ಬೆಂಗಳೂರು ಮೆಟ್ರೋ 50 ಟ್ರೈನ್ ಆಪರೇಟರ್ ಹುದ್ದೆಗಳ ನೇಮಕಾತಿ 2025
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ಆಪರೇಶನ್ ಮತ್ತು ನಿರ್ವಹಣೆ ವಿಭಾಗದಲ್ಲಿ (O&M Division) 50 ಟ್ರೈನ್ ಆಪರೇಟರ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು, ಮತ್ತು 5 ವರ್ಷಗಳ ಸೇವಾ ಅವಧಿ ಕಾರ್ಯಕ್ಷಮತೆ ಆಧರಿಸಿ ವಿಸ್ತರಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
▪️ಉದ್ಯೋಗದ ಪ್ರಕಾರ: ಗುತ್ತಿಗೆ ಆಧಾರದ ಸರ್ಕಾರಿ ಉದ್ಯೋಗ
▪️ ಹುದ್ದೆಯ ಹೆಸರು: ಟ್ರೈನ್ ಆಪರೇಟರ್ (Train Operator – TO)
▪️ ಒಟ್ಟು ಹುದ್ದೆಗಳು: 50 ಹುದ್ದೆಗಳು
▪️ ನೇಮಕಾತಿ ಪ್ರಾಧಿಕಾರ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
▪️ ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಮುಖ್ಯ ಅಂಶಗಳು (Key Highlights):
1. 50 ಟ್ರೈನ್ ಆಪರೇಟರ್ ಹುದ್ದೆಗಳ ನೇಮಕಾತಿ
2. ವೇತನ ಶ್ರೇಣಿ: ₹35,000 – ₹82,660
3. ಭತ್ಯೆಗಳು ಮತ್ತು ವಾರ್ಷಿಕ ವೇತನ ಹೆಚ್ಚಳ (3%)
4. ಇಂಜಿನಿಯರಿಂಗ್ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ
5. ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ
6. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-04-2025
7. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ
ವೇತನ ಶ್ರೇಣಿ (Salary Structure):
▪️ ರೂ.35,000 – 82,660/-
▪️ ಪ್ರತಿ ವರ್ಷ 3% ಶೇಕಡಾ ವೇತನ ಹೆಚ್ಚಳ
▪️ ಇತರೆ ಭತ್ಯೆಗಳು: ಬಿಎಂಆರ್‌ಸಿಎಲ್ ನಿಯಮಾನುಸಾರ ಅನ್ವಯವಾಗುವ ವಿವಿಧ ಅನುಕೂಲತೆಗಳು.
ಅರ್ಹತಾ ಮಾನದಂಡಗಳು (Eligibility Criteria):
▪️ಶೈಕ್ಷಣಿಕ ಅರ್ಹತೆ (Educational Qualification):
ಅರ್ಜಿದಾರರು ಕನಿಷ್ಠ ಈ ಕೆಳಗಿನ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು:
– ಇಲೆಕ್ಟ್ರಿಕಲ್ ಇಂಜಿನಿಯರಿಂಗ್
– ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
– ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್
– ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್
-ಇಲೆಕ್ಟ್ರಿಕಲ್ ಪವರ್ ಸಿಸ್ಟಮ್
– ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್
– ಮೆಕ್ಯಾನಿಕಲ್ ಇಂಜಿನಿಯರಿಂಗ್
ವಯೋಮಿತಿ (Age Limit):
▪️ ಗರಿಷ್ಠ ವಯಸ್ಸು: 38 ವರ್ಷ
▪️ ಸರ್ಕಾರದ ನಿಯಮಾನುಸಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ಪ್ರಮುಖ ದಿನಾಂಕಗಳು (Important Dates):
▪️ ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಮಾರ್ಚ್ 2025
▪️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಏಪ್ರಿಲ್ 2025
▪️ ಅರ್ಜಿಯ ಪ್ರಿಂಟ್ ಔಟ್ ಸಲ್ಲಿಸಲು ಕೊನೆಯ ದಿನಾಂಕ: 09 ಏಪ್ರಿಲ್ 2025, ಸಂಜೆ 4:00 ಗಂಟೆ
ಆಯ್ಕೆ ಪ್ರಕ್ರಿಯೆ (Selection Process):
1. ಲೆಖನಾತ್ಮಕ ಪರೀಕ್ಷೆ (Computer-Based Test – CBT)
2. ಕೌಶಲ್ಯ ಪರೀಕ್ಷೆ (Skill Test/Trade Test)
3. ಮೂಲ ದಾಖಲೆಗಳ ಪರಿಶೀಲನೆ (Document Verification)
4. ವೈದ್ಯಕೀಯ ಪರೀಕ್ಷೆ (Medical Examination)
– ಮೇಲಿನ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply?):
ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
bmrc.co.in
2. ‘Train Operator Recruitment 2025’ ಅಧಿಸೂಚನೆ ಓದಿ.
3. ‘Click Here to Apply Online’ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ತೆಗೆದುಕೊಳ್ಳಿ.
6.ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ಈ ವಿಳಾಸಕ್ಕೆ ಕಳುಹಿಸಿ:
– ಜೆನೆರಲ್ ಮ್ಯಾನೇಜರ್ (HR),
– ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL),
– 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು – 560027.
ಸಂಪರ್ಕ ಮಾಹಿತಿ (Contact Details):
▪️ ದೂರವಾಣಿ: 080-25191039
▪️ ಇಮೇಲ್: [email protected]
▪️ ಹೆಚ್ಚಿನ ಮಾಹಿತಿಗೆ: www.bmrc.co.in
– ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.