Gold Rate Today: ಚಿನ್ನದ ಬೆಲೆ ಸತತ ಇಳಿಕೆ, ಇಂದು 29 ಎಪ್ರಿಲ್, ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ.

Picsart 25 04 29 06 24 19 326

WhatsApp Group Telegram Group

ಏಪ್ರಿಲ್ 29, 2025: ಚಿನ್ನ-ಬೆಳ್ಳಿ ಬೆಲೆಯಲ್ಲಿ ಬದಲಾವಣೆ, ಗ್ರಾಹಕರಿಗೆ ಸಿಹಿ ಸುದ್ದಿ!

ಚಿನ್ನವನ್ನು ಭಾರತದಲ್ಲಿ ಕೇವಲ ಹೂಡಿಕೆಯ (Investment) ಆಯ್ಕೆ ಎಂದಷ್ಟೇ ಅಲ್ಲ, ಸಂಪ್ರದಾಯದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಮದುವೆ, ಅಕ್ಷಯ ತೃತೀಯ, ಹಾಗೂ ಅನೇಕ ಶುಭಕರ ಸಂದರ್ಭಗಳಲ್ಲಿ ಚಿನ್ನದ ಖರೀದಿ ಅವಿಭಾಜ್ಯ ಅಂಗವಾಗಿದ್ದು, ಭಾರತೀಯರ ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ (Economic and cultural lifestyle) ಅದಕ್ಕೆ ವಿಶೇಷ ಸ್ಥಾನವಿದೆ. ಇತ್ತೀಚಿನ ಜಾಗತಿಕ ಆರ್ಥಿಕ ಪರಿಸ್ಥಿತಿಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದ್ದರೂ, ಏಪ್ರಿಲ್ ಕೊನೆ ದಿನಗಳಲ್ಲಿ ಭರ್ಜರಿ ಇಳಿಕೆಯಾಗಿರುವುದು ಚಿನ್ನ ಪ್ರಿಯರಿಗೆ ಖುಷಿಯ ಸಂಗತಿಯಾಗಿ ಪರಿಣಮಿಸಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 29, 2025: Gold Price Today

ಅಕ್ಷಯ ತೃತೀಯ ಹಬ್ಬದ ಈ ಸಂದರ್ಭದಲ್ಲಿ ಕಂಡುಬಂದಿರುವಂತಹ ಬದಲಾವಣೆ ಗ್ರಾಹಕರಿಗೆ (buyer’s) ಕೊಂಚ ನಿರಾಳತೆಯನ್ನು ತಂದುಕೊಟ್ಟಿದೆ. ಈ ಸಮಯದಲ್ಲಿ ಗ್ರಾಹಕರು ಚಿನ್ನ ಹಾಗೂ ಬೆಳ್ಳಿಯನ್ನು ಸರ್ವೇಸಾಮಾನ್ಯವಾಗಿ ಖರೀದಿಸುತ್ತಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ ಏರಿಕೆಯನ್ನು ಕಾಣುತ್ತಿದ್ದ ಚಿನ್ನದ ದರ ಈ ಹಬ್ಬಕ್ಕೆ ಹತ್ತಿರವಾದ ದಿನಗಳಲ್ಲಿ ಇಳಿಕೆಯನ್ನು ಕಾಣುತ್ತಿರುವುದು ಗ್ರಾಹಕರಿಗೆ ಸಂತೋಷವನ್ನು ತಂದು ಕೊಟ್ಟಿದೆ. ಹಾಗಿದ್ದರೆ, ಏಪ್ರಿಲ್ 29, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 939  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,753 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,314 ಆಗಿದೆ.  ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,400 ರೂ. ನಷ್ಟಿದ್ದು. ನಿನ್ನಗೆ ಹೋಲಿಸಿದರೆ 1400 ರೂ ನಷ್ಟು ಇಳಿಕೆಯಾಗಿದೆ.

ಹೌದು, ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಆರ್ಥಿಕ ವಾತಾವರಣದ ಮಧ್ಯೆಯೂ, ಚಿನ್ನದ ಬೆಲೆಯಲ್ಲಿ (Gold rate) ಇತ್ತೀಚೆಗೆ ಕಾಣಿಸಿದ ಈ ಇಳಿಕೆಯಿಂದ ಗ್ರಾಹಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮುಂದೆ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂಬ ನಿರೀಕ್ಷೆಗಳ ನಡುವೆಯೇ ಬಂಗಾರದ ಬೆಲೆಯಲ್ಲಿನ ಈ ತಾತ್ಕಾಲಿಕ ಕುಸಿತ ಜನರ ಖರೀದಿಗೆ ಒಳ್ಳೆಯ ಅವಕಾಶವನ್ನು ನೀಡಿದೆ.

ಏಪ್ರಿಲ್ 28, 2025ರಂದು ವಿವಿಧ ಕ್ಯಾರೆಟ್ ಚಿನ್ನದ ಬೆಲೆ ಹೇಗಿತ್ತು:

18 ಕ್ಯಾರೆಟ್ ಚಿನ್ನದ ಬೆಲೆ:
ಪ್ರತಿ 1 ಗ್ರಾಂ: ₹7,315
ಪ್ರತಿ 10 ಗ್ರಾಂ: ₹73,150

22 ಕ್ಯಾರೆಟ್ ಚಿನ್ನದ ಬೆಲೆ:
ಪ್ರತಿ 1 ಗ್ರಾಂ: ₹8,940
ಪ್ರತಿ 10 ಗ್ರಾಂ: ₹89,400

24 ಕ್ಯಾರೆಟ್ ಚಿನ್ನದ ಬೆಲೆ:
ಪ್ರತಿ 1 ಗ್ರಾಂ: ₹9,753
ಪ್ರತಿ 10 ಗ್ರಾಂ: ₹97,530

ಬೆಳ್ಳಿ ಬೆಲೆಯ ಸ್ಥಿತಿ:
ಚಿನ್ನದಂತೆ ಬೆಳ್ಳಿಯ ದರದಲ್ಲಿಯೂ ಸಣ್ಣ ಇಳಿಕೆ ಕಂಡುಬಂದಿದೆ.
ಪ್ರತಿ 1 ಗ್ರಾಂ ಬೆಳ್ಳಿ ಬೆಲೆ: ₹100.50
ಪ್ರತಿ 1 ಕೆ.ಜಿ ಬೆಳ್ಳಿ ಬೆಲೆ: ₹1,00,500

ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯಲಿರುವ ಅನೇಕ ಮದುವೆ ಸಮಾರಂಭಗಳು ಹಾಗೂ ಮೇ 1ರಂದು ಬರುವ ಅಕ್ಷಯ ತೃತೀಯ ಹಬ್ಬದ (Akshaya Thruthiya Festival) ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಗೆ ಗ್ರಾಹಕರ ತೀವ್ರ ಆಸಕ್ತಿ ಹೆಚ್ಚಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಯು ಶುಭ ಸೂಚಕವೆಂದು ಪರಿಗಣಿಸುವ ಭಾವನೆ ಜನರಲ್ಲಿ ಗಟ್ಟಿಯಾಗಿ ಬೇರೂರಿದೆ. ಈ ಹಿನ್ನಲೆಯಲ್ಲಿ ಚಿನ್ನದ ಬೆಲೆಯಲ್ಲಿ ಕಂಡ ಇಳಿಕೆ ಗ್ರಾಹಕರಿಗೆ ಮತ್ತಷ್ಟು ಖುಷಿಯ ವಿಚಾರವಾಗಿದೆ.

ಒಟ್ಟಾರೆಯಾಗಿ, ಬಂಗಾರದ ಬೆಲೆಯಲ್ಲಿ ತಕ್ಷಣದ ಇಳಿಕೆಯು ಮದುವೆ ಮತ್ತು ಹಬ್ಬದ ಶಾಪಿಂಗ್ ಸೀಸನ್‌ಗೆ (Festival Shoping season) ಚೈತನ್ಯ ತುಂಬಿದೆ. ಚಿನ್ನ ಖರೀದಿಗೂ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!