ಶುಗರ್ ಇದ್ದವರೇ ಗಮನಿಸಿ; ಇನ್ನೂ ಮುಂದೆ  60 ರೂ. ಬೆಲೆಯ ಈ ಔಷಧಿ ಬರೀ 9 ರೂ.ಗೆ ಸಿಗುತ್ತೆ.!

Picsart 25 03 11 23 16 33 650

WhatsApp Group Telegram Group

ಮಧುಮೇಹಿಗಳಿಗೆ ಸಿಹಿಸುದ್ದಿ: ಎಂಪಾಗ್ಲಿಫ್ಲೋಝಿನ್ ಔಷಧಿ ಬೆಲೆ ಶೇ. 90% ಇಳಿಕೆ!

ಭಾರತದಲ್ಲಿ ಮಧುಮೇಹ (Diabetes) ಸತತವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದ್ದು, ಲಕ್ಷಾಂತರ ಜನರು ದಿನನಿತ್ಯ ಈ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ. ಮಧುಮೇಹ ನಿಯಂತ್ರಣಕ್ಕೆ ಬಳಕೆಯಾಗುವ ಔಷಧಿಗಳ ಬೆಲೆ ಹೆಚ್ಚು ಇರುವುದರಿಂದ, ಬಹುತೇಕ ರೋಗಿಗಳು ಈ ಚಿಕಿತ್ಸೆಯನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರು, ಇಂತಹ ಸಂದರ್ಭಗಳಲ್ಲಿ ಮಧುಮೇಹಿಗಳಿಗೆ ಇದೀಗ ದೊಡ್ಡ ಸಿಹಿಸುದ್ದಿಯೊಂದು ಕೇಳಿಬಂದಿದೆ. ಹಾಗಿದ್ದರೆ ಮಧುಮೇಹಿಗಳಿಗೆ ಸಿಕ್ಕ ಆ ಸಿಹಿ ಸುದ್ದಿ ಯಾವುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಭಾರತದಲ್ಲಿ ಮಧುಮೇಹ (Diabetes) ಪೀಡಿತ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ತಜ್ಞರ ದೊಡ್ಡ ಚಿಂತೆಗಳಲ್ಲೊಂದು. 2023ರ ವರದಿ ಪ್ರಕಾರ, ದೇಶದಲ್ಲಿ 10.1 ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯನ್ನು ನಿಯಂತ್ರಿಸುವಂತೆ ವೈದ್ಯರು ಸಲಹೆ ನೀಡುವ ಪ್ರಮುಖ ಔಷಧಿಗಳಲ್ಲಿ ಒಂದಾದ ಎಂಪಾಗ್ಲಿಫ್ಲೋಝಿನ್ (Empagliflozin) ಈಗ ರೋಗಿಗಳಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಈ ಔಷಧಿಯ ಮೊತ್ತ ಮೊದಲು 60 ರೂಪಾಯಿಯಾಗಿದ್ದರೆ, ಈಗ ಕೇವಲ 9 ರೂಪಾಯಿಗೆ ಮಾತ್ರ ಲಭ್ಯವಾಗಲಿದೆ.

ಔಷಧಿ ಬೆಲೆ ಇಳಿಕೆಯ ಹಿಂದೆ ಇರುವ ಕಾರಣವೇನು?:

ಎಂಪಾಗ್ಲಿಫ್ಲೋಝಿನ್‌ ಎಂಬ ಔಷಧಿಯನ್ನು ಪ್ರಾರಂಭದಲ್ಲಿ ಜರ್ಮನಿಯ ಬೋಪ್ರಿಂಗರ್ ಇಂಗೆಮ್ನ (Boehringer Ingelheim) ಎಂಬ ಕಂಪನಿ ಅಭಿವೃದ್ಧಿಪಡಿಸಿತ್ತು. ಇದುವರೆಗೆ ಈ ಔಷಧಿಯ ಪೇಟೆಂಟ್ ಹಕ್ಕು ಬೋಪ್ರಿಂಗರ್ ಇಂಗೆಮ್ನ ಕೈಯಲ್ಲಿದ್ದು, ಇದರ ಪೇಟೆಂಟ್ ಅವಧಿ ಮಾರ್ಚ್ 11, 2025 ರಂದು ಮುಕ್ತಾಯಗೊಳ್ಳುವುದರಿಂದ ಭಾರತದ ದೇಶೀಯ ಔಷಧಿ ಕಂಪನಿಗಳು ತಮ್ಮದೇ ಆದ ಬ್ರಾಂಡ್‌ಗಳ (Brand) ಹೆಸರಿನಲ್ಲಿ ಈ ಔಷಧಿಯನ್ನು ಉತ್ಪಾದಿಸಲು ಅವಕಾಶ ಸಿಕ್ಕಿದೆ. ಈ ಮೂಲಕ ಜನರಿಗೆ ಕಡಿಮೆ ದರದಲ್ಲಿ ಎಂಪಾಗ್ಲಿಫ್ಲೋಝಿನ್ ಲಭ್ಯವಾಗಲಿದೆ.

ಭಾರತೀಯ ಔಷಧಿ ಕಂಪನಿಗಳ ಪ್ರಮುಖ ಪಾತ್ರವೇನು?:

ಈ ಬೆಳವಣಿಗೆಯೊಂದಿಗೆ, ಹಲವಾರು ಪ್ರಮುಖ ಭಾರತೀಯ ಔಷಧಿ ಕಂಪನಿಗಳು ಎಂಪಾಗ್ಲಿಫ್ಲೋಝಿನ್ ಅನ್ನು ತಮ್ಮದೇ ಆದ ಬ್ರ್ಯಾಂಡ್ ಹೆಸರಿನಡಿ ಬಿಡುಗಡೆ ಮಾಡಲು ಸಜ್ಜಾಗಿವೆ. ಅದರಲ್ಲೂ ಮ್ಯಾನ್ಮಂಡ್ ಫಾರ್ಮಾ (Mankind Pharma) ಶೇ.90% ಕಡಿಮೆ ದರದಲ್ಲಿ ಈ ಔಷಧಿಯನ್ನು ಮಾರುಕಟ್ಟೆಗೆ ತರಲು ಯೋಜಿಸಿದೆ. ಇದಲ್ಲದೆ, ಟೊರೆಂಟ್ ಫಾರ್ಮಾ (Torrent Pharma), ಆಲ್ಕೆಮ್ (Alkem), ಡಾ. ರೆಡ್ಡೀಸ್ (Dr. Reddy’s), ಲುಪಿನ್ (Lupin) ಮುಂತಾದ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ.

ಈ ಕಂಪನಿಗಳ ಹಿನ್ನಲೆಯಲ್ಲಿ, ಭಾರತೀಯ ಮಧುಮೇಹಿಗಳ ಚಿಕಿತ್ಸಾ ವೆಚ್ಚ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ. ಈ ಔಷಧಿ ಈಗ ದೇಶದ ಹಲವಾರು ವೈದ್ಯಕೀಯ ಅಂಗಡಿಗಳಲ್ಲಿ, ಆನ್‌ಲೈನ್ ಫಾರ್ಮಸಿ ಪ್ಲಾಟ್‌ಫಾರ್ಮ್‌ಗಳಲ್ಲಿ (Online formacy platforms), ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ.

ಎಂಪಾಗ್ಲಿಫ್ಲೋಝಿನ್ ಔಷಧಿಯ ಮಹತ್ವವೇನು?:

ಎಂಪಾಗ್ಲಿಫ್ಲೋಝಿನ್ ಕೇವಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾತ್ರವಲ್ಲ, ದೀರ್ಘಕಾಲದ (Long term) ಮಧುಮೇಹ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಕೂಡ ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಈ ಔಷಧಿ:

ಹೃದಯ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಕಾರಿ.
ಮೂತ್ರಪಿಂಡ ವೈಫಲ್ಯವನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ.
ತೂಕವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು(Blood plessure) ನಿಯಂತ್ರಿಸಲು ಸಹಕರಿಸುತ್ತದೆ.

ಭಾರತದಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದರೂ, ಅದರ ಚಿಕಿತ್ಸೆಗೆ ಬೇಕಾದ ಔಷಧಿಗಳು ಹೆಚ್ಚು ದುಬಾರಿ ಆಗಿರುವ ಕಾರಣ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಎಂಪಾಗ್ಲಿಫ್ಲೋಝಿನ್ ಬೆಲೆ ಇಳಿಕೆಯಿಂದ, ವೈದ್ಯಕೀಯ ಚಿಕಿತ್ಸೆಗೆ (Medical checkup) ಹೆಚ್ಚು ಜನ ಕೈಜೋಡಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ, ಗ್ರಾಮೀಣ ಮತ್ತು ಅಲ್ಪಬಂಡವಾಳದ ಜನರಿಗೆ ಇದು ಪ್ರಮುಖ ಸೌಲಭ್ಯಗಳಲ್ಲಿ ಒಂದಾಗಲಿದೆ.

ಮುಖ್ಯಾಂಶಗಳು :

ಎಂಪಾಗ್ಲಿಫ್ಲೋಝಿನ್ ಔಷಧಿಯ ದರ 60 ರೂಪಾಯಿಯಿಂದ 9 ರೂಪಾಯಿಗೆ ಇಳಿಕೆ.
ಪೇಟೆಂಟ್ (Paytent) ಮುಕ್ತಾಯಗೊಂಡ ಕಾರಣ ಭಾರತೀಯ ಕಂಪನಿಗಳಿಗೆ ಜನರಿಕ್ ಆವೃತ್ತಿ ಬಿಡುಗಡೆಗೆ ಅವಕಾಶ.
ಮ್ಯಾನ್ಮಂಡ್, ಟೊರೆಂಟ್, ಡಾ.ರೆಡ್ಡೀಸ್, ಲುಪಿನ್ ಮುಂತಾದ ಕಂಪನಿಗಳು ಈ ಔಷಧಿಯನ್ನು ಕಡಿಮೆ ಬೆಲೆಗೆ ನೀಡಲು ಸಜ್ಜಾಗಿವೆ.
ಈ ದರ ಇಳಿಕೆಯಿಂದ ಮಧುಮೇಹ, ಹೃದ್ರೋಗ, ಮೂತ್ರಪಿಂಡ ವೈಫಲ್ಯದಿಂದ ಬಳಲುವವರಿಗೆ ಲಾಭವಾಗಲಿದೆ.

ಮಾರ್ಚ್ 11ರಿಂದ, ಹೊಸ ದರಗಳಲ್ಲಿ ಔಷಧಿ ಲಭ್ಯವಾಗಲಿದ್ದು, ಲಕ್ಷಾಂತರ ಮಧುಮೇಹಿಗಳಿಗೆ ಇದು ಹೊಸ ಆಶಾಕಿರಣವಾಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!