ರೀಲ್ಸ್ ಕೇಸ್‌ಗೆ ಇಂದು ಮೆಗಾ ಟ್ವಿಸ್ಟ್! ವಿನಯ್ ಗೌಡ & ರಜತ್‌ಗೆ ಮತ್ತೊಂದು ಸಂಕಷ್ಟ?
ಪೊಲೀಸರಿಗೆ ಫೈಬರ್ ಮಚ್ಚು ಕೊಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಾ?
ಪೊಲೀಸ್ ತನಿಖೆಯಲ್ಲಿ ಸಿಕ್ಕಿಬಿದ್ದಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್, ಪ್ರಸ್ತುತ ರಜತ್ ಜೈಲುಪಾಲು ಆಗಿದ್ದಾರೆ. ಇಂದು ಮತ್ತೆ ನ್ಯಾಯಾಲಯದಲ್ಲಿ ಹಾಜರಾಗಲಿರುವ ಇವರ ಕೇಸ್‌ಗೆ ಹೊಸ ತಿರುವು ಸಿಗಬಹುದು.ರಜತ್ ಕೈಯಲ್ಲಿ ತುಕ್ಕು ಹಿಡಿದ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರೆ, ವಿನಯ್ ಗೌಡ ಅವರಿಗೆ ಮತ್ತೊಂದು ಷಾಕ್ ಎದುರಾಗಬಹುದು. ಪೊಲೀಸರು ಅಸಲಿ ಮಚ್ಚು ಸಲ್ಲಿಸುವಂತೆ ಕೇಳಿದ್ದರೂ, ಫೈಬರ್ ಮಚ್ಚು ನೀಡಿ ತನಿಖೆಯ ದಿಕ್ಕನ್ನೇ ಬದಲಾಯಿಸಲು ಪ್ರಯತ್ನಿಸಿರುವ ಆರೋಪವಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದು ನ್ಯಾಯಾಲಯದಲ್ಲಿ ನಿರ್ಣಾಯಕ ಹಂತ
ನಿನ್ನೆ 24ನೇ ಎಸಿಜೆಎಂ ನ್ಯಾಯಾಧೀಶರು ವಿನಯ್ ಮತ್ತು ರಜತ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಇಂದು ಪೊಲೀಸರು ಅವರನ್ನು ಮತ್ತೆ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ಬಸವೇಶ್ವರನಗರ ಪೊಲೀಸರು ಇಬ್ಬರನ್ನೂ ಒಂದು ವಾರದ ಕಸ್ಟಡಿಗೆ ಕೊಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ.
ಜೊತೆಗೆ, ವಿನಯ್ ಗೌಡರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದೇ ಅದರ ವಿಚಾರಣೆ ನಡೆಯಬಹುದು.
ಹುಲಿ ಉಗುರು ಪೆಂಡೆಂಟ್‌ನಿಂದ ಹೊಸ ಸಮಸ್ಯೆ?
ರೀಲ್ಸ್ ವೀಡಿಯೊದಲ್ಲಿ ವಿನಯ್ ಗೌಡ ಹುಲಿ ಉಗುರು ಆಕಾರದ ಪೆಂಡೆಂಟ್ ಧರಿಸಿದ್ದರಿಂದ ಇನ್ನೂ ಒಂದು ಕೇಸ್ ಉದ್ಭವಿಸಬಹುದು. ಇದು ನಿಜವಾದ ಹುಲಿ ಉಗುರಿನ್ದ ಮಾಡಿದ್ದೇ ಅಥವಾ ನಕಲಿಯೇ ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ. ಅಸಲಿ ಹುಲಿ ಉಗುರಾದರೆ, ಅರಣ್ಯ ಇಲಾಖೆಯೂ ತನಿಖೆಗೆ ಧುಮುಕಬಹುದು!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.