ರಾಜ್ಯದಲ್ಲಿ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ, ಈ ದಾಖಲೆಗಳು ಕಡ್ಡಾಯ.! 

Picsart 25 03 04 00 06 56 990

WhatsApp Group Telegram Group

2025ರಲ್ಲಿ ಆಸ್ತಿ ನೋಂದಣಿಗೆ ಮಹತ್ವದ ಬದಲಾವಣೆ: ಇನ್ಮುಂದೆ ಆನ್‌ಲೈನ್‌ನಲ್ಲಿ ಭೂಮಿ ಹಾಗೂ ಮನೆ ನೋಂದಣಿಗೆ ಅವಕಾಶ

ಭೂಮಿ ಮತ್ತು ಮನೆ ನೋಂದಣಿ ಪ್ರಕ್ರಿಯೆಯಲ್ಲಿ (Land and Registration process) ದೊಡ್ಡ ಬದಲಾವಣೆಗಳನ್ನು ಕರ್ನಾಟಕ ಸರ್ಕಾರ ಈ ವರ್ಷದಿಂದ ಅಳವಡಿಸಲಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಪೇಪರ್ ವರ್ಕ್ ಕಡಿಮೆ ಮಾಡಲಾಗಿದ್ದು, ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭೂಮಿ, ಮನೆ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಡಿಜಿಟಲ್ (Digital) ಪರಿವರ್ತನೆಯು ಭ್ರಷ್ಟಾಚಾರ, ನಕಲಿ ನೋಂದಣಿ, ಭೂ ವಂಚನೆ ಹಾಗೂ ಬೇನಾಮಿ ಆಸ್ತಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ತರುವ ನಿರೀಕ್ಷೆಯಿದೆ. ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಜನಸಾಮಾನ್ಯರು ಅನುಭವಿಸುತ್ತಿದ್ದ ಕಾಗದಪತ್ರ ಸಂಬಂಧಿತ ತೊಂದರೆಗಳನ್ನು (Documents related Problems) ಕಡಿಮೆ ಮಾಡುವ ಉದ್ದೇಶದಿಂದ ಈ ಪರಿವರ್ತನೆಯನ್ನು ಸರ್ಕಾರ ತರಲಿದೆ. ಹಾಗಿದ್ದರೆ ನೋಂದಣಿ ಪ್ರಕ್ರಿಯೆಯಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನೋಂದಣಿ ಪ್ರಕ್ರಿಯೆಯಲ್ಲಿನ ಪ್ರಮುಖ ಬದಲಾವಣೆಗಳು ಹೀಗಿವೆ :

ಆನ್‌ಲೈನ್ ನೋಂದಣಿಗೆ (Online Application) ಅವಕಾಶ ಕಲ್ಪಿಸಿಕೊಡಲಾಗಿದೆ :
ಹೊಸ ನಿಯಮಗಳ ಪ್ರಕಾರ, 2025ರಿಂದ ಭೂಮಿ ಅಥವಾ ಮನೆ ನೋಂದಣಿಯನ್ನು ಆನ್‌ಲೈನ್ ಮೂಲಕ ಮಾಡಬಹುದಾಗಿದೆ. ಸರ್ಕಾರದ ಅಧಿಕೃತ ವೆಬ್‌ಸೈಟ್ ಅಥವಾ ಪೋರ್ಟಲ್ (Website or Portal) ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಈ ವ್ಯವಸ್ಥೆಯಿಂದ ಖರೀದಿದಾರರು ಮತ್ತು ಮಾರಾಟಗಾರರು ಪದೇ ಪದೇ ಅಧಿಕಾರಿಗಳ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.

ಡಿಜಿಟಲ್ ಸಹಿ (Digital Signature) :

ಹಳೆಯ ಕಾಲದ ಪೇಪರ್ ದಾಖಲೆಗಳು, ಅಥವಾ ಒಪ್ಪಂದ ಪತ್ರಗಳನ್ನು ಕಳಿಸುವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಡಿಜಿಟಲ್ ಸಹಿಯನ್ನು ಬಳಸುವ ಮೂಲಕ ಭೂಮಿ ಮತ್ತು ಮನೆ ಖರೀದಿಯ ನೋಂದಣಿ ಪ್ರಕ್ರಿಯೆ ಸುರಕ್ಷಿತ ಹಾಗೂ ವೇಗವಾಗಲಿದೆ.

ಪ್ರಕ್ರಿಯೆಯಲ್ಲಿ ಆಧಾರ್ ಲಿಂಕ್ (Adhar link) ಕಡ್ಡಾಯಗೊಳಿಸಲಾಗಿದೆ :

ನೋಂದಣಿಯನ್ನು ಸುರಕ್ಷಿತಗೊಳಿಸಲು ಖರೀದಿದಾರ ಮತ್ತು ಮಾರಾಟಗಾರರ ಆಧಾರ್ ಕಾರ್ಡ್ (Adhar card) ಅನ್ನು ಕಡ್ಡಾಯವಾಗಿ ಲಿಂಕ್ ಮಾಡಲಾಗುವುದು. ಇದರಿಂದ ನಕಲಿ ದಾಖಲೆಗಳ ಮೂಲಕ ತಕ್ಷಣವೇ ಭೂ ವಂಚನೆ ತಡೆಯಲು ಸಾಧ್ಯವಾಗುತ್ತದೆ. ಆಧಾರ್ ಲಿಂಕ್ ಹೊಂದಿರುವ ನೋಂದಣಿ ಪ್ರಕ್ರಿಯೆಯಿಂದ ಯಾರಾದರೂ ತಪ್ಪು ಮಾಹಿತಿ ಕೊಟ್ಟು ದಾಖಲೆ ಸಲ್ಲಿಸಲು ಸಾಧ್ಯವಿಲ್ಲ.

ನೋಂದಣಿಗೆ ವೀಡಿಯೋ ದಾಖಲೆ (Video Documents) ಕಡ್ಡಾಯಗೊಳಿಸಲಾಗಿದೆ :

ಭೂ ವಿವಾದಗಳನ್ನು ತಡೆಯಲು ಹೊಸ ತಂತ್ರಜ್ಞಾನವನ್ನು (Technology)ಬಳಸಲಾಗಿದೆ. ಈಗ ಭೂಮಿ ನೋಂದಣಿ ಪ್ರಕ್ರಿಯೆ ನಡೆಯುವಾಗ ವೀಡಿಯೋ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ನೋಂದಣಿ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ವೀಡಿಯೋ ಮೂಲಕ ದಾಖಲು ಮಾಡಲಾಗುವುದು, ಇದರಿಂದ ಭವಿಷ್ಯದ ಸತ್ಯಾಸತ್ಯತೆ ಪರೀಕ್ಷೆ ಸುಲಭವಾಗುತ್ತದೆ.

ನೋಂದಣಿ ಶುಲ್ಕಗಳು, ತೆರಿಗೆ, ಮತ್ತು ರದ್ದು ಮಾಡುವ ನಿಯಮಗಳು:

ಹೊಸ ನಿಯಮಗಳ ಪ್ರಕಾರ, ಸ್ಟ್ಯಾಂಪ್‌ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ನೇರವಾಗಿ ಆನ್‌ಲೈನ್‌ನಲ್ಲಿ (Online) ಪಾವತಿಸಬಹುದು. ವಿವಿಧ ಆಸ್ತಿ ಮೌಲ್ಯಗಳಿಗೆ ಸ್ಟ್ಯಾಂಪ್‌ ಡ್ಯೂಟಿ ದರಗಳು ಹೀಗಿವೆ :

₹20 ಲಕ್ಷಗಿಂತ ಕಡಿಮೆ ಮೌಲ್ಯದ ಆಸ್ತಿಗೆ 2%
₹21-45 ಲಕ್ಷ ಮೌಲ್ಯದ ಆಸ್ತಿಗೆ 3%
₹5 ಕೋಟಿ ಗಿಂತ ಹೆಚ್ಚಿನ ಆಸ್ತಿಗೆ 5%

ನೋಂದಣಿ ರದ್ದತಿ ನಿಯಮಗಳ (Registration cancelation rules) ಪ್ರಕಾರ, ಕೆಲ ರಾಜ್ಯಗಳಲ್ಲಿ 90 ದಿನಗಳ ಒಳಗೆ ನೋಂದಣಿ ರದ್ದುಗೊಳಿಸಲು ಅವಕಾಶ ನೀಡಲಾಗಿದೆ. ಕುಟುಂಬ ಸದಸ್ಯರು ಅಥವಾ ಅಕ್ರಮ ದಾಖಲೆಗಳ ಆಧಾರದ ಮೇಲೆ ಆಕ್ಷೇಪಣೆ ಇದ್ದರೆ, ನೋಂದಣಿ ರದ್ದು ಮಾಡಲು ಅವಕಾಶವಿರುತ್ತದೆ.

ಭೂಮಿ ನೋಂದಣಿಗೆ ಅಗತ್ಯವಿರುವ ಪ್ರಮುಖ ದಾಖಲೆಗಳು ಯಾವುವು?:

ಆಸ್ತಿ ಹಕ್ಕು ಪತ್ರ (Property Deed).
ಖರೀದಿ-ಮಾರಾಟ ಒಪ್ಪಂದ ಪತ್ರ (Sale Agreement).
ಆಸ್ತಿ ತೆರಿಗೆ ರಸೀದಿ (Property Tax Receipt).
ಆಧಾರ್ ಕಾರ್ಡ್(Adhar card).
ಪಾನ್ ಕಾರ್ಡ್(Pan card).
ಮತದಾರರ ಗುರುತಿನ ಚೀಟಿ.
ಮಾರಾಟಗಾರ ಮತ್ತು ಖರೀದಿದಾರರ ಗುರುತಿನ ದಾಖಲೆಗಳು ಅಗತ್ಯ.

ಈ ಹೊಸ ನಿಯಮಗಳ ಅಳವಡಿಕೆ ಭೂಮಿ ನೋಂದಣಿಯನ್ನು (Land Registration) ಹೆಚ್ಚು ಪಾರದರ್ಶಕ ಹಾಗೂ ಭ್ರಷ್ಟಾಚಾರರಹಿತವಾಗಿ ಮಾಡಲು ಸಹಾಯ ಮಾಡಲಿದೆ. ಆನ್‌ಲೈನ್ ನೋಂದಣಿ, ಡಿಜಿಟಲ್ ಸಹಿ, ಆಧಾರ್ ಲಿಂಕ್, ವೀಡಿಯೋ ದಾಖಲೆಗಳ ಅನುಷ್ಠಾನದಿಂದ ಭೂ ವಂಚನೆ, ನಕಲಿ ದಾಖಲೆ, ಮತ್ತು ಬೇನಾಮಿ ಆಸ್ತಿಗಳ ಮೇಲೆ ಸರ್ಕಾರ (Government) ಕಟ್ಟುನಿಟ್ಟಿನ ನಿಯಂತ್ರಣ ಮಾಡಲಿದೆ.

ಈ ಹೊಸ ನಿಯಮಗಳ ಅನುಷ್ಠಾನ 2025ರಲ್ಲಿ ಆರಂಭವಾಗಲಿದ್ದು, ರಾಜ್ಯದ ಜನತೆಗೆ ಭೂಮಿಯ ಖರೀದಿ ಮತ್ತು ನೋಂದಣಿ ಸಂಬಂಧಿತ ಪ್ರಕ್ರಿಯೆಯಲ್ಲಿ ಸುಗಮತೆ ಮತ್ತು ಸುರಕ್ಷತೆ ದೊರೆಯಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!