Gold Rate Today : ಚಿನ್ನದ ಬೆಲೆ ಬಾರಿ ಏರಿಕೆ.! ವಾರದ ಮೊದಲ ದಿನವೆ ಶಾಕ್. ಇಲ್ಲಿದೆ ಇಂದಿನ ರೇಟ್

IMG 20250316 WA0082

WhatsApp Group Telegram Group

ಜಾಗತಿಕ ಅಸ್ಥಿರತೆ ನಡುವೆಯೂ ಚಿನ್ನದ ಹೂಡಿಕೆ ಸುರಕ್ಷಿತ: ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆಯ ಏರಿಕೆ ಸಾಧ್ಯತೆ

ಚಿನ್ನದ ಮೌಲ್ಯವು (Gold rate) ಇತ್ತೀಚೆಗೆ ಭಾರೀ ಏರಿಕೆ ಕಂಡಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ವಿಶ್ವದ ವಿವಿಧ ಷೇರು ಮಾರುಕಟ್ಟೆಗಳ ಅಸ್ಥಿರತೆ, ಅಮೆರಿಕದ ಹಣಕಾಸು ನೀತಿಗಳು, ಬಡ್ಡಿ ದರ ಕಡಿತದ ನಿರೀಕ್ಷೆ ಮತ್ತು ಜಾಗತಿಕ ಭೂರಾಜಕೀಯ ಅಸ್ಥಿರತೆ ಇವೆಲ್ಲವೂ ಚಿನ್ನದ ಬೆಲೆಯ ಮೇಲಿನ ಒತ್ತಡವನ್ನು ಹೆಚ್ಚಿಸಿವೆ. ಈ ಹಿನ್ನಲೆಯಲ್ಲಿ ಚಿನ್ನದ ಹೂಡಿಕೆಯ ಮಹತ್ವವು ಮತ್ತಷ್ಟು ಹೆಚ್ಚಾಗಿದ್ದು, ಜನರು ಭದ್ರವಾದ ಹೂಡಿಕೆಯಾಗಿ (Safety investment) ಚಿನ್ನದತ್ತ ಮುಖ ಮಾಡುತ್ತಿದ್ದಾರೆ.ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 17, 2025: Gold Price Today

ಚಿನ್ನದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ,ಇದರ ಪರಿಣಾಮ ಗ್ರಾಹಕರು (Buyers) ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ದರವು ಸಾವಿರಾರು ರೂಪಾಯಿಗಳಷ್ಟು ಹೆಚ್ಚಳವಾಗಿದ್ದು, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಆಭರಣ ಖರೀದಿಗೆ ಹೆಚ್ಚುವರಿ ಖರ್ಚು ಮಾಡುವುದು ಕಷ್ಟವಾಗಿದೆ. ಬೆಲೆ ಏರಿಕೆಯು ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹಾಕುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ನಿನ್ನೆ ಚಿನ್ನ ಹಾಗೂ ಬೆಳ್ಳಿ (Gold and silver) ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿರುವುದು ಗ್ರಾಹಕರು ತಾತ್ಕಾಲಿಕ ಸಂತೋಷ ಪಡುತ್ತಿದ್ದಾರೆ. ಹಾಗಿದ್ದರೆ, ಮಾರ್ಚ್ 17, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 219 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,966 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,725 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,02,900 ತಲುಪಿದೆ.  ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಕೇವಲ 1ರೂ.  ಇಳಿಕೆಯಾಗಿದೆ. ಹಾಗೆ ಬೆಳ್ಳಿ ಬೆಲೆಯಲ್ಲಿಯೂ 100 ರೂ.ನಷ್ಟು ಇಳಿಕೆಯನ್ನು ನೋಡಬಹುದು.

ಹೌದು, ಚಿನ್ನದ ಮಾರುಕಟ್ಟೆಯಲ್ಲಿ ಕಳೆದ ಕೆಲ ವಾರಗಳಿಂದ ಭಾರಿ ಏರಿಳಿತಗಳಾಗುತ್ತಿದ್ದು. ಅದರಲ್ಲೂ ಇತ್ತೀಚೆಗೆ ದೊಡ್ಡ ಮಟ್ಟದ ಏರಿಕೆ ಕಂಡುಬಂದಿತ್ತು. ಬಂಗಾರದ ಬೆಲೆಯು ಪ್ರತಿ ಗ್ರಾಂಗೆ ಬರೋಬ್ಬರಿ ₹1000 ಹೆಚ್ಚಳ ಕಂಡ ನಂತರ, ವೀಕೆಂಡ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥಗೊಂಡಿದೆ. ಹೂಡಿಕೆದಾರರು ಹಾಗೂ ಚಿನ್ನಾಭರಣ ಖರೀದಿಸಲು ಉತ್ಸುಕರಾಗಿರುವ ಗ್ರಾಹಕರು, ದಿನನಿತ್ಯದ ಚಿನ್ನದ ದರವನ್ನು ಗಮನಿಸಬೇಕಾಗಿದೆ, ಏಕೆಂದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳ ಸಾಧ್ಯತೆ ಇದೆ  ಎಂದು ತಜ್ಞರ ಹೇಳುತ್ತಿದ್ದಾರೆ.

ಮಾರ್ಚ್ 16, 2025ರ ಚಿನ್ನದ ದರ ಈ ರೀತಿಯಿದೆ:

22 ಕ್ಯಾರೆಟ್ ಚಿನ್ನದ ದರ:
1 ಗ್ರಾಂ – ₹8,220
10 ಗ್ರಾಂ – ₹82,200

24 ಕ್ಯಾರೆಟ್ ಚಿನ್ನದ ದರ:
1 ಗ್ರಾಂ – ₹8,967
10 ಗ್ರಾಂ – ₹89,670

ಬೆಂಗಳೂರು ನಗರದಲ್ಲಿ ಚಿನ್ನದ ದರ:
22 ಕ್ಯಾರೆಟ್ 1 ಗ್ರಾಂ – ₹8,220
ಬೆಳ್ಳಿಯ ಬೆಲೆ (1 ಗ್ರಾಂ) – ₹103
ಕೆಜಿ ಬೆಳ್ಳಿಯ ದರ: ₹1,03,000

ಚಿನ್ನದ ಹೂಡಿಕೆ (Gold investment) : ಭಾರೀ ದಾಖಲೆ ಏರಿಕೆ:

ಅಮೆರಿಕದ ಷೇರುಪೇಟೆಯಲ್ಲಿ (American stock market) ಕಳೆದ ವಾರ ಕಂಡುಬಂದ ಭಾರಿ ಕುಸಿತದಿಂದ ಹೂಡಿಕೆದಾರರ ಗಮನ ಚಿನ್ನದತ್ತ ಹರಿದಿದೆ. ಸ್ಟಾಕ್ ಮಾರುಕಟ್ಟೆಯ ಅನಿಶ್ಚಿತತೆ, ಜಾಗತಿಕ ಆರ್ಥಿಕ ಅಸ್ಥಿರತೆ, ಮತ್ತು ಕೇಂದ್ರ ಬ್ಯಾಂಕುಗಳ ಚಿನ್ನದ ಖರೀದಿಯಿಂದಾಗಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ. 2024ರಲ್ಲಿ ಚಿನ್ನದ ಬೆಲೆ ಶೇ. 27 ರಷ್ಟು ಏರಿಕೆಯಾಗಿದ್ದರೆ, 2025ರ ಆರಂಭದಲ್ಲಿಯೇ ಹೊಸ ದಾಖಲೆ ಮುಟ್ಟುವ ಸೂಚನೆ ನೀಡುತ್ತಿದೆ.

ಅಮೇರಿಕದಲ್ಲಿ ಚಿನ್ನದ ದರ ಎಷ್ಟಿದೆ?:

1 ಔನ್ಸ್ (28 ಗ್ರಾಂ) – $3,004.86
2024ರಲ್ಲಿ 40.56% ಏರಿಕೆ

ಅಮೆರಿಕದ ಹಣಕಾಸು ನೀತಿ (American Financial value) ಮತ್ತು ಚಿನ್ನದ ಮೇಲಿನ ಪ್ರಭಾವ:

ಅಮೆರಿಕದ ಫೆಡರಲ್ ರಿಸರ್ವ್ ಸೆಪ್ಟೆಂಬರ್ 2024ರಿಂದ 100 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿ ದರವನ್ನು ಕಡಿತಗೊಳಿಸಿದೆ. 2025ರ ಜೂನ್‌ನಲ್ಲಿ ಮತ್ತಷ್ಟು ಬಡ್ಡಿ ದರ ಕಡಿತದ ನಿರೀಕ್ಷೆ ಇದ್ದು, ಇದು ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆಗೆ ಕಾರಣವಾಗಬಹುದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದುಬ್ಬರದ ದತ್ತಾಂಶಗಳು ಇಳಿಕೆಯನ್ನು ತೋರಿಸುತ್ತಿರುವ ಕಾರಣ, ಬಡ್ಡಿ ದರ ಇಳಿಕೆಯ ನಿರೀಕ್ಷೆ ಹೆಚ್ಚುತ್ತಿದೆ.

ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವುದು ಅಮೆರಿಕದ ಆರ್ಥಿಕ ಸ್ಥಿತಿಗತಿ ಮತ್ತು ರಾಜಕೀಯ ಅನಿಶ್ಚಿತತೆ(America’s economic situation and political uncertainty). ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಆಡಳಿತವು ಜಾರಿಗೊಳಿಸಿರುವ ಹೊಸ ಆರ್ಥಿಕ ನೀತಿಗಳು, ಸುಂಕ ನೀತಿಗಳು, ಹಾಗೂ ಜಾಗತಿಕ ಬಂಡವಾಳ ಹೂಡಿಕೆಯ ಮೇಲೆ ಬೀರುವ ಪರಿಣಾಮಗಳು ಮೌಲ್ಯವನ್ನು ಪ್ರಭಾವಿತಗೊಳಿಸುತ್ತಿವೆ.

ಚಿನ್ನದ ಏರಿಕೆ ಮುಖ್ಯ ಕಾರಣಗಳು (Causes) ಯಾವುವು?:

ಸೆಂಟ್ರಲ್ ಬ್ಯಾಂಕ್‌ಗಳ (Central banks) ನಿರಂತರ ಚಿನ್ನದ ಖರೀದಿ.
ಜಾಗತಿಕ ರಾಜಕೀಯ ಅನಿಶ್ಚಿತತೆ (ಉದಾ: ಅಮೆರಿಕ-ಚೀನಾ ವ್ಯಾಪಾರ ಯುದ್ಧ).
ಷೇರುಪೇಟೆಯ ನಿರಂತರ ಅಸ್ಥಿರತೆ.
ಫೆಡರಲ್‌ ರಿಸರ್ವ್ ಬಡ್ಡಿ ದರ ಕಡಿತ ನಿರೀಕ್ಷೆ.

ಚಿನ್ನದ ಬೆಲೆಯ ಮೇಲೆ ಬಂಡವಾಳ ಹೂಡಿಕೆದಾರರು ಹೆಚ್ಚಿನ ನಂಬಿಕೆ ಹೊಂದಿರುವ ಹಿನ್ನಲೆಯಲ್ಲಿ, ಮುಂದಿನ ದಿನಗಳಲ್ಲಿ ಚಿನ್ನದ ಮೌಲ್ಯ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಗ್ರಾಹಕರು ಖರೀದಿ ಅಥವಾ ಹೂಡಿಕೆಯ (Buying and Investment) ಮೊದಲು ಅಧಿಕೃತ ವಹಿವಾಟುದಾರರೊಂದಿಗೆ ಪರಿಶೀಲನೆ ಮಾಡುವುದು ಒಳಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!