ಏಪ್ರಿಲ್‌ 30ರೊಳಗೆ ಈ ಕೆಲಸ ಮಾಡದೇ ಇದ್ರೆ ಪಿಎಂ ಕಿಸಾನ್‌ 20ನೇ ಕಂತಿನ ಹಣ ಸಿಗಲ್ಲ..!

Picsart 25 04 18 23 17 09 256

WhatsApp Group Telegram Group

PM-KISAN 20ನೇ ಕಂತು: ಏಪ್ರಿಲ್ 30ರೊಳಗೆ ಕಿಸಾನ್ ಗುರುತಿನ ಚೀಟಿ ಮತ್ತು KYC ಪೂರ್ಣಗೊಳಿಸಿ, ಇಲ್ಲದಿದ್ದರೆ ಹಣ ಸಿಗದು!

ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ. ದೇಶದ ಸಮಗ್ರ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರವು ಮಹತ್ವದ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ರೈತರ ಆರ್ಥಿಕ ಸ್ಥಿತಿಗೆ ಬಲ ನೀಡಲು ಹಲವು ಮಹತ್ವದ ಯೋಜನೆಗಳನ್ನು ರೂಪಿಸಿರುತ್ತದೆ. ಇದರಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) ಪ್ರಮುಖವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತೀಯ ಆರ್ಥಿಕ ವ್ಯವಸ್ಥೆಯ(economic system) ಹೃದಯವೆಂದರೆ ಕೃಷಿ. ದೇಶದ ಬಹುಪಾಲು ಜನತೆ ಕೃಷಿಯ ಮೇಲೆ ಅವಲಂಬಿತವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಅನನ್ಯವಾಗಿದೆ. ಈ ನಿಟ್ಟಿನಲ್ಲಿ, ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾದುದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆ. ರೈತರ ನೇರ ಲಾಭ ವರ್ಗಾವಣೆ (Direct Benefit Transfer – DBT) ಯೋಜನೆಗಳಲ್ಲಿ ವಿಶ್ವದಾದ್ಯಾಂತ ಪ್ರಮುಖವಾದ ಈ ಯೋಜನೆಯು ರೈತರಿಗೆ ವಾರ್ಷಿಕವಾಗಿ 6000 ರೂಪಾಯಿ ನೆರವು ನೀಡುತ್ತದೆ. ಈ ಹಣವನ್ನು ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಬಹುದು. ಹಾಗಿದ್ದರೆ ಈ ಯೋಜನೆಯ 20 ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ?  ಕಿಸಾನ್ ಗುರುತಿನ ಚೀಟಿ ಎಂದರೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಯೋಜನೆಯು ವಿಶ್ವದ ಅತಿದೊಡ್ಡ ನೇರ ನಗದು ವರ್ಗಾವಣೆ (DBT) ಯೋಜನೆಗಳಲ್ಲಿ ಒಂದಾಗಿದ್ದು, ದೇಶದ ಲಕ್ಷಾಂತರ ರೈತರಿಗೆ ನೇರವಾಗಿ ಆರ್ಥಿಕ ನೆರವಿನ ನೀಡುತ್ತಿದೆ. ಈ ಯೋಜನೆಯಡಿ, ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ(Bank account) ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು ₹6000 ರೂ. ನೇರವಾಗಿ ಜಮೆ ಮಾಡಲಾಗುತ್ತದೆ. ಇದನ್ನು ರೈತರು ಗೊಬ್ಬರ, ಬೀಜ, ರಸಗೊಬ್ಬರ ಹಾಗೂ ಇತರ ಕೃಷಿ ಸಂಬಂಧಿತ ಅಗತ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.

ಇದುವರೆಗೆ ಒದಗಿಸಿದ ನೆರವು ಹಾಗೂ ಮುಂದಿನ ಕಂತಿನ ನಿರೀಕ್ಷೆ:

ಈ ಯೋಜನೆಯಡಿಯಲ್ಲಿ ವರ್ಷಕ್ಕೆ ಮೂರು ಕಂತುಗಳಲ್ಲಿ ಪ್ರತಿ ತ್ರೈಮಾಸಿಕಕ್ಕೂ 2000 ರೂ. ನೆರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ(Bank account) ನೇರವಾಗಿ ಜಮೆ ಮಾಡಲಾಗುತ್ತದೆ. ಇದುವರೆಗೆ 19 ಕಂತುಗಳನ್ನು ರೈತರಿಗೆ ಬಿಟ್ಟಿದ್ದಾರೆ. ಇದೀಗ, ರೈತರು 20ನೇ ಕಂತಿಗಾಗಿ ಕಾಯುತ್ತಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, 20ನೇ ಕಂತಿನ ಹಣ ಜೂನ್ 2025ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಈ ಹಣ ಪಡೆಯಲು ರೈತರು ಒಂದು ಅತ್ಯಗತ್ಯವಾದ ಕೆಲಸವನ್ನು ಏಪ್ರಿಲ್ 30ರೊಳಗೆ(April 30) ಪೂರ್ಣಗೊಳಿಸಲೇಬೇಕು.

ಏಪ್ರಿಲ್ 30ರೊಳಗೆ ಕಡ್ಡಾಯವಾಗಿ ಈ ಕೆಲಸ ಮಾಡಬೇಕು:

ಕೃಷಿ ಇಲಾಖೆಯು ಇತ್ತೀಚೆಗೆ ರೈತರಿಗೆ “ಕಿಸಾನ್ ಗುರುತಿನ ಚೀಟಿ” (Farmer Unique ID) ಮಾಡಲು ಸೂಚನೆ ನೀಡಿದ್ದು, ಈ ಪ್ರಕ್ರಿಯೆ ಏಪ್ರಿಲ್ 30ರೊಳಗೆ ಪೂರ್ಣಗೊಳ್ಳಬೇಕು. ಈ ಗುರುತಿನ ಚೀಟಿ ಇಲ್ಲದೆ, ರೈತರಿಗೆ ಮುಂದಿನ ಕಂತು ನೀಡುವಲ್ಲಿ ತೊಂದರೆ ಉಂಟಾಗಬಹುದು. ಈ ಪ್ರಕ್ರಿಯೆಗಾಗಿ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರ (CSC) ಅಥವಾ ಕಂದಾಯ ಇಲಾಖೆ ಕಚೇರಿಗೆ(Revenue Department Office) ಭೇಟಿ ನೀಡಬಹುದು.

ಕಿಸಾನ್ ಗುರುತಿನ ಚೀಟಿ ಎಂದರೇನು?

ಕಿಸಾನ್ ಗುರುತಿನ ಚೀಟಿ(Kisan Identity Card) ಎಂದರೆ ರೈತರಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಡಿಜಿಟಲ್ ಐಡಿಯಾಗಿದೆ(digital ID). ಇದು ಆಧಾರ್‌ ಕಾರ್ಡ್ ಮಾದರಿಯಲ್ಲಿದ್ದು, ರೈತರ ಭೂಸ್ವತ್ತು, ಬೆಳೆ ವಿವರ, ರೈತರ ಹೆಸರು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಐಡಿಯನ್ನು ರಾಜ್ಯದ ಭೂ ದಾಖಲೆಗಳೊಂದಿಗೆ ಲಿಂಕ್ ಮಾಡಲಾಗುತ್ತದೆ. ಈ ಗುರುತಿನ ಮೂಲಕ ಸರ್ಕಾರವು ಬೆಳೆ ವಿಮೆ, ಕೃಷಿ ಸಾಲ ಹಾಗೂ ನಗದು ಪಾವತಿಗಳನ್ನು ಹೆಚ್ಚು ನಿಖರವಾಗಿ ನಿರ್ವಹಿಸಬಹುದು.

KYC ಪೂರ್ಣಗೊಳಿಸುವುದು ಕೂಡ ಕಡ್ಡಾಯ:

ಇದರ ಜೊತೆಗೆ, ಪ್ರತಿಯೊಬ್ಬ ಫಲಾನುಭವಿಯು ತಮ್ಮ e-KYC ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿರಬೇಕು. ಇಲ್ಲದೆ ಇದುವರೆಗಿನ ಹಣ ಪಡೆದುಕೊಂಡವರಿಗೂ ಮುಂದಿನ ಕಂತು ತಡವಾಗಬಹುದು ಅಥವಾ ಸಿಗದೇ ಹೋಗಬಹುದು. ರೈತರು ತಮ್ಮ ನೋಂದಣಿಯ ಸ್ಥಿತಿಯನ್ನು https://pmkisan.gov.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಇಲ್ಲಿ ಆಧಾರ್ ಸಂಖ್ಯೆ(Aadhaar Number) ಅಥವಾ ಮೊಬೈಲ್ ನಂಬರ್ ಅಥವಾ ಬ್ಯಾಂಕ್ ಖಾತೆ ನಮೂದಿಸಿ ತಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು.

ಪಿಎಂ ಕಿಸಾನ್ ಯೋಜನೆಯ(PM Kisan Scheme) 20ನೇ ಕಂತಿನ ಹಣವನ್ನು ಪಡೆದುಕೊಳ್ಳಲು ರೈತರು ತಮ್ಮ ಕಿಸಾನ್ ಗುರುತಿನ ಚೀಟಿ ಮಾಡಿಸಿಕೊಳ್ಳುವುದು ಹಾಗೂ e-KYC ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಎರಡು ಪ್ರಕ್ರಿಯೆಗಳನ್ನು ಏಪ್ರಿಲ್ 30ರೊಳಗೆ(April 30) ಮಾಡಿಸಿಕೊಳ್ಳದಿದ್ದರೆ, ಸರ್ಕಾರದಿಂದ ನೇರ ಹಣ ವರ್ಗಾವಣೆ ಸ್ಥಗಿತಗೊಳ್ಳಬಹುದು. ಆದ್ದರಿಂದ ಎಲ್ಲ ರೈತರು ಸಮಯಮಿತಿಯಲ್ಲಿ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!