8ನೇ ವೇತನ ಆಯೋಗದಿಂದ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್, ವೇತನ ಹೆಚ್ಚಳ ನಿರೀಕ್ಷೆ.!

Picsart 25 03 26 00 17 43 3001

WhatsApp Group Telegram Group

8ನೇ ವೇತನ ಆಯೋಗ : ಶಿಕ್ಷಕರ ವೇತನ ಪರಿಷ್ಕರಣೆಯಿಂದ ಶಿಕ್ಷಕರಿಗೆ ಶೇಕಡಾ 20-30% ಸಂಬಳ ಹೆಚ್ಚಳದ ನಿರೀಕ್ಷೆ!

ಶಿಕ್ಷಕರು (Teachers) ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅವರ ಶ್ರಮಕ್ಕೆ ಮಾನ್ಯತೆ ನೀಡುವ ಸಲುವಾಗಿ, ಸರ್ಕಾರಗಳು ನಿಯಮಿತವಾಗಿ ವೇತನ ಆಯೋಗಗಳನ್ನು ರಚಿಸುತ್ತವೆ. ಪ್ರಸ್ತುತ, 8ನೇ ವೇತನ ಆಯೋಗದ (8th pay commission) ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದು ಶಿಕ್ಷಕರ ವೇತನದಲ್ಲಿ ಮಹತ್ವದ ಹೆಚ್ಚಳ ತರಲಿದೆ ಎಂಬ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಶಿಕ್ಷಕರು ಯಾವುದೇ ದೇಶದ ಭವಿಷ್ಯದ ಪ್ರಜೆಗಳನ್ನು (Future citizens) ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ, ಸಮಾಜದ ನಾಂದಿ ಕಾರಾಗುತ್ತಾರೆ. ಉತ್ತಮ ಶಿಕ್ಷಣ ವ್ಯವಸ್ಥೆ ಇಲ್ಲದೆ ಯಾವುದೇ ರಾಷ್ಟ್ರವು ಪ್ರಗತಿಯ ಹೆಜ್ಜೆ ಇಡಲು ಸಾಧ್ಯವಿಲ್ಲ. ಹೀಗಾಗಿ, ಶಿಕ್ಷಕರ ಆರ್ಥಿಕ ಸ್ಥಿರತೆ (Teachers economic stability) ಮತ್ತು ಒಲವು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾಲಕಾಲಕ್ಕೆ ಅವರ ವೇತನ ಪರಿಷ್ಕರಣೆ ಮಾಡುತ್ತವೆ. ಈ ಹಿನ್ನೆಲೆ, 8ನೇ ವೇತನ ಆಯೋಗದ ಶಿಫಾರಸ್ಸಿನಿಂದ ದೇಶದ ಸಾವಿರಾರು ಶಿಕ್ಷಕರಿಗೆ ಭರ್ಜರಿ ಸಂಬಳ (Salary) ಹೆಚ್ಚಳದ ಸಿಹಿಸುದ್ದಿ ಹೊರಬಿದ್ದಿದೆ. ಒಂದು ವೇಳೆ ಸಂಬಳ ಹೆಚ್ಚಾದರೆ ಎಷ್ಟು ಹೆಚ್ಚಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಏಕೆ 8ನೇ ವೇತನ ಆಯೋಗ ಮಹತ್ವದ್ದಾಗಿದೆ?:

ಸಾಮಾನ್ಯವಾಗಿ, ಪ್ರತಿ 10 ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ (Central government) ವೇತನ ಆಯೋಗವನ್ನು ರಚಿಸಿ ಸರ್ಕಾರಿ ನೌಕರರು ಹಾಗೂ ಅಂಕಿತ ಸಂಸ್ತೆಗಳ ಉದ್ಯೋಗಿಗಳ ವೇತನ ಪರಿಷ್ಕರಣೆ ಮಾಡುತ್ತದೆ. 7ನೇ ವೇತನ ಆಯೋಗದ ಶಿಫಾರಸುಗಳು 2016ರಲ್ಲಿ ಜಾರಿಗೆ ಬಂದಿದ್ದು, ಇದುವರೆಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳೇ (The recommendations of the 7th Pay Commission) ಜಾರಿಯಲ್ಲಿದ್ದು, ಹೊಸ 8ನೇ ವೇತನ ಆಯೋಗದಿಂದ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಹಾಗೂ ಸೂಪರ್ ಟೈಮ್ ಸ್ಕೆಲ್ ಪ್ರಾಧ್ಯಾಪಕರು ತಮ್ಮ ವೇತನದಲ್ಲಿ 20% ರಿಂದ 30% ವರೆಗೆ ಹೆಚ್ಚಳ ಪಡೆಯುವ ನಿರೀಕ್ಷೆಯಿದೆ.

ಶಿಕ್ಷಕರ ವೇತನದಲ್ಲಿ ನಿರೀಕ್ಷಿತ ಹೆಚ್ಚಳ:

8ನೇ ವೇತನ ಆಯೋಗದ ಜಾರಿಗೆ ನಂತರ, ಶಿಕ್ಷಕರ ವೇತನ ಶ್ರೇಣಿಯಲ್ಲಿ ಶೇಕಡಾ 20 ರಿಂದ 30 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಉದಾಹರಣೆಗೆ:

ಸಹಾಯಕ ಪ್ರಾಧ್ಯಾಪಕರು:
ಪ್ರಸ್ತುತ ವೇತನ ಶ್ರೇಣಿ ₹57,700 ರಿಂದ ₹1,82,400 ನಷ್ಟಿದೆ.  ಶೇಕಡಾ 20% ಹೆಚ್ಚಳದಿಂದ, ಇದು ₹69,240 ರಿಂದ ₹2,18,880 ಆಗಬಹುದು.

ಸಹ ಪ್ರಾಧ್ಯಾಪಕರು: ಪ್ರಸ್ತುತ ₹1,31,400 ರಿಂದ ₹2,17,100ನಷ್ಟಿದೆ. ಶೇಕಡಾ 20% ಹೆಚ್ಚಳದಿಂದ, ಇದು ₹1,57,680 ರಿಂದ ₹2,60,520 ಆಗಬಹುದು.

ಪ್ರಾಧ್ಯಾಪಕರು: ಪ್ರಸ್ತುತ ₹1,44,200 ರಿಂದ ₹2,18,200ನಷ್ಟಿದೆ.  ಶೇಕಡಾ 20% ಹೆಚ್ಚಳದಿಂದ, ಇದು ₹1,73,040 ರಿಂದ ₹2,61,840 ಆಗಬಹುದು.

ಸೂಪರ್ ಟೈಮ್ ಸ್ಕೆಲ್ ಪ್ರಾಧ್ಯಾಪಕರು: ಪ್ರಸ್ತುತ ವೇತನ ₹2,24,100 ನಷ್ಟಿದೆ. ಶೇಕಡಾ 20% ಹೆಚ್ಚಳದಿಂದ, ಇದು ₹2,68,920 ಆಗಬಹುದು.
ಈ ಸಂಬಳ ಹೆಚ್ಚಳದಿಂದ ಪ್ರಾಧ್ಯಾಪಕರು ಮಾತ್ರವಲ್ಲ, ಶಿಕ್ಷಣ ಕ್ಷೇತ್ರದ (Education Field) ಗುಣಮಟ್ಟಕ್ಕೂ ಪೂರಕ ಪರಿಣಾಮ ಬೀರುವ ಸಾಧ್ಯತೆ ಇದೆ. ವೇತನ ಹೆಚ್ಚಳದೊಂದಿಗೆ ಆಕರ್ಷಕ ಭತ್ಯೆಗಳು, ವಿಶೇಷ ಸೌಲಭ್ಯಗಳು ಮತ್ತು ನಿವೃತ್ತಿ ಉಳಿತಾಯ ಪಥಕಗಳೂ (Pension Schemes) ಬಲಪಡುವ ನಿರೀಕ್ಷೆ ಇದೆ.

ಹೆಚ್ಚುವರಿ ಸೌಲಭ್ಯಗಳೂ ಲಭ್ಯವಿರಲಿವೆ:

ಪರಿಷ್ಕೃತ ವೇತನ ಶ್ರೇಣಿಯ (Revised pay scale) ಜೊತೆಗೆ ಶಿಕ್ಷಕರಿಗೆ ಇತರ ಆರ್ಥಿಕ ಸೌಲಭ್ಯಗಳೂ ಲಭ್ಯವಾಗಲಿವೆ. ಅವುಗಳಲ್ಲಿ ಪ್ರಮುಖವಾದವು:
ಇತ್ತೀಚಿನ ಮೌಲ್ಯಮಾಪನ ಪ್ರಕಾರ ಶಿಕ್ಷಕರ DA ಹೆಚ್ಚಳವಾಗುವ ಸಾಧ್ಯತೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಆಧಾರದಲ್ಲಿ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಳವಾಗುವ ಸಾಧ್ಯತೆ ಇದೆ.
ವೈದ್ಯಕೀಯ ಸೌಲಭ್ಯಗಳ ಅಡಿಯಲ್ಲಿ ಆರೋಗ್ಯ ನೀತಿ ಹೆಚ್ಚಿಸುವ ಸಾಧ್ಯತೆ ಇದೆ.

ಈ ವೇತನ ಪರಿಷ್ಕರಣೆಯಿಂದ ಉನ್ನತ ಶಿಕ್ಷಣ ಕ್ಷೇತ್ರದ (Higher education sector) ಆಕರ್ಷಣೆಯು ಹೆಚ್ಚಾಗಿ, ಹೊಸ ಪ್ರತಿಭೆಗಳು ಶಿಕ್ಷಕ ವೃತ್ತಿಯನ್ನು ಸ್ವೀಕರಿಸುವ ದಾರಿಯನ್ನು ಸುಗಮಗೊಳಿಸಬಹುದು. ಈಗಾಗಲೇ ಹಲವಾರು ರಾಜ್ಯಗಳು ಪ್ರತ್ಯೇಕವಾಗಿ ಈ ಶಿಫಾರಸ್ಸುಗಳ ಅನುಷ್ಠಾನಕ್ಕಾಗಿ ತಯಾರಾಗಿದ್ದು, ಕೇಂದ್ರ ಸರ್ಕಾರದಿಂದ(Central government) ಅಧಿಕೃತ ಘೋಷಣೆ ಬಾಕಿಯಾಗಬೇಕಿದೆ.

8ನೇ ವೇತನ ಆಯೋಗದ ಅಂತಿಮ ಅನುಮೋದನೆ ಮತ್ತು ಜಾರಿಗೆ ಸಂಬಂಧಿಸಿದಂತೆ ಮುಂದಿನ ತಿಂಗಳುಗಳಲ್ಲಿ ಅಧಿಕೃತ ಘೋಷಣೆಯಾಗುವ (An official announcement) ಸಾಧ್ಯತೆ ಇದೆ. ಶಿಕ್ಷಕರಿಗೆ ಈ ಸಿಹಿಸುದ್ದಿಯು ಆರ್ಥಿಕ ಸ್ಥಿರತೆ ಹಾಗೂ ಉದ್ಯೋಗ ಭದ್ರತೆಯ ಹೊಸ ಬೆಳಕು ಮೂಡಿಸುವ ನಿರೀಕ್ಷೆಯಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!