ಉಚಿತ ಸ್ಕೂಟಿ, ಹೊಲಿಗೆ ಯಂತ್ರ, & ಲ್ಯಾಪ್’ಟಾಪ್ ಪಡೆಯಲು ಅರ್ಜಿ ಆಹ್ವಾನ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Picsart 25 04 15 00 10 36 420

WhatsApp Group Telegram Group

ಬೆಂಗಳೂರು ನಿವಾಸಿಗಳಿಗೆ ಸಿಹಿ ಸುದ್ದಿ! BBMP ಯಿಂದ ಎಲೆಕ್ಟ್ರಿಕ್ ಸ್ಕೂಟರ್, ಉಚಿತ ಹೊಲಿಗೆ ಯಂತ್ರ ಸೇರಿದಂತೆ ಅನೇಕ ಉಪಕೃತ ಯೋಜನೆಗಳಿಗೆ ಅರ್ಜಿ ಆಹ್ವಾನ

ನಗರದ ಹಿಂದುಳಿದ ವರ್ಗದ ನಾಗರಿಕರಿಗೆ ತಮ್ಮ ಜೀವನಮಟ್ಟವನ್ನು ಸುಧಾರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತೊಂದು ಮೌಲ್ಯಯುತ ಯೋಜನೆಯಿಂದ ಲಾಭ ನೀಡುತ್ತಿದೆ. 2024-25ನೇ ಸಾಲಿನ BBMP ಕಲ್ಯಾಣ ವಿಭಾಗದ ಹಲವಾರು ಸಬ್ಸಿಡಿ(Subsidy) ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯಡಿಯಲ್ಲಿ ಮಹಿಳೆಯರು, ಪೌರ ಕಾರ್ಮಿಕರು, ಉದ್ಯೋಗಿಗಳಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಅನುಕೂಲವಾಗುವ ಯೋಜನೆಗಳನ್ನು ಒಳಗೊಂಡಿವೆ. ವಿಶೇಷವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Scooter) ಮತ್ತು ಉಚಿತ ಹೊಲಿಗೆ ಯಂತ್ರ (Sewing Machine) ಸಬ್ಸಿಡಿ ಅರ್ಜಿಗಳಿಗೆ ಹೆಚ್ಚಿನ ಪ್ರತಿಸಾದ ಸಿಕ್ಕಿದೆ.

ಯಾವೆಲ್ಲ ಯೋಜನೆಗಳಿಗೆ BBMP ಅರ್ಜಿ ಆಹ್ವಾನಿಸಿದೆ?For which projects has BBMP invited applications

ಎಲೆಕ್ಟ್ರಿಕ್ ಸ್ಕೂಟರ್ ಸಬ್ಸಿಡಿ ಯೋಜನೆ(Electric scooter subsidy)
ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಪೌರ ಕಾರ್ಮಿಕ ಮಹಿಳೆಯರಿಗೆ ಸ್ಕೂಟರ್ ನೀಡಲಾಗುತ್ತದೆ.

ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ(Free Sewing Machine)
ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ.

ವಿಶೇಷ ಚೇತನರಿಗೆ ತ್ರಿಚಕ್ರ ಎಲೆಕ್ಟ್ರಿಕ್ ವಾಹನ/ವೀಲ್‌ಚೇರ್ (Three-wheeled electric vehicles/wheelchairs)ಅಂಗವಿಕಲರಿಗೆ ಹೆಚ್ಚು ಅನುಕೂಲವಾಗುವಂತೆ ತ್ರಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ.

ಬೀದಿಬದಿ ವ್ಯಾಪಾರಸ್ಥರಿಗೆ ಎಲೆಕ್ಟ್ರಿಕ್ ವೆಂಡಿಂಗ್ ಮೆಷಿನ್(Electric vending machines)
ಸಣ್ಣ ವ್ಯಾಪಾರದವರು ತಮ್ಮ ವ್ಯಾಪಾರವನ್ನು ಸುಲಭವಾಗಿ ನಡೆಸಲು BBMP ಬೆಂಬಲ ನೀಡುತ್ತಿದೆ.

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣಾ(Laptop Distribution) ಯೋಜನೆ
ಪದವಿ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳು.

ಶಾಲಾ ಶುಲ್ಕ ಮರುಪಾವತಿ ಮತ್ತು ವಿದೇಶ ವ್ಯಾಸಂಗಕ್ಕೆ ಸಹಾಯಧನ
ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕಾಗಿ BBMP ನಿಂದ ಉತ್ತಮ ನೆರವು.

ಸಂಗೀತ ಸಾಧನ, ಔಷಧಿ ಅಂಗಡಿ, ಆಟೋ/ಕಾರು ಖರೀದಿ ಸಹಾಯಧನ
ಕಲಾ ಕ್ಷೇತ್ರ, ವೈದ್ಯಕೀಯ ಮತ್ತು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುವವರಿಗೆ BBMP ಬೆಂಬಲ ನೀಡುತ್ತಿದೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು(Required documents for application):

ಅರ್ಜಿ ಸಲ್ಲಿಸುವವರು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:

ಆಧಾರ್ ಕಾರ್ಡ್ ಪ್ರತಿಯು(Aadhar Card)

ಬ್ಯಾಂಕ್ ಪಾಸ್ ಬುಕ್

ಪಾಸ್‌ಪೋರ್ಟ್ ಗಾತ್ರದ ಫೋಟೋ

ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ರೇಷನ್ ಕಾರ್ಡ್

ವಿಳಾಸ ದೃಡೀಕರಣ ದಾಖಲೆ

ಜನನ ಪ್ರಮಾಣ ಪತ್ರ/ಅಧಿಕೃತ ವಯಸ್ಸು ದೃಡೀಕರಣ

ಅರ್ಜಿ ಸಲ್ಲಿಸಲು ಅರ್ಹತೆಗಳು(Eligibility to apply):

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಆಧಾರ್ ಕಾರ್ಡಿನಲ್ಲಿ ಬೆಂಗಳೂರು BBMP ವ್ಯಾಪ್ತಿಯ ವಿಳಾಸ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.

ಈ ಹಿಂದೆ ಈ ಯೋಜನೆಯ ಲಾಭ ಪಡೆದಿಲ್ಲವೆಂಬುದು ನಿರ್ವಹಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ(Application procedure and deadline)

ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಸಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ BBMP ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ಕಚೇರಿಗೆ ಭೇಟಿ ನೀಡಿ, ಸ್ವಯಂ ದೃಡೀಕರಿಸಿ, 2025ರ ಮೇ 2ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಅಧಿಕೃತ ವೆಬ್‌ಸೈಟ್: https://bbmp.gov.in/home
BBMP ಕಚೇರಿ ವಿಳಾಸ: ಎನ್.ಆರ್ ಚೌಕ್, ಬೆಂಗಳೂರು – 560002

ಒಟ್ಟಾರೆ, ಈ BBMP ಸಬ್ಸಿಡಿ ಯೋಜನೆಗಳು ನಿಮ್ಮ ಕುಟುಂಬದ ಆರ್ಥಿಕ ಭದ್ರತೆ, ಉದ್ಯೋಗ ಮತ್ತು ಶಿಕ್ಷಣದ ಬೆಳವಣಿಗೆಗೆ ನೂರಾರು ಹಾದಿಗಳನ್ನು ತೆರೆಯಬಹುದು. ಅರ್ಹರಾಗಿದ್ದರೆ ಅವಕಾಶವನ್ನು ಬಳಸಿಕೊಳ್ಳಿ, ಸಮಯಕ್ಕೆ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಥವಾ ನಿಕಟದ BBMP ಕಚೇರಿಗೆ ಭೇಟಿ ನೀಡಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!