ಸ್ಮಾರ್ಟ್‌ಫೋನ್ ಬಳಕೆದಾರರೇ ಜಾಗೃತರಾಗಿ! ನಿಮ್ಮ ಖಾಸಗಿ ಮಾಹಿತಿ(Private information)ಯನ್ನು ಗೂಗಲ್ ಗೆ ನೀಡುತ್ತಿರುವುದನ್ನು ತಡೆಯಬೇಕಾ? ಈ ಸೆಟ್ಟಿಂಗ್ಗಳನ್ನು ತಕ್ಷಣವೇ ಆಫ್ ಮಾಡಿ!
ಇಂದಿನ ತಂತ್ರಜ್ಞಾನ-ಯುಗದಲ್ಲಿ ಸ್ಮಾರ್ಟ್‌ಫೋನ್(Smartphone) ನಮ್ಮ ದೈನಂದಿನ ಜೀವರಾಸಿಯೇ ಆಗಿಬಿಟ್ಟಿದೆ. ಬೆಳಗಿನ ಅಲಾರ್ಮಿನಿಂದ ರಾತ್ರಿ ಮಲಗುವವರೆಗೂ ನಾವು ಸ್ಮಾರ್ಟ್‌ಫೋನ್‍ಗೆ ಆಧಾರರಾಗಿದ್ದೇವೆ. ಈ ತಂತ್ರಜ್ಞಾನ ನಿಮ್ಮ ಸಹಾಯಕ್ಕೆ ಬಂದರೂ, ಒಂದು ಸಂಗತಿ ಮರೆಯಬೇಡಿ – ನಿಮ್ಮ ಜೀವನದ ಎಲ್ಲ ರಹಸ್ಯಗಳನ್ನು ತಿಳಿದಿರುವುದು ನಿಮ್ಮ ಹತ್ತಿರದ ಸ್ನೇಹಿತನಲ್ಲ, ಬದಲಾಗಿ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನೀವು ಮಾತನಾಡುವ ಮಾತುಗಳು, ನಿಮ್ಮ ಮೆಚ್ಚಿನ ವಸ್ತುಗಳು, ಓಡಾಡುವ ಸ್ಥಳಗಳು, ಖರೀದಿ ಮಾಡುವ ಉತ್ಪನ್ನಗಳು – ಇವೆಲ್ಲವೂ ನಿಮ್ಮ ಮೊಬೈಲ್‌ಗೆ ಗೊತ್ತಿರುತ್ತದೆ. ನೀವು ಯಾವುದಾದರೂ ವಿಷಯದ ಬಗ್ಗೆ ಮಾತನಾಡಿದ ನಂತರ ತಕ್ಷಣವೇ ಅದರ ಜಾಹೀರಾತು ನಿಮ್ಮ ಫೋನಿನಲ್ಲಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿದ್ದೀರಾ? ಇದಕ್ಕೆ ಕಾರಣ, ನಿಮ್ಮ ಡೇಟಾವನ್ನು ತಂತ್ರಜ್ಞಾನ ಕಂಪನಿಗಳು ಸಂಗ್ರಹಿಸುತ್ತಾ ಇರುತ್ತವೆ.
ಇಂತಹ ನಿರಂತರ ಡೇಟಾ ಸಂಗ್ರಹವು ನಿಮ್ಮ ಪ್ರೈವಸಿ ಗೆ ದೊಡ್ಡ ಧಕ್ಕೆ ತರುತ್ತದೆ. ಹೀಗಾಗಿ, ನಿಮ್ಮ ಮಾಹಿತಿ ಸುರಕ್ಷಿತವಾಗಿರಿಸಿಕೊಳ್ಳಲು ಈ ಕೆಳಗಿನ ಅತೀಮುಖ್ಯವಾದ ಸೆಟ್ಟಿಂಗ್ಗಳನ್ನು(Settings)ತಕ್ಷಣವೇ ಆಫ್ ಮಾಡಿ.
ಪರ್ಸನಲೈಸ್ಡ್ ಡೇಟಾ ಶೇರಿಂಗ್ ಆಫ್ ಮಾಡುವ ವಿಧಾನ(How to turn off personalized data sharing) :
ನಿಮ್ಮ ಫೋನ್ ಬಳಕೆ ಹಾಗೂ ಇಂಟರ್ನೆಟ್ ಉಪಯೋಗದ ಆಧಾರದಲ್ಲಿ ಗೂಗಲ್ ನಿಮಗೆ ಅನ್ವಯಿಸಬಹುದಾದ ಜಾಹೀರಾತುಗಳು, ಶಿಫಾರಸುಗಳು ನೀಡುತ್ತದೆ. ಇದರಿಂದ ನಿಮ್ಮ ನಿಜವಾದ ಸ್ವಾತಂತ್ರ್ಯ ಕಡಿಮೆಯಾಗುತ್ತದೆ. ಈ ಸೆಟ್ಟಿಂಗ್ ಆಫ್ ಮಾಡುವುದರಿಂದ ನೀವು ಜಾಹೀರಾತುಗಳನ್ನೂ ನಿಯಂತ್ರಿಸಬಹುದು.
ಫೋನ್ ಸೆಟ್ಟಿಂಗ್ಗಿಗೆ ಹೋಗಿ
Google ಆಯ್ಕೆಮಾಡಿ
All Services ಕ್ಲಿಕ್ ಮಾಡಿ, Privacy & Security ಅನ್ನು ಆಯ್ಕೆ ಮಾಡಿ
Personalized Used Shared Data ಕ್ಲಿಕ್ ಮಾಡಿ
ಎಲ್ಲಾ ಆಯ್ಕೆಗಳನ್ನು Disable ಮಾಡಿ
ಯೂಸೇಜ್ ಅಂಡ್ ಡಯಾಗ್ನೊಸ್ಟಿಕ್ಸ್ ಆಫ್ ಮಾಡುವ ವಿಧಾನ(How to turn off Usage and Diagnostics):
ಈ ಸೌಲಭ್ಯದ ಮೂಲಕ ಗೂಗಲ್ ನಿಮ್ಮ ಫೋನ್‌ನ ಉಪಯೋಗದ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ನಿಮ್ಮ ಡೇಟಾ ಹಂಚಿಕೊಳ್ಳಲು ನೀವು ಒಪ್ಪಿಗೆ ನೀಡಿದಂತಾಗುತ್ತದೆ. ಇದನ್ನು ಆಫ್ ಮಾಡುವುದು ಅತ್ಯಗತ್ಯ.
ಫೋನ್ ಸೆಟ್ಟಿಂಗ್ಗಿಗೆ ಹೋಗಿ
Google ಆಯ್ಕೆಮಾಡಿ
All Services ಕ್ಲಿಕ್ ಮಾಡಿ, Privacy & Security ತೆರೆಯಿರಿ
Usage & Diagnostics ಆಯ್ಕೆ ಮಾಡಿ
Turn Off ಮಾಡಿ
ಜಾಹೀರಾತುಗಳನ್ನು ನಿಯಂತ್ರಿಸಿ – ನಿಮ್ಮ ಸಂಭಾಷಣೆಯನ್ನು ಕೇಳುವುದನ್ನು ತಡೆಯಿರಿ(Control ads – stop them from listening to your conversation)!
ನೀವು ಮಾತನಾಡಿದ ವಿಷಯದ ಆಧಾರದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಜಾಹೀರಾತುಗಳು ತಕ್ಷಣವೇ ಕಾಣಿಸಿಕೊಳ್ಳುತ್ತವೆ. ಇದು ಖಾಸಗಿತನಕ್ಕೆ ದೊಡ್ಡ ತೊಂದರೆ. ಹೀಗಾಗಿ, ಈ ಹೆಜ್ಜೆಗಳನ್ನು ಅನುಸರಿಸಿ.
ಫೋನ್ ಸೆಟ್ಟಿಂಗ್ಗಿಗೆ ಹೋಗಿ
Google ಕ್ಲಿಕ್ ಮಾಡಿ
All Services ತೆರೆಯಿರಿ
Ads ಮೇಲೆ ಕ್ಲಿಕ್ ಮಾಡಿ
Reset Advertising ID ಕ್ಲಿಕ್ ಮಾಡಿ ಹಾಗೂ Confirm ಮಾಡಿ
Delete Advertising ID ಆಯ್ಕೆ ಮಾಡಿ
ಏಕೆ ಈ ಸೆಟ್ಟಿಂಗ್ಗಳನ್ನು ಆಫ್ ಮಾಡಬೇಕು?(Why should these settings be turned off?)
ನಿಮ್ಮ ಖಾಸಗಿ ಮಾಹಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಬಹುದು.
ಅನಗತ್ಯ ಜಾಹೀರಾತುಗಳು ತಡೆಯಲ್ಪಡುತ್ತವೆ.
ಗೂಗಲ್(Google)ಮತ್ತು ಇತರ ತಂತ್ರಜ್ಞಾನ ಕಂಪನಿಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದನ್ನು ತಡೆಯಬಹುದು.
ಸೈಬರ್ ಅಪಾಯ(Cyber risks)ಗಳನ್ನು ತೊಡೆದು ಹಾಕಬಹುದು.
ನಿಮ್ಮ ಡಿಜಿಟಲ್ ಪ್ರೈವಸಿ ನಿಮ್ಮ ಕೈಯಲ್ಲಿದೆ! ಈ ಸೆಟ್ಟಿಂಗ್ಗಳನ್ನು ಈಗಲೇ ಆಫ್ ಮಾಡಿ ಮತ್ತು ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.