ಮಾರ್ಚ್ 2025: ಹೊಸ ನಿಯಮಗಳು ಜಾರಿಗೆ! ನಿಮ್ಮ ಜೀವನದ ಮೇಲೆ ಏನೀ ಪರಿಣಾಮ?
ಮಾರ್ಚ್ 2025 ರಿಂದ ಕೆಲವು ಮಹತ್ವದ ನಿಯಮಗಳು ಜಾರಿಯಾಗಲಿವೆ, ಅವು ನಿಮ್ಮ ದಿನನಿತ್ಯದ ಹಣಕಾಸು ನಿರ್ವಹಣೆ(Financial management) ಮತ್ತು ಪಾವತಿ ವಿಧಾನ(Payment methods)ಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹೊಸ ನಿಯಮಗಳ ಬಗ್ಗೆ ಮುಂಚಿನಿಂದಲೇ ಅರಿವು ಹೊಂದಿದ್ದು, ತಯಾರಿ ಕೈಗೊಳ್ಳುವುದು ಬಹಳ ಮುಖ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆರ್ಥಿಕ ವ್ಯವಹಾರಗಳು, ಬ್ಯಾಂಕಿಂಗ್ ನಿಯಮಗಳು ಹಾಗೂ ಇತರೆ ಕ್ಷೇತ್ರಗಳಲ್ಲಿ ಬದಲಾವಣೆಗಳಾದ ಮೇಲೆ ನೀವು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳಿ.
ಎಲ್ಪಿಜಿ ಸಿಲಿಂಡರ್ ಬೆಲೆಗಳು(LPG cylinder prices):
ಪ್ರತಿ ತಿಂಗಳ ಮೊದಲ ದಿನಾಂಕದಲ್ಲಿ, ತೈಲ ಮತ್ತು ಅನಿಲ ವಿತರಣಾ ಕಂಪನಿಗಳು LPG Cylinder ಬೆಲೆಗಳನ್ನು ಪರಿಷ್ಕರಿಸುತ್ತವೆ. ಹೀಗಾಗಿ, ಮಾರ್ಚ್ 1, 2025 ರಂದು, ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಸಂಭವಿಸಬಹುದು, ಇದು ಮನೆಮಂದಿಯ ಖರ್ಚುಗಳ ಮೇಲೆ ಪರಿಣಾಮ ಬೀರುತ್ತದೆ.
ಜೆಟ್ ಇಂಧನ (ಎಟಿಎಫ್) ಬೆಲೆ ಪರಿಷ್ಕರಣೆ(Jet Fuel (ATF) Price Revision):
ತೈಲ ವಿತರಣಾ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನಾಂಕದಲ್ಲಿ ಜೆಟ್ ಇಂಧನ ಅಥವಾ ವಾಯುಯಾನ ಟರ್ಬೈನ್ ಇಂಧನ (Aviation turbine fuel) ಬೆಲೆಗಳನ್ನು ಪರಿಷ್ಕರಿಸುತ್ತವೆ. ಮಾರ್ಚ್ 1 ರಂದು, ಜೆಟ್ ಇಂಧನ(Jet fuel) ಬೆಲೆಯಲ್ಲಿ ಬದಲಾವಣೆ ಸಂಭವಿಸಬಹುದು, ಇದು ವಿಮಾನ ಪ್ರಯಾಣ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಮಾ ಪ್ರೀಮಿಯಂ ಪಾವತಿ ವಿಧಾನ(Insurance premium payment method):
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಮಾರ್ಚ್ 1, 2025 ರಿಂದ ‘Insurance-ASBA’ ಎಂಬ ಹೊಸ UPI ಆಧಾರಿತ ವಿಮಾ ಪ್ರೀಮಿಯಂ ಪಾವತಿ ಸೌಲಭ್ಯವನ್ನು ಪರಿಚಯಿಸುತ್ತಿದೆ. ಇದರಿಂದ, ಯುಪಿಐ ಬಳಕೆದಾರರು ತಮ್ಮ ವಿಮಾ ಪ್ರೀಮಿಯಂಗಳನ್ನು ಸುಲಭವಾಗಿ ಪಾವತಿಸಲು ಸಾಧ್ಯವಾಗುತ್ತದೆ.
ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಸಕ್ರಿಯಗೊಳಿಸುವ ಗಡುವು ವಿಸ್ತರಣೆ!(Universal Account Number (UAN) activation deadline extension):
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಯುಎಎನ್ ಸಕ್ರಿಯಗೊಳಿಸಲು ಮತ್ತು ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಮಾರ್ಚ್ 15, 2025 ರವರೆಗೆ ವಿಸ್ತರಿಸಿದೆ. ಇದು EPFO ನ ಇಎಲ್‌ಐ ಯೋಜನೆ(ELI scheme)ಯ ಪ್ರಯೋಜನಗಳನ್ನು ಪಡೆಯಲು ಅಗತ್ಯವಾಗಿದೆ.
ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಲ್ಲಿ ನಾಮನಿರ್ದೇಶನ ನಿಯಮ ಬದಲಾವಣೆ(Change in nomination rules in mutual funds and demat accounts):
ಭಾರತೀಯ ಪಾವತಿ ನಿಯಂತ್ರಣ ಮಂಡಳಿ (SEBI) ಮಾರ್ಚ್ 1, 2025 ರಿಂದ ಮ್ಯೂಚುವಲ್ ಫಂಡ್ ಫೋಲಿಯೊಗಳು ಮತ್ತು ಡಿಮ್ಯಾಟ್ ಖಾತೆಗಳಲ್ಲಿ ಗರಿಷ್ಠ 10 ನಾಮನಿರ್ದೇಶಿತರನ್ನು ನೇಮಿಸಲು ಅವಕಾಶ ನೀಡಿದೆ. ಈ ಬದಲಾವಣೆ ಹೂಡಿಕೆದಾರರಿಗೆ ಆಸ್ತಿ ವರ್ಗಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡಲಿದೆ.
ಬ್ಯಾಂಕ್ ರಜಾದಿನಗಳು(Bank Holidays):
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ ತಿಂಗಳಿಗಾಗಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಒಟ್ಟು 14 ದಿನಗಳ ರಜೆಗಳಿವೆ. ಹೀಗಾಗಿ, ಬ್ಯಾಂಕ್ ಸಂಬಂಧಿತ ಕಾರ್ಯಗಳನ್ನು ಯೋಜಿಸುವ ಮೊದಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಮುಖ್ಯ.
ಈ ಬದಲಾವಣೆಗಳು ಸಾಮಾನ್ಯ ಜನರ ದಿನನಿತ್ಯದ ಜೀವನದ ಮೇಲೆ ಮಹತ್ತರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಈ ನಿಯಮ ಬದಲಾವಣೆಗಳನ್ನು ಗಮನಿಸಿ, ತಕ್ಕ ರೀತಿಯಲ್ಲಿ ನಿಮ್ಮ ಆರ್ಥಿಕ ಯೋಜನೆಗಳನ್ನು ಹೊಂದಿಸುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.