ಗ್ರಾಮಾಂತರ ಪ್ರದೇಶಗಳಿಗೂ ಇ ಖಾತೆ. ಇಲ್ಲಿ ಅರ್ಜಿ ಸಲ್ಲಿಸಿದ್ರೆ ಎರಡೇ ದಿನಗಳಲ್ಲಿ ಸಿಗುತ್ತೆ ಇ ಖಾತಾ!

Picsart 25 04 01 22 22 25 171

WhatsApp Group Telegram Group

ಬೆಂಗಳೂರು ಮಾತ್ರವಲ್ಲ, ಗ್ರಾಮಾಂತರ ಪ್ರದೇಶಗಳಿಗೂ ಇ-ಖಾತಾ ಸೇವೆ ವಿಸ್ತರಣೆ!

ನಮ್ಮ ರಾಜಧಾನಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಆಸ್ತಿ ಖರೀದಿ, ಮಾರಾಟ, ವಸತಿ, ಮತ್ತು ಇತರೆ ಹಲವಾರು ಪ್ರಕ್ರಿಯೆಗಳಲ್ಲಿ ಇ-ಖಾತಾ (E-Khata) ಒಂದು ಪ್ರಮುಖ ದಾಖಲೆ. ಇದನ್ನು ಪಡೆಯಲು ಹಿಂದೆ ನಾಗರಿಕರು ಬಿಬಿಎಂಪಿ (BBMP) ಕಚೇರಿಗಳಿಗೆ ಭೇಟಿ ನೀಡಿ, ಹಲವಾರು ಹಂತದ ಪರಿಶೀಲನೆಗಳನ್ನು ಎದುರಿಸಬೇಕಾಗುತ್ತಿತ್ತು. ಇದರಿಂದಾಗಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದುದಲ್ಲದೆ, ಜನರು ಅನಗತ್ಯ ಓಡಾಟ ಮಾಡಬೇಕಾಗುತ್ತಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಸಮಸ್ಯೆಗಳಿಗೆ ಪರಿಹಾರವಾಗಿ, ಬಿಬಿಎಂಪಿ ಇದೀಗ ನಾಗರಿಕರಿಗೆ ನೇರವಾಗಿ ಗುಡ್ ನ್ಯೂಸ್ (Gud News) ನೀಡಿದ್ದು, ಕೇವಲ ಎರಡು ದಿನಗಳ ಒಳಗೇ ಇ-ಖಾತಾ ಪಡೆಯಲು ಅವಕಾಶ ನೀಡಿದೆ. ಬಿಬಿಎಂಪಿಯ ವಿಶೇಷ ಆಯುಕ್ತ ಮುನೀಶ್ ಮೌನ್ಸಿಲ್ ಅವರ ಪ್ರಕಾರ, ನಗರ ಪ್ರದೇಶದ ಜನರು ತಮ್ಮ ಇ-ಖಾತಾ ಅರ್ಜಿಯನ್ನು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ bbmpeaasthi.karnataka.gov.in ನಲ್ಲಿ ಸಲ್ಲಿಸಬಹುದು. ಈ ಮೂಲಕ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇಲ್ಲದೆ, ತ್ವರಿತವಾಗಿ ತಮ್ಮ ಖಾತಾ ದಾಖಲೆ ಪಡೆಯಬಹುದಾಗಿದೆ. ಹಾಗಿದ್ದರೆ ಈ ಯೋಜನೆಯ ಪ್ರಯೋಜನಗಳನ್ನು ಯಾರೆಲ್ಲ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಹೊಸ ವ್ಯವಸ್ಥೆಯಡಿ, ಸಹಾಯಕ ಕಂದಾಯ ಅಧಿಕಾರಿಗಳು (ARO) ಮತ್ತು ಕೇಸ್ ವರ್ಕರ್‌ಗಳು ನಿಗದಿತ ಸಮಯದೊಳಗೆ ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ಈ ತ್ವರಿತ ಸೇವೆ ಖಾತಾದಾರರಿಗೆ (Quick service for account holders) ಹೆಚ್ಚಿನ ಅನುಕೂಲಗಳನ್ನು ಒದಗಿಸಲಿದೆ. ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಈ ಹೊಸ ಮಾರ್ಗದರ್ಶನದ ಅಡಿಯಲ್ಲಿ 2.9 ಲಕ್ಷ ಅರ್ಜಿಗಳ ಪೈಕಿ ಈಗಾಗಲೇ 2.7 ಲಕ್ಷ ಇ-ಖಾತಾಗಳನ್ನು ವಿತರಿಸಲಾಗಿದೆ. ಉಳಿದಿರುವ ಅರ್ಜಿಗಳನ್ನು ಶೀಘ್ರವೇ ಇತ್ಯರ್ಥಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಅರ್ಜಿ ಸಂಖ್ಯೆ (Application numbers) ಹಿನ್ನಲೆ ತ್ವರಿತ ನಿರ್ವಹಣೆ ಅಗತ್ಯ:

ದಿನದಿಂದ ದಿನಕ್ಕೆ ಇ-ಖಾತಾ ಪಡೆಯುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರಿಗೆ ತೊಂದರೆ ಆಗದಂತೆ ಬಿಬಿಎಂಪಿ ತನ್ನ ಸೇವೆಗಳ ಸೌಕರ್ಯವನ್ನು ಹೆಚ್ಚಿಸುತ್ತಿದೆ. ಈ ಉದ್ದೇಶಕ್ಕಾಗಿ, ಪ್ರತಿ ದಿನ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳ ಸಹಾಯಕ ಕಂದಾಯ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆಗಳನ್ನು (Vertual meetings) ನಡೆಸಿ, ಯಾವುದೇ ಬ್ಲಾಕ್ ಪಾಯಿಂಟ್‌ಗಳನ್ನು ಶೀಘ್ರವಾಗಿ ಪರಿಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹೆಚ್ಚುತ್ತಿರುವ ಅರ್ಜಿ ಸಂಖ್ಯೆ (Application numbers) ಹಿನ್ನಲೆ ತ್ವರಿತ ನಿರ್ವಹಣೆ ಅಗತ್ಯ:

ಇತ್ತೀಚೆಗೆ, ರಾಜ್ಯ ಸರ್ಕಾರ ಗ್ರಾಮಾಂತರ ಪ್ರದೇಶಗಳಲ್ಲಿಯೂ ಇ-ಖಾತಾ ಜಾರಿಗೆ ಒಪ್ಪಿಗೆ ನೀಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿ ಈ ಸೇವೆಯನ್ನು ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆ (cabinet meeting) ಇದಕ್ಕೆ ಅನುಮೋದನೆ ನೀಡಿದ್ದು, ಇದರ ಪರಿಣಾಮವಾಗಿ ಗ್ರಾಮೀಣ ಭಾಗದ ನಿವಾಸಿಗಳಿಗೆ ಇ-ಖಾತಾ ಪಡೆಯುವ ಪ್ರಕ್ರಿಯೆ ಸುಗಮಗೊಳ್ಳಲಿದೆ.

ಇ-ಖಾತಾ ಸೇವೆಯನ್ನು ಹೆಚ್ಚು ಸಮರ್ಥವಾಗಿ, ಪಾರದರ್ಶಕವಾಗಿ ಹಾಗೂ ಕಡಿಮೆ ಸಮಯದಲ್ಲಿ ಒದಗಿಸಲು ಬಿಬಿಎಂಪಿ ನಿರ್ಧಾರ ಕೈಗೊಂಡಿದ್ದು, ಈ ಹೊಸ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಲಭ್ಯವಾಗಲಿದೆ. ಈ ಸೇವೆಯ ಪರಿಣಾಮವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದ ಜನತೆಗೆ ಆಸ್ತಿ ಕಾನೂನುಬದ್ಧತೆ (Property Legality) ಹೆಚ್ಚು ಸುಗಮಗೊಳ್ಳಲಿದೆ. ಈ ನೂತನ ಕ್ರಮದಿಂದ ಬಿಬಿಎಂಪಿಯ ಆಡಳಿತ ಮತ್ತಷ್ಟು ಪರಿಣಾಮಕಾರಿ ಆಗಲಿದ್ದು, ನಾಗರಿಕರಿಗೆ ಬೇಗನೇ ಸುಲಭ ಸೇವೆ ಒದಗಿಸುವತ್ತ ಒಂದು ಮಹತ್ವದ ಹೆಜ್ಜೆ ಆಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!