Business Idea: ಜಸ್ಟ್ 10 ಸಾವಿರ ಇದ್ರೆ ಸಾಕು, ಈ ಬಿಸಿನೆಸ್ ಪ್ರಾರಂಭ ಮಾಡಿ, ಪ್ರತಿ ದಿನ 1 ಸಾವಿರ ಗಳಿಸಿ.!

Picsart 25 02 28 22 38 20 748

WhatsApp Group Telegram Group

ಕೇವಲ ₹10,000 ಹೂಡಿಕೆ! ಪ್ರತಿದಿನ ₹1,000 ಗಳಿಸಬಹುದಾದ ಲಾಭದಾಯಕ ವ್ಯಾಪಾರದ ಮಾಹಿತಿ ಹೀಗಿದೆ :

ಈ ದಿನಗಳಲ್ಲಿ ಸ್ವಂತ ಉದ್ಯೋಗ (Job) ಎಂಬುದು ಅನಿವಾರ್ಯತೆಯಾಗಿದೆ. ಹೆಚ್ಚಿನ ಉದ್ಯೋಗಾವಕಾಶಗಳು ಸಿಗದೆ, ಅಥವಾ ಉದ್ಯೋಗಕ್ಕೆ ಸರಿಯಾಗಿ ಉತ್ತಮ ವೇತನ ದೊರೆಯದೇ ಜನರು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕಡಿಮೆ ಬಂಡವಾಳದಲ್ಲಿ ಲಾಭದಾಯಕವಾದ ವ್ಯವಹಾರ ಆರಂಭಿಸುವ ಆಲೋಚನೆ ಎಲ್ಲರಲ್ಲೂ ಇದೆ. ಒಳ್ಳೆಯ ಬ್ಯುಸಿನೆಸ್ ಐಡಿಯಾ (Business idea) ಹುಡುಕುತ್ತಿರುವವರಿಗೆ ಇಲ್ಲಿದೆ ಒಂದು ಒಳ್ಳೆಯ ಉಪಾಯ. ಹಾಗಿದ್ದಾರೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭಗಳಿಸಬಹುದಾದ ಬಿಸಿನೆಸ್ ಐಡಿಯಾ ಯಾವುದು? ಈ ವ್ಯಾಪಾರವನ್ನು ಹೇಗೆ ಪ್ರಾರಂಭಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ತಂತ್ರಜ್ಞಾನಯುಗದಲ್ಲಿ (Technology age) ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ (Smartphone) ಇದೆ. ಮೊಬೈಲ್‌ಫೋನ್ ನಮ್ಮ ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಹೀಗಾಗಿ, ಮೊಬೈಲ್ ಪರಿಕರಗಳ (Accessories) ವ್ಯಾಪಾರ ಈಗಿನ ದಿನಗಳಲ್ಲಿ ಹೆಚ್ಚು ಲಾಭದಾಯಕ ವ್ಯವಹಾರದಲ್ಲಿ ಒಂದು. 10 ಸಾವಿರ ರೂಪಾಯಿಯಷ್ಟು ಕಡಿಮೆ ಬಂಡವಾಳದಲ್ಲಿ ಈ ವ್ಯವಹಾರವನ್ನು ಆರಂಭಿಸಿ, ಪ್ರತಿದಿನ 1,000 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಲಾಭಗಳಿಸಬಹುದು.

ಈ ವ್ಯಾಪಾರವನ್ನು ಹೇಗೆ ಶುರು ಮಾಡುವುದು?:

ಮೊಬೈಲ್ ಪರಿಕರಗಳ ವ್ಯಾಪಾರ (Mobile Accessories Business) ಅನುಕೂಲಕರ ವ್ಯಾಪಾರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮೊಬೈಲ್‌ಗಳನ್ನು ರಕ್ಷಿಸಿಕೊಳ್ಳಲು ಅಥವಾ ಸುಲಭವಾಗಿ ಬಳಸಲು ಪರಿಕರಗಳ ಅವಶ್ಯಕತೆ ಇದೆ. ಆದ್ದರಿಂದ, ಸ್ಮಾರ್ಟ್‌ಫೋನ್ ಸಂಬಂಧಿತ ಪರಿಕರಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಈ ವ್ಯಾಪಾರವನ್ನು ನೀವು ನಿಮ್ಮ ಊರಿನಲ್ಲಿ ಅಥವಾ ಯಾವುದೇ ಬೀದಿ ಬದಿಯಲ್ಲಿ, ಪಾದಚಾರಿ ಮಾರ್ಗದಲ್ಲಿ, ಚೌಕಗಳಲ್ಲಿ, ಮಾರುಕಟ್ಟೆಗಳಲ್ಲಿ, ಬಸ್ ನಿಲ್ದಾಣಗಳ ಹತ್ತಿರ, ಕಾಲೇಜು-ಕ್ಯಾಂಪಸ್ ಬಳಿ ಅಥವಾ ಮಳಿಗೆಗಳಲ್ಲಿ ಪ್ರಾರಂಭಿಸಬಹುದು.

ಹಾಗಿದ್ದರೆ ಮೊಬೈಲ್ ಪರಿಕರಗಳಲ್ಲಿ ಮುಖ್ಯವಾಗಿ ಬೇಡಿಕೆ ಇರುವ ವಸ್ತುಗಳು ಯಾವುವು?:

ಸ್ಕ್ರೀನ್ ಗಾರ್ಡ್ (Screen Guard)
ಮೊಬೈಲ್ ಕವರ್ (Mobile Covers)
ಚಾರ್ಜರ್ (Chargers)
ಇಯರ್‌ಫೋನ್‌ಗಳು (Earphones)
ಮೊಬೈಲ್ ಸ್ಟ್ಯಾಂಡ್ (Mobile Stands)
ಸೌಂಡ್‌ಬಾರ್ ಸ್ಪೀಕರ್ (Soundbar Speakers)
OTG ಕೇಬಲ್, ಮೆಮೊರಿ ಕಾರ್ಡ್, ಡೇಟಾ ಕೇಬಲ್, ಪಾಪ್‌ಸಾಕೆಟ್ ಮತ್ತು ಇತರ ಗ್ಯಾಜೆಟ್ಸ್

ಈ ಪರಿಕರಗಳನ್ನು ಮಾರುಕಟ್ಟೆಯಿಂದ ಕಡಿಮೆ ದರದಲ್ಲಿ ಖರೀದಿಸಿ, ಉತ್ತಮ ಲಾಭದರದಲ್ಲಿ ಮಾರಾಟ ಮಾಡಬಹುದು.

ಕಡಿಮೆ ದರದಲ್ಲಿ ಮೊಬೈಲ್ ಪರಿಕರಗಳನ್ನು (Mobile parts) ಎಲ್ಲಿ ಖರೀದಿಸಬಹುದು? :

ನೀವು ಬೆಂಗಳೂರು ಅಥವಾ ಸುತ್ತಮುತ್ತಲಿನವರು ಆಗಿದ್ದರೆ, Chickpet, SP Road, Raja Market, National Market ಮುಂತಾದ ಸ್ಥಳಗಳಿಂದ ಉತ್ತಮ ಗುಣಮಟ್ಟದ ಮೊಬೈಲ್ ಪರಿಕರಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಇದಲ್ಲದೆ Flipkart, Amazon, Alibaba ಮುಂತಾದ ಪ್ಲಾಟ್‌ಫಾರ್ಮ್‌ಗಳಿಂದ ಸಹ ಮೊಬೈಲ್ ಪರಿಕರಗಳನ್ನು ಖರೀದಿ ಮಾಡಬಹುದು.

ಈ ಬಿಸಿನೆಸ್ ನಲ್ಲಿ ಎಷ್ಟು ಲಾಭಗಳಿಸಬಹುದು?:

ಪ್ರತಿ ಮೊಬೈಲ್ ಪರಿಕರ 2-3 ಪಟ್ಟು ಹೆಚ್ಚುವರಿ ದರದಲ್ಲಿ ಮಾರಾಟ ಮಾಡಬಹುದು.
ಉದಾಹರಣೆಗೆ, ₹15-₹20 ದರದಲ್ಲಿ ಸಿಗುವ ಸ್ಕ್ರೀನ್ ಗಾರ್ಡ್ ₹50-₹100 ರಷ್ಟು ಮಾರಾಟ ಮಾಡಬಹುದು.
ಒಂದು ದಿನ ಸರಾಸರಿ 1000 ರೂ. ಗಳನ್ನುಗಳಿಸಬಹುದು.
ಹಬ್ಬ ಮತ್ತು ವಿಶೇಷ ಆಫರ್‌ಗಳ ಸಂದರ್ಭದಲ್ಲಿ ಲಾಭ ಇನ್ನಷ್ಟು ಹೆಚ್ಚಾಗಬಹುದು.

ಹಾಗಿದ್ದರೆ ಈ ಬಿಸಿನೆಸ್ ಯಾರೆಲ್ಲ ಶುರು ಮಾಡಬಹುದು? :

ಉದ್ಯೋಗವಿಲ್ಲದೆ ಉದ್ಯೋಗಕ್ಕಾಗಿ ಪರದಾಡುತ್ತಿರುವವರು.
ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಇರುವವರು.
ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಪಾರ್ಟ್-ಟೈಮ್ ಉದ್ಯೋಗಾವಕಾಶ (Part time job) ಹುಡುಕುತ್ತಿರುವವರು.
ಇನ್ನೊಂದು ಉದ್ಯೋಗದೊಂದಿಗೆ ಹೆಚ್ಚಿನ ಆದಾಯವನ್ನು ಸಂಪಾದಿಸಲು ಬಯಸುವವರು.
ಹೊಸ ಉದ್ಯಮದ ಬಗ್ಗೆ ಪ್ರಾಯೋಗಿಕ ಅನುಭವ ಪಡೆಯಲು ಬಯಸುವ ಸ್ಟಾರ್ಟ್‌ಅಪ್ ಉತ್ಸಾಹಿಗಳು ಈ ಬಿಸಿನೆಸ್ ಶುರು  ಮಾಡಬಹುದು.

ಸ್ಮಾರ್ಟ್‌ಫೋನ್ ಬಳಕೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಮೊಬೈಲ್ ಪರಿಕರಗಳ ವ್ಯಾಪಾರ ಭವಿಷ್ಯದಲ್ಲಿ (Future) ಇನ್ನೂ ಹೆಚ್ಚು ಬೆಳೆಯುವ ಅವಕಾಶವಿದೆ. ಕಡಿಮೆ ಬಂಡವಾಳದೊಂದಿಗೆ ಹೂಡಿಕೆ ಮಾಡಬಹುದಾದ, ಕಡಿಮೆ ಕಾಲದಲ್ಲಿ ಲಾಭ ಪಡೆಯಬಹುದಾದ ಉತ್ತಮ ಉದ್ಯಮವಿದು. ಸರಿಯಾದ ಮಾರ್ಕೆಟಿಂಗ್ (Marketing) ಮತ್ತು ವ್ಯವಹಾರದ ನಿರ್ವಹಣೆಯಿಂದ, ಈ ಉದ್ಯಮವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!