Gold Price: ಚಿನ್ನದ ಬೆಲೆಯಲ್ಲಿ ಸತತ 2ನೇ ದಿನ ಇಳಿಕೆ: ಇಂದಿನ ಚಿನ್ನ-ಬೆಳ್ಳಿ ದರಪಟ್ಟಿ

WhatsApp Image 2025 04 24 at 4.41.38 PM

WhatsApp Group Telegram Group

ಬೆಂಗಳೂರು, ಏಪ್ರಿಲ್ 24: ಚಿನ್ನದ ದರಗಳು 1 ಲಕ್ಷ ರೂಪಾಯಿ ಮಿತಿ ಮುಟ್ಟಿದ ನಂತರ ಸತತ ಎರಡನೇ ದಿನವೂ ಇಳಿಮುಖವಾಗಿವೆ. ಬುಧವಾರ ಪ್ರಾರಂಭವಾದ ಈ ಇಳಿಕೆಯ ಪ್ರವೃತ್ತಿ ಗುರುವಾರವೂ ಮುಂದುವರಿದಿದೆ. ಭಾರತದ ಜೊತೆಗೆ ವಿಶ್ವದ ಇತರ ಮಾರುಕಟ್ಟೆಗಳಲ್ಲೂ ಏಪ್ರಿಲ್ 24ರಂದು ಚಿನ್ನದ ಬೆಲೆಗಳಲ್ಲಿ ಇಳಿಕೆ ದಾಖಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನದ ಬೆಲೆಗಳು ಗಗನಕ್ಕೇರಿದ್ದನ್ನು ಅನುಸರಿಸಿ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ತಮ್ಮ ಹಣಕಾಸು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ್ದರಿಂದ ಈ ಇಳಿಕೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ, 22 ಕ್ಯಾರೇಟ್ 10 ಗ್ರಾಂ ಚಿನ್ನದ ಬೆಲೆ ಇಂದು 90,050 ರೂಪಾಯಿಗೆ ಇಳಿದಿದೆ. ಇದು 100 ರೂಪಾಯಿ ಇಳಿಕೆಯನ್ನು ಸೂಚಿಸುತ್ತದೆ. ಅದೇ ರೀತಿ, 24 ಕ್ಯಾರೇಟ್ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಇಳಿಕೆಯಾಗಿ, 10 ಗ್ರಾಂಗೆ 98,240 ರೂಪಾಯಿಗೆ ತಲುಪಿದೆ.

unnamed

ಚಿನ್ನದ ಅಂತಿಮ ಬೆಲೆಯು ತಯಾರಿಕಾ ವೆಚ್ಚ (ವೇಸ್ಟೇಜ್), ತೆರಿಗೆ ಮತ್ತು ಇತರ ಶುಲ್ಕಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ನಗರದಿಂದ ನಗರಕ್ಕೆ ಬೆಲೆಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಗ್ರಾಹಕರು ಚಿನ್ನ ಖರೀದಿಸುವ ಮೊದಲು ಸ್ಥಳೀಯ ಬೆಲೆಗಳನ್ನು ಪರಿಶೀಲಿಸುವುದು ಉತ್ತಮ.

ಬೆಳ್ಳಿಯ ಬೆಲೆಗಳು

ಬೆಳ್ಳಿಯ ದರಗಳು ಸ್ಥಿರವಾಗಿ ಉಳಿದಿವೆ. 100 ಗ್ರಾಂ ಬೆಳ್ಳಿಯ ಬೆಲೆ 10,100 ರೂಪಾಯಿಗೆ ನಿಂತಿದೆ.

ಮುಖ್ಯ ನಗರಗಳಲ್ಲಿ ಚಿನ್ನದ ಬೆಲೆಗಳು (22 ಕ್ಯಾರೇಟ್, 10 ಗ್ರಾಂ)

  • ಬೆಂಗಳೂರು: ₹90,050
  • ದೆಹಲಿ: ₹90,200
  • ಕೇರಳ: ₹90,050
  • ಮುಂಬೈ: ₹90,050
  • ಜೈಪುರ: ₹90,200
  • ಉತ್ತರ ಪ್ರದೇಶ: ₹91,150
  • ಕೋಲ್ಕತ್ತಾ: ₹90,050
  • ಅಹ್ಮದಾಬಾದ್: ₹90,100
  • ಭುವನೇಶ್ವರ್: ₹90,050
  • ಮಹಾರಾಷ್ಟ್ರ: ₹90,900

ನಗರವಾರು ಬೆಳ್ಳಿ ದರಗಳು (100 ಗ್ರಾಂ)

  • ಬೆಂಗಳೂರು: ₹10,100
  • ದೆಹಲಿ: ₹10,100
  • ಜೈಪುರ: ₹10,100
  • ಮುಂಬೈ: ₹10,100
  • ಕೇರಳ: ₹11,100
  • ಪುಣೆ: ₹10,100
  • ಕೋಲ್ಕತ್ತಾ: ₹10,100
  • ಲಕ್ನೋ: ₹10,100
  • ಅಹ್ಮದಾಬಾದ್: ₹10,100

ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ

ಹಿಂದೂಗಳು ಮತ್ತು ಜೈನರ ಪ್ರಮುಖ ಹಬ್ಬವಾದ ಅಕ್ಷಯ ತೃತೀಯಾ ಈ ವರ್ಷ ಏಪ್ರಿಲ್ 30ರಂದು ಆಚರಿಸಲ್ಪಡುತ್ತದೆ. ಸಾಂಪ್ರದಾಯಿಕವಾಗಿ ಈ ದಿನದಂದು ಚಿನ್ನ ಖರೀದಿಸುವ ಪದ್ಧತಿ ಇದೆ. ಆದರೆ, ಚಿನ್ನದ ಬೆಲೆಗಳು 1 ಲಕ್ಷ ರೂಪಾಯಿ ಮಿತಿ ಮುಟ್ಟಿರುವ ಈ ಹಂತದಲ್ಲಿ ಹಬ್ಬದ ಸಮಯದಲ್ಲಿ ಗ್ರಾಹಕರ ಬೇಡಿಕೆ ಹೇಗಿರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಚಿನ್ನದ ಬೆಲೆಗಳು ಸ್ವಲ್ಪಮಟ್ಟಿಗೆ ಸ್ಥಿರವಾಗಿವೆ. ಆದರೆ, ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾದರೆ, ಬೆಲೆಗಳು ಮತ್ತೆ ಏರಿಕೆಯಾಗಬಹುದು. ಹೀಗಾಗಿ, ಚಿನ್ನ ಖರೀದಿಸಲು ಯೋಜಿಸುವವರು ಮಾರುಕಟ್ಟೆ ಪರಿಸ್ಥಿತಿಯನ್ನು ಬಾರಿ ಎಚ್ಚರಿಕೆಯಿಂದ ಗಮನಿಸಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!