ರಸ್ತೆ ಅಪಘಾತಗಳು (Road accident’s) ಅನೇಕ ಕುಟುಂಬಗಳ ಜೀವನವನ್ನು ತೀವ್ರ ಸಂಕಟಕ್ಕೆ ಸಿಲುಕಿಸುತ್ತವೆ. ಅಪಘಾತದಿಂದ ಜೀವ ಹಾನಿಯಾಗುವ ಅಥವಾ ಗಂಭೀರ ಗಾಯಗೊಳ್ಳುವ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ದೊರಕುವದು ಒಂದು ಮಹತ್ವದ ವಿಚಾರ. ಈ ಸಂಬಂಧ ವಿಮಾ ಕಂಪನಿಗಳು (Insurance companies) ಹಲವು ಷರತ್ತುಗಳನ್ನು ವಿಧಿಸುತ್ತವೆ, ವಿಶೇಷವಾಗಿ ಚಾಲಕ ನಿಗದಿತ ನಿಯಮಗಳನ್ನು ಪಾಲಿಸುತ್ತಿದ್ದಾನೆಯಾ ಎಂಬುದರ ಮೇಲೆ ಹೆಚ್ಚುವರಿಯಾಗಿ ಗಮನ ಹರಿಸಲಾಗುತ್ತದೆ. ಈ ಮಧ್ಯೆ, ಮದ್ರಾಸ್ ಹೈಕೋರ್ಟ್ (Madras Highcourt) ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ನೀಡಿದ್ದು, ಅಪಘಾತದ ವೇಳೆ ಚಾಲಕ ಮದ್ಯಪಾನ ಮಾಡಿದರೂ ಸಹ, ವಿಮಾ ಕಂಪನಿಯು ಪರಿಹಾರ ಪಾವತಿಸಲು ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಿದೆ. ಹಾಗಿದ್ದರೆ ಕೋರ್ಟ್ ನೀಡಿದ ತೀರ್ಪು ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನ್ಯಾಯಾಲಯದ ಮಹತ್ವದ ತೀರ್ಪು (Highest important judgement) :
ಈ ತೀರ್ಪು ಮುಹಮ್ಮದ್ ರಶೀದ್ @ ರಶೀದ್ ವರ್ಸಸ್ ಗಿರಿವಾಸನ್ ಇಕೆ ಪ್ರಕರಣಕ್ಕೆ ಸಂಬಂಧಿಸಿದ್ದು, ಈ ಸಂಬಂಧ, ನ್ಯಾಯಮೂರ್ತಿ ಎಂ. ದಂಡಪಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಣೆಯಲ್ಲಿ, ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ, ಚಾಲಕ ಮದ್ಯಪಾನ (Alcohol consumption) ಮಾಡಿದ್ದರೂ ವಿಮಾ ಕಂಪನಿ ಪರಿಹಾರ ಪಾವತಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ವಿಮಾ ಪಾಲಿಸಿಯ ನಿಯಮಗಳ ಪ್ರಕಾರ, ಕುಡಿದ ಸ್ಥಿತಿಯಲ್ಲಿ ಚಾಲನೆ ಮಾಡುವುದು ನಿಯಮದ ಉಲ್ಲಂಘನೆಯಾದರೂ, ಮೃತರ ಕುಟುಂಬವನ್ನು ಪರಿಹಾರದಿಂದ ವಂಚಿಸುವಂತಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ರಾಜಶೇಖರನ್ ಕುಟುಂಬದ ಮೇಲ್ಮನವಿ :
ಈ ತೀರ್ಪಿಗಾಗಿ ಮೃತಪಟ್ಟ ರಾಜಶೇಖರನ್ ಅವರ ಕುಟುಂಬ ಭುವನೇಶ್ವರಿ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಸಲ್ಲಿಸಿತ್ತು, ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ (Court) ಈ ತೀರ್ಪನ್ನು ನೀಡಿದೆ. 2017 ರ ಡಿಸೆಂಬರ್ 30 ರಂದು, ರಾಜಶೇಖರನ್ ಅವರು ಚೆನ್ನೈನ ಘನತ್ಯಾಜ್ಯ ನಿರ್ವಹಣಾ ಕಚೇರಿ ಬಳಿ ತಿರುನೀರ್ಮಲೈ (Thirumalai) ಮುಖ್ಯ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದುಡುಕಿನ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಬಂದ ವ್ಯಾನ್ ಹಿಂದಿನಿಂದ ಡಿಕ್ಕಿ ಹೊಡೆದು, ಸ್ಥಳದಲ್ಲೇ ಸಾವನ್ನಪ್ಪಿದರು. ಈ ಪ್ರಕರಣದಲ್ಲಿ, ಮೋಟಾರು ಅಪಘಾತ ಕ್ರೈಮ್ ಟ್ರಿಬ್ಯೂನಲ್ (Crime tribunal) ಪರಿಹಾರವನ್ನು ನಿಗದಿಪಡಿಸಿದ್ದರೂ, ಮೃತರ ಕುಟುಂಬ ಹೆಚ್ಚಿನ ಪರಿಹಾರಕ್ಕಾಗಿ ಮೇಲ್ಮನವಿಯನ್ನು ಸಲ್ಲಿಸಿತು.
ಈ ಪ್ರಕರಣದ ಕುರಿತಾಗಿ ನ್ಯಾಯಾಲಯ ನೀಡಿದ ಸ್ಪಷ್ಟೀಕರಣ ಹೀಗಿದೆ :
ನ್ಯಾಯಾಲಯ ಈ ಸಂಬಂಧ ತನ್ನ ತೀರ್ಪಿನಲ್ಲಿ, ವಿಮಾ ಕಂಪನಿಯು ತನ್ನ ಹೊಣೆ ತಪ್ಪಿಸಲು ಪ್ರಯತ್ನಿಸಬಾರದು ಎಂದು ಸೂಚಿಸಿದೆ. ಚಾಲಕ ಮದ್ಯಪಾನ ಮಾಡಿದ್ದರೂ, ಅಪಘಾತದಿಂದ, ಕುಟುಂಬವನ್ನು ಪರಿಹಾರದಿಂದ ವಂಚಿಸಲು ಸಾಧ್ಯವಿಲ್ಲ. ಅಲ್ಲದೆ, ಅಪಘಾತಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಲು ವಿಮಾ ಕಂಪನಿಯು (Insurance Company) ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಹೇಳಿದೆ.
ಈ ತೀರ್ಪು ಭವಿಷ್ಯದಲ್ಲಿ ಇತರ ಅನೇಕ ಅಪಘಾತ ಪ್ರಕರಣಗಳಿಗೆ ತೀರ್ಪು (Judgement) ನೀಡುವಾಗ ಪ್ರಭಾವ ಬೀರುವ ಸಾಧ್ಯತೆ ಹೊಂದಿದ್ದು, ಅಪಘಾತದಿಂದ ತೊಂದರೆಗೊಳಗಾದ ಕುಟುಂಬಗಳಿಗೆ ನಿರೀಕ್ಷೆಯ ಬೆಳಕು ನೀಡಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.