AAI ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟ! ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಕ 309 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ
ಉದ್ಯೋಗ ನಿರೀಕ್ಷಿಸುತ್ತಿರುವ ಸರ್ಕಾರಿ ಉದ್ಯೋಗದ ಆಸಕ್ತರಿಗೆ ಸುವರ್ಣಾವಕಾಶವಾಗಿ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India – AAI) 309 ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಏವಿಯೇಷನ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಉದ್ಯೋಗಕ್ಕಾಗಿ ಎದುರುನೋಡುತ್ತಿರುವ ಯುವ ಪ್ರತಿಭೆಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಭಾರತದಲ್ಲಿ ವಿಮಾನಯಾನ ಕ್ಷೇತ್ರ ವಿಸ್ತಾರ ಹೊಂದುತ್ತಿರುವ ಕಾರಣ, ಏರ್ ಟ್ರಾಫಿಕ್ ಕಂಟ್ರೋಲ್ (Air traffic controls) ಹುದ್ದೆಗಳ ಮಹತ್ವ ಮತ್ತು ಹೊಣೆಗಾರಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಾಗಿದ್ದರೆ ಕಿರಿಯ ಎಕ್ಸಿಕ್ಯೂಟಿವ್ (Junior Executive) ಹುದ್ದೆಗಳಿಗೆ ನೇಮಕಾತಿ ಯಾವರೀತಿಯಿರುತ್ತದೆ? ಅರ್ಹತಾ ಮಾನದಂಡಗಳು ಯಾವುವು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆಯಾದ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India – AAI), ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ (Air Traffic Control) ವಿಭಾಗದಲ್ಲಿ ಸೇವೆ ಸಲ್ಲಿಸಲು 309 ಕಿರಿಯ ಎಕ್ಸಿಕ್ಯೂಟಿವ್ (Junior Executive) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಇದು ಸರ್ಕಾರದ ಉದ್ಯೋಗಕ್ಕಾಗಿ ಕಾಯುತ್ತಿರುವ ತಂತ್ರಜ್ಞಾನ, ವಿಜ್ಞಾನ ಮತ್ತು ಸಂವಹನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಮಹತ್ವದ ಅವಕಾಶವಾಗಿದೆ.
ಈ ಹುದ್ದೆಗಳು ಭಾರತದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಖಾಲಿ ಇರುವ ಸ್ಥಳಗಳನ್ನು ಭರ್ತಿಮಾಡಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಹಾಗೂ ವಿವಿಧ ಸೌಲಭ್ಯಗಳು (Special salary and some facilities) ಲಭ್ಯವಿರಲಿವೆ. ಅರ್ಜಿ ಸಲ್ಲಿಸುವ ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು 2025ರ ಮೇ 24ರ ಒಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಕೆಳಗಿನ ಮಾಹಿತಿಯಲ್ಲಿ ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಎಲ್ಲಾ ವಿವರಗಳು ನೀಡಲಾಗಿದೆ.
ಹುದ್ದೆಯ ವಿವರ:
ವಿಭಾಗದ ಹೆಸರು: ವಿಮಾನ ನಿಲ್ದಾಣ ಪ್ರಾಧಿಕಾರ (AAI)
ಹುದ್ದೆಯ ಹೆಸರು: ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್)
ಒಟ್ಟು ಹುದ್ದೆಗಳು: 309
ಕೆಲಸದ ಸ್ಥಳ: ಭಾರತದಾದ್ಯಂತ ವಿವಿಧ ವಿಮಾನ ನಿಲ್ದಾಣಗಳು
ಅರ್ಹತಾ (Qualification) ಮಾನದಂಡ :
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Sc (ಗಣಿತ / ಭೌತಶಾಸ್ತ್ರ / ವಿಜ್ಞಾನ) ಅಥವಾ B.E./B.Tech ಪದವಿ ಹೊಂದಿರಬೇಕು.
ಕನಿಷ್ಠ 60% ಅಂಕಗಳು ಅಗತ್ಯವಿದೆ.
ಆಂಗ್ಲ ಭಾಷೆಯಲ್ಲಿನ ಪ್ರಾವೀಣ್ಯತೆ (ಲಿಖಿತ ಹಾಗೂ ವಾಚನ) ಅತ್ಯಗತ್ಯವಾಗಿದೆ.
ವಯೋಮಿತಿ (Age limit) :
ಗರಿಷ್ಠ ವಯಸ್ಸು: 27 ವರ್ಷಗಳು
ಮೀಸಲಾತಿ ಇರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ:
ಒಬಿಸಿ (NCL): 3 ವರ್ಷ
ಎಸ್‌ಸಿ/ಎಸ್ಟಿ: 5 ವರ್ಷ
ದಿವ್ಯಾಂಗ ಅಭ್ಯರ್ಥಿಗಳು: 10 ವರ್ಷ
ವೇತನ ಶ್ರೇಣಿ (Salary hierarchy) :
ಪ್ರಾರಂಭಿಕ ವೇತನ: ₹40,000/-
ಗರಿಷ್ಠ ವೇತನ: ₹1,40,000/-
ಜೊತೆಗೆ, DA, HRA, ಮತ್ತಿತರ ಅನೇಕ ಸೌಲಭ್ಯಗಳು ದೊರೆಯುತ್ತವೆ.
ಅರ್ಜಿ ಶುಲ್ಕ (Application fee) :
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಹಿಳಾ ಅಭ್ಯರ್ಥಿಗಳು/AAI ಅಪ್ರೆಂಟಿಸ್‌ಗಳು: ₹0/- (ಶುಲ್ಕವಿಲ್ಲ)
ಇತರ ಅಭ್ಯರ್ಥಿಗಳು: ₹1000/-
ಆಯ್ಕೆ ಪ್ರಕ್ರಿಯೆ (Selection process) ಹೇಗಿರುತ್ತದೆ:
1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
2. ಡಾಕ್ಯುಮೆಂಟ್ ಪರಿಶೀಲನೆ
3. ವಾಯ್ಸ್ ಟೆಸ್ಟ್
4. ಮೆಡಿಕಲ್ ಪರೀಕ್ಷೆ
5. ಅಗತ್ಯವಿದ್ದರೆ, ಸಂದರ್ಶನ
ಮುಖ್ಯ ದಿನಾಂಕಗಳು (Important dates) :
ಅರ್ಜಿ ಪ್ರಾರಂಭ ದಿನಾಂಕ: 25 ಏಪ್ರಿಲ್ 2025
ಕೊನೆಯ ದಿನಾಂಕ: 24 ಮೇ 2025
ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಜೂನ್ ಅಥವಾ ಜುಲೈ 2025 (ನಂತರ ತಿಳಿಸಲಾಗುತ್ತದೆ)
ಗಮನಿಸಿ (Notice) :
ನೋಟಿಫಿಕೇಶನ್ ಮಾಹಿತಿ ಪಡೆಯಲು: https://www.aai.aero/
ಆನ್‌ಲೈನ್ ಅರ್ಜಿ ಸಲ್ಲಿಸಲು : https://www.aai.aero/
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮಗೆ ಅರ್ಹತೆ ಇರುವುದನ್ನು ಖಚಿತಪಡಿಸಿಕೊಂಡು, ನಿಗದಿತ ದಿನಾಂಕದೊಳಗೆ (within the due date) ಅರ್ಜಿ ಸಲ್ಲಿಸಿ. ಈ ಅವಕಾಶದಿಂದ ನಿಮ್ಮ ವೃತ್ತಿಜೀವನವನ್ನು ವಿಮಾನಯಾನ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.