Gold Rate Today : ಇಂದು ಶುಕ್ರವಾರ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.! ಇಂದಿನ ದರ ಇಲ್ಲಿದೆ.! 

Picsart 25 03 14 06 47 11 667

WhatsApp Group Telegram Group

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ: ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿರುವ ಗ್ರಾಹಕರು!.

ಚಿನ್ನ, ಭಾರತೀಯ ಸಂಸ್ಕೃತಿಯಲ್ಲಿ (Indian culture) ಅತೀವ ಮಹತ್ವ ಹೊಂದಿರುವ ಲೋಹ. ಹೂಡಿಕೆ, ಮದುವೆ, ಉತ್ಸವಗಳ ಜೊತೆಗೆ ಧಾರ್ಮಿಕ ಆಚರಣೆಗಳಲ್ಲಿಯೂ ಚಿನ್ನ (Gold) ನಿರಂತರವಾಗಿ ಕೇಂದ್ರಸ್ಥಾನ ಪಡೆದಿದೆ. ಇಂತಹ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಾರ್ಚ್ 13 ರಂದು ಮತ್ತಷ್ಟು ಏರಿಕೆ ಕಂಡಿದೆ. ಇನ್ನೂ ಚಿನ್ನದ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದು, ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ದಿನದಿಂದ ದಿನಕ್ಕೆ ಚಿನ್ನದ ಬದಲಾವಣೆಯಲ್ಲಿ (Changes) ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಹಾಗಿದ್ದರೆ ಕಳೆದ ಹತ್ತು ದಿನಗಳಲ್ಲಿ ಚಿನ್ನದ ದರದಲ್ಲಿ ಯಾವ ರೀತಿಯ ಬದಲಾವಣೆಗಳಾಗಿವೆ? ಹಾಗೂ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 14, 2025: Gold Price Today

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಗ್ರಾಹಕರು ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಚಿನ್ನವನ್ನು ಪ್ರೀತಿಸುತ್ತಿದ್ದಂತಹ ಮಹಿಳೆಯರು ಕೂಡ, ಚಿನ್ನದ ಬೆಲೆಯನ್ನು ನೋಡಿ ಚಿನ್ನದ ಆಸೆಯನ್ನೇ ಬಿಡಬೇಕು ಎನ್ನುವ ಮಟ್ಟಿಗೆ ಇಳಿದಿದ್ದಾರೆ. ಈ ರೀತಿಯಾಗಿ ಗಗನಕ್ಕೇರುತ್ತಿರುವ ಚಿನ್ನದ ಬೆಲೆಯಲ್ಲಿ ಕ್ಷಣ ಕ್ಷಣದಲ್ಲೂ ಕೂಡ ನಾವು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

ಕಳೆದ ನಾಲ್ಕು ದಿನಗಳಿಂದಲೂ ಕೂಡ ಚಿನ್ನದ ದರದಲ್ಲಿ ಏರಿಕೆಯನ್ನು ನಿರಂತರವಾಗಿ ನಾವು ನೋಡುತ್ತಿದ್ದೇವೆ. ಅದೇ ರೀತಿಯಾಗಿ ನಿನ್ನೆ ಕೂಡ ಚಿನ್ನದ ದರದಲ್ಲಿ ಸ್ವಲ್ಪಮಟ್ಟಿನ ಏರಿಕೆಯನ್ನು (Increases) ನಾವು ಕಂಡಿದ್ದೇವೆ. ಹಾಗಿದ್ದರೆ, ಮಾರ್ಚ್ 14, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 121 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,859 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,645 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,01,100 ತಲುಪಿದೆ.  ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 55 ರೂ.ನಷ್ಟು ಏರಿಕೆ ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿ 1000 ರೂ.ನಷ್ಟು ಏರಿಕೆಯನ್ನು ನೋಡಬಹುದು.

ಅಮೆರಿಕದ ಹಣಕಾಸು ನೀತಿಗಳು (American Financial values), ಜಾಗತಿಕ ಬಂಡವಾಳ ಮಾರುಕಟ್ಟೆಯ ಸ್ಥಿತಿ, ದೇಶೀಯ ಬೇಡಿಕೆ, ಡಾಲರ್‌ನ ಮೇಲಿನ ರೂಪಾಯಿ ಮೌಲ್ಯ, ಹಾಗೂ ಆಮದು ಸುಂಕ – ಈ ಎಲ್ಲ ಅಂಶಗಳು ಬಂಗಾರದ ದರವನ್ನು ನಿರ್ಧರಿಸುವ ಪ್ರಮುಖ ಕಾರಣಗಳಾಗಿವೆ. ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿನ(Stock market) ಅನಿಶ್ಚಿತತೆಯು ಹಾಗೂ ಆರ್ಥಿಕ ಸ್ಥಿತಿಯ ಅಸ್ಥಿರತೆಯು ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಾಣುತ್ತಾ ಬಂದಿದ್ದು, ಗ್ರಾಹಕರನ್ನು ಚಿಂತಾಜನಕರಾಗಿದ್ದಾರೆ.

ಮಾರ್ಚ್ 13, 2025ರ ಚಿನ್ನದ ದರ :

ಮಾರ್ಚ್ 13 ದೇಶೀಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಉಲ್ಬಣಗೊಂಡಿದೆ. ನಿನ್ನೆ ಒಂದೇ ದಿನ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 550 ರೂ ಏರಿಕೆಯಾಗಿದ್ದು, 81,200 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 600 ರೂ ಹೆಚ್ಚಳ ಕಂಡು 87,980 ರೂ ತಲುಪಿದೆ.
1 ಗ್ರಾಂ ಚಿನ್ನದ ದರ:
22 ಕ್ಯಾರೆಟ್: ₹8,120 (₹55 ಏರಿಕೆ)
24 ಕ್ಯಾರೆಟ್: ₹8,858 (₹60 ಏರಿಕೆ)

10 ಗ್ರಾಂ ಚಿನ್ನದ ದರ:
22 ಕ್ಯಾರೆಟ್: ₹81,200 (₹550 ಏರಿಕೆ)
24 ಕ್ಯಾರೆಟ್: ₹87,980 (₹600 ಏರಿಕೆ)

ಬೆಂಗಳೂರಿನಲ್ಲಿ ಚಿನ್ನದ ದರ (Gold rate in Bangalore) :

ನಮ್ಮ ರಾಜ್ಯ ರಾಜಧಾನಿ ಬೆಂಗಳೂರು ಸಹ ಈ ಟ್ರೆಂಡ್‌ನಿಂದ ಹೊರತು ಇಲ್ಲ. ಇಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ದರ ₹8,120 ಆಗಿದ್ದು, 24 ಕ್ಯಾರೆಟ್ ಚಿನ್ನದ 1 ಗ್ರಾಂ ದರ ₹8,858 ಇದೆ. ಅದೇ ರೀತಿ ಬೆಳ್ಳಿಯ ದರದಲ್ಲಿ ಸಣ್ಣ ಏರಿಕೆ ಕಂಡು ಬಂದಿದ್ದು, 1 ಗ್ರಾಂ ಬೆಳ್ಳಿಯ ದರ ₹101 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹1,01,000 ರೂ ನಷ್ಟಿದೆ. 

ಪ್ರಮುಖ ನಗರಗಳ ಮಾರ್ಚ್ 13ರಂದು 1 ಗ್ರಾಂ ಚಿನ್ನದ ದರ ಎಷ್ಟಿದೆ?:

ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ಬೆಲೆ(22 ಕ್ಯಾರೆಟ್ ) ವಿವರ ಹೀಗಿದೆ :

ಬೆಂಗಳೂರು : 8,120   
ಚೆನ್ನೈ : 8,120    
ಕೇರಳ : 8,120   
ದಿಲ್ಲಿ : 8,135    
ಹೈದರಾಬಾದ್ : 8,120   
ಕೋಲ್ಕತ್ತಾ : 8,120   
ಮುಂಬಯಿ : 8,120   

ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ಬೆಲೆ(24 ಕ್ಯಾರೆಟ್) ವಿವರ ಹೀಗಿದೆ :
ಬೆಂಗಳೂರು : 8,858
ಚೆನ್ನೈ  : 8,858
ಕೇರಳ : 8,858
ದಿಲ್ಲಿ : 8,873
ಹೈದರಾಬಾದ್  : 8,858
ಕೋಲ್ಕತ್ತಾ: 8,858
ಮುಂಬಯಿ : 8,858

ಕಳೆದ 10 ದಿನಗಳ ಚಿನ್ನದ ಬೆಲೆ ವಿವರ:
ಮಾರ್ಚ್ 13 : 8,120 (+55)
ಮಾರ್ಚ್ 12:  8,065(+45)
ಮಾರ್ಚ್ 11: 8,020 (-30)
ಮಾರ್ಚ್ 10 : 8,050 (+10)
ಮಾರ್ಚ್ 9 : 8040
ಮಾರ್ಚ್ 8:  8,040 (+50)
ಮಾರ್ಚ್ 7:  7,990 (-30)
ಮಾರ್ಚ್ 6 : 8020 (-45)
ಮಾರ್ಚ್ 5:  8,065 (+55)
ಮಾರ್ಚ್ 4:  8,010 (+70)
ಮಾರ್ಚ್ 3 : 7,940
ಮಾರ್ಚ್ 1 ರಂದು ₹7,940 ಆಗಿದ್ದ 22 ಕ್ಯಾರೆಟ್ ಚಿನ್ನದ ದರ, ಮಾರ್ಚ್ 13 ರಂದು ₹8,120 ತಲುಪಿದೆ. ಕೇವಲ 13 ದಿನಗಳಲ್ಲಿ ₹180 ಏರಿಕೆಯಾಗಿದೆ.

ಚಿನ್ನದ ಬೆಲೆ ಏರಿಕೆಯ ಪ್ರಮುಖ ಕಾರಣಗಳು (Causes) ಯಾವುವು?

ಆಂತರಿಕ ಹಾಗೂ ಅಂತರಾಷ್ಟ್ರೀಯ (International) ಬೇಡಿಕೆ:
ಇತ್ತೀಚೆಗೆ ಹೂಡಿಕೆದಾರರು ಷೇರು ಮಾರುಕಟ್ಟೆಯ ಬದಲಿಗೆ ಚಿನ್ನದ ಕಡೆ ಹೆಚ್ಚು ಆಕರ್ಷಿತರಾಗಿದ್ದಾರೆ.
ಅಮೆರಿಕದ ಹಣಕಾಸು ನೀತಿ:
ಫೆಡ್ ರಿಸರ್ವ್‌ ಬಡ್ಡಿ ದರ ನಿರ್ಧಾರಗಳು ಡಾಲರ್ (Dollar) ಮೇಲೆ ಪ್ರಭಾವ ಬೀರುತ್ತವೆ, ಇದು ಚಿನ್ನದ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ.
ರೂಪಾಯಿ ಮೌಲ್ಯ ಕುಸಿತ:
ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗಿರುವುದರಿಂದ ಚಿನ್ನದ ಆಮದು ಬೆಲೆ ಹೆಚ್ಚಾಗಿದೆ.
ಆಮದು ಸುಂಕ:
ಭಾರತದಲ್ಲಿ ಚಿನ್ನದ ಆಮದು ದರಗಳು ಸುಂಕದಿಂದ ಪ್ರಭಾವಿತವಾಗುತ್ತವೆ.

ಚಿನ್ನದ ಬೆಲೆಯ ನಿರಂತರ ಏರಿಕೆಯ ಕಾರಣ ಗ್ರಾಹಕರು ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾದರೆ,  ಹೂಡಿಕೆದಾರರು ಹಾಗೂ ಗ್ರಾಹಕರು (Buyers) ಚಿನ್ನ ಖರೀದಿಗೆ ಮುಗಿಬೀಳುವ ಸಾಧ್ಯತೆ ಇದೆ. ಜಾಗತಿಕ ಆರ್ಥಿಕತೆ, ಡಾಲರ್-ರೂಪಾಯಿ ಹೋಲಿಕೆ, ಹಾಗೂ ಆಮದು ನೀತಿಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಚಿನ್ನದ ದರ ಹೇಗಿರಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ.
ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಬೆಲೆಗಳಲ್ಲಿ ಪ್ರತಿ ಕ್ಷಣವೂ ಬದಲಾವಣೆಯಾಗುವ ಸಾಧ್ಯತೆ ಇರುವುದರಿಂದ, ಖರೀದಿ ಅಥವಾ ಹೂಡಿಕೆಯ (Buying and Investment) ಮೊದಲು ಅಧಿಕೃತ ವಹಿವಾಟುದಾರರೊಂದಿಗೆ ಪರಿಶೀಲನೆ ಮಾಡುವುದು ಒಳಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!