ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ – ಮದುವೆ ಮತ್ತು ಹಬ್ಬದ ಶಾಪಿಂಗ್ ಪ್ಲಾನ್ ಮಾಡಿದವರಿಗೆ ಆಘಾತ!
ಚಿನ್ನ, ಭಾರತೀಯ ಸಂಸ್ಕೃತಿಯಲ್ಲಿ (Indian culture) ಅತ್ಯಂತ ಪ್ರಿಯ ಹಾಗೂ ಹೂಡಿಕೆಯ ಲಾಭದಾಯಕ ಆಯ್ಕೆಯಾಗಿದೆ. ಮದುವೆ, ಹಬ್ಬ, ಉತ್ಸವದ ಸಮಯದಲ್ಲಿ ಚಿನ್ನದ ಖರೀದಿ ಪ್ರಮುಖ ನಂಬಿಕೆಯಾಗಿದೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆ ಏರಿಕೆ ಇಂದ ಜನ ಬೇಸೆತ್ತು ಹೋಗಿದ್ದರು. ಆದರೆ ಮಾರ್ಚ್ ತಿಂಗಳ (March month) ಆರಂಭದಲ್ಲೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದರಿಂದ ಜನರು ಚಿನ್ನ ಖರೀದಿಸಲು ಮುಂದಾಗುತ್ತಿದ್ದ ವೇಳೆಯೇ ಮಾರ್ಚ್ 4 ರಂದು ಚಿನ್ನ ಮತ್ತೊಮ್ಮೆ ಭಾರೀ ಏರಿಕೆ ಕಂಡಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಚಿನ್ನದ ಬೆಲೆಯಲ್ಲಿ ಈ ತಿಂಗಳ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂಡಿತ್ತು. ಇನ್ನೇನೂ ಚಿನ್ನದ ಬೆಲೆ (Gold rate) ಕಡಿಮೆ ಆಯ್ತು ಚಿನ್ನ ಖರೀದಿ ಮಾಡೋಣ ಎಂದು ಯೋಚಿಸುವಷ್ಟರಲ್ಲೇ ಮತ್ತೆ ಏರಿಕೆ ಕಂಡಿದೆ. ಒಟ್ಟಾರೆಯಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಒಮ್ಮೆಲೆ 70-76 ರೂ ಪ್ರತಿ ಗ್ರಾಂಕ್ಕೆ ಹೆಚ್ಚಳವಾಗಿದೆ. ಕಳೆದ ಆರು ದಿನಗಳಿಂದ ಬೆಲೆ ಸ್ಥಿರವಾಗಿದ್ದರೂ, ನಿನ್ನೆ ಬದಲಾವಣೆ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 5, 2025: Gold Price Today
ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬರುತ್ತಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ನಿನ್ನೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಗ್ರಾಹಕರು ನಿರಾಸೆಗೊಂಡಿದ್ದಾರೆ. ಹಾಗಿದ್ದರೆ, ಇಂದಿನ ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 011ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,739 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,555 ಆಗಿದೆ. ಇನ್ನು,1 ಕೆಜಿ ಬೆಳ್ಳಿ ಬೆಲೆ:98, 100 ತಲುಪಿದೆ.
ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಗೆ ಕಾರಣವಾದ ಪ್ರಮುಖ ಅಂಶಗಳು ಅನೇಕವಾಗಿದ್ದು, ಅಮೆರಿಕದ ಆರ್ಥಿಕ ನೀತಿಗಳು, ಡಾಲರ್‌ನ ಬದಲಾವಣೆ, ದೇಶೀಯ ಬೇಡಿಕೆ, ಅಂತರಾಷ್ಟ್ರೀಯ ಮಾರುಕಟ್ಟೆಯ (International market) ಪತನ, ಆಮದು ಸುಂಕದಲ್ಲಿ ಬದಲಾವಣೆ ಇತ್ಯಾದಿ ಮುಖ್ಯ ಕಾರಣಗಳಾಗಿವೆ. ಈಗಿನ ದರ ಏರಿಕೆಯಿಂದ ಗ್ರಾಹಕರು ನಿರಾಶೆಯಾಗಿದ್ದರೂ, ಚಿನ್ನದ ಹೂಡಿಕೆದಾರರು ಇದನ್ನು ಲಾಭದಾಯಕ ಅವಕಾಶವಾಗಿ ನೋಡುತ್ತಿದ್ದಾರೆ.
ಮಾರ್ಚ್ 4, 2025ರ ಚಿನ್ನದ ದರ :
22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ ₹8,010 ಇದ್ದು, ಒಟ್ಟು ₹70 ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ ₹8,738 ಇದ್ದು, ₹76 ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ ₹80,100ರೂ ನಷ್ಟಿದೆ.
24 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ ₹87,380ರೂ ನಷ್ಟಿದೆ.
ಇನ್ನು, ಬೆಳ್ಳಿಯ ದರದಲ್ಲೂ ಕೂಡ ಇಳಿಕೆಯಾಗಿದ್ದು, ಒಟ್ಟಾರೆಯಾಗಿ 10 ಪೈಸೆ ಇಳಿದಿದೆ. ಮಾರ್ಚ್ 4, 2025ರ ಬೆಳ್ಳಿ ದರ:
1 ಗ್ರಾಂ ಬೆಳ್ಳಿ – ₹96.90
1 ಕೆಜಿ ಬೆಳ್ಳಿ – ₹96,900
ಪ್ರಮುಖ ನಗರಗಳಲ್ಲಿ ಮಾರ್ಚ್ 4, 2025ರ ಚಿನ್ನದ ದರ (1 ಗ್ರಾಂ):
22 ಕ್ಯಾರಟ್ ಚಿನ್ನದ ದರ (10 ಗ್ರಾಂ):
ಬೆಂಗಳೂರು : 8,010
ಚೆನ್ನೈ : 8,010
ಕೇರಳ : 8,010
ದಿಲ್ಲಿ : 8,025
ಹೈದರಾಬಾದ : 8,010
ಕೋಲ್ಕತ್ತಾ : 8,010
ಮುಂಬಯಿ : 8,010
24 ಕ್ಯಾರಟ್ ಚಿನ್ನದ ದರ (10 ಗ್ರಾಂ):
ಬೆಂಗಳೂರು : 8,738
ಚೆನ್ನೈ : 8,738
ಕೇರಳ : 8,738
ದಿಲ್ಲಿ : 8,753
ಹೈದರಾಬಾದ : 8,738
ಕೋಲ್ಕತ್ತಾ : 8,738
ಮುಂಬಯಿ : 8,738
ಕಳೆದ 10 ದಿನಗಳ ಚಿನ್ನದ ಬೆಲೆ (22 ಕ್ಯಾರಟ್) ಪರಿವರ್ತನೆ ಈರೀತಿಯಿದೆ :
ಮಾರ್ಚ್, 4 : 8,010 (+70)
ಮಾರ್ಚ್, 3 : 7,940
ಮಾರ್ಚ್, 2 : 7,940
ಮಾರ್ಚ್, 1 : 7,940 (-20)
ಫೆಬ್ರವರಿ, 28 : 7960 (-50)
ಫೆಬ್ರವರಿ, 27 : 8,010 (-40)
ಫೆಬ್ರವರಿ, 26 : 8,050 (-25)
ಫೆಬ್ರವರಿ, 25 : 8,075 (+20)
ಫೆಬ್ರವರಿ, 24 : 8,055 (+10)
ಫೆಬ್ರವರಿ, 23 : 8,045
ಫೆಬ್ರವರಿ 1 ರಂದು 7,745 ರೂ ಆಗಿದ್ದ ಚಿನ್ನದ ದರ ಫೆಬ್ರವರಿ 28 ರಂದು 7,960 ರೂ ಆಗಿ ನಂತರ ಮತ್ತೆ ಫೆ. 26 ರಿಂದ ಇಳಿತ ಕಂಡು 7,940 ರೂ ತಲುಪಿತ್ತು. ಆದರೆ ಮಾರ್ಚ್ 4 ರಂದು ಏಕಾಏಕಿ 70 ರೂ ಏರಿಕೆ ಕಂಡು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು (Causes) ? :
ಅಮೆರಿಕದ ಆರ್ಥಿಕ ನೀತಿ:
ಅಮೆರಿಕದ ಹೊಸ ಆರ್ಥಿಕ ನೀತಿಯು ಚಿನ್ನದ ಮಾರುಕಟ್ಟೆಗೆ ಪ್ರಭಾವ ಬೀರಿದೆ. ಅಲ್ಪಾವಧಿಯಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ.
ಆಂತರಿಕ ಬೇಡಿಕೆ ಹೆಚ್ಚಳ:
ಮದುವೆ ಹಾಗೂ ಹಬ್ಬದ ಸೀಸನ್ (Festival season) ಆರಂಭವಾಗುತ್ತಿರುವುದರಿಂದ ಚಿನ್ನದ ಬೇಡಿಕೆ ಗಣನೀಯವಾಗಿ ಬೆಲೆ ಏರಿಕೆಯಾಗಿದೆ.
ಆಮದು ಸುಂಕ ಮತ್ತು ಡಾಲರ್ ಮೌಲ್ಯ:
ಭಾರತೀಯ ರೂಪಾಯಿ ಮೌಲ್ಯ ಕುಸಿತವಾಗಿರುವುದರಿಂದ ಚಿನ್ನದ ಆಮದು ದರ ಮೇಲೆಯೂ ಪರಿಣಾಮ ಬೀರಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆ (Changes in international market) :
ಚಿನ್ನದ ಪ್ರತಿ ಉಲ್ಲೇಖ ಯುನಿಟ್ ಬೆಲೆ ಏರಿಕೆಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲೂ ಈ ಪರಿಣಾಮ ಬೀರುತ್ತಿದೆ.
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏನಾಗಬಹುದು? :
ಮಾರ್ಚ್ ತಿಂಗಳ ಮುಂದಿನ ವಾರಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗಬಹುದಾ? ಈ ಪ್ರಶ್ನೆ ಹೂಡಿಕೆದಾರರು ಮತ್ತು ಗ್ರಾಹಕರನ್ನು ಕಾಡುತ್ತಿದೆ. ಜಾಗತಿಕ ಆರ್ಥಿಕ ಸ್ಥಿತಿಗತಿಗಳು, ಡಾಲರ್ ಮತ್ತು ರೂಪಾಯಿ (Dollar and Rupees)ವಿನಿಮಯದ ಬದಲಾವಣೆಗಳು, ಹಾಗೂ ಕೇಂದ್ರ ಬ್ಯಾಂಕಿನ ನಿರ್ಧಾರಗಳ ಮೇಲೆ ಚಿನ್ನದ ದರ ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.
ಹೀಗಾಗಿ, ಚಿನ್ನ ಖರೀದಿಸುವ ಮೊದಲು ದೈನಂದಿನ ಬೆಲೆಗಳನ್ನು ಗಮನಿಸಿ, ಉತ್ತಮ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.