ಮಕ್ಕಳ ಆಧಾರ್ ನಿಷ್ಕ್ರಿಯಗೊಳ್ಳದಂತೆ ಎಚ್ಚರಿಕೆ: 5ನೇ ವರ್ಷದ ನಂತರ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!
ಖಾಸಗಿ ಮತ್ತು ಸರ್ಕಾರಿ ಸೇವೆಗಳಲ್ಲಿ (Private and Government services) ಗುರುತಿನ ಪ್ರಾಮುಖ್ಯತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂದಿನ ಯುಗದಲ್ಲಿ, ಭಾರತೀಯ ನಾಗರಿಕನಿಗೆ ಆಧಾರ್ ಕಾರ್ಡ್ (Adhar card) ಎಂಬುದು ಮೂಲಭೂತ ಹಾಗೂ ಅತ್ಯಂತ ಅವಶ್ಯಕ ದಾಖಲೆಗಳ ಪೈಕಿ ಒಂದು ಆಗಿದೆ. ಯಾವುದೇ ಸರ್ಕಾರಿ ಯೋಜನೆಗಳ (Government schemes) ಪ್ರಯೋಜನ ಪಡೆಯಲು ಅಥವಾ ಶೈಕ್ಷಣಿಕ, ಆರೋಗ್ಯ, ಬ್ಯಾಂಕಿಂಗ್ ಹಾಗೂ ಇತರ ಸೇವೆಗಳ ಲಾಭ ಪಡೆಯಲು ಇದು ಬಹಳ ಮುಖ್ಯವಾದ ದಾಖಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದೇ ಕಾರಣಕ್ಕೆ, ಇದೀಗ ಮಕ್ಕಳಿಗೂ “ಬಾಲ್ ಆಧಾರ್” (Bal adhar) ಎಂಬ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಆದರೆ, ಅನೇಕ ಪೋಷಕರಿಗೆ ಇದರ ಬಗ್ಗೆ ಪೂರಕ ಮಾಹಿತಿ ಇಲ್ಲದೆ ಇರಬಹುದು. ಬಯೋಮೆಟ್ರಿಕ್ ತಪಾಸಣೆಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ, ಮಕ್ಕಳ ಆಧಾರ್ ಕಾರ್ಡ್ ನಿಷ್ಕ್ರಿಯವಾಗುವ ಅಪಾಯವಿದೆ. ಬಾಲ್ ಆಧಾರ್ ಬಗ್ಗೆ ಪೋಷಕರು ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು, ಬಹುತೆಕ ಪೋಷಕರಿಗೆ ತಿಳಿದಿಲ್ಲದ ಮುಖ್ಯ ವಿಷಯವೊಂದಿದೆ, ಅದೇನೆಂದರೆ ಮಗುವಿಗೆ ಐದು ವರ್ಷ ತುಂಬಿದ ನಂತರ ಅವನು ಅಥವಾ ಅವಳು ಬಯೋಮೆಟ್ರಿಕ್ (Bio metric) ಪರಿಶೀಲನೆಗೆ ಒಳಪಟ್ಟರೆ ಮಾತ್ರ ಆಧಾರ್ ಕಾರ್ಡ್ ಸಕ್ರಿಯವಾಗಿರುತ್ತದೆ. ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದರೆ, ನಿಮ್ಮ ಮಗುವಿನ ಬಾಲ್ ಆಧಾರ್ ಕಾರ್ಡ್ ನಿಷ್ಕ್ರಿಯವಾಗುವ ಅಪಾಯವಿದೆ.
ಬಾಲ ಆಧಾರ್ ಎಂದರೇನು?:
ಬಾಲ ಆಧಾರ್ ಎಂದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಆಧಾರ್ ಕಾರ್ಡ್ ಆಗಿದ್ದು, ಇದರಲ್ಲಿ ಯಾವುದೇ ಬಯೋಮೆಟ್ರಿಕ್ ಮಾಹಿತಿ (ಬೆರಳಚ್ಚುಗಳು, ನೇತ್ರದ ಸ್ಕ್ಯಾನ್) ದಾಖಲೆಯಾಗಿರುವುದಿಲ್ಲ. ಇದನ್ನು ಶಿಶುವಿನ ಫೋಟೋ, ಜನನ ಪ್ರಮಾಣಪತ್ರ ಮತ್ತು ಪೋಷಕರ ಆಧಾರ್ (Birth certificate and Parents Adhar) ವಿವರಗಳ ಆಧಾರದ ಮೇಲೆ ನೀಡಲಾಗುತ್ತದೆ. ಈ ಕಾರ್ಡ್ ನೀಲಿ ಬಣ್ಣದ ಥೀಮ್ ಹೊಂದಿದ್ದು, ಮಗುವಿಗೆ ಶೈಕ್ಷಣಿಕ ಪ್ರವೇಶ, ಆರೋಗ್ಯ ಸೇವೆ, ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಾಯಕರಾಗುತ್ತದೆ.
ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವ ಅವಶ್ಯಕತೆ ಏನು?:
ಶಾಲಾ ಪ್ರವೇಶಗಳ ಸಮಯದಲ್ಲಿ ಆಧಾರ್ ಸಂಖ್ಯೆ (Adhar Number) ಕಡ್ಡಾಯವಾಗಿ ಕೇಳಲಾಗುತ್ತದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಕ್ಕಳ ಯೋಜನೆಗಳು (ಅಮೃತಾಹಾರ ಯೋಜನೆ, ಉಚಿತ ಆರೋಗ್ಯ ತಪಾಸಣೆ, ವಿದ್ಯಾರ್ಥಿವೇತನ, ಇತ್ಯಾದಿ) ಆಧಾರ್‌ಗೆ ಆಧಾರಿತವಾಗಿವೆ.
ಬ್ಯಾಂಕ್ ಖಾತೆ ತೆರೆಯುವುದು, ವಿಮೆ (Insurance) ಅಥವಾ ಇತರ ಸೇವೆಗಳಿಗೆ ದಾಖಲಿಸುವ ಸಂದರ್ಭದಲ್ಲಿಯೂ ಆಧಾರ್ ಅಗತ್ಯವಾಗಬಹುದು.
ಬಾಲ್ ಆಧಾರ್ ಅನ್ನು ನಿಷ್ಕ್ರಿಯಗೊಳಿಸದಿರಲು ಪೋಷಕರು ಮಾಡಬೇಕಾದ ಪ್ರಮುಖ ಕೆಲಸ:
5 ವರ್ಷದ ನಂತರ ಮಗುವಿನ ಆಧಾರ್‌ಗೆ ಬಯೋಮೆಟ್ರಿಕ್ ತಪಾಸಣೆ (fingerprints ಮತ್ತು iris scan) ಅಗತ್ಯವಿದೆ. ಈ ಪ್ರಕ್ರಿಯೆ ಮಾಡದೆ ಬಿಟ್ಟರೆ, ಆಧಾರ್ ನಿಷ್ಕ್ರಿಯವಾಗಬಹುದು. ಹೀಗಾಗಿ, ಮಗುವಿಗೆ 5 ವರ್ಷ ತುಂಬಿದ ತಕ್ಷಣ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರೈಸಬೇಕು. ಇದೇ ರೀತಿಯಾಗಿ, 15ನೇ ವರ್ಷದಲ್ಲೂ ಆಧಾರ್ ನವೀಕರಣ ಅಗತ್ಯವಿರುತ್ತದೆ.
ಬಾಲ ಆಧಾರ್ ಕಾರ್ಡ್‌ಗೆ ಬೇಕಾಗುವ ದಾಖಲೆಗಳು:
ಮಗುವಿನ ಜನನ ಪ್ರಮಾಣಪತ್ರ (Birth Certificate).
ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್.
ವಿಳಾಸ ಪುರಾವೆ (ಉದಾ: ವಿದ್ಯುತ್ ಬಿಲ್, ಪಡಿತರ ಚೀಟಿ, ಬ್ಯಾಂಕ್ ಸ್ಟೇಟ್‌ಮೆಂಟ್).
ಆಧಾರ್ ನೋಂದಣಿಗೆ ಆನ್‌ಲೈನ್ ಪ್ರಕ್ರಿಯೆ:
ಹಂತ 1: UIDAI ಅಧಿಕೃತ ವೆಬ್‌ಸೈಟ್‌ಗೆ (Website) ಭೇಟಿ ನೀಡಿ – https://uidai.gov.in.
ಹಂತ 2: “Book Aadhaar Appointment” ವಿಭಾಗದಲ್ಲಿ ಹತ್ತಿರದ ಆಧಾರ್ ನೋಂದಣಿ ಕೇಂದ್ರವನ್ನು ಆರಿಸಿಕೊಳ್ಳಿ.
ಹಂತ 3: ಮಗು ಹಾಗೂ ಪೋಷಕರ ಅಗತ್ಯ ದಾಖಲೆಗಳೊಂದಿಗೆ (Important Documents) ಆಯ್ದ ಕೇಂದ್ರಕ್ಕೆ ಹೋಗಿ.
ಹಂತ 4: ಮಗು ಐದು ವರ್ಷಕ್ಕಿಂತ ಕಡಿಮೆ ಇದ್ದರೆ ಫೋಟೋ ತೆಗೆದು ನೋಂದಣಿ ಪೂರ್ಣಗೊಳ್ಳುತ್ತದೆ. ಬಯೋಮೆಟ್ರಿಕ್ ಈ ಹಂತದಲ್ಲಿ ಇರುವುದಿಲ್ಲ.
ಹಂತ 5: ನೋಂದಣಿಯ ನಂತರ ಕೆಲವೇ ದಿನಗಳಲ್ಲಿ, ಆಧಾರ್ ಕಾರ್ಡ್ ಅನ್ನು ಅಂಚೆ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.
ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಹಾಗೂ ಯಾವುದೇ ಸರ್ಕಾರಿ ಸೌಲಭ್ಯಗಳಲ್ಲಿ (Government facilities) ಬೆದರಿಕೆಯಿಲ್ಲದೆ ಭಾಗವಹಿಸಲು, ಬಾಲ್ ಆಧಾರ್ ಅನ್ನು ಸಮಯಕ್ಕೆ ಸರಿಯಾಗಿ ಮಾಡಿಸಿ ಮತ್ತು ನವೀಕರಿಸಿ. ಪೋಷಕರಾಗಿ ಈ ನಿಟ್ಟಿನಲ್ಲಿ ಜಾಗೃತರಾಗುವ ಮೂಲಕ ನೀವು ಮಕ್ಕಳಿಗೆ ಉತ್ತಮ ನೆಲೆ ಸೃಷ್ಟಿಸಬಹುದು.
ಆದ್ದರಿಂದ, ನಿಮ್ಮ ಮಗುವಿಗೆ 5 ವರ್ಷ ತುಂಬಿದರೆ ತಕ್ಷಣ ಆಧಾರ್ ನವೀಕರಣ ಮಾಡಿ, ಬಯೋಮೆಟ್ರಿಕ್ ಮಾಹಿತಿ (Biometric Information) ನೀಡಲು ಮರೆಯಬೇಡಿ, ಇದನ್ನು ನಿರ್ಲಕ್ಷಿಸಿದರೆ ಮಗುವಿನ ಆಧಾರ್ ಕಾರ್ಡ್ ನಿಷ್ಕ್ರಿಯವಾಗುವ ಸಾಧ್ಯತೆ ಹೆಚ್ಚು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.