ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೇಲ್ವಿಚಾರಕರ ನೇಮಕಾತಿ 2025: 150 ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಲು ಮೇ 22ರೊಳಗೆ ಅವಕಾಶ!
ಬೆಂಗಳೂರು ನಗರ ಅಭಿವೃದ್ಧಿಯ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (Bangalore Metro Rail Corporation Limited , BMRCL) ತನ್ನ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗಕ್ಕಾಗಿ 150 ಮೇಂಟೇನರ್(150 Maintainer posts) ಹುದ್ದೆಗಳ ನೇಮಕಾತಿಗಾಗಿ ಬಹು ನಿರೀಕ್ಷಿತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆ ವಿಶೇಷವಾಗಿ ನಿವೃತ್ತ ಸೇನಾ ಸಿಬ್ಬಂದಿಗಾಗಿ ಆಯೋಜಿಸಲಾಗಿದೆ ಮತ್ತು ಇದು ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿವರಗಳು
ಸಂಸ್ಥೆ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL)
ಹುದ್ದೆಯ ಹೆಸರು: ಮೇಲ್ವಿಚಾರಕ (Maintainer)
ಒಟ್ಟು ಹುದ್ದೆಗಳು: 150
ಅರ್ಜಿ ಪ್ರಾರಂಭ ದಿನಾಂಕ: 23 ಏಪ್ರಿಲ್ 2025
ಅರ್ಜಿ ಕೊನೆ ದಿನಾಂಕ: 22 ಮೇ 2025
ಅಧಿಕೃತ ವೆಬ್‌ಸೈಟ್: bmrc.co.in
ಅರ್ಹತಾ ಮಾನದಂಡಗಳು(Eligibility Criteria):
ಅಭ್ಯರ್ಥಿಗಳು ಕನಿಷ್ಠ ಮೆಟ್ರಿಕ್ಯುಲೇಷನ್ (SSLC ಅಥವಾ ಸಮಾನ ಪ್ರಮಾಣಪತ್ರ) ಜೊತೆಗೆ ಸಂಬಂಧಿತ ITI ತಾಂತ್ರಿಕ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು. ಆಯ್ಕೆಗೊಂಡಿರುವ ಟ್ರೇಡ್‌ಗಳು ಇವು:
ಎಲೆಕ್ಟ್ರಿಷಿಯನ್(Electrician)
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್(Instrument Mechanic)
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್(Electronics mechanic)
ವೈರ್‌ಮ್ಯಾನ್(Wireman)
ಫಿಟ್ಟರ್(Fitter)
ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್‌ವೇರ್(Mechanic Computer Hardware)
ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್(Industrial Electronics)
ಇನ್‌ಫರ್ಮೇಶನ್ ಟೆಕ್ನಾಲಜಿ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಮೆಂಟೆನನ್ಸ್(Information Technology and Electronics System Maintenance)
ಮೆಕ್ಯಾನಿಕ್ ಸಂವಹನ ಸಾಧನ ನಿರ್ವಹಣೆ(Mechanic communication device maintenance)
ಮೆಕ್ಯಾನಿಕ್ ಮೆಕಾಟ್ರಾನಿಕ್ಸ್(Mechanic Mechatronics)
ಅಥವಾ, ರಕ್ಷಣಾ ಸೇವೆಗಳಿಂದ ಹೊಂದಿದ ಸಮಾನ ಪ್ರಮಾಣಪತ್ರವನ್ನು (NCVT/NCTVT/NAC) ಬಿಎಂಆರ್‌ಸಿಎಲ್ ಮಾನ್ಯತೆ ನೀಡುತ್ತದೆ.
ವಯಸ್ಸಿನ ಮಿತಿ(Age Limit):
ಅಭ್ಯರ್ಥಿಗಳ ವಯಸ್ಸು ಅತ್ಯಧಿಕ 50 ವರ್ಷಗಳೊಳಗೆ ಇರಬೇಕು. ಸರ್ಕಾರದ ನಿಯಮಾನುಸಾರ ಮೀಸಲು ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ದೊರೆಯಲಿದೆ.
ಆಯ್ಕೆ ಪ್ರಕ್ರಿಯೆ(Selection Process):
ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ. ಬಿಎಂಆರ್‌ಸಿಎಲ್ ತನ್ನ ಸೇವೆಗಳ ಗುಣಮಟ್ಟವನ್ನು ಕಾಪಾಡಲು ಶ್ರೇಷ್ಠ ಪ್ರತಿಭೆಗಳನ್ನು ಆಯ್ಕೆ ಮಾಡುವ ಉದ್ದೇಶ ಹೊಂದಿದೆ.
ವೇತನ ಶ್ರೇಣಿ(Salary range):
ಮೇಲ್ವಿಚಾರಕರಿಗೆ ಬಿಎಂಆರ್‌ಸಿಎಲ್ IDA ವೇತನ ಶ್ರೇಣಿಯಂತೆ (₹25,000 – ₹59,060) ಸಂಬಳ ನೀಡುತ್ತದೆ. ಜೊತೆಗೆ ವರ್ಷಕ್ಕೊಮ್ಮೆ 3% ವಾರ್ಷಿಕ ವೇತನ ಹೆಚ್ಚಳ ಮತ್ತು BMRCL ನಿಯಮಾನುಸಾರ ಅನೇಕ ಭತ್ಯೆಗಳು ದೊರೆಯುತ್ತವೆ.
ಅರ್ಜಿ ಸಲ್ಲಿಕೆ ಹೇಗೆ?How to submit an application?
ಅಧಿಕೃತ ವೆಬ್‌ಸೈಟ್ bmrc.co.in ಭೇಟಿ ನೀಡಿ.
‘Careers’ ವಿಭಾಗದಲ್ಲಿ ‘Maintainer Recruitment 2025’ ಅಧಿಸೂಚನೆಯನ್ನು ಆಯ್ಕೆಮಾಡಿ.
ಅಧಿಕೃತ ಅಧಿಸೂಚನೆಯನ್ನು ಚೆನ್ನಾಗಿ ಓದಿ.
ಅರ್ಜಿ ನಮೂನೆಯ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ (27-05-2025 ರೊಳಗೆ).
ಗಮನಿಸಿ: ಇದು ನಿವೃತ್ತ ಸೇನಾ ಸಿಬ್ಬಂದಿಗಾಗಿ ವಿಶೇಷ ಡ್ರೈವ್ ಆಗಿರುವುದರಿಂದ, ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ.
ಮುಖ್ಯ ದಿನಾಂಕಗಳು(Important Dates):
ಅರ್ಜಿ ಪ್ರಾರಂಭ ದಿನಾಂಕ : 23 /4/ 2025
ಅರ್ಜಿ ಕೊನೆ ದಿನಾಂಕ : 22 /5/2025
ಅರ್ಜಿ ಮುದ್ರಣ ಕೊನೆ ದಿನಾಂಕ : 27/5/ 2025
ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಮೇಲ್ವಿಚಾರಕರ ಹುದ್ದೆಗೆ ಸೇರಿಕೊಳ್ಳುವುದು ತಾಂತ್ರಿಕ ಪ್ರತಿಭೆ ಮತ್ತು ಸೇವಾ ಹಂಬಲ ಹೊಂದಿದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಮಿತಿಯೊಳಗಿನ ಅರ್ಜಿ ಸಲ್ಲಿಕೆ ಮತ್ತು ಸಕಾಲಿಕ ಸಿದ್ಧತೆಯೊಂದಿಗೆ ಈ ಅವಕಾಶವನ್ನು ತಮ್ಮಗೊಳಿಸಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.