Gold Rate Today : ಚಿನ್ನದ ಬೆಲೆ ಶನಿವಾರವು ಭಾರಿ ಏರಿಕೆ.! ಇಲ್ಲಿದೆ ಇಂದಿನ ದರ ಪಟ್ಟಿ 

Picsart 25 04 19 07 40 15 846

WhatsApp Group Telegram Group

ಚಿನ್ನ-ಬೆಳ್ಳಿ ಬೆಲೆ ಏರಿಕೆ: ಚಿನ್ನದ ದರ ದಾಖಲೆ ಮಟ್ಟ ತಲುಪಿದಂತೆ ಗ್ರಾಹಕರಿಗೆ ಮತ್ತೊಂದು ಆರ್ಥಿಕ ಆಘಾತ

ಇದೀಗ ಚಿನ್ನ ಮತ್ತು ಬೆಳ್ಳಿ (Gold and Silver) ಖರೀದಿಸಲು ಯೋಚಿಸುತ್ತಿರುವವರು ಮತ್ತೊಮ್ಮೆ ಚಿಂತೆ ಮಾಡಬೇಕಾದ ಸಮಯ ಬಂದಿದೆ. ಏಕೆಂದರೆ, ಚಿನ್ನದ ಬೆಲೆ ಇತ್ತೀಚೆಗೆ ನಿರಂತರ ಏರಿಕೆಯನ್ನು ಕಾಣುತ್ತಿದ್ದು, ಇದು ಗ್ರಾಹಕರಿಗೆ ಹೊಸದೊಂದು ಆರ್ಥಿಕ ಬಾಧೆಯನ್ನು (Economic problem) ತಂದಿದೆ.ವಿಶೇಷವಾಗಿ ಭಾರತದಂತಹ ಸಂಸ್ಕೃತಿಪರ ದೇಶದಲ್ಲಿ ಚಿನ್ನ ಖರೀದಿಯು ಸಂಪ್ರದಾಯ, ಹೂಡಿಕೆ ಮತ್ತು ಭವಿಷ್ಯದ ಭದ್ರತೆಯ ವಿಷಯವಾಗಿ ನೋಡುವುದರಿಂದ, ಈ ಬೆಲೆ ಏರಿಕೆಗೆ ವಿಶೇಷ ಮಹತ್ವವಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 19, 2025: Gold Price Today

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ನಿರಂತ ಏರಿಕೆಯಾಗುತ್ತಿದ್ದು, ಗ್ರಾಹಾಕರು ಚಿನ್ನ ಖರೀದಿಸಲು ನೂರು ಬಾರಿ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರತಿದಿನ ಪ್ರತಿಕ್ಷಣ ದರದಲ್ಲಿ ಬದಲಾವಣೆಗಳು ಆಗಿತ್ತಿದ್ದು, ಯಾವಾಗ ಯಾವ ರೀತಿ ದರ ಇರುತ್ತದೆ ಎಂದು ಊಹಿಸಲು ಕಷ್ಟವಾಗುತ್ತಿದೆ. ಹಾಗಿದ್ದರೆ, ಏಪ್ರಿಲ್ 19, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 946  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,759ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,320 ಆಗಿದೆ. ನಿನ್ನಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 25ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 90, 900 ರೂ. ನಷ್ಟಿದ್ದು. ನಿನ್ನೆಗೆ ಹೋಲಿಸಿದರೆ ಯಾವುದೇ ಬದಲಾವಣೆಗಳು ಆಗಿಲ್ಲ.

ಹೌದು, ಹಬ್ಬದ ಸೀಸನ್ ಮುಗಿದರೂ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿದೆ. ಚಿನ್ನ ಖರೀದಿಸಲು ಯೋಜನೆ ಮಾಡಿಕೊಂಡಿದ್ದ ಗ್ರಾಹಕರಿಗೆ ಇಂದು ಮತ್ತೊಮ್ಮೆ ನಿರಾಸೆ ಎದುರಾಗುವಂತಾಗಿದೆ. ಚಿನ್ನದ ದರ (Gold rate) ಇತ್ತೀಚಿನ ದಿನಗಳಲ್ಲಿ ನಿರಂತರ ಏರಿಕೆಯಾಗುತ್ತಲೇ ಇದ್ದು, ಇಂದಂತೂ ಇದು ದಾಖಲೆಯ ಮಟ್ಟ ತಲುಪಿದೆ. ಚಿನ್ನವು ಭಾರತದಲ್ಲಿ ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಆರ್ಥಿಕ ಹೂಡಿಕೆಯ (Economic Investment) ದೃಷ್ಠಿಯಿಂದಲೂ ಪ್ರಮುಖ ಸ್ಥಾನ ಪಡೆದಿದ್ದು, ಅದರ ಬೆಲೆಯಲ್ಲಿ ಆಗುವ ಬದಲಾವಣೆಗಳು ಸಾರ್ವಜನಿಕರ ಆರ್ಥಿಕ ಯೋಜನೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ.

ಏಪ್ರಿಲ್ 18,2025 ರ ಚಿನ್ನದ ದರಗಳ ವಿವರ ಹೀಗಿದೆ:

99.9% ಪರಿಶುದ್ಧತೆಯ ಚಿನ್ನದ ದರ, ನಿನ್ನೆ ಮತ್ತಷ್ಟು ಏರಿಕೆಯತ್ತ ಸಾಗಿದ್ದು, ಒಟ್ಟಾರೆಯಾಗಿ ಈಗಿನ ದರ ₹97,995ನಷ್ಟಿದೆ. .

ಏಪ್ರಿಲ್ 18,2025 ರ ವಿವಿಧ ಕ್ಯಾರೆಟ್‌ಗಳ ಚಿನ್ನದ ದರ:

22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹25 ರಷ್ಟು ಏರಿಕೆಯಾಗಿ  ₹8,945 ಆಗಿದೆ.
24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹27 ಏರಿಕೆಯಾಗಿ ₹9,758 ಆಗಿದೆ.
18 ಕ್ಯಾರೆಟ್ ಚಿನ್ನ: ₹21 ಏರಿಕೆಯೊಂದಿಗೆ ₹7,319 ಆಗಿದೆ.

ಬೆಳ್ಳಿ ದರದ (Silver rate) ಸ್ಥಿತಿ :

ಬೆಳ್ಳಿ ಬೆಲೆಯು ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಏರುತ್ತಲೇ ಇದ್ದು, ನಿನ್ನೆ ಅದು ₹1 ಲಕ್ಷ ಗಡಿಯನ್ನು ತಲುಪಿತ್ತು. ಆದರೆ ನಿನ್ನೆ ಬೆಲೆಯಲ್ಲಿ ₹100 ಇಳಿಕೆ ಕಂಡುಬಂದಿದ್ದು, ಪ್ರಸ್ತುತ ಬೆಳ್ಳಿ ದರ ಪ್ರತಿ ಕೆ.ಜಿಗೆ ₹99,900 ಆಗಿದೆ.

ಈ ಬೆಲೆ ಏರಿಕೆಗೆ ಆಂತರಿಕ ಹಾಗೂ ಜಾಗತಿಕ ಬದಲಾವಣೆಗಳು ಕಾರಣವಾಗಿವೆ. ಅಮೆರಿಕದ ಆರ್ಥಿಕ ನೀತಿಗಳು (American Economic values), ಹೂಡಿಕೆದಾರರ ಮನೋಭಾವ, ಸ್ಥಳೀಯ ಬೇಡಿಕೆ ಹಾಗೂ ರೂಪಾಯಿ ಮೌಲ್ಯದ ಕುಸಿತ ಎಲ್ಲವೂ ಸೇರಿ ಬೆಲೆಗೆ ಪ್ರಭಾವ ಬೀರುತ್ತಿವೆ.

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇದು ಸೂಕ್ತ ಕಾಲವೇ ಎಂಬ ಪ್ರಶ್ನೆಗೆ ಉತ್ತರಿಸುವ ಮೊದಲು, ನಾವೆಲ್ಲರೂ ನಮ್ಮ ಬಜೆಟ್‌, ಹೂಡಿಕೆ ಉದ್ದೇಶ ಮತ್ತು ಮಾರುಕಟ್ಟೆಯ ಚಲನವಲನಗಳನ್ನು (Market changes) ನಿಜವಾಗಿ ಅರ್ಥಮಾಡಿಕೊಳ್ಳುವುದು ಬಹಳ ಅವಶ್ಯಕ. ಮುಂದಿನ ದಿನಗಳಲ್ಲಿ ಚಿನ್ನದ ದರಗಳು ಇನ್ನು ಏರಿಕೆಯಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಗ್ರಾಹಕರು ಜಾಣ್ಮೆಯಿಂದ ಮುನ್ನೆಡೆಯುವುದು ಉತ್ತಮ.
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿರುವ ಈ ಬದಲಾವಣೆಗಳು ಹೂಡಿಕೆದಾರರು ಮತ್ತು ಸಾಮಾನ್ಯ ಗ್ರಾಹಕರಿಗೆ ಪ್ರಮುಖ ಸೂಚನೆಗಳನ್ನು ನೀಡುತ್ತವೆ. ಹಬ್ಬದ ನಂತರದ ಈ ಬೆಲೆ ಏರಿಕೆಯಿಂದ ಚಿನ್ನ ಖರೀದಿಯನ್ನು ಮುಂದೂಡುವವರು ಹೆಚ್ಚಾಗಬಹುದು. ಅಂತಹ ಸಂದರ್ಭದಲ್ಲಿ ಬಡ್ಡಿದರ, ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೃತ್ತಿಗಳು (International market trends) ಮತ್ತು ರೂಪಾಯಿ ಮೌಲ್ಯದ ಬದಲಾವಣೆಗಳತ್ತ ಗಮನ ಹರಿಸುವುದು ಅವಶ್ಯಕ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!