ಇವತ್ತಿನ ವರದಿಯಲ್ಲಿ ಕರ್ನಾಟಕ ಬ್ಯಾಂಕ್ ನೇಮಕಾತಿ 2025(Karantaka Bank Recuritment 2025)ಸಾಲಿಗೆ ವಿವಿಧ ವಿಭಾಗಳಲ್ಲಿ ಮತ್ತು ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದ ಅಧಿಸೂಚನೆಯ ಕುರಿತು ತಿಳಿಸಿಕೊಡಲಾಗುತ್ತದೆ. ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಬ್ಯಾಂಕ್‌ನಲ್ಲಿ ಆಕರ್ಷಕ ಉದ್ಯೋಗ ಅವಕಾಶ: 75 ಹುದ್ದೆಗಳ ನೇಮಕಾತಿ ಅಧಿಸೂಚನೆ 2025
ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳ ಪೈಕಿ ಗಣನೀಯ ಸ್ಥಾನ ಪಡೆದಿರುವ ಕರ್ನಾಟಕ ಬ್ಯಾಂಕ್ (Karnataka Bank) 2025 ನೇ ಸಾಲಿನಲ್ಲಿ ಆಫೀಸರ್ ಸ್ಕೇಲ್-I ಹುದ್ದೆಗಳನ್ನು ಭರ್ತಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳು ದೇಶದಾದ್ಯಂತ ವಿವಿಧ ಶಾಖೆಗಳಲ್ಲಿ ಚಾರ್ಟರ್ಡ್ ಅಕೌಂಟಂಟ್(CA), ಕಾನೂನು ಅಧಿಕಾರಿ, ಸ್ಪೆಷಲಿಸ್ಟ್ ಆಫೀಸರ್ ಮತ್ತು IT ಸ್ಪೆಷಲಿಸ್ಟ್ ಹುದ್ದೆಗಳಿಗೆ ಲಭ್ಯವಿದ್ದು, ಅರ್ಹ ಮತ್ತು ಉತ್ಸಾಹಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ವಿವರಗಳು(Important details):
ನೇಮಕಾತಿ ಸಂಸ್ಥೆ: ಕರ್ನಾಟಕ ಬ್ಯಾಂಕ್(Karnataka Bank)
ಹುದ್ದೆಗಳ ಹೆಸರು:
ಚಾರ್ಟರ್ಡ್ ಅಕೌಂಟಂಟ್(Chartered Accountant) -25
ಕಾನೂನು ಅಧಿಕಾರಿ(Law Officer) – 10
ಸ್ಪೆಷಲಿಸ್ಟ್ ಆಫೀಸರ್(Specialist Officer) – 10
ಐಟಿ ಸ್ಪೆಷಲಿಸ್ಟ್(IT Specialist)- 30
ಒಟ್ಟು ಹುದ್ದೆಗಳು: 75
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 20 ಮಾರ್ಚ್ 2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25 ಮಾರ್ಚ್ 2025, ರಾತ್ರಿ 11:59ರವರೆಗೆ
ಹುದ್ದೆಗಳ ವಿವರ(Job Description):
ಹುದ್ದೆವಾರು ಶೈಕ್ಷಣಿಕ ಅರ್ಹತೆ(Post-wise educational qualification):
ಚಾರ್ಟರ್ಡ್ ಅಕೌಂಟಂಟ್(CA):
2024 ಅಥವಾ 2025ರಲ್ಲಿ ಸಿಎ (CA) ಪಾಸ್ ಆಗಿರಬೇಕು.
ಕಾನೂನು ಅಧಿಕಾರಿ(Legal Officer):
2024 ಅಥವಾ 2025ರಲ್ಲಿ ಮಾಸ್ಟರ್ ಆಫ್ ಲಾ (LLM) ಪಾಸ್ ಆಗಿರಬೇಕು.
ಸ್ಪೆಷಲಿಸ್ಟ್ ಆಫೀಸರ್(Specialist Officer):
2024 ಅಥವಾ 2025ರಲ್ಲಿ ಎಂಬಿಎ (MBA) ಪಾಸ್ ಆಗಿರಬೇಕು. ಶೇ. 70% ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಐಟಿ ಸ್ಪೆಷಲಿಸ್ಟ್(IT Specialist):
2024 ಅಥವಾ 2025ರಲ್ಲಿ ಬಿಇ/ಎಂಸಿಎ/ಎಂ.ಟೆಕ್ (BE/MCA/M.Tech) ಪದವಿಯನ್ನು ಐಟಿ ವಿಷಯದಲ್ಲಿ ಶೇ. 70% ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ವೇತನ ಮತ್ತು ಭತ್ಯೆಗಳ ವಿವರ(Salary and allowances details):
ಆರಂಭಿಕ ವೇತನ: ₹48,480/-
ವೇತನ ಶ್ರೇಣಿ: ₹48,480 – ₹85,920/-
ಮೆಟ್ರೋ ನಗರಗಳಲ್ಲಿ ಸರಾಸರಿ ಮಾಸಿಕ ವೇತನ: ₹1,21,000/- ವರೆಗೆ
ಭತ್ಯೆಗಳು: ಎಲ್ಲಾ ಹುದ್ದೆಗಳಿಗೆ ಡಿ.ಎ (DA), ಹೆಚ್.ಆರ್.ಎ (HRA) ಇತ್ಯಾದಿ ಅನ್ವಯವಾಗುತ್ತದೆ.
ಸರ್ವೀಸ್ ಬಾಂಡ್(Service Bond):
ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 3 ವರ್ಷ(Atleast 3 years)ಸೇವೆ ನೀಡಬೇಕೆಂದು ಬಾಂಡ್‌ಗೆ ಸಹಿ ಹಾಕಬೇಕಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ(How to apply):
ಕರ್ನಾಟಕ ಬ್ಯಾಂಕ್ ನೇಮಕಾತಿ ಪೋರ್ಟಲ್: https://karnatakabanksr.azurewebsites.net/ ಗೆ ಭೇಟಿ ನೀಡಿ.
‘Register’ ಆಯ್ಕೆಯನ್ನು ಕ್ಲಿಕ್ ಮಾಡಿ
ಮೂಲ ಮಾಹಿತಿಗಳನ್ನು ಭರ್ತಿ ಮಾಡಿ ರಿಜಿಸ್ಟ್ರೇಷನ್ ಪಡೆಯಿರಿ.
User ID ಮತ್ತು ಪಾಸ್‌ವರ್ಡ್ ಕ್ರಿಯೇಟ್ ಮಾಡಿದ ನಂತರ ಲಾಗಿನ್ ಮಾಡಿ.
ಹುದ್ದೆ ಆಯ್ಕೆ ಮಾಡಿ, ಅರ್ಜಿ ಭರ್ತಿ ಮಾಡಿ ಮತ್ತು ದೃಢೀಕರಿಸಿ.
ಆಯ್ಕೆ ವಿಧಾನ(Selection method):
ಶಾರ್ಟ್ ಲಿಸ್ಟಿಂಗ್(Short listing): ವಿದ್ಯಾರ್ಹತೆ ಮತ್ತು ಅಂಕಗಳನ್ನು ಪರಿಗಣಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
ಆನ್‌ಲೈನ್ ಸಂದರ್ಶನ(Online Interview): ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಆನ್‌ಲೈನ್ ಸಂದರ್ಶನ ನಡೆಸಲಾಗುತ್ತದೆ.
ಈ ಹುದ್ದೆಗಳು ಆಕರ್ಷಕ ವೇತನ ಮತ್ತು ಭದ್ರ ಭವಿಷ್ಯ ಒದಗಿಸುವುದರೊಂದಿಗೆ ಕರ್ನಾಟಕ ಬ್ಯಾಂಕ್‌ನಲ್ಲಿ ಸ್ಥಿರ ಸೇವೆ ನೀಡಲು ಅವಕಾಶ ನೀಡುತ್ತವೆ. ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸಿ, ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ.
ಕೊನೆಯ ದಿನಾಂಕವನ್ನು ಮಿಸ್ ಮಾಡದಿರಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.