ಚಿನ್ನದ ಬೆಲೆಯಲ್ಲಿ ಇಳಿಕೆ: ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ಖರೀದಿಗೆ ಒಳ್ಳೆಯ ಅವಕಾಶ!
ಚಿನ್ನ (Gold) ಖರೀದಿಸುವುದು ಭಾರತೀಯ ಕುಟುಂಬಗಳಲ್ಲಿ ಆರ್ಥಿಕ ಭದ್ರತೆಯ ಸಂಕೇತ ಮತ್ತು ಸಂಪ್ರದಾಯದ ಭಾಗವಾಗಿದೆ. ಮದುವೆ ಅಥವಾ ಹಬ್ಬದ ಸಂದರ್ಭದಲ್ಲಿ ಚಿನ್ನದ ಖರೀದಿ ಒಂದು ಪ್ರಮುಖ ಅಂಶವಾಗಿಯೇ ನಾವು ಪರಿಗಣಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ (Gold rate) ತೀವ್ರ ಏರಿಳಿತ ಕಂಡು ಬರುತ್ತಿದ್ದು, ಇದರಿಂದಾಗಿ ಗ್ರಾಹಕರು ಉತ್ಸುಕರಾಗಿದ್ದಾರೆ. ಮಾರ್ಚ್ 1ರಂದು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 2,000 ರೂಪಾಯಿಗಳಷ್ಟು ಇಳಿಕೆಯಾದ ಬಳಿಕ, ಇದೀಗ ಮಾರ್ಚ್ 3ರಂದು ಮತ್ತೆ ಬೆಲೆ ಇಳಿಕೆ ಕಂಡು ಬಂದಿದೆ. ಮದುವೆ ಸೀಸನ್ ಆರಂಭವಾಗಿರುವ ಕಾರಣ, ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಗ್ರಾಹಕರಿಗೆ ಇದು ಒಳ್ಳೆಯ ಅವಕಾಶ. ಹಾಗಿದ್ದರೆ ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 4, 2025: Gold Price Today
ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬರುತ್ತಿವೆ, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಬಹುದು. ಸ್ವಲ್ಪ ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯು ಇಳಿಕೆಯಾಗುತ್ತಿದ್ದು, ಗ್ರಾಹಕರ ಸಂತೋಷಕ್ಕೆ ಕಾರಣವಾಗಿತ್ತು, ಆದರೆ ಇಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆ ಇದೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,939ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,661ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,496 ಆಗಿದೆ. ಇನ್ನು,1 ಕೆಜಿ ಬೆಳ್ಳಿ ಬೆಲೆ:96, 900 ತಲುಪಿದೆ.
ಮಾರ್ಚ್ 3, 2025 ರ ಚಿನ್ನದ ದರ ಎಷ್ಟಿದೆ?:
22 ಕ್ಯಾರಟ್ ಚಿನ್ನದ ದರ :
1 ಗ್ರಾಂ: ₹7,939
8 ಗ್ರಾಂ: ₹63,512
10 ಗ್ರಾಂ: ₹79,390
100 ಗ್ರಾಂ: ₹7,93,900
24 ಕ್ಯಾರಟ್ ಚಿನ್ನದ ದರ:
1 ಗ್ರಾಂ: ₹8,661
8 ಗ್ರಾಂ: ₹69,288
10 ಗ್ರಾಂ: ₹86,610
100 ಗ್ರಾಂ: ₹8,66,100
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ):
ಚೆನ್ನೈ: ₹79,390
ಮುಂಬೈ: ₹79,390
ದೆಹಲಿ: ₹79,540
ಕೋಲ್ಕತ್ತಾ: ₹79,390
ಬೆಂಗಳೂರು: ₹79,390
ಹೈದರಾಬಾದ್: ₹79,390
ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?:
ಪ್ರತಿಯೊಬ್ಬರು ಚಿನ್ನ ಖರೀದಿಸಲು ಉತ್ಸುಕರಾಗಿದ್ದರೂ ಕೂಡ ಬೆಲೆ ಏರಿಕೆ ಮತ್ತು ಇಳಿಕೆಯ ಮೇಲೆ ಅವಲಂಬಿತರಾಗಿರುತ್ತಾರೆ. ಮಾರ್ಚ್ 3, 2025 ರಂದು, 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹100ರಷ್ಟು ಇಳಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ (Silver) ಬೆಲೆಯಲ್ಲಿಯೂ ಇಳಿಕೆಯಾಗಿರುವುದನ್ನು ನಾವು ಕಾಣಬಹುದು.
ಮಾರ್ಚ್ 3, 2025 ರ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯ (International market) ಪ್ರಭಾವ ಮತ್ತು ರೂಪಾಯಿ-ಡಾಲರ್ ವಿನಿಮಯ ದರದ ಮೇಲೆ ಅವಲಂಬಿತವಾಗಿದೆ. ಈ ಕಾರಣದಿಂದ ಬೆಳ್ಳಿ ಬೆಲೆಯಲ್ಲಿ ಸಹ ದಿನದಿಂದ ದಿನಕ್ಕೆ ವ್ಯತ್ಯಾಸವಾಗುತ್ತದೆ.
ಭಾರತದಲ್ಲಿ ಬೆಳ್ಳಿ ದರ:
10 ಗ್ರಾಂ: ₹969
100 ಗ್ರಾಂ: ₹9,690
1 ಕೆಜಿ: ₹96,900
ಇನ್ನು ಹಬ್ಬದ ಕಾಲ, ಮದುವೆ ಋತು ಮತ್ತು ಅಂತರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಗಳು (International Economic Situations) ಚಿನ್ನದ ಬೆಲೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವರ್ಷ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದು, ಗ್ರಾಹಕರು ತಗ್ಗಿದ ಬೆಲೆಯಲ್ಲಿ ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ.
ಚಿನ್ನದ ದರಗಳು ಪ್ರತಿದಿನವೂ ಬದಲಾವಣೆಯಾಗುತ್ತಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು (Investers and buyers) ತಗ್ಗಿದ ಬೆಲೆಯಲ್ಲಿ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯೂ ಇದೆ. ಆದ್ದರಿಂದ, ತಕ್ಷಣದ ಅಗತ್ಯವಿದ್ದರೆ ಖರೀದಿ ಮಾಡುವುದು ಉತ್ತಮ. ಅದೇರೀತಿ, ಹೂಡಿಕೆ ಅಥವಾ ಆಭರಣ ಖರೀದಿಗೆ ಮೊದಲು ದೈನಂದಿನ ದರಗಳನ್ನು ಪರಿಶೀಲಿಸುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.