ಏಪ್ರಿಲ್ 18, 2025: ಜಾಗತಿಕ ಆರ್ಥಿಕ ಬದಲಾವಣೆಗಳ ನಡುವೆ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಏರಿಕೆ
ಇದೀಗ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕಾಣಿಸಿಕೊಂಡಿರುವ ಬದಲಾವಣೆಯು ಭಾರತದ ಆರ್ಥಿಕ ಪರಿಸ್ಥಿತಿ ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ಪ್ರತಿಫಲಿಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಭಾರತೀಯರು ಚಿನ್ನವನ್ನು ಬೆಲೆಬಾಳುವ ಮೌಲ್ಯದ ಆಸ್ತಿ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಚಿನ್ನದ ಬೆಲೆಯಲ್ಲಿ ಬರುವ ತೀವ್ರ ಏರಿಳಿತವು ಸಾಮಾನ್ಯ ಜನತೆಯ ಮೇಲೆ ಪರಿಣಾಮ ಬಿರುತ್ತದೆ. ಇತ್ತೀಚೆಗೆ ಜಾಗತಿಕ ಆರ್ಥಿಕ ಅನಿಶ್ಚಿತತೆ, ಅಮೆರಿಕದ ಬಂಡವಾಳ ಮಾರುಕಟ್ಟೆ ಸ್ಥಿತಿಗತಿ, ಮತ್ತು ರೂಪಾಯಿ-ಡಾಲರ್ ವಿನಿಮಯದ ಬದಲಾವಣೆಗಳ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿವೆ. ಇಂತಹ ಸಂದರ್ಭದಲ್ಲೇ ಏಪ್ರಿಲ್ 17ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಸಂಭವಿಸಿದ ದಾಖಲೆಮಟ್ಟದ ಏರಿಕೆಯಿಂದಾಗಿ ಚಿನ್ನದ ಮಾರುಕಟ್ಟೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 18, 2025: Gold Price Today
ಇಳಿಕೆಯಾಗುತ್ತಿದ್ದ ಚಿನ್ನದ ದರ ನಿನ್ನೆಯಿಂದ ದಿಡೀರ್ ಏರಿಕೆಯನ್ನು ಕಾಣುತ್ತಿದೆ. ಚಿನ್ನವನ್ನು ಕೊಂಡುಕೊಳ್ಳಬೇಕು ಎನ್ನುವಷ್ಟರಲ್ಲಿ ಈ ರೀತಿಯ ದರ ಏರಿಕೆ ಗ್ರಾಹಕರಲ್ಲಿ ನಿರಾಸೆ ಮೂಡಿಸುತ್ತಿದೆ. ಪ್ರತಿನಿತ್ಯವೂ ಚಿನ್ನದ ದರದಲ್ಲಿ ಬದಲಾವಣೆಯಾಗುತ್ತಿದ್ದು, ಯಾವ ದಿನ ಯಾವ ರೀತಿ ಚಿನ್ನದ ದರ ಇರುತ್ತದೆ ಎಂದು ಊಹಿಸಲು ಕಷ್ಟವಾಗುತ್ತಿದೆ. ಹಾಗಿದ್ದರೆ, ಏಪ್ರಿಲ್ 18, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 921 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,732ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,299 ಆಗಿದೆ. ನಿನ್ನಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 105ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 90,900 200 ರೂ. ನಷ್ಟಿದ್ದು ಇಕೆಯಾಗಿದೆ.
ಏಪ್ರಿಲ್ 17, 2025 ರಂದು,ಚಿನ್ನದ ಬೆಲೆ ಏರಿಕೆಯಲ್ಲಿ ಹೊಸ ದಾಖಲೆ:
ಏಪ್ರಿಲ್ 17, 2025 ಗುರುವಾರದಂದು, ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯನ್ನು ನೋಡಲಾಗಿದೆ. ಕೇವಲ ಎರಡು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹200 ಏರಿಕೆಯಾಗಿದ್ದು, ನಿನ್ನೆ 22 ಕ್ಯಾರಟ್ ಚಿನ್ನದ ದರ ₹89,200ಕ್ಕೆ ತಲುಪಿದೆ. ಇದೇ ವೇಳೆ, 24 ಕ್ಯಾರಟ್ ಶುದ್ಧ ಚಿನ್ನದ ದರ ₹97,310ಕ್ಕೆ ಏರಿದೆ. ಅಮೆರಿಕದಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ 1 ಗ್ರಾಂಗೆ $100 ಗಡಿ ದಾಟಿರುವುದು ಈ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.
ಬೆಳ್ಳಿಯ ದರ ಸ್ಥಿರ:
ಇನ್ನು ಬೆಳ್ಳಿಯ ದರದಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಾಣಸಿಗಲಿಲ್ಲ. ಪ್ರಸ್ತುತ 100 ಗ್ರಾಂ ಬೆಳ್ಳಿಯ ದರ ₹10,000ರಷ್ಟು ಇದೆ. ಕೆಲವೊಂದು ನಗರಗಳಲ್ಲಿ ಮಾತ್ರ ಈ ದರ ₹11,000ವನ್ನು ತಲುಪಿದೆ.
ಏಪ್ರಿಲ್ 17, 2025 ರಂದು ಚಿನ್ನದ ಮತ್ತು ಬೆಳ್ಳಿಯ ದರ ಹೀಗಿವೆ:
ಭಾರತದ ಮೌಲ್ಯಗಳು (10 ಗ್ರಾಂಗೆ):
22 ಕ್ಯಾರಟ್ ಚಿನ್ನ: ₹89,200
24 ಕ್ಯಾರಟ್ ಚಿನ್ನ: ₹97,310
18 ಕ್ಯಾರಟ್ ಚಿನ್ನ: ₹72,990
ಬೆಳ್ಳಿ (10 ಗ್ರಾಂಗೆ): ₹1,000
ಬೆಂಗಳೂರು ನಗರದ ದರ:
22 ಕ್ಯಾರಟ್ ಚಿನ್ನ: ₹89,200
24 ಕ್ಯಾರಟ್ ಚಿನ್ನ: ₹97,310
ಬೆಳ್ಳಿ (100 ಗ್ರಾಂಗೆ): ₹10,000
ವಿವಿಧ ಪ್ರಮುಖ ಭಾರತೀಯ ನಗರಗಳ 22 ಕ್ಯಾರಟ್ 10 ಗ್ರಾಂ ದರ ಹೀಗಿದೆ:
ಚೆನ್ನೈ, ಮುಂಬೈ, ಕೋಲ್ಕತ್ತಾ, ಕೇರಳ: ₹89,200
ದೆಹಲಿ, ಲಕ್ನೋ, ಜೈಪುರ್: ₹89,350
ಅಹ್ಮದಾಬಾದ್: ₹89,250
ಭುವನೇಶ್ವರ್: ₹89,200
ಅಂತಾರಾಷ್ಟ್ರೀಯ ಮೌಲ್ಯಗಳು (10 ಗ್ರಾಂಗೆ – 22 ಕ್ಯಾರಟ್):
ಮಲೇಷ್ಯಾ: 4,650 ರಿಂಗಿಟ್ (₹90,060)
ದುಬೈ: 3,695 ಡಿರಾಮ್ (₹86,050)
ಅಮೆರಿಕ: $1,000 (₹85,540)
ಸಿಂಗಾಪುರ: 1,363 SGD (₹88,760)
ಕತಾರ್: 3,720 ರಿಯಾಲ್ (₹87,300)
ಸೌದಿ: 3,780 ರಿಯಾಲ್ (₹86,170)
ಓಮನ್: 394 ಒಮಾನಿ ರಿಯಾಲ್ (₹87,540)
ಕುವೇತ್: 303.80 ದಿನಾರ್ (₹84,740)
ಪ್ರಮುಖ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ :
ಬೆಂಗಳೂರು, ಮುಂಬೈ, ದೆಹಲಿ, ಅಹ್ಮದಾಬಾದ್, ಜೈಪುರ್, ಪುಣೆ: ₹10,000
ಚೆನ್ನೈ, ಕೇರಳ, ಭುವನೇಶ್ವರ್: ₹11,000
ಮೇಲ್ಕಂಡ ದರಗಳು ಪ್ರಮುಖ ಆಭರಣದ ಅಂಗಡಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಈ ದರಗಳಿಗೆ ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜಸ್ ಸೇರಿಸಬೇಕಾಗುತ್ತದೆ. ಹೀಗಾಗಿ ಖರೀದಿಗೆ ಮೊದಲು ನಿಖರವಾದ ದರದ ಬಗ್ಗೆ ದೃಢಪಡಿಸಿಕೊಳ್ಳುವುದು ಅಗತ್ಯ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.