₹7 ಲಕ್ಷ ಹೂಡಿಕೆ ಮಾಡಿ, 30 ವರ್ಷಗಳ ಕಾಲ ಪ್ರತಿ ತಿಂಗಳು ₹1.22 ಲಕ್ಷ ಪಡೆಯಲು ಹೊಸ ಮಾರ್ಗ!
ನಿವೃತ್ತಿ (Retirement) ಎಂದರೆ ಜೀವನದ ಹೊಸ ಅಧ್ಯಾಯ. ಆದಾಯದ ಮೂಲಗಳು ಕಡಿಮೆಯಾಗುವ ಈ ಹಂತದಲ್ಲಿ, ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ಪ್ರಮುಖ. ನಿವೃತ್ತಿಯ ನಂತರವೂ ನಿರಾಳ ಜೀವನ ನಡೆಸಲು, ಸರಿಯಾದ ಹೂಡಿಕೆ ಯೋಜನೆ ಅಗತ್ಯ. ಆದರೆ, ಬಹಳಷ್ಟು ಜನರು ನಿವೃತ್ತಿ ಜೀವನದ ಆರ್ಥಿಕ (Economic) ಯೋಜನೆಗೆ ಬೇಕಾದ ತಯಾರಿಯನ್ನು ಮಾಡದೆ, ತಕ್ಷಣದ ಅಗತ್ಯಗಳಿಗೆ ಆದ್ಯತೆ ನೀಡುತ್ತಾರೆ. ಇದರಿಂದ ನಿವೃತ್ತಿಯ ನಂತರ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಇಂದು ನಾವು ನಿವೃತ್ತಿಯ ಯೋಜನೆ ಹೇಗೆ ರೂಪಿಸಬೇಕು? ಕಡಿಮೆ ಹೂಡಿಕೆ (Low investment) ಮಾಡಿಯೂ ಹೆಚ್ಚು ಲಾಭ ಪಡೆಯುವ ದಾರಿ ಯಾವುದು? ರೂ 7 ಲಕ್ಷ ಹೂಡಿಕೆ ಮಾಡಿದರೆ 30 ವರ್ಷಗಳವರೆಗೆ ಪ್ರತಿ ತಿಂಗಳು ರೂ 1.22 ಲಕ್ಷ ಲಾಭ ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನೀವೇನೇ ಕೆಲಸ ಮಾಡುತ್ತಿದ್ದರೂ, ನಿವೃತ್ತಿ ಜೀವನವನ್ನು ಸುರಕ್ಷಿತವಾಗಿಸಲು ಸೂಕ್ತ ಯೋಜನೆ ಅಗತ್ಯ. ನಿವೃತ್ತಿ ನಂತರದ ಆರ್ಥಿಕ ಭದ್ರತೆ ಮತ್ತು ಹಿತಕರ ಜೀವನಕ್ಕೆ ನಿವೃತ್ತಿ ಕಾರ್ಪಸ್ (Retirement Corpus) ಅತ್ಯವಶ್ಯಕ. ಸರಿಯಾದ ಹೂಡಿಕೆ ಮತ್ತು ಆರ್ಥಿಕ ಯೋಜನೆಗಳ ಮೂಲಕ ನಿರಾಳ ನಿವೃತ್ತಿ ಜೀವನ ಸಾಗಿಸಬಹುದು.
ನಿವೃತ್ತಿ ಕಾರ್ಪಸ್‌ನ ಪ್ರಾಮುಖ್ಯತೆ ಏನು?:
ನಿವೃತ್ತಿ ಕಾರ್ಪಸ್ (Retirement Corpus) ಎಂದರೆ ನಿವೃತ್ತಿಯ ನಂತರ ಖರ್ಚುಗಳಿಗಾಗಿ ಹೂಡಿಕೆ ಮಾಡಿದ ಒಟ್ಟು ಮೊತ್ತ. ಪಿಂಚಣಿ (Pension) ಯೋಜನೆಗಳಿಲ್ಲದವರಿಗೆ ನಿವೃತ್ತಿ ಕಾರ್ಪಸ್ ಆದಾಯದ ಪ್ರಮುಖ ಮೂಲವಾಗಬಹುದು. ಸರಿಯಾದ ನಿವೃತ್ತಿ ಯೋಜನೆಯಿಲ್ಲದಿದ್ದರೆ, ಆರ್ಥಿಕ ಹಿಂಜರಿತ ಎದುರಾಗಬಹುದು.
ನಿವೃತ್ತಿ ಕಾರ್ಪಸ್ ಅಗತ್ಯ ಏಕೆ?:
ನಿವೃತ್ತಿ ನಂತರವೂ ಮಾಸಿಕ ಖರ್ಚುಗಳು (Monthly charge’s) ಮುಂದುವರಿಯುತ್ತವೆ. ಆರೋಗ್ಯ ಸೇವೆ, ದಿನನಿತ್ಯದ ಖರ್ಚುಗಳು, ಪ್ರವಾಸ, ಮಕ್ಕಳ ಸಹಾಯ – ಎಲ್ಲವೂ ಆರ್ಥಿಕ ವ್ಯವಸ್ಥೆಗಾಗಿ ಅವಲಂಬಿತವಾಗಿರುತ್ತದೆ.
ಹಾಗಾಗಿ, ನಿವೃತ್ತಿ ಕಾರ್ಪಸ್ (Retirement Corpus) ಎಂಬ ನಿಧಿ ಅವಶ್ಯಕವಾಗಿರುತ್ತದೆ. ಇನ್ನು, ಇದರಿಂದ ಉದ್ಯೋಗಾವಧಿಯಲ್ಲಿ ಸಕ್ರಿಯ ಹೂಡಿಕೆಗಳ ಮೂಲಕ ನಿವೃತ್ತಿಯ ಆರ್ಥಿಕ ಭದ್ರತೆ ಖಚಿತಪಡಿಸಬಹುದು.
ನಿವೃತ್ತಿ ಕಾರ್ಪಸ್ ಎಷ್ಟು ಇರಬೇಕು?:
ಎಷ್ಟು ಬೇಗ ನಿವೃತ್ತಿ ಯೋಚನೆ ಮಾಡುತ್ತೀರೋ ಅಷ್ಟು ಹೆಚ್ಚಿನ ಕಾರ್ಪಸ್ ಬೇಕಾಗಬಹುದು.
ನಿಮ್ಮ ನಿರೀಕ್ಷಿತ ಜೀವನಾವಧಿ: ಉದಾಹರಣೆಗೆ, 60 ವರ್ಷಕ್ಕೆ ನಿವೃತ್ತಿಯಾದ ವ್ಯಕ್ತಿ 85 ವರ್ಷ ಬದುಕಲು ನಿರೀಕ್ಷೆ ಇಟ್ಟರೆ, 25 ವರ್ಷಗಳ ತನಕ ಆದಾಯದ ಮೂಲ ಬೇಕಾಗಬಹುದು.
ಇನ್ನು, ನಿವೃತ್ತಿಯ ನಂತರ ನಿಮ್ಮ ಮಾಸಿಕ ಖರ್ಚು ಎಷ್ಟು ಇರಬಹುದು ಎಂಬ ಲೆಕ್ಕಾಚಾರ ಮಾಡಬೇಕು.
ಒಂದೊಳ್ಳೆಯ ನಿಯಮವೇನು ಎಂದರೆ, ನಿಮ್ಮ ನಿವೃತ್ತಿಯ ಸಮಯದಲ್ಲಿ ವಾರ್ಷಿಕ ವೆಚ್ಚದ 25-30 ಪಟ್ಟು ಮೊತ್ತ ನಿವೃತ್ತಿ ಕಾರ್ಪಸ್ ಆಗಿರಬೇಕು. ಉದಾಹರಣೆಗೆ, ನಿಮ್ಮ ವಾರ್ಷಿಕ ಖರ್ಚು ₹6 ಲಕ್ಷವಿದ್ದರೆ, ನಿಮಗೆ ಕನಿಷ್ಠ ₹1.5 ಕೋಟಿಯ ಕಾರ್ಪಸ್ ಅಗತ್ಯವಿರಬಹುದು.
ನಿವೃತ್ತಿ ಕಾರ್ಪಸ್ ಹೇಗೆ ನಿರ್ಮಿಸಬಹುದು?:
ನೀವು ವಿವಿಧ ಹೂಡಿಕೆಗಳ ಮೂಲಕ ನಿವೃತ್ತಿ ನಿಧಿ ಕಟ್ಟಬಹುದು:
1. ಮ್ಯೂಚುವಲ್ ಫಂಡ್(Mutual fund):
ದೀರ್ಘಕಾಲಿಕ ಪ್ರಗತಿಗಾಗಿ ಉತ್ತಮ ಆಯ್ಕೆ. ಶೇಕಡಾ 10-12% ವೃದ್ಧಿ ತಂದುಕೊಡಬಹುದು.
2. ಸ್ಟಾಕ್ ಮಾರುಕಟ್ಟೆ(Stock market):
ಉತ್ಕೃಷ್ಟ ಲಾಭ ನೀಡಬಲ್ಲ ಹೂಡಿಕೆ, ಆದರೆ ಮಾರುಕಟ್ಟೆ ಅಪಾಯಗಳನ್ನು ಹೊಂದಿರುತ್ತದೆ.
3. ಬ್ಯಾಂಕ್ ಠೇವಣಿ (Fixed Deposits):
ಭದ್ರತೆ ನೀಡುವ ಹೂಡಿಕೆ, ಆದರೆ ಲಾಭ ಕಡಿಮೆ.
4. ರಿಯಲ್ ಎಸ್ಟೇಟ್ (Real Estate):
ಆಸ್ತಿ ಹೂಡಿಕೆ ಸಹ ನಿವೃತ್ತಿ ಆದಾಯಕ್ಕೆ ಸಹಾಯ ಮಾಡಬಹುದು.
ನಿವೃತ್ತಿ ಯೋಜನೆಗೆ ಸರಿಯಾದ ವಯಸ್ಸು (Age) ಯಾವುದು?:
ನೀವು ನಿವೃತ್ತಿ ಕಾರ್ಪಸ್ ಕಟ್ಟಲು ಎಷ್ಟು ಬೇಗ ಹೂಡಿಕೆ ಪ್ರಾರಂಭಿಸುತ್ತೀರೋ ಅಷ್ಟು ಲಾಭ. ಈ ಕೆಳಗಿನ ಹೂಡಿಕೆ ಮಾದರಿಯಲ್ಲಿ ₹5 ಕೋಟಿಯ ನಿವೃತ್ತಿ ಕಾರ್ಪಸ್ ಪಡೆಯಲು ಎಷ್ಟು ಹೂಡಿಕೆ ಅಗತ್ಯ ಎಂಬುದನ್ನು ನೋಡೋಣ.
ವಯಸ್ಸು 25 ವರ್ಷ : ಮಾಸಿಕ SIP ಹೂಡಿಕೆ ರೂ 9,100 (ಒಟ್ಟಾರೆ ಹೂಡಿಕೆ: ರೂ 38,22,000).
ವಯಸ್ಸು 30 ವರ್ಷ : ಮಾಸಿಕ SIP ಹೂಡಿಕೆ ರೂ 16,230 (ಒಟ್ಟಾರೆ ಹೂಡಿಕೆ: ರೂ 58,42,800).
ವಯಸ್ಸು 35 ವರ್ಷ : ಮಾಸಿಕ SIP ಹೂಡಿಕೆ ರೂ 29,380 (ಒಟ್ಟಾರೆ ಹೂಡಿಕೆ: 0 88,14,000).
ವಯಸ್ಸು 40 ವರ್ಷ : ಮಾಸಿಕ SIP ಹೂಡಿಕೆ ರೂ 54,440 (ಒಟ್ಟಾರೆ ಹೂಡಿಕೆ: ರೂ 1,30,56,000).
25ನೇ ವಯಸ್ಸಿಗೆ ಹೂಡಿಕೆ ಪ್ರಾರಂಭಿಸಿದರೆ ಕಡಿಮೆ ಮೊತ್ತವೇ ಸಾಕಾಗುತ್ತದೆ. ಆದ್ದರಿಂದ, ಬೇಗ ಆರಂಭಿಸುವುದು ಸೂಕ್ತ.
7 ಲಕ್ಷ ರೂ.ಹೂಡಿಕೆ ಮಾಡಿದರೆ, 30 ವರ್ಷಗಳವರೆಗೆ ಪ್ರತಿ ತಿಂಗಳು ರೂ 1,22,000 ಪಡೆಯಬಹುದೇ?:
ನಾವು ₹7,00,000 ಹೂಡಿಕೆ ಮಾಡಿದರೆ 30 ವರ್ಷಗಳ ನಂತರ ನಾವು ಎಷ್ಟು ಸಂಪತ್ತು ಪಡೆಯಬಹುದು ಎಂಬುದನ್ನು ನೋಡೋಣ.
ಈ ಲೆಕ್ಕಾಚಾರಕ್ಕೆ, ಮ್ಯೂಚುವಲ್ ಫಂಡ್ (Mutual Funds) ಮತ್ತು ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ (SWP – Systematic Withdrawal Plan) ಉಯುಕ್ತವಾಗುತ್ತದೆ.
ಹೂಡಿಕೆಯ ಲೆಕ್ಕಾಚಾರ ಕೆಳಗಿನಂತಿದೆ:
ಪ್ರಾರಂಭಿಕ ಹೂಡಿಕೆ: ರೂ 7,00,000
ಅಂದಾಜು ವಾರ್ಷಿಕ ಶೇಕಡಾ 12% ಲಾಭ
30 ವರ್ಷಗಳ ನಂತರ ಒಟ್ಟು ನಿವೃತ್ತಿ ಕಾರ್ಪಸ್: ರೂ 2,09,71,945
12.5% ಆದಾಯ ತೆರಿಗೆ ಬಳಿಕ: ರೂ 1,84,53,576
ನಿವೃತ್ತಿಯ ನಂತರ ಶೇಕಡಾ 7% ಲಾಭದೊಂದಿಗೆ ಹಿಂಪಡೆಯುವ ಮೊತ್ತ: ರೂ 1,22,000 (ಮಾಸಿಕ)
ಒಟ್ಟು ಹಿಂಪಡೆಯಲಾದ ಮೊತ್ತ: ರೂ 4,39,20,000
ಉಳಿದ ಕಾರ್ಪಸ್: ರೂ 73,736
SWP ಯೋಜನೆಯ ಮಾಸಿಕ ಆದಾಯ ಹೇಗೆ ಲಭ್ಯ?:
ನಿವೃತ್ತಿ ಕಾರ್ಪಸ್ (₹1.84 ಕೋಟಿ) ಅನ್ನು SWP (Systematic Withdrawal Plan) ಮೂಲಕ ಪ್ರತಿ ತಿಂಗಳು ₹1,22,000 ಪಡೆದುಕೊಳ್ಳಬಹುದು.
7% ಲಾಭ ದರದಲ್ಲಿ ನಿರಂತರ ಹೂಡಿಕೆ ಮಾಡಿದರೆ, ನಿವೃತ್ತಿ ಬಳಿಕ 30 ವರ್ಷಗಳವರೆಗೆ ಪ್ರತಿ ತಿಂಗಳು ₹1.22 ಲಕ್ಷ ಪಡೆಯಬಹುದು.
ಒಟ್ಟು ಹಿಂತೆಗೆದುಕೊಳ್ಳುವ ಮೊತ್ತ: ₹4,39,20,000
ಉಳಿದ ಕಾರ್ಪಸ್: ₹73,736
ನಿವೃತ್ತಿ ಯೋಜನೆ ರೂಪಿಸುವಾಗ ಪರಿಗಣಿಸಬೇಕಾದ ಅಂಶಗಳು (Elements) ಯಾವುವು?:
ಮಾರುಕಟ್ಟೆ ಅಪಾಯ:
ನೇರವಾಗಿ ಷೇರುಮಾರುಕಟ್ಟೆಗೆ ಹೂಡಿಕೆ ಮಾಡುವುದು ಅಪಾಯಕಾರಿಯಾಗಬಹುದು.
ತೆರಿಗೆ ಪರಿಣಾಮ:
ತೆರಿಗೆ ಕಡಿತ ಯೋಜನೆಗಳು ಉತ್ತಮ ಆಯ್ಕೆಯಾಗುತ್ತವೆ.
ಆರೋಗ್ಯ ವೆಚ್ಚಗಳು:
ನಿವೃತ್ತಿಯ ನಂತರ ಆರೋಗ್ಯ ಸೇವೆಗಾಗಿ (Health service) ಪ್ರತ್ಯೇಕ ನಿಧಿ ಇರಿಸಿಕೊಳ್ಳುವುದು ಮುಖ್ಯ.
ಆದರೆ, ಎಲ್ಲಾ ಹಣವನ್ನು ಒಂದು ಹೂಡಿಕೆಯಲ್ಲಿ ಇಡುವುದು ತಪ್ಪು.
₹7 ಲಕ್ಷ ಹೂಡಿಕೆ ಮಾಡಿ, 30 ವರ್ಷಗಳ ಕಾಲ ಪ್ರತಿ ತಿಂಗಳು ₹1.22 ಲಕ್ಷ ಗಳಿಸಲು ಶೇಕಡಾ 12% ವೃದ್ಧಿ ಮತ್ತು ಶೇಕಡಾ 7% ಹಿಂತೆಗೆದುಕೊಳ್ಳುವ ದರ ಬಳಸಬಹುದು. ಆದರೆ, ಮಾರುಕಟ್ಟೆ ಸ್ಥಿತಿ, ತೆರಿಗೆ ಮತ್ತು ದೀರ್ಘಕಾಲಿಕ ಯೋಜನೆಗಳು ಸೂಕ್ತವಾಗಿರಬೇಕು.
ನಿವೃತ್ತಿ ಜೀವನದ ಆರ್ಥಿಕ ಭದ್ರತೆಗೆ (Economic safety) ತೀರ್ವ ಯೋಜನೆ, ಸೂಕ್ತ ಹೂಡಿಕೆ ಮತ್ತು ನಿಯಂತ್ರಿತ ಹಿಂತೆಗೆದುಕೊಳ್ಳುವ ಕ್ರಮ ಅತ್ಯಗತ್ಯ. ಹೀಗಾಗಿ, ತಡ ಮಾಡದೆ, ನಿವೃತ್ತಿ ಯೋಜನೆ ಪ್ರಾರಂಭಿಸಿ, ನಿರಾಳ ಜೀವನ ಅನುಭವಿಸಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.