ಖಾಸಗಿ ವಾಹನಗಳಲ್ಲಿ ‘POLICE’ ಸ್ಟಿಕ್ಕರ್ ಬಳಸುವುದು ಕಾನೂನುಬಾಹಿರ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ
ಭಾರತದಲ್ಲಿ ಪೋಲಿಸು ಇಲಾಖೆಯು ತಮ್ಮ ಅಧಿಕೃತ ವಾಹನಗಳ ಮೇಲೆ ‘POLICE’ ಎಂಬ ಗುರುತು ಹಾಕುವುದು ಕಾನೂನುಬದ್ಧವಾಗಿದೆ. ಆದರೆ ಕೆಲ ಪೋಲಿಸು ಸಿಬ್ಬಂದಿ ತಮ್ಮ ಖಾಸಗಿ ವಾಹನಗಳ ಮೇಲೆ ಇದೇ ಸ್ಟಿಕ್ಕರ್ (Sticker) ಹಾಕಿಕೊಂಡು ಸಂಚರಿಸುವುದನ್ನು ಕಾಣಬಹುದು. ಕೆಲವು ಸಂದರ್ಭಗಳಲ್ಲಿ, ಅವರ ಕುಟುಂಬ ಸದಸ್ಯರೂ ಇದನ್ನು ಪಾಲಿಸದೆ ತಮ್ಮ ಸ್ವಂತ ವಾಹನಗಳಲ್ಲಿ ‘POLICE’ ಗುರುತು ಹಾಕಿಸಿಕೊಂಡು ಇದನ್ನು ದುರುಪಯೋಗಪಡಿಸಿಕೊಂಡು ವಿಶೇಷ ಸೌಲಭ್ಯಗಳನ್ನು (Special facilities) ಪಡೆಯಲು ಯತ್ನಿಸುತ್ತಾರೆ. ಈ ರೀತಿ ಸ್ವಂತ ವಾಹನಗಳ ಮೇಲೆ ಪೊಲೀಸ್ ಸ್ಟಿಕರ್ ಹಾಕಿಸಿಕೊಳ್ಳಬಹುದೇ? ಎಂಬ ಗೊಂದಲಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್, ಸ್ಪಷ್ಟನೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಖಾಸಗಿ ವಾಹನಗಳ ಮೇಲೆ ‘POLICE’ ಸ್ಟಿಕ್ಕರ್ ಹಾಕುವುದು ಕಾನೂನುಬಾಹಿರವಾಗಿದೆ : ಗೃಹ ಸಚಿವ ಜಿ. ಪರಮೇಶ್ವರ್
ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಅವರು ವಿಧಾನ ಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದರು. ಪೋಲಿಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರು ತಮ್ಮ ಖಾಸಗಿ ವಾಹನಗಳ ಮೇಲೆ ‘POLICE’ ಎಂದು ಹಾಕಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಗೃಹ ಸಚಿವ ಜಿ. ಪರಮೇಶ್ವರ್ ಉತ್ತರ ನೀಡಿದ್ದು, ಕುಟುಂಬದವರು ತಮ್ಮ ಖಾಸಗಿ ವಾಹನಗಳ ಮೇಲೆ ‘POLICE’ ಎಂದು ಹಾಕಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ (Legal offence) ಎಂದು ಸ್ಪಷ್ಟಪಡಿಸಿದ್ದಾರೆ.
2022ರ ಸರ್ಕಾರದ ನಿಯಮಗಳ ಪ್ರಕಾರ, ಯಾವುದೇ ಪೋಲಿಸು ಅಧಿಕಾರಿಯು ಅಥವಾ ಸಿಬ್ಬಂದಿಯು ತಮ್ಮ ಖಾಸಗಿ ವಾಹನಗಳ ಮೇಲೆ ‘POLICE’ ಸ್ಟಿಕ್ಕರ್ ಹಾಕಿಕೊಳ್ಳಲು ಅನುಮತಿ ಇಲ್ಲ. ಇದನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ (Legal action) ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ನಿಯಮ ಉಲ್ಲಂಘಿಸಿದರೆ ಯಾವ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ?:
ಖಾಸಗಿ ವಾಹನಗಳ ಮೇಲೆ ‘POLICE’ ಎಂದು ಹಾಕಿಕೊಂಡು ಸಂಚರಿಸುವ ಪೋಲಿಸು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. 2022ರ ಸರಕಾರದ ನಿಯಮದ ಪ್ರಕಾರ, ತಪ್ಪಿತಸ್ಥರಾದ ಪೋಲಿಸು ಸಿಬ್ಬಂದಿ ಮತ್ತು ಅವರ ಕುಟುಂಬದವರು ಶಿಕ್ಷೆಗೆ (Punishment) ಒಳಗಾಗಬಹುದು.
ಸಾರ್ವಜನಿಕರು (Public) ಇಂತಹ ಪ್ರಕರಣಗಳನ್ನು ಗಮನಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಮೇಲಧಿಕಾರಿಗಳಿಗೆ ದೂರು ನೀಡಬಹುದು.
ಖಾಸಗಿ ವಾಹನಗಳ(private vehicles) ಮೇಲೆ ‘POLICE’ ಸ್ಟಿಕ್ಕರ್ ಹಾಕುವುದು ತಪ್ಪು ಯಾಕೆ? :
ಸರಕಾರದ ನಿಯಮಗಳನ್ನು ಉಲ್ಲಂಘಿಸುವ ಕಾರಣದಿಂದಾಗಿ, ಖಾಸಗಿ ವಾಹನದಲ್ಲಿ ‘POLICE’ ಸ್ಟಿಕ್ಕರ್ ಬಳಸುವಂತಿಲ್ಲ. ಬಳಸಿದರೆ ಕಾನೂನಾತ್ಮಕ ಕ್ರಮ(Legal action) ಎದುರಿಸಬೇಕಾಗುತ್ತದೆ.
ಸಾರ್ವಜನಿಕರು ‘POLICE’ ಗುರುತು ಕಂಡು ಆ ವಾಹನವನ್ನು ಸರ್ಕಾರಿ ವಾಹನ(Government vehicle) ಎಂದು ಭಾವಿಸಬಹುದು. ಈ ಭ್ರಮೆಯನ್ನು ದುರುಪಯೋಗಪಡಿಸಿಕೊಂಡು, ಕೆಲವರು ಅನುಚಿತ ಲಾಭ ಪಡೆಯುವ ಸಾಧ್ಯತೆ ಇದೆ.
ಕೆಲವು ಜನರು ‘POLICE’ ಸ್ಟಿಕ್ಕರ್ ಹೊಂದಿರುವ ವಾಹನವನ್ನು ನಿಯಮವಿಲ್ಲದೆ ಚಲಾಯಿಸಬಹುದು. ಇದರಿಂದ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಅಪಘಾತಗಳ ಸಾಧ್ಯತೆ ಹೆಚ್ಚುತ್ತದೆ.
ಈ ಕಾರಣಗಳಿಂದ, ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ‘POLICE’ ಸ್ಟಿಕ್ಕರ್ ಬಳಸುವುದು ತಪ್ಪು, ಮತ್ತು ಕಾನೂನು ಕ್ರಮಗಳನ್ನು ಅನುಸರಿಸುವುದು ಅಗತ್ಯ.
ಗೃಹ ಸಚಿವರು ನೀಡಿದ ಸ್ಪಷ್ಟನೆಯು ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಮಹತ್ವಪೂರ್ಣ ಸಂದೇಶವನ್ನು ತಲುಪಿಸಿದಂತಾಗಿದ್ದು, ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿ (Police officers and personnel) ತಮ್ಮ ಖಾಸಗಿ ವಾಹನಗಳ ಮೇಲೆ ‘POLICE’ ಸ್ಟಿಕ್ಕರ್ ಹಾಕಿಕೊಳ್ಳುವುದನ್ನು ಕಾನೂನುಬಾಹಿರ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ. ಆದ್ದರಿಂದ, ಈ ನಿಯಮವನ್ನು ಪಾಲಿಸಿ(Follow rules) , ಅನಧಿಕೃತ ‘POLICE’ ಗುರುತು ಬಳಸಿ ಪ್ರಯೋಜನ ಪಡೆಯಲು ಪ್ರಯತ್ನಿಸುವವರಿಗೆ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.