2025ರ ಮಾರ್ಚ್ 14: ವರ್ಷದ ಮೊದಲ ಬ್ಲಡ್ ಮೂನ್ ಚಂದ್ರಗ್ರಹಣ – 7 ರಾಶಿಗಳಿಗೆ ಅದೃಷ್ಟದ ಕಾಲ!
ಮಾರ್ಚ್ 14, 2025ರಂದು, ವರ್ಷದ ಮೊದಲ ಚಂದ್ರ ಗ್ರಹಣವು (Lunar eclipse) ಸಂಭವಿಸಲಿದೆ. ಈ ದಿನವು ಹೋಳಿ ಹಬ್ಬದ ದಿನವಾಗಿದ್ದು, ಈ ವಿಶೇಷ ಸಂದರ್ಭದಲ್ಲಿ ಚಂದ್ರ ಗ್ರಹಣವು ಸಂಭವಿಸುತ್ತಿದೆ. ಜ್ಯೋತಿಷಿಗಳ ಪ್ರಕಾರ, ಈ ಸಂಪೂರ್ಣ ಚಂದ್ರ ಗ್ರಹಣವು ಸುಮಾರು ಮೂರು ವರ್ಷಗಳ ನಂತರ ಸಂಭವಿಸುತ್ತಿದೆ. ಈ ಚಂದ್ರಗ್ರಹವನ್ನು ಬ್ಲಡ್ ಮೂನ್ (Blood moon) ಎಂದೂ ಕೂಡ ಕರೆಯುತ್ತಾರೆ. ಹಿಂದಿನ ಬ್ಲಡ್ ಮೂನ್ 2022ರಲ್ಲಿ ಕಂಡುಬಂದಿತ್ತು. ಹುಣ್ಣಿಮೆ ದಿನದಲ್ಲಿ, ಭೂಮಿ, ಚಂದ್ರ ಮತ್ತು ಸೂರ್ಯ ಸರಿಯಾದ ಸರಣಿಯಲ್ಲಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ, ಇದರಿಂದ ಚಂದ್ರನು ಕೆಂಪು (Red) ಬಣ್ಣದಲ್ಲಿ ಕಾಣಿಸುತ್ತಾನೆ, ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ಗ್ರಹಣ ಯಾವ ಯಾವ ರಾಶಿಯವರಿಗೆ ಉಪಯೋಗವಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಕಾಲಮಾನ ಪ್ರಕಾರ(According to Indian time period), ಈ ಚಂದ್ರ ಗ್ರಹಣವು ಮಾರ್ಚ್ 14, 2025ರಂದು, ಬೆಳಿಗ್ಗೆ 9:29 ರಿಂದ ಮಧ್ಯಾಹ್ನ 3:29 ರವರೆಗೆ ಸಂಭವಿಸಲಿದೆ. ಈ ಸಮಯದಲ್ಲಿ ಭಾರತದಲ್ಲಿ ದಿನದ ಬೆಳಕು ಇರುವುದರಿಂದ, ಗ್ರಹಣವು ಇಲ್ಲಿ ಗೋಚರಿಸುವುದಿಲ್ಲ ಮತ್ತು ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಆದರೆ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಯುರೋಪ್, ಆರ್ಕ್ಟಿಕ್ ಮಹಾಸಾಗರ, ಆಸ್ಟ್ರೇಲಿಯಾ, ಆಫ್ರಿಕಾ, ಅಟ್ಲಾಂಟಿಕ್, ಪೂರ್ವ ಏಷ್ಯಾ ಮತ್ತು ಅಂಟಾರ್ಟಿಕಾದಲ್ಲಿ ಈ ಚಂದ್ರ ಗ್ರಹಣವು ಸ್ಪಷ್ಟವಾಗಿ ಗೋಚರಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ(According to astrology), ಈ ಚಂದ್ರ ಗ್ರಹಣವು ಕೆಲವು ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ 7 ರಾಶಿಯವರಿಗೆ ಈ ಚಂದ್ರಗ್ರಹಣ ವರದಾನವಾಗಲಿದೆ. 12 ರಾಶಿಗಳಲ್ಲಿ ಈ 7 ರಾಶಿಗಳಿಗೆ ಚಮತ್ಕಾರಿಕ ಸಕಾರಾತ್ಮಕ ಬದಲಾವಣೆಗಳನ್ನು (Positive changes) ತರುತ್ತವೆ.
ಈ 7 ರಾಶಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
1. ಮೇಷ ರಾಶಿ
2. ವೃಷಭ ರಾಶಿ
3. ಸಿಂಹ ರಾಶಿ
4. ಕನ್ಯಾ ರಾಶಿ
5. ಧನಸ್ಸು ರಾಶಿ
6. ಮಕರ ರಾಶಿ
7. ಕುಂಭ ರಾಶಿ
ಮೇಷ ರಾಶಿ(Aries) : ಈ ರಾಶಿಯವರಿಗೆ ಚಂದ್ರಗ್ರಹಣದ ಪ್ರಭಾವ ಹೆಚ್ಚಾಗಿ ಇರಲಿದೆ. ಈ ರಾಶಿಯವರ ಜೀವನದ ಭಾಗ್ಯದ ಬಾಗಿಲು ತೆರೆಯಲಿದೆ. ತುಂಬಾ ಅಚ್ಚುಕಟ್ಟಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ಒಟ್ಟಾರೆಯಾಗಿ ಗ್ರಹಗಳ ಸಂಚಾರವು ನಿಮಗೆ ಸಾತ್ ನೀಡುತ್ತವೆ. ನೀವು ಅಂದುಕೊಂಡಿದ್ದಕ್ಕಿನ್ನ ಹೆಚ್ಚಾಗಿ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಾ. ಧನಪ್ರಾಪ್ತಿಯಿಂದ ನಿಮ್ಮ ಕೆಲಸ ಕಾರ್ಯಗಳು ಸುಲಭ ರೀತಿಯಲ್ಲಿ ಸಾಗಲಿವೆ. ಇನ್ನು ಈ ಚಂದ್ರಗ್ರಹಣದಿಂದ ನಿಮ್ಮ ಕುಂಡಲಿಯಲ್ಲಿ ಚಂದ್ರನ ಸ್ಥಿತಿಯು (The position of the moon) ಉನ್ನತಕ್ಕೆ ಏರಲಿದೆ. ಒಟ್ಟಾರೆಯಾಗಿ ಚಂದ್ರಗ್ರಹಣದ ನಂತರ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಿಮಗೆ ಶುಭ ಸಿಗಲಿದೆ.
ವೃಷಭ ರಾಶಿ(Taurus) : ಈ ಚಂದ್ರಗ್ರಹಣದಲ್ಲಿ ಈ ರಾಶಿಯವರಿಗೂ ಕೂಡ ಅದೃಷ್ಟದ ಬಾಗಿಲು ತೆರೆಯಲಿದೆ. ಗ್ರಹದ ಬದಲಾವಣೆಯಿಂದ ಆಕಸ್ಮಿಕ ಧನ ಲಾಭ ಸಿಗಲಿದೆ. ವೃತ್ತಿಜೀವನದಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲಸದ ಜಾಗದಲ್ಲಿ ಅವರ ಮಾತಿಗೆ ಬೆಲೆ ಹೆಚ್ಚಾಗಲಿದೆ. ಎಲ್ಲಾ ಸ್ಪರ್ಧೆಯಲ್ಲೂ ಭಾಗವಹಿಸಿದರೆ ಅವರಿಗೆ ಯಶಸ್ಸು (Success) ಕಟ್ಟಿಟ್ಟ ಬುತ್ತಿ. ಚಂದ್ರ ಗ್ರಹಣದ ನಂತರ ನಿಮ್ಮ ಮನಸ್ಸಿನ ಆಸೆಗಳು ಈಡೇರಲಿದೆ. ಶಿವನ ಆಶೀರ್ವಾದವು ಸದಾ ಕಾಲ ನಿಮ್ಮೊಟ್ಟಿಗೆದ್ದು ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ.
ಸಿಂಹ ರಾಶಿ(Leo) : ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಚಂದ್ರಗ್ರಹಣದ ನಂತರ ನಿಮಗೆ ಒಳ್ಳೆಯ ದಿನಗಳು ಸಿಗಲಿವೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಉತ್ತಮ ರೀತಿಯ ಯಶಸ್ಸಿನ ಜೊತೆಗೆ ಧನ ಲಾಭವು ಕೂಡ ಲಭಿಸಲಿದೆ. ಒಟ್ಟಾರೆಯಾಗಿ ನವಗ್ರಹಗಳ ಬದಲಾವಣೆಯು (Change of navagrahas) ನಿಮ್ಮ ರಾಶಿಯ ಮೇಲೆ ಹೆಚ್ಚಾಗಿ ಶುಭವನ್ನು ತರಲಿದೆ. ಇನ್ನು ಈ ರಾಶಿಯವರು ಮನೆ ಚಿನ್ನ ಹಾಗೂ ವಾಹನವನ್ನು ಖರೀದಿಸುವಲ್ಲಿ ಯಶಸ್ಸು ಕಾಣುತ್ತಾರೆ.
ಕನ್ಯಾ ರಾಶಿ(Virgo) : ಕನ್ಯಾ ರಾಶಿಯವರಿಗೆ ಚಂದ್ರಗ್ರಹಣದ ನಂತರ ಕೋರ್ಟ್ ಕೆಲಸಗಳಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ. ಕೋರ್ಟ್ನಲ್ಲಿ ಸಿಲುಕಿರುವ ಎಲ್ಲಾ ಸಮಸ್ಯೆಗಳಿಗೂ ಕೂಡ ಚಂದ್ರಗ್ರಹಣದ ನಂತರ ಪರಿಹಾರ ದೊರೆಯಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಲಭಿಸಲಿದೆ. ಇನ್ನು ಸಂತಾನ ಆಗದೇ ಇರುವವರಿಗೆ ಸಂತಾನ ಪ್ರಾಪ್ತಿಯಾಗುವ ಲಕ್ಷಣಗಳು ಕೂಡ ಈ ರಾಶಿಯವರಿಗೆ ಇದೆ. ಒಂದು ವೇಳೆ ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಬೇಕು ಎಂದುಕೊಂಡಿದ್ದರೆ ಉತ್ತಮ ಫಲಿತಾಂಶವು ದೊರೆಯಲಿದೆ.
ಧನಸ್ಸು ರಾಶಿ(Sagittarius) : ಧನಸ್ಸು ರಾಶಿಯವರಿಗೆ ಈ ಚಂದ್ರಗ್ರಹಣವು ಉತ್ತಮ ಲಾಭವನ್ನು ತಂದು ಕೊಡಲಿದೆ. ನೀವೇನಾದರೂ ಒಳ್ಳೆಯ ಉದ್ಯೋಗ (Job) ಮಾಡಬೇಕು ಎಂದುಕೊಂಡಿದ್ದರೆ, ನೀವು ಅಂದುಕೊಂಡ ಹಾಗೆ ಆ ಉದ್ಯೋಗದಲ್ಲಿ ಶ್ರೇಯಸ್ಸು ಕಾಣುವಿರಿ ಹಾಗೂ ಲಾಭವನ್ನು ಗಳಿಸುವಿರಿ. ಸಣ್ಣಪುಟ್ಟ ಸಮಸ್ಯೆಗಳಿಂದಲೂ ಕೂಡ ಈ ರಾಶಿಯವರಿಗೆ ಮುಕ್ತಿ ಸಿಗಲಿದ್ದು, ಮುಂದಿನ ಅವರ ಜೀವನ (Life) ಏಳಿಗೆ ಕಡೆ ಸಾಗಲಿದೆ. ಒಟ್ಟಾರೆಯಾಗಿ ಈ ಚಂದ್ರಗ್ರಹಣ ಧನಸ್ಸು ರಾಶಿಯವರಿಗೆ ಹೆಚ್ಚಿನ ಆರೋಗ್ಯ ಆಯಸ್ಸು ಲಾಭವನ್ನು ತಂದು ಕೊಡಲಿದೆ.
ಮಕರ ರಾಶಿ(Capricorn) : ಮಕರ ರಾಶಿಯವರಿಗೆ ಚಂದ್ರಗ್ರಹಣದ ನಂತರ ಹೆಗ್ಗಳಿಕೆ ಸಿಗಲಿದೆ. ಎಲ್ಲಾ ರೀತಿಯ ವ್ಯಾಪಾರ ವ್ಯವಹಾರಗಳಲ್ಲೂ ಕೂಡ ಹೆಗ್ಗಳಿಕೆಯ ಜೊತೆಗೆ ಯಶಸ್ಸನ್ನು ಕಾಣುತ್ತೀರಿ. ನಿಮ್ಮ ಏಳಿಗೆಯನ್ನು ಕಂಡು ಸಂತೋಷಪಡುವವರಿಗಿಂತ ಹೆಚ್ಚು ಹೊಟ್ಟೆಕಿಚ್ಚು ಪಡುವವರೇ ಹೆಚ್ಚಾಗಲಿದ್ದಾರೆ. ಮುಂದಿನ ಜೀವನದಲ್ಲಿ ಅವರು ಯಶಸ್ಸು ಹಣ ಕೀರ್ತಿ (Success, money and fame) ಎಲ್ಲವನ್ನೂ ಕೂಡ ಅವರ ಜೀವನದಲ್ಲಿ ಕಾಣುತ್ತಾರೆ. ಇಲ್ಲಿಯವರೆಗೂ ಅವರ ಕೆಲಸ ಕಾರ್ಯಗಳಲ್ಲಿ ಇದ್ದಂತಹ ಆಡಚಣೆಗಳು ನಿವಾರಣೆಯಾಗಲಿ. ಕುಟುಂಬದಲ್ಲಿ ಹಾಗೂ ಬಂಧು ಮಿತ್ರರಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಒಟ್ಟಾರೆಯಾಗಿ ನಿಮ್ಮ ಮಾತಿಗೆ ಬೆಲೆ ಸಿಕ್ಕು ಈ ಚಂದ್ರಗ್ರಹಣದಿಂದ ನಿಮಗೆ ಒಳ್ಳೆಯ ಏಳಿಗೆ ಸಿಗಲಿದೆ.
ಕುಂಭ ರಾಶಿ(Aquarius) : ಕುಂಭ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಬೆಂಬಲ ಸಿಗಲಿದೆ. ಯೋಚನೆ ಮಾಡಿ ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ ಆ ನಿರ್ಧಾರದಿಂದ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಒಟ್ಟಾರೆಯಾಗಿ ಸರಿಯಾದ ಯೋಚನೆಯನ್ನು ಮಾಡಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ತಾಯಿ ಲಕ್ಷ್ಮಿ ದೇವಿಯ (God Lakshmi) ಕೃಪಾಕಟಾಕ್ಷದಿಂದ ರಾಜಯೋಗದಂತಹ ಅದೃಷ್ಟದ ಜೀವನವು ನಿಮಗೆ ಸಿಗಲಿದೆ. ಒಟ್ಟರೆಯಾಗಿ ನಿಮ್ಮ ನಿರ್ಧಾರಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಆಕಸ್ಮಿಕವಾಗಿ ಹಣದ ಸುರಿಮಳೆ ಸುರಿಯಲಿದ್ದು ಚಂದ್ರ ಗ್ರಹಣದ ನಂತರ ನಿಮಗೆ ಯಾವುದೇ ರೀತಿಯ ಸೋಲು ಆಗುವುದಿಲ್ಲ. ಇನ್ನು ಈ ರಾಶಿಯವರ ಒಳ್ಳೆಯ ಗುಣಕ್ಕೆ ಸಮಾಜದಲ್ಲಿ (Society) ಬೆಂಬಲ ನೀಡುವುದರ ಜೊತೆಗೆ ಗೌರವವನ್ನು ಕೂಡ ನೀಡುತ್ತಾರೆ. ಇದು ನಿಮಗೆ ಅದೃಷ್ಟದ ಸಮಯ ಎಂದರೆ ತಪ್ಪಾಗುವುದಿಲ್ಲ.
ಒಟ್ಟಾರೆಯಾಗಿ ಚಂದ್ರ ಗ್ರಹಣದ ಸಮಯದಲ್ಲಿ, ಸೂತಕ ಅವಧಿಯಲ್ಲಿ, ವಯಸ್ಸಾದ ಮತ್ತು ಅನಾರೋಗ್ಯ ಪೀಡಿತರನ್ನು ಹೊರತುಪಡಿಸಿ, ಆಹಾರ ಸೇವನೆ ತಪ್ಪಿಸಲು ಸಲಹೆ ನೀಡಲಾಗಿದೆ. ಗರ್ಭಿಣಿಯರು (pregnant womens) ಹಣ್ಣುಗಳು, ತರಕಾರಿಗಳನ್ನು ಕತ್ತರಿಸುವುದು ಮತ್ತು ಚೂಪಾದ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು. ಗ್ರಹಣ ಸಮಯದಲ್ಲಿ ದೇವರನ್ನು ಪೂಜಿಸುವುದು ಅಥವಾ ಸ್ಪರ್ಶಿಸುವುದನ್ನು ತಪ್ಪಿಸಲು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.