Rain Alert: ಕರ್ನಾಟಕದ ಜಿಲ್ಲೆಗಳಿಗೆ 5 ದಿನ ಬಾರಿ  ಜೋರು ಮಳೆ ಎಚ್ಚರಿಕೆ! 

Picsart 25 03 14 23 38 41 489

WhatsApp Group Telegram Group

ಕರ್ನಾಟಕದಲ್ಲಿ ಮುಂಗಾರು ಪ್ರಭಾವ ಆರಂಭ – ದಕ್ಷಿಣದಲ್ಲಿ ಮಳೆಯ ಅಬ್ಬರ, ಉತ್ತರದಲ್ಲಿ ತಾಪಮಾನ ಏರಿಕೆ

ಕರ್ನಾಟಕದಲ್ಲಿ(Karnataka) ಬೇಸಿಗೆ ತೀವ್ರತೆ ಹೆಚ್ಚುತ್ತಿರುವ ನಡುವೆ, ಪೂರ್ವ ಮುಂಗಾರು ಮಳೆಯ(Rain) ಪ್ರಭಾವವೂ ಪ್ರಾರಂಭವಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್(40 degrees Celsius) ತಲುಪಿದರೆ, ಮತ್ತೊಂದೆಡೆ ಮಳೆಯ ಅಬ್ಬರವೂ ಕಾಣಿಸಿಕೊಂಡಿದೆ. ಹವಾಮಾನ ತಜ್ಞರ(Meteorologists) ಪ್ರಕಾರ,  ಮುಂದಿನ ದಿನಗಳಲ್ಲಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮುಂಗಾರು ಮಳೆ ಹೆಚ್ಚಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಹವಾಮಾನ ವೈಪರಿತ್ಯದ ಪರಿಣಾಮ, ರಾಜ್ಯದಲ್ಲಿ ಎರಡು ಬಗೆಯ ವಾತಾವರಣ ನಿರ್ಮಾಣವಾಗಿದೆ, ಒಂದು ಕಡೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಭಾವ ಹೆಚ್ಚಿದರೆ, ಇನ್ನೊಂದು ಕಡೆ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಉಷ್ಣತೆಯ(temperature) ಅಬ್ಬರ ತೀವ್ರಗೊಂಡಿದೆ. ಈ ಪರಿಸ್ಥಿತಿ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದ(Bay of Bengal and Arabian Sea) ವಾತಾವರಣದಲ್ಲಿನ ಬದಲಾವಣೆಗಳಿಂದ ಉಂಟಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಮಾರ್ಚ್ 16ರಿಂದ(March 16 ) ರಾಜ್ಯದ ಹಲವೆಡೆ ಮುಂಗಾರು ಮಳೆಯ ಪ್ರಭಾವ ಹೆಚ್ಚಾಗುವ ನಿರೀಕ್ಷೆಯಿದೆ. ಇದರಿಂದಾಗಿ, ಬೇಸಿಗೆ ಬಿಸಿಗಾಳಿಯ ತೀವ್ರತೆ ಕಡಿಮೆಯಾಗುವ ಸಂಭವವಿದೆ. ಮಳೆ ಮತ್ತು ಉಷ್ಣತೆ ನಡುವಿನ ಈ ಸಮತೋಲನ, ರಾಜ್ಯದ ಹಲವು ಜಿಲ್ಲೆಗಳ ಜನಜೀವನ, ಕೃಷಿ ಮತ್ತು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಯಾವ ಯಾವ ಜಿಲ್ಲೆಗಳಲ್ಲಿ ಮುಂಗಾರು ಮಳೆ ಹೆಚ್ಚಾಗಲಿದೆ:

ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಮಾರ್ಚ್ 16 ರಿಂದ ಮುಂದಿನ 5 ದಿನಗಳ(5 day’s) ಕಾಲ ಗುಡುಗು-ಮಿಂಚಿನ ಮಳೆಯ ಎಚ್ಚರಿಕೆಯನ್ನು ಪ್ರಕಟಿಸಲಾಗಿದೆ. ವಿಶೇಷವಾಗಿ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆ ತೀವ್ರಗೊಳ್ಳಬಹುದು. ಈ ಮಳೆಯ ಪರಿಣಾಮವಾಗಿ, ಕೆಲವು ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಬಹುದು ಎಂದು ತಿಳಿಸಲಾಗಿದೆ.

ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆಯ ಪ್ರಭಾವ ಹೆಚ್ಚಿದರೆ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಯ ಪ್ರವೃತ್ತಿ ಮುಂದುವರಿಯುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಒಣಹವೆ ಮತ್ತು ಉಷ್ಣಗಾಳಿಯ ತೀವ್ರತೆ ಹೆಚ್ಚಿದ್ದು, ರಾಜ್ಯದ ಗರಿಷ್ಠ ತಾಪಮಾನ(Maximum temperature) ಇಲ್ಲಿ ದಾಖಲಾಗಿದೆ

ಕಲಬುರಗಿಯಲ್ಲಿ(Kalaburagi) ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ವಿಜಯಪುರ ಮತ್ತು ಬಾಗಲಕೋಟೆಯಲ್ಲಿ(Vijayapura and Bagalkot) 38 ಡಿಗ್ರಿ, ಬೀದರ್, ಗದಗ, ಕೊಪ್ಪಳದಲ್ಲಿ 37 ಡಿಗ್ರಿ, ದಾವಣಗೆರೆ ಮತ್ತು ಧಾರವಾಡದಲ್ಲಿ 36 ಡಿಗ್ರಿ ತಲುಪಿದೆ. ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಚಿಂತಾಮಣಿ, ಹಾವೇರಿ, ಹಾಗೂ ಬೆಂಗಳೂರು ನಗರ ಪ್ರದೇಶಗಳಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಆಗಿದೆ.

ಸಾಮಾನ್ಯವಾಗಿ, ಹೋಳಿ ಹಬ್ಬದ(Holi festival) ವೇಳೆ ಕರ್ನಾಟಕದಲ್ಲಿ ತುಂತುರು ಮಳೆಯಾಗುವುದು ಸಹಜ. ಆದರೆ, ಈ ವರ್ಷ ಮುಂಗಾರು ಮಳೆಯ ಪ್ರಭಾವ ಅಧಿಕವಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶಗಳಲ್ಲಿ(coastal areas) ಮಳೆ ಮತ್ತು ಉಷ್ಣತೆ(Rain and temperature) ಎರಡೂ ಒಂದೇ ಸಮಯದಲ್ಲಿ ಎದುರಾಗುವ ಸಾಧ್ಯತೆ ಇದೆ.

ಮುಂದಿನ ಕೆಲವು ದಿನಗಳ ಹವಾಮಾನ ತೀಕ್ಷ್ಣ ತಿರುವು ಪಡೆಯುವ ಸಾಧ್ಯತೆ ಇದ್ದು, ರಾಜ್ಯದ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಗುಡುಗು-ಮಿಂಚಿನ ಸಂದರ್ಭದಲ್ಲಿ ಕೆಳಭಾಗದ ಪ್ರದೇಶಗಳಲ್ಲಿ ನೀರಿನ ಸಂಗ್ರಹ, ರೈತರ ಕೃಷಿ ಚಟುವಟಿಕೆಗಳ ಪ್ರಭಾವ, ಪ್ರವಾಸೋದ್ಯಮ ಮತ್ತು ದೈನಂದಿನ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾರ್ವಜನಿಕರು ಹವಾಮಾನ ಇಲಾಖೆ ಸೂಚನೆಗಳಿಗೆ(Meteorological Department instructions) ಗಮನಹರಿಸಿ, ಸುರಕ್ಷಿತ ಸ್ಥಳಗಳಲ್ಲಿ ಉಳಿಯಲು ತಯಾರಿ ಮಾಡಿಕೊಳ್ಳಬೇಕು.

ಕರ್ನಾಟಕದಲ್ಲಿ ಮುಂಗಾರು ಪ್ರಭಾವ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬಿಸಿಯ ತೀವ್ರತೆ ಕಡಿಮೆಯಾಗಬಹುದು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಳೆದೆರಡು ದಿನಗಳಿಂದ ಉಷ್ಣತೆಯ ಮಟ್ಟ ಹೆಚ್ಚುತ್ತಿದ್ದು, ಈ ಭಾಗದ ಜನತೆ ತೀವ್ರ ಬೇಸಿಗೆಯ ತಾಪಮಾನವನ್ನು ಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ, ರಾಜ್ಯದ ಜನತೆ ಮುಂದಿನ ಹವಾಮಾನ ಬದಲಾವಣೆಗೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಒಳಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!