ಅಮೆರಿಕದ ತೆರಿಗೆ ನೀತಿಗಳ ಪರಿಣಾಮ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ನಿರೀಕ್ಷೆ
ಚಿನ್ನವು ಭಾರತದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ವಿವಾಹ, ಹಬ್ಬಗಳು ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳನ್ನು (Gold Jewell’s) ಧರಿಸುವುದು ಮತ್ತು ಕೊಡುವುದು ಒಂದು ಪರಂಪರೆಯಾಗಿದೆ. ಇದರಿಂದಾಗಿ, ಚಿನ್ನದ ಬೆಲೆಯಲ್ಲಿ ಸಂಭವಿಸುವ ಯಾವುದೇ ಬದಲಾವಣೆಗಳು ನೇರವಾಗಿ ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 11, 2025: Gold Price Today
ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬರುತ್ತಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ (Gold and silver rate) ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಿರುತ್ತೇವೆ. ಇದೀಗ ಮತ್ತೆ ಚಿನ್ನದ ದರ ಏರಿಕೆಯಾಗಿದ್ದು, ಗ್ರಾಹಕರು ನಿರಾಶೆಗೊಂಡಿದ್ದಾರೆ. ಆದರೆ ಎರೆಡು ದಿನಗಳಿಂದ ಚಿನ್ನದ ಬೆಲೆಯು ಯಥಾಸ್ಥಿತಿಯಲ್ಲಿ ಮುಂದುವರಿದೆ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಸ್ವಲ್ಪ ಪ್ರಮಾಣದ ಏರಿಕೆಯನ್ನು ಕಾಣಬಹುದು. ಹಾಗಿದ್ದರೆ, ಇಂದಿನ ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 051 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,783 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,588 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 98, 900 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 11 ರೂ. ಏರಿಕೆಯನ್ನು ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿ 200 ರೂ. ಇಳಿಕೆಯನ್ನು ನೋಡಬಹುದು.
ಹೌದು, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ, ಇದು ಚಿನ್ನ ಪ್ರಿಯರಲ್ಲಿ ಆತಂಕವನ್ನು ಉಂಟುಮಾಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (American president Donald trump) ಅವರು ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ತೆರಿಗೆ ನೀತಿಗಳನ್ನು ಬಲಪಡಿಸಿರುವುದು ಈ ಬೆಲೆ ಏರಿಕೆಗೆ ಕಾರಣವಾಗಿದೆ. ಅಮೆರಿಕದ ಹೊಸ ತೆರಿಗೆ ನೀತಿಗೆ ಭಾರತ ಒಪ್ಪಿಗೆ ನೀಡಿರುವುದರಿಂದ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳ ಬೆಲೆಯಲ್ಲಿ ಏರಿಕೆ ಸಂಭವಿಸಬಹುದು ಎಂಬ ನಿರೀಕ್ಷೆಯಿದೆ.
ಮಾರ್ಚ್ 10, 2025 ರಂದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11 ರೂಪಾಯಿ ಹೆಚ್ಚಳ ಕಂಡು, 8,782 ರೂಪಾಯಿಗೆ ತಲುಪಿದೆ. ಇದರಿಂದ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 87,820 ರೂಪಾಯಿಯಾಗಿದೆ. ಅದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10 ರೂಪಾಯಿ ಹೆಚ್ಚಳಗೊಂಡು, 8,050 ರೂಪಾಯಿಯಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 80,500 ರೂಪಾಯಿಯಾಗಿದೆ.
ಇನ್ನು ಅದೇ ರೀತಿ, ಬೆಳ್ಳಿಯ ಬೆಲೆಯಲ್ಲಿ (Silver rate) ಅಲ್ಪ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂ ಬೆಳ್ಳಿ ಬೆಲೆ 99 ರೂಪಾಯಿಯಾಗಿದೆ. ಪ್ರತಿ ಕೆ.ಜಿ ಬೆಳ್ಳಿ ಬೆಲೆ 99,000 ರೂಪಾಯಿಯಾಗಿದೆ.
ಅಮೆರಿಕದ “ಅಮೆರಿಕ ಮೊದಲು” ಎಂಬ ನೀತಿಯು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹೂಡಿಕೆಗಳ (Investment) ಮೇಲೆ ಪರಿಣಾಮ ಬೀರಿದ್ದು, ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಇದು ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.
ಚಿನ್ನದ ಬೆಲೆಯಲ್ಲಿ ಈ ರೀತಿಯ ಬದಲಾವಣೆಗಳು (Changes) ಮುಂದಿನ ದಿನಗಳಲ್ಲಿ ಜನರ ಖರೀದಿ ಸಾಮರ್ಥ್ಯ ಮತ್ತು ಹೂಡಿಕೆ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅತೀ ಮುಖ್ಯವಾಗಿ, ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆಗಳು ಆಂತರಿಕ ಮತ್ತು ಬಾಹ್ಯ ಆರ್ಥಿಕ ನೀತಿಗಳಿಂದ ಪ್ರಭಾವಿತವಾಗುತ್ತವೆ, ಆದ್ದರಿಂದ ಚಿನ್ನದ ಹೂಡಿಕೆದಾರರು ಮತ್ತು ಖರೀದಿದಾರರು (Investers and Buyer’s) ಈ ಬದಲಾವಣೆಗಳಿಗೆ ಎಚ್ಚರಿಕೆಯಿಂದ ಗಮನ ನೀಡಬೇಕು. ಇನ್ನು, ಚಿನ್ನದ ಬೆಲೆ ಏರಿಕೆಯಿಂದಾಗಿ, ಮದುವೆ, ಮುಂಜಿ, ಮತ್ತು ಇತರ ಶುಭ ಕಾರ್ಯಗಳ ಸಮಯದಲ್ಲಿ ಚಿನ್ನದ ಖರೀದಿ ಜನಸಾಮಾನ್ಯರಿಗೆ (For people) ಹೊರೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಚಿನ್ನದ ಖರೀದಿಗೆ ಮುಂದಾಗುವವರು ದರಗಳ ಮೇಲಿನ ನಿಗಾವಹಿಸಿ, ಸೂಕ್ತ ಸಮಯದಲ್ಲಿ ಹೂಡಿಕೆ ಮಾಡುವುದು ಒಳಿತು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.