ಚಿನ್ನ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ – ಹೊಸ ದಾಖಲೆ ಮುಟ್ಟಿದ ದರಗಳು
ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver rate) ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡಿವೆ. 2025ರ ಮಾರ್ಚ್ 18ರಂದು, ಈ ಹಳದಿ ಲೋಹದ ಬೆಲೆಗಳು ಹೊಸ ದಾಖಲೆ ಬರೆದಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಕಳೆದ ಕೆಲವು ದಿನಗಳಲ್ಲಿ ಚಿನ್ನದ ದರವು ಸಣ್ಣ ಮಟ್ಟದಲ್ಲಿ ಕುಸಿತ ಕಂಡಿದ್ದರೂ, ಅದು ತಾತ್ಕಾಲಿಕ ಇಳಿಕೆಯಷ್ಟೇ. ಇದೀಗ ಮತ್ತೆ ಬೌಲಿಯನ್ ಮಾರುಕಟ್ಟೆಯಲ್ಲಿ (Bouillon market) ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗಿದ್ದು, ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಹೂಡಿಕೆ ಉತ್ತಮ ಎಂದು ಪರಿಗಣಿಸುತ್ತಿದ್ದಾರೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 19, 2025: Gold Price Today
ಚಿನ್ನದ ದರದಲ್ಲಿ ಏರಿಳಿತಗಳು ಸಾಮಾನ್ಯವಾಗಿ ಬಿಟ್ಟಿದೆ. ಕೆಲ ದಿನಗಳ ಕಾಲ ಚಿನ್ನದ ದರದಲ್ಲಿ ಇಳಿಕೆ ಕಂಡರೆ, ಸ್ವಲ್ಪ ದಿನ ಚಿನ್ನದ ದರದಲ್ಲಿ ಏರಿಕೆಯನ್ನು ಕಾಣುತ್ತೇವೆ. ಈ ರೀತಿಯ ದರ ವ್ಯತ್ಯಾಸದಿಂದ ಗ್ರಾಹಕರು ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸತತವಾಗಿ ಏರಿಕೆಯಾಗಿ ಬರುತ್ತಿದ್ದ ಚಿನ್ನದ ದರ(Gold rate) ಕಳೆದ ನಾಲ್ಕು ದಿನಗಳಿಂದ ಸ್ವಲ್ಪಮಟ್ಟಿನ ಇಳಿಕೆಯನ್ನು ಕಂಡಿತ್ತು. ಆದರೆ ನೆನ್ನೆ ಚಿನ್ನದ ದರದಲ್ಲಿ ದಿಡೀರ್ ಏರಿಕೆ ಕಂಡಿದ್ದು ಗ್ರಾಹಕರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹಾಗಿದ್ದರೆ, ಮಾರ್ಚ್ 19, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 251 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,001 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,751ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,04,100 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 42ರೂ. ಏರಿಕೆಯನ್ನು ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿಯೂ ಒಂದೇ ದಿನಕ್ಕೆ 1300 ರೂ.ನಷ್ಟು ಏರಿಕೆಯನ್ನು ನೋಡಬಹುದು.
ಚಿನ್ನದ ಬೆಲೆಯಲ್ಲಿ ಏರಿಕೆಯ ಪ್ರಮುಖ ಕಾರಣಗಳಲ್ಲಿ ಒಂದು ಅಂತರರಾಷ್ಟ್ರೀಯ ಮಾರುಕಟ್ಟೆ (International market) ಯಲ್ಲಿನ ಅನಿಶ್ಚಿತತೆ ಮತ್ತು ಆರ್ಥಿಕ ಅಸ್ಥಿರತೆ. ಅಮೆರಿಕದಲ್ಲಿ ಬಡ್ಡಿದರ ನೀತಿಯ ಪರಿಣಾಮ, ಬಂಡವಾಳ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿಸುತ್ತಿದ್ದಾರೆ. ಇದಲ್ಲದೇ, ಭಾರತದ ಮಾರುಕಟ್ಟೆಯಲ್ಲಿ ವರಮಾನ ಹೆಚ್ಚಿದಂತೆ ಆಭರಣ ಖರೀದಿಗೆ ಡಿಮ್ಯಾಂಡ್ ಹೆಚ್ಚಾಗಿರುವುದೂ ಬೆಲೆಯನ್ನು ಪ್ರೇರೇಪಿಸುತ್ತಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೇರಿಕಾ, ದುಬೈ, ಸಿಂಗಾಪುರ, ಮಲೇಷ್ಯಾ ಮುಂತಾದ ರಾಷ್ಟ್ರಗಳಲ್ಲೂ ಚಿನ್ನದ ಬೆಲೆ ಏರಿಕೆ ಕಂಡುಬಂದಿದೆ. ಭಾರತದಲ್ಲಿ ಮತ್ತು ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 24 ಕ್ಯಾರಟ್ ಶುದ್ಧತೆಯ ಚಿನ್ನಕ್ಕೆ 10 ಗ್ರಾಂಗೆ ₹90,000 ಆಗಿದ್ದು, 22 ಕ್ಯಾರಟ್ ಚಿನ್ನದ ಬೆಲೆ ₹82,500 ಆಗಿದೆ. ಬೆಳ್ಳಿಯ ದರವು ಸಹ ದಾಖಲೆ ಮಟ್ಟ (Record level) ತಲುಪಿದ್ದು, 100 ಗ್ರಾಂ ಬೆಳ್ಳಿಯ ಬೆಲೆ ₹10,400 ರೂಪಾಯಿಯಾಗಿದೆ.
2025 ಮಾರ್ಚ್ 18ರಂದು ಭಾರತದಲ್ಲಿ ಚಿನ್ನದ ಹಾಗೂ ಬೆಳ್ಳಿಯ ದರ ಹೀಗಿದೆ?:
22 ಕ್ಯಾರಟ್ 10 ಗ್ರಾಂ ಚಿನ್ನ – ₹82,500
24 ಕ್ಯಾರಟ್ 10 ಗ್ರಾಂ ಚಿನ್ನ – ₹90,000
18 ಕ್ಯಾರಟ್ 10 ಗ್ರಾಂ ಚಿನ್ನ – ₹67,500
ಇನ್ನು ಬೆಳ್ಳಿ ದರ ನೋಡುವುದಾದರೆ:
10 ಗ್ರಾಂ ಬೆಳ್ಳಿ – ₹1,040
100 ಗ್ರಾಂ ಬೆಳ್ಳಿ – ₹10,400
ಬೆಂಗಳೂರು ಹಾಗೂ ಇತರ ನಗರಗಳ 10 ಗ್ರಾಂ 22 ಕ್ಯಾರಟ್ ಚಿನ್ನ ದರ ಹೀಗಿದೆ:
ಬೆಂಗಳೂರು – ₹82,500
ಚೆನ್ನೈ – ₹82,500
ಮುಂಬೈ – ₹82,500
ದೆಹಲಿ – ₹82,650
ಕೋಲ್ಕತ್ತಾ – ₹82,500
ಕೇರಳ – ₹82,500
ಅಹ್ಮದಾಬಾದ್ – ₹82,550
ಜೈಪುರ್ – ₹82,650
ಲಕ್ನೋ – ₹82,650
ಭುವನೇಶ್ವರ್ – ₹82,500
ಬೆಂಗಳೂರು ಹಾಗೂ ಇತರ ನಗರಗಳ 100 ಗ್ರಾಂ ಬೆಳ್ಳಿಯ ದರ ಹೀಗಿದೆ:
ಬೆಂಗಳೂರು – ₹10,400
ಚೆನ್ನೈ – ₹11,300
ಮುಂಬೈ – ₹10,400
ದೆಹಲಿ – ₹10,400
ಕೋಲ್ಕತ್ತಾ – ₹10,400
ಕೇರಳ – ₹11,300
ಅಹ್ಮದಾಬಾದ್ – ₹10,400
ಜೈಪುರ್ – ₹10,400
ಲಕ್ನೋ – ₹10,400
ಭುವನೇಶ್ವರ್ – ₹11,300
ಪುಣೆ – ₹10,400
ವಿದೇಶಿ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ):
ಮಲೇಷ್ಯಾ – 4,220 ರಿಂಗಿಟ್ (₹82,340)
ದುಬೈ – 3,350 ಡಿರಾಮ್ (₹79,100)
ಅಮೆರಿಕಾ – 910 ಡಾಲರ್ (₹78,920)
ಸಿಂಗಾಪುರ – 1,243 ಸಿಂಗಾಪುರ್ ಡಾಲರ್ (₹80,910)
ಕತಾರ್ – 3,380 ಕತಾರಿ ರಿಯಾಲ್ (₹80,410)
ಸೌದಿ ಅರೇಬಿಯಾ – 3,420 ಸೌದಿ ರಿಯಾಲ್ (₹79,080)
ಓಮನ್ – 355 ಒಮಾನಿ ರಿಯಾಲ್ (₹79,970)
ಕುವೇತ್ – 274 ಕುವೇತಿ ದಿನಾರ್ (₹77,140)
ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು?:
ಇತ್ತೀಚಿನ ದಿನಗಳಲ್ಲಿ ಬೌಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಹೆಚ್ಚಳಕ್ಕೆ ಹಲವಾರು ಅಂಶಗಳು ಕಾರಣವಾಗಿವೆ. ವಿಶ್ವದ ಅರ್ಥವ್ಯವಸ್ಥೆಯಲ್ಲಿ ಎದುರಾಗುತ್ತಿರುವ ಅನಿಶ್ಚಿತತೆ, ಡಾಲರ್ ಮೌಲ್ಯದಲ್ಲಿ ಬದಲಾವಣೆ, ಜಿಯೋಪಾಲಿಟಿಕಲ್ ಮತ್ತು ಹೂಡಿಕೆದಾರರ ಸುರಕ್ಷಿತ ಹೂಡಿಕೆಯ ಲೆಕ್ಕಾಚಾರವೇ ಮುಖ್ಯ ಕಾರಣಗಳಾಗಿವೆ.
ಕೇಂದ್ರ ಬ್ಯಾಂಕುಗಳು (Central banks) ತಮ್ಮ ಹೂಡಿಕೆಗಳನ್ನು ಚಿನ್ನದಲ್ಲಿ ಹೆಚ್ಚಿಸುತ್ತಿರುವುದು ಸಹ ಬೆಲೆ ಏರಿಕೆಗೆ ಕಾರಣವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಮದುವೆ ಮತ್ತು ಹಬ್ಬಗಳ ಸೀಸನ್ ಆರಂಭವಾಗಿರುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಇತರ ಬೆಲೆವರ್ಧಿತ ಲೋಹಗಳಂತೆ ಬೆಳ್ಳಿಯೂ ಕೂಡ ಕೈಗಾರಿಕಾ ಬಳಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಅದರ ಬೇಡಿಕೆಯಿಂದ ಬೆಲೆ ಏರಿಕೆಯಾಗಿದೆ.
ಚಿನ್ನ ಖರೀದಿಸುವ ಮೊದಲು ಗಮನಿಸಬೇಕಾದ ಅಂಶಗಳು(Elements) ಯಾವುವು?:
ವಿವಿಧ ಜಾಗಗಳಲ್ಲಿ ಚಿನ್ನದ ದರದ ವ್ಯತ್ಯಾಸವಿರುವುದರಿಂದ ಸರಿಯಾದ ಜಾಗದಲ್ಲಿ ಖರೀದಿ ಮಾಡುವುದು ಉತ್ತಮ.
ಜವಳಿ ಅಂಗಡಿಗಳು ಹಾಗೂ ಬ್ಯಾಂಕುಗಳಿಂದ ಚಿನ್ನ ಖರೀದಿಸುವಾಗ ಮೇಕಿಂಗ್ ಚಾರ್ಜ್ (Making charge) ಮತ್ತು ಜಿಎಸ್‌ಟಿ (GST) ಗಮನಿಸಿ ಚಿನ್ನ ಖರೀದಿಸಿ.
ಅಂಗಡಿಯಲ್ಲಿ ಚಿನ್ನ ಖರೀದಿಸುವ ಮುನ್ನ ಪ್ರಸ್ತುತ ದರವನ್ನು ಖಚಿತಪಡಿಸಿಕೊಂಡು ಹೋಲಿಕೆ ಮಾಡಿ ಚಿನ್ನ ಖರೀದಿಸಿ.
ಚಿನ್ನದ ದರದಲ್ಲಿ ಏರಿಕೆ ಹೂಡಿಕೆದಾರರಿಗೆ ಸುವರ್ಣಾವಕಾಶ:
ಚಿನ್ನ ಮತ್ತು ಬೆಳ್ಳಿ ಬೆಲೆ ಇನ್ನಷ್ಟು ಏರಿಕೆ ಕಾಣಬಹುದೆಂದು ತಜ್ಞರು (Specialist) ಊಹಿಸುತ್ತಿದ್ದಾರೆ. ಹೀಗಾಗಿ, ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಗೆ ಚಿನ್ನವನ್ನು ಪರಿಗಣಿಸಬಹುದು. ಇತ್ತೀಚಿನ ದಿನಗಳಲ್ಲಿ ಆಭರಣ ಚಿನ್ನಕ್ಕಿಂತ ಬಾರ್ ಚಿನ್ನ ಮತ್ತು ನಾಣ್ಯಗಳ ಖರೀದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ನಮ್ಮ ದೇಶದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಸದಾ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತಿದ್ದು, ಮಾರುಕಟ್ಟೆಯಲ್ಲಿ(market) ದರ ಎತ್ತರಕ್ಕೆ ಸಾಗಿದರೂ ಅದನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗದು. ಹೀಗಾಗಿ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಯಾವ ಹಾದಿ ಹಿಡಿಯುತ್ತದೆ ಎಂಬುದನ್ನು ಗಮನಿಸುವುದು ಆರ್ಥಿಕ ಹೂಡಿಕೆದಾರರ ಪಾಲಿಗೆ ಅಗತ್ಯವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.