Gold Rate Today: ಕೊನೆಗೂ ಚಿನ್ನದ ದರ ಇಳಿಕೆ! ಇಂದಿನ ಬೆಳ್ಳಿ-ಬಂಗಾರ ಬೆಲೆ ಇಲ್ಲಿದೆ.

IMG 20250425 WA0001

WhatsApp Group Telegram Group

ಚಿನ್ನದ ಬೆಲೆ ಇಳಿಕೆ: ಹೂಡಿಕೆದಾರರಿಗೆ ಮತ್ತು ಆಭರಣ ಪ್ರಿಯರಿಗೆ ಸಂತಸದ ಕ್ಷಣ!

ಭಾರತದಲ್ಲಿ ಚಿನ್ನವೆಂದರೆ (Gold) ಕೇವಲ ಆಭರಣವಷ್ಟೆ ಅಲ್ಲ, ಅದು ಸಂಸ್ಕೃತಿ, ಸಾಂಪ್ರದಾಯಿಕತೆಯ ಸಂಕೇತ ಮತ್ತು ಭದ್ರ ಹೂಡಿಕೆಯ ಬಹಳ ಮುಖ್ಯ ಸಂಪತ್ತು. ಸಾವಿರಾರು ವರ್ಷಗಳ ಹಿಂದಿನಿಂದ ಚಿನ್ನವು ಭಾರತೀಯ ಜೀವನಶೈಲಿಯಲ್ಲಿ ಅವಿಭಾಜ್ಯ ಅಂಗವಾಗಿದೆ. ಮದುವೆಗಳು, ಉತ್ಸವಗಳು, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇನ್ನೂ ಹಲವಾರು ಸಂದರ್ಭಗಳಲ್ಲಿ ಚಿನ್ನದ ಬಳಕೆಯು ಸಹಜ. ಅಂತಹ ಚಿನ್ನದ ಮೌಲ್ಯದಲ್ಲಿ (In gold value) ದಿನದಿಂದ ದಿನಕ್ಕೆ ಆಗುವ ಬದಲಾವಣೆಗಳು ಲಕ್ಷಾಂತರ ಜನರ ಆರ್ಥಿಕ ನಿರ್ಧಾರಗಳನ್ನು ರೂಪಿಸುತ್ತವೆ. ನಿನ್ನೆಯಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದು ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ಸ್ವಲ್ಪ ನಿರಾಳತೆ ತಂದುಕೊಟ್ಟಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 25, 2025: Gold Price Today

ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತವನ್ನು ನಾವು ನೋಡಿದ್ದೇವೆ. ಅದರಲ್ಲೂ ಕೆಲವು ದಿನಗಳಲ್ಲಿ ಒಂದು ಲಕ್ಷ ದಾಟಿದ ಚಿನ್ನದ ದರ ಗ್ರಾಹಕರ ಮನಸ್ಸಲ್ಲಿ ಅಶಾಂತಿಯನ್ನು ಉಂಟು ಮಾಡಿತ್ತು. ಆದರೆ ನೆನ್ನೆ ಸಂಜೆಯಿಂದ ಮತ್ತೆ ಚಿನ್ನದ ದರ ಇಳಿಕೆಯನ್ನು ಕಾಣುತ್ತಿದ್ದು ಗ್ರಾಹಕರಿಗೆ ಕೊಂಚ ಸಮಾಧಾನವನ್ನು ತಂದುಕೊಟ್ಟಿದೆ ಹಾಗಿದ್ದರೆ, ಏಪ್ರಿಲ್ 25, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 004  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,823 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,367 ಆಗಿದೆ. ನಿನ್ನೆಗೆ ಹೋಲಿಸಿದರೆ 10 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,800 ರೂ. ನಷ್ಟಿದ್ದು. ನಿನ್ನಗೆ ಹೋಲಿಸಿದರೆ 100 ರೂ ನಷ್ಟು ಇಳಿಕೆಯಾಗಿದೆ.

ಇತ್ತೀಚೆಗೆ ಚಿನ್ನದ ಬೆಲೆಗಳಲ್ಲಿ ನಡೆದಿರುವ ಭಾರಿ ಏರಿಕೆಯ ನಂತರ, ಕಳೆದ ಕೆಲ ದಿನಗಳಿಂದ ಇಳಿಕೆ ಕಾಣುತ್ತಿದೆ. ನಿನ್ನೆ ಕೂಡ ಬೆಲೆ ಇಳಿಕೆಯಾಗಿದ್ದು (Price increased) ಗ್ರಾಹಕರು ಖುಷಿ ಪಡುವಂತೆ ಮಾಡಿದೆ. ಇನ್ನು, ಚಿನ್ನದ ದರವು ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿಲ್ಲವಾದರೂ, ಸ್ಥಿರತೆಗೆ ಬಂದಿರುವುದು ಒಂದು ರೀತಿ ಸಮಾಧಾನದ ವಿಷಯ.

ಏಪ್ರಿಲ್ 24, 2025 ರಂದು ಚಿನ್ನದ ದರ ವಿವರ :

22 ಕ್ಯಾರಟ್ ಚಿನ್ನದ ದರ,
1 ಗ್ರಾಂ: ₹9,005
10 ಗ್ರಾಂ: ₹90,050 (₹100 ಇಳಿಕೆ)
100 ಗ್ರಾಂ: ₹9,00,500 (₹1,000 ಇಳಿಕೆ)

24 ಕ್ಯಾರಟ್ ಚಿನ್ನದ ದರ,
1 ಗ್ರಾಂ: ₹9,824
10 ಗ್ರಾಂ: ₹98,240 (₹110 ಇಳಿಕೆ)
100 ಗ್ರಾಂ: ₹9,82,400 (₹1,100 ಇಳಿಕೆ)

18 ಕ್ಯಾರಟ್ ಚಿನ್ನದ ದರ:
1 ಗ್ರಾಂ: ₹7,368
10 ಗ್ರಾಂ: ₹73,680 (₹80 ಇಳಿಕೆ)
100 ಗ್ರಾಂ: ₹7,36,800 (₹800 ಇಳಿಕೆ)

ವಿವಿಧ ನಗರಗಳಲ್ಲಿ ಏಪ್ರಿಲ್ 24, 2025 ರಂದು ಚಿನ್ನದ ದರ (1 ಗ್ರಾಂಗೆ):

ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಮುಂಬೈ: ₹9,005 (22K), ₹9,824 (24K), ₹7,368 (18K)
ದೆಹಲಿ: ₹9,020 (22K), ₹9,834 (24K), ₹7,380 (18K)
ಅಹಮದಾಬಾದ್, ಬರೋಡಾ: ₹9,010 (22K), ₹9,829 (24K), ₹7,372 (18K)

ಏಪ್ರಿಲ್ 24, 2025 ರಂದು ಬೆಳ್ಳಿಯ ದರ:
1 ಗ್ರಾಂ: ₹100.90
10 ಗ್ರಾಂ: ₹1,009
100 ಗ್ರಾಂ: ₹10,090
1 ಕೆಜಿ: ₹1,00,900 (₹100 ಇಳಿಕೆ)

ಚಿನ್ನದ ದರ ಏರಿಕೆ ಅಥವಾ ಇಳಿಕೆಗೆ ಕಾರಣವೇನು(Causes)?:

ಚಿನ್ನದ ದರವನ್ನು ಪ್ರಭಾವಿತ ಮಾಡುವ ಅಂಶಗಳು ಬಹುಮಟ್ಟಿಗೆ ಜಾಗತಿಕ ಆರ್ಥಿಕತೆ, ರಾಜಕೀಯ ಸ್ಥಿರತೆ, ಬಡ್ಡಿದರಗಳು, ಮೌಲ್ಯ ವಿನಿಮಯ ದರಗಳು ಮತ್ತು ಚಿನ್ನದ ಉತ್ಪಾದನೆ-ಬೇಡಿಕೆ ಇತ್ಯಾದಿಗಳಿಂದ ನಿಗದಿಯಾಗುತ್ತವೆ. ಇತ್ತೀಚೆಗೆ ಅಮೆರಿಕದ ಫೆಡರಲ್ ರೀಸರ್ವ್ (American Federal Reserve) ಬಡ್ಡಿದರವನ್ನು ಸ್ಥಿರವಾಗಿ ಉಳಿಸುವ ನಿರ್ಧಾರ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿತಿಗತಿಯ ಸುಧಾರಣೆಯು ಚಿನ್ನದ ಮೇಲಿನ ಒತ್ತಡವನ್ನು ಕಡಿಮೆ ಮಾಡಿರುವ ಸಾಧ್ಯತೆ ಇದೆ.

ಸ್ಪಾಟ್ ಗೋಲ್ಡ್ (spot gold) ಸ್ಥಿತಿಗತಿ ಯಾವರೀತಿಯಿದೆ:

ಏಪ್ರಿಲ್ 24 ರಂದು ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್‌ಗೆ $3,335.39ರ ಮಟ್ಟಿಗೆ 1.5% ಏರಿಕೆಯಾಗಿದ್ದು, ಅಮೆರಿಕದ ಫ್ಯೂಚರ್ ಗೋಲ್ಡ್ ಸಹ $3,344ರ ಮಟ್ಟಿಗೆ ವ್ಯವಹಾರ ನಡೆಸಿದೆ. ಇದರ ಪರಿಣಾಮ ಭಾರತದಲ್ಲಿ ಚಿನ್ನದ ಬೆಲೆಯ ಏರಿಳಿತ ನಿರ್ಧಾರವಾಗುತ್ತಿದೆ.

ಇಂದು ಚಿನ್ನದ ದರಗಳಲ್ಲಿ ಕಂಡುಬಂದಿರುವ ಇಳಿಕೆ ತಾತ್ಕಾಲಿಕವಾದರೂ, ಭಾರತದಲ್ಲಿ ಚಿನ್ನದ ಖರೀದಿದಾರರಿಗೆ ಇದು ಒಳ್ಳೆಯ ಅವಕಾಶ. ಆಭರಣಗಳ (jewelleries) ಮೂಲಕ ಪ್ರತಿಷ್ಠೆ ಕಾಪಾಡಿಕೊಳ್ಳಲು ಇಚ್ಛಿಸುವವರು, ಅಥವಾ ಭದ್ರ ಹೂಡಿಕೆಗಾಗಿ ಚಿನ್ನ ಖರೀದಿಸಲು ಉತ್ಸುಕರಾದವರು ಇದು ಸರಿಯಾದ ಸಮಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!