamide) ಉಂಟಾಗಬಹುದು. ಇದರಿಂದ ಹೃದಯಾಘಾತ, ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚುತ್ತದೆ.
ಅದಕ್ಕಾಗಿ ಬಳಕೆ ಮಾಡಿದ ಎಣ್ಣೆಯನ್ನು ಪದೇ ಪದೇ ಬಳಸಬಾರದು. ವಿಶೇಷವಾಗಿ ಬೀದಿ ಬದಿ ಆಹಾರ ಮಾರುವವರು ಮತ್ತು ಹೋಟೆಲ್‌ಗಳಲ್ಲಿ ಇದನ್ನು ನಿಯಂತ್ರಿಸಲು ಅಗತ್ಯವಿದೆ.
ಪ್ರಧಾನಿ ಮೋದಿ ಅವರು ಅಡುಗೆ ಎಣ್ಣೆಯ ಬಳಕೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವಂತೆ ಕರೆ ನೀಡಿದ್ದಾರೆ. ಇದರಿಂದ ಅತಿಯಾದ ತೂಕ ಮತ್ತು ಬೊಜ್ಜಿನ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯವಾಗಬಹುದು. ಬದಲಿಗೆ, ಆರೋಗ್ಯಕರ ಆಯ್ಕೆಗಳಾದ ಆಲಿವ್ ಎಣ್ಣೆ, ಸಾಸಿವೆ ಎಣ್ಣೆ, ಕಡಲೆಕಾಯಿ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಬೊಜ್ಜಿನ ಸಮಸ್ಯೆಯನ್ನು (Fat Problem) ನಿಯಂತ್ರಿಸಲು, ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಮತ್ತು ಎಣ್ಣೆಯ ಪ್ರಮಾಣಿತ ಬಳಕೆ ಅತ್ಯಂತ ಮುಖ್ಯ. ಮೋದಿ ಅವರ ಈ ಜಾಗೃತಿಯು ಭಾರತದ ಜನರ ಆರೋಗ್ಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಬಹುದು. ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.