Gold Rate Today : ಅರೇ, ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ, ಇಂದಿನ ರೇಟ್ ಎಷ್ಟು.? ಇಲ್ಲಿದೆ ಚಿನ್ನ ಬೆಳ್ಳಿ ದರ.!

Picsart 25 02 28 06 42 40 770

WhatsApp Group Telegram Group

ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ: ಆಭರಣ ಪ್ರಿಯರಿಗೆ ಸುವರ್ಣಾವಕಾಶ!

ಚಿನ್ನ ಮತ್ತು ಬೆಳ್ಳಿಯ (Gold and silver) ದರದಲ್ಲಿ ಮಹತ್ವದ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಸಂತಸದ ವಿಷಯವಾಗಿದೆ. ಹಳದಿ ಲೋಹದ ಬೆಲೆ ನಿರಂತರ ಏರಿಳಿತ ಅನುಭವಿಸುತ್ತಿದ್ದರೂ, ಕಳೆದ ಕೆಲವು ದಿನಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿತಗೊಂಡಿದ್ದು, ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಕುಸಿತವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, 28, ಫೆಬ್ರವರಿ 2025: Gold Price Today

ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಫೆಬ್ರವರಿ 26, 2025 ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಬಹುದು. ಇನ್ನು, ಮಹಾ ಶಿವರಾತ್ರಿದಿನದಂದೇ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗಿದ್ದು ಆಭರಣ ಪ್ರಿಯರು ಹೆಚ್ಚು ಸಂತೋಷ ಪಡುವಂತೆ ಮಾಡಿತ್ತು. ಇದೀಗ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ (Decrease) ಕಂಡಿದ್ದು, ಆಭರಣ ಪ್ರಿಯರು ಚಿನ್ನ ಹಾಗೂ ಬೆಳ್ಳಿ ಕೊಂಡುಕೊಳ್ಳಲು ಹೆಚ್ಚು ಉತ್ಸುಕರಾಗಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,009ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,737ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,553ಆಗಿದೆ. ಇನ್ನು,1 ಕೆಜಿ ಬೆಳ್ಳಿ ಬೆಲೆ:97,900 ತಲುಪಿದೆ.

ಮಾರುಕಟ್ಟೆ ತಜ್ಞರ (Market specilalist) ಪ್ರಕಾರ, ಅಮೆರಿಕದ ಬಂಡವಾಳ ನೀತಿ, ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು ಹಾಗೂ ಹಣದುಬ್ಬರದಿಂದ ಚಿನ್ನದ ದರ ಕುಸಿತ ಕಂಡಿದೆ. ಅಲ್ಲದೆ, ಹೂಡಿಕೆದಾರರು ಚಿನ್ನದ ಬದಲಾಗಿ ಅಮೆರಿಕದ ಡಾಲರ್ ಮತ್ತು ಬಾಂಡ್‌ (Dollar and bond) ಗಳತ್ತ ಮೊರೆ ಹೋಗಿರುವುದೂ ಚಿನ್ನದ ಬೆಲೆಯಲ್ಲಿ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಬಹುದು.

ಫ್ಯೂಚರ್ಸ್ (Futures) ವಹಿವಾಟಿನಲ್ಲಿ ಚಿನ್ನದ ಬೆಲೆ ಇಳಿಕೆ :

ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನದ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿತಗೊಂಡಿದೆ. ಫ್ಯೂಚರ್ಸ್ ವಹಿವಾಟಿನಲ್ಲಿ 10 ಗ್ರಾಂ ಚಿನ್ನ 723 ರೂಪಾಯಿ ಅಥವಾ ಶೇ 0.84ರಷ್ಟು ಇಳಿದಿದ್ದು, 85,151 ರೂಪಾಯಿಗೆ ತಲುಪಿದೆ. ಈ ಇಳಿಕೆಯು ದೇಶೀಯ ಮಾರುಕಟ್ಟೆಯಲ್ಲಿಯೂ ನಾವು ಕಾಣಬಹುದು.

ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರ:
ಬೆಂಗಳೂರು ಸೇರಿದಂತೆ ಹಲವೆಡೆ ಚಿನ್ನದ ಬೆಲೆ ಇಳಿಕೆಯಾಗಿದ್ದು, ಫೆಬ್ರವರಿ 27, 2025ರ ದರ ಹೀಗಿದೆ :

22 ಕ್ಯಾರೆಟ್ ಚಿನ್ನ – 1 ಗ್ರಾಂ: ₹8,010
24 ಕ್ಯಾರೆಟ್ ಅಪರಂಜಿ ಚಿನ್ನ – 1 ಗ್ರಾಂ: ₹8,738
18 ಕ್ಯಾರೆಟ್ ಚಿನ್ನ – 1 ಗ್ರಾಂ: ₹6,554

ಬೆಳ್ಳಿಯ ಬೆಲೆಯಲ್ಲೂ ಇಳಿಕೆ :

ಚಿನ್ನದಂತೆ ಬೆಳ್ಳಿಯ ಬೆಲೆಯೂ ಇಳಿಮುಖವಾಗಿದ್ದು, ಬೆಳ್ಳಿ ಹೂಡಿಕೆದಾರರು ಮತ್ತು ಆಭರಣ (Jewellery) ತಯಾರಕರಿಗೆ ಇದು ಒಂದು ಉತ್ತಮ ಅವಕಾಶವನ್ನು ನೀಡಿದೆ. ಗುರುವಾರ, ಬೆಳ್ಳಿಯ ದರ ಪ್ರತಿ ಕಿಲೋಗ್ರಾಂ 540 ರೂಪಾಯಿ ಇಳಿದಿದ್ದು, 94,101 ರೂಪಾಯಿಗೆ ತಲುಪಿದೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಅಮೆರಿಕದ ಬಂಡವಾಳ ಮಾರುಕಟ್ಟೆಯ ದುರ್ಬಲತೆ, ಯುಎಸ್ ಫೆಡರಲ್ ರಿಸರ್ವ್ ನೀತಿ, ಡಾಲರ್ ಮೌಲ್ಯ, ಮತ್ತು ಜಾಗತಿಕ ರಾಜಕೀಯ ಬೆಳವಣಿಗೆಗಳ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮುಂಬರುವ ದಿನಗಳಲ್ಲಿಯೂ ಕೂಡ ಏರಿಳಿತ (Hierarchy) ಉಂಟಾಗಬಹುದು. ಹೀಗಾಗಿ, ಹೂಡಿಕೆದಾರರು ಹಾಗೂ ಗ್ರಾಹಕರು ಈ ಬೆಳವಣಿಗೆಯನ್ನು ಗಮನಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!