BSNL Plans : ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಡಿಸ್ಕೌಂಟ್ ಪ್ಲಾನ್ಸ್, ಅತೀ ಕಮ್ಮಿ ಬೆಲೆಯ ಪ್ಲಾನ್ಸ್ ಲಾಂಚ್.!

Picsart 24 09 06 21 45 40 830 1024x575 1

WhatsApp Group Telegram Group

ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ತನ್ನ ಬಳಕೆದಾರರಿಗೆ ಬಜೆಟ್ ಸ್ನೇಹಿ ಪ್ರಿಪೇಯ್ಡ್ ಪ್ಲಾನ್ (Budget-friendly prepaid plan) ಅನ್ನು ಪರಿಚಯಿಸಿದೆ. ಪ್ರತಿದಿನವೂ ರೀಚಾರ್ಜ್ (daily recharge) ಮಾಡಬೇಕಾದ ತೊಂದರೆಯಿಂದ ಬಳಕೆದಾರರನ್ನು ಮುಕ್ತಗೊಳಿಸಲು ಮತ್ತು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು, 750 ರೂ. ದೀರ್ಘಾವಧಿಯ ಹೊಸ ಪ್ಲಾನ್ (new plan) ಹೊರತಂದಿದೆ. ಇದರಿಂದ ಗ್ರಾಹಕರು 6 ತಿಂಗಳ ಕಾಲ ಯಾವುದೇ ದೈನಂದಿನ ರೀಚಾರ್ಜ್ ಅವಶ್ಯಕತೆಯಿಲ್ಲದೆ, ಅನಿಯಮಿತ ಕರೆ ಮತ್ತು ಪ್ರತ್ಯೇಕ ಡೇಟಾ ಸೌಲಭ್ಯವನ್ನು ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

750 ರೂ. ಪ್ರಿಪೇಯ್ಡ್ ಪ್ಲಾನ್ – ವಿಶೇಷತೆಗಳು:

ವ್ಯಾಲಿಡಿಟಿ(validity): 180 ದಿನಗಳು (6 ತಿಂಗಳು)
ಕರೆ(call): ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ
SMS: ಪ್ರತಿದಿನ 100 ಉಚಿತ SMS
ಡೇಟಾ(Data): ಒಟ್ಟು 180GB (ದಿನಕ್ಕೆ 1GB)
ಡೇಟಾ ಲಿಮಿಟ್ ಮುಗಿದ ನಂತರ: 40 kbps ವೇಗದಲ್ಲಿ ಇಂಟರ್‌ನೆಟ್ ಬಳಕೆ.
ಈ ಪ್ಲಾನ್ ವಿಶೇಷವಾಗಿ GP2 ಬಳಕೆದಾರರು – ಅಂದರೆ, ಪ್ಲಾನ್ ಮುಗಿದರೂ ಹೊಸದನ್ನು ರೀಚಾರ್ಜ್ ಮಾಡಿಕೊಳ್ಳಲು ವಿಳಂಬವಾಗಿರುವ ಗ್ರಾಹಕರಿಗೆ ವಿನ್ಯಾಸಗೊಳಿಸಲಾಗಿದೆ.

ಬಿಎಸ್‌ಎನ್‌ಎಲ್(BSNL) VS ಖಾಸಗಿ ಟೆಲಿಕಾಂ ಕಂಪನಿಗಳು:

ಬಿಎಸ್‌ಎನ್‌ಎಲ್ (BSNL) ತನ್ನ ಈ ಹೊಸ ಪ್ಲಾನ್ ಮೂಲಕ ಜಿಯೋ(Jio), ಏರ್‌ಟೆಲ್ (Airtel), ವೋಡಾಫೋನ್-ಐಡಿಯಾ (Vi) ಮುಂತಾದ ಖಾಸಗಿ ಟೆಲಿಕಾಂ ಕಂಪನಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಕಡಿಮೆ ಬೆಲೆಗೆ ದೀರ್ಘಾವಧಿಯ ವ್ಯಾಲಿಡಿಟಿ ನೀಡುವ ಮೂಲಕ, ತನ್ನ ಬಳಕೆದಾರರನ್ನು ಖಾಸಗಿ ಟೆಲಿಕಾಂಗಳ ಕಡೆಗೆ ಹೋಗದಂತೆ ತಡೆಯಲು ಬಿಎಸ್‌ಎನ್‌ಎಲ್ (BSNL) ಯತ್ನಿಸುತ್ತಿದೆ.

1 ವರ್ಷದ ಉದ್ದಗಲದ ಪ್ಲಾನ್ – 1,999 ರೂ.
ಕೇವಲ 750 ರೂ. ಪ್ಲಾನ್ ಮಾತ್ರವಲ್ಲ, 1 ವರ್ಷ ವ್ಯಾಲಿಡಿಟಿ ಹೊಂದಿರುವ 1,999 ರೂ. ಪ್ರಿಪೇಯ್ಡ್ ಪ್ಲಾನ್ (Prepaid plan) ಕೂಡ ಲಭ್ಯವಿದೆ:

ವ್ಯಾಲಿಡಿಟಿ (validity): 365 ದಿನಗಳು
ಡೇಟಾ (Data): ಒಟ್ಟು 600GB
SMS: ಪ್ರತಿದಿನ 100 ಉಚಿತ SMS
ಕರೆ(call): ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ
ಬಿಎಸ್‌ಎನ್‌ಎಲ್ 4G ಅಪ್‌ಗ್ರೇಡ್ (BSNL 4g upgrade) – ಉತ್ತಮ ಸೇವೆಗೋಸ್ಕರ ಹೆಜ್ಜೆ
ಪ್ರಸ್ತುತ, ಬಿಎಸ್‌ಎನ್‌ಎಲ್ ತನ್ನ 4G ಸೇವೆಗಳ ಅಪ್‌ಗ್ರೇಡ್‌ ಕೆಲಸವನ್ನು ವೇಗವಾಗಿ ನಡೆಸುತ್ತಿದೆ. ಈ ಅಪ್‌ಗ್ರೇಡ್ ಪೂರ್ಣಗೊಂಡರೆ, ಬಳಕೆದಾರರಿಗೆ ಉತ್ತಮ ಇಂಟರ್‌ನೆಟ್ ವೇಗ ಹಾಗೂ ಸುಧಾರಿತ ಸೇವೆ ದೊರೆಯಲಿದೆ.

ಇದು ಗ್ರಾಹಕರಿಗೆ ಲಾಭದಾಯಕವೇ?

ದೀರ್ಘಾವಧಿಯ ವ್ಯಾಲಿಡಿಟಿ ಇರುವುದರಿಂದ ಪದೇ ಪದೇ ರೀಚಾರ್ಜ್ ಮಾಡುವ ತೊಂದರೆ ಇಲ್ಲ.
ಖಾಸಗಿ ಟೆಲಿಕಾಂ ಪ್ಲಾನ್‌ಗಳಿಗಿಂತ (private telecom plans) ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ.
ಉಚಿತ ಕರೆ ಹಾಗೂ ಡೇಟಾ ಇರುವ ಕಾರಣ, ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯ.

ಕೊನೆಯದಾಗಿ ಹೇಳುವುದಾದರೆ, ಬಿಎಸ್‌ಎನ್‌ಎಲ್ (BSNL) ತನ್ನ ಆಕರ್ಷಕ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳ (New prepaid plans) ಮೂಲಕ ಗ್ರಾಹಕರಿಗೆ ಒಳ್ಳೆಯ ಆಯ್ಕೆಯನ್ನು ನೀಡುತ್ತಿದೆ. 750 ರೂ. 6 ತಿಂಗಳ ಪ್ಲಾನ್ ಮತ್ತು 1,999 ರೂ. 1 ವರ್ಷದ ಪ್ಲಾನ್, ದುಬಾರಿ ಪ್ರಿಪೇಯ್ಡ್ ರೀಚಾರ್ಜ್‌ಗಳಿಂದ ಬೇಸತ್ತಿರುವ ಬಳಕೆದಾರರಿಗೆ ಹಿತಕರವಾದ ಯೋಜನೆ. 4G ಅಪ್‌ಗ್ರೇಡ್ ಕೂಡ ನಡೆಯುತ್ತಿರುವುದರಿಂದ, ಬಿಎಸ್‌ಎನ್‌ಎಲ್ ಸೇವೆಗಳ (BSNL service) ಗುಣಮಟ್ಟ ಇನ್ನಷ್ಟು ಸುಧಾರಿಸುವ ನಿರೀಕ್ಷೆ ಇದೆ.

ಈ ಹೊಸ ಯೋಜನೆಗಳು ಗ್ರಾಹಕರನ್ನು ಸೆಳೆಯಲು, ಹಾಗೂ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸಮಾನ ತೊಡೆದು ನಿಲ್ಲಲು ಬಿಎಸ್‌ಎನ್‌ಎಲ್‌ಗೆ(BSNL) ಸಹಾಯ ಮಾಡುತ್ತದೆಯಾ? ಸಮಯವೇ ಉತ್ತರ ನೀಡಲಿದೆ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!