ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಮ್ಮ ಕರ್ನಾಟಕದಲ್ಲಿ ಇದುವರೆಗೂ ಎಷ್ಟು ಮುಖ್ಯಮಂತ್ರಿಗಳು ಆಳ್ವಿಕೆಯನ್ನು ನಡೆಸಿದ್ದಾರೆ ಎಂಬುದರ ಮಾಹಿತಿಯನ್ನು ನೀಡಲಾಗುತ್ತದೆ. 1947 ರಿಂದ 2023 ರವರೆಗೆ ಯಾರು ಯಾರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು?, ಯಾವ ಪಕ್ಷದಿಂದ ಅವರು ಮುಖ್ಯಮಂತ್ರಿಗಳಾಗಿದ್ದರು?, ಹಾಗೂ ಪ್ರತಿ ಮುಖ್ಯ ಮಂತ್ರಿಗಳು ಎಷ್ಟು ವರ್ಷ ಆಳ್ವಿಕೆಯನ್ನು ನಡೆಸಿದರು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ.
ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳು:
ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಎಲೆಕ್ಷನ್ ಮುಗಿದಿದೆ ಹಾಗೂ ಯಾವ ಪಕ್ಷ ಆಡಳಿತಕ್ಕೆ ಬರುತ್ತದೆ, ಮತ್ತು ಯಾವ ಪಕ್ಷದಿಂದ ಮುಖ್ಯಮಂತ್ರಿಗಳು ಆಗುತ್ತಾರೆ ಎಂಬುದು ನಿರ್ಧಾರವಾಗಿದೆ. ಇನ್ನೇನು ಮಾರ್ಚ್ 18 ನೇ ದಿನಾಂಕದಂದು ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಬಸವರಾಜ್ ಬೊಮ್ಮಾಯಿಯವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸದ್ಯಕ್ಕೆ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದಾರೆ.
ಕರ್ನಾಟಕವು ಸ್ವಾತಂತ್ರ್ಯದ ನಂತರ ಇದುವರೆಗೂ 23 ಮುಖ್ಯಮಂತ್ರಿಗಳನ್ನು ಕಂಡಿದೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಹೆಸರು ಪಡೆದ ನಂತರ ದೇವರಾಜ ಅರಸು ಅವರು ಮೊದಲನೆಯ ಹಾಗೂ ದೀರ್ಘಕಾಲದ ಅವಧಿಯ ಮುಖ್ಯಮಂತ್ರಿಗಳಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. 1947ರ ಕೆ ಚೆಂಗಲರಾಯ ರೆಡ್ಡಿ ಯವರಿಂದ ಹಿಡಿದು 2023ರ ಬೊಮ್ಮಾಯಿವರೆಗೂ, ಎಲ್ಲಾ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ.
ಎಲ್ಲಾ ಮುಖ್ಯಮಂತ್ರಿಗಳ ಪಟ್ಟಿ
ಹೆಸರು | ಪಕ್ಷದ ಹೆಸರು | ಅವಧಿ |
ಕೆ. ಚೆಂಗಲರಾಯ ರೆಡ್ಡಿ | ಕಾಂಗ್ರೆಸ್ | ಅಕ್ಟೋಬರ್ 25, 1947 – ಮಾರ್ಚ್ 30, 1952 |
ಕೆಂಗಲ್ ಹನುಮಂತಯ್ಯ | ಕಾಂಗ್ರೆಸ್ | ಮಾರ್ಚ್ 30, 1952 – ಆಗಸ್ಟ್ 19, 1956 |
ಕಡಿದಾಳ್ ಮಂಜಪ್ಪ | ಕಾಂಗ್ರೆಸ್ | ಆಗಸ್ಟ್ 19, 1956 – ಅಕ್ಟೋಬರ್ 31, 1956 |
ಎಸ್.ನಿಜಲಿಂಗಪ್ಪ | ಕಾಂಗ್ರೆಸ್ | ನವೆಂಬರ್ 1, 1956 – ಏಪ್ರಿಲ್ 10, 1957 |
ಎಸ್.ನಿಜಲಿಂಗಪ್ಪ | ಕಾಂಗ್ರೆಸ್ | ಏಪ್ರಿಲ್ 10, 1957 – ಮೇ 16, 1958 |
ಬಿ.ಡಿ.ಜತ್ತಿ | ಕಾಂಗ್ರೆಸ್ | ಮೇ 16, 1958 – ಮಾರ್ಚ್ 9, 1962 |
ಎಸ್ ಆರ್ ಕಂಠಿ | ಕಾಂಗ್ರೆಸ್ | ಮಾರ್ಚ್ 14, 1962 – ಜೂನ್ 20, 1962 |
ಎಸ್.ನಿಜಲಿಂಗಪ್ಪ | ಕಾಂಗ್ರೆಸ್ | ಜೂನ್ 21, 1962 – ಮಾರ್ಚ್ 3, 1967 |
ಎಸ್.ನಿಜಲಿಂಗಪ್ಪ | ಕಾಂಗ್ರೆಸ್ | ಮಾರ್ಚ್ 3, 1967 – ಮೇ 29, 1968 |
ವೀರೇಂದ್ರ ಪಾಟೀಲ್ | ಕಾಂಗ್ರೆಸ್ | ಮೇ 29, 1968 – ಮಾರ್ಚ್ 18, 1971 |
ರಾಷ್ಟ್ರಪತಿ ಆಳ್ವಿಕೆ | ಮಾರ್ಚ್ 19, 1971 – ಮಾರ್ಚ್ 20, 1972 | |
ಡಿ.ದೇವರಾಜ್ ಅರಸ್ | ಕಾಂಗ್ರೆಸ್ | ಮಾರ್ಚ್ 20, 1972 – ಡಿಸೆಂಬರ್ 31, 1977 |
ರಾಷ್ಟ್ರಪತಿ ಆಳ್ವಿಕೆ | ಡಿಸೆಂಬರ್ 31, 1977 – ಫೆಬ್ರವರಿ 28, 1978 | |
ಡಿ.ದೇವರಾಜ್ ಅರಸ್ | ಕಾಂಗ್ರೆಸ್ | ಫೆಬ್ರವರಿ 28, 1978 – ಜನವರಿ 7, 1980 |
ಆರ್ ಗುಂಡೂರಾವ್ | ಕಾಂಗ್ರೆಸ್ | ಜನವರಿ 12, 1980 – ಜನವರಿ 6, 1983 |
ರಾಮಕೃಷ್ಣ ಹೆಗಡೆ | ಜನತಾ ಪಕ್ಷ | ಜನವರಿ 10, 1983 – ಡಿಸೆಂಬರ್ 29, 1984 |
ರಾಮಕೃಷ್ಣ ಹೆಗಡೆ | ಜನತಾ ಪಕ್ಷ | ಮಾರ್ಚ್ 8, 1985 – ಫೆಬ್ರವರಿ 13, 1986 |
ರಾಮಕೃಷ್ಣ ಹೆಗಡೆ | ಜನತಾ ಪಕ್ಷ | ಫೆಬ್ರವರಿ 16, 1986 – ಆಗಸ್ಟ್ 10, 1988 |
ಎಸ್ ಆರ್ ಬೊಮ್ಮಾಯಿ | ಜನತಾ ಪಕ್ಷ | ಆಗಸ್ಟ್ 13, 1988 – ಏಪ್ರಿಲ್ 21, 1989 |
ರಾಷ್ಟ್ರಪತಿ ಆಳ್ವಿಕೆ | ಏಪ್ರಿಲ್ 21, 1989 – ನವೆಂಬರ್ 30, 1989 | |
ವೀರೇಂದ್ರ ಪಾಟೀಲ್ | ಕಾಂಗ್ರೆಸ್ | ನವೆಂಬರ್ 30, 1989 – ಅಕ್ಟೋಬರ್ 10, 1990 |
ರಾಷ್ಟ್ರಪತಿ ಆಳ್ವಿಕೆ | ಅಕ್ಟೋಬರ್ 10, 1990 – ಅಕ್ಟೋಬರ್ 17, 1990 | |
ಎಸ್ ಬಂಗಾರಪ್ಪ | ಕಾಂಗ್ರೆಸ್ | ಅಕ್ಟೋಬರ್ 17, 1990 – ನವೆಂಬರ್ 19, 1992 |
ಎಂ.ವೀರಪ್ಪ ಮೊಯ್ಲಿ | ಕಾಂಗ್ರೆಸ್ | ನವೆಂಬರ್ 19, 1992 – ಡಿಸೆಂಬರ್ 11, 1994 |
ಎಚ್ ಡಿ ದೇವೇಗೌಡ | ಜನತಾ ಪಕ್ಷ | ಡಿಸೆಂಬರ್ 11, 1994 – ಮೇ 31, 1996 |
ಜೆ ಎಚ್ ಪಟೇಲ್ | ಜನತಾ ಪಕ್ಷ | ಮೇ 31, 1996 – ಅಕ್ಟೋಬರ್ 07, 1999 |
ಎಸ್ ಎಂ ಕೃಷ್ಣ | ಕಾಂಗ್ರೆಸ್ | ಅಕ್ಟೋಬರ್ 11, 1999 – ಮೇ 28, 2004 |
ಧರಂ ಸಿಂಗ್ | ಕಾಂಗ್ರೆಸ್ [ಕಾಂಗ್ರೆಸ್-ಜೆಡಿ(ಗಳು) ಸಮ್ಮಿಶ್ರ] | ಮೇ 28, 2004 – ಜನವರಿ 27, 2006 |
ಎಚ್ ಡಿ ಕುಮಾರಸ್ವಾಮಿ | ಜೆಡಿ(ಎಸ್) [ಬಿಜೆಪಿ-ಜೆಡಿ(ಎಸ್) ಸಮ್ಮಿಶ್ರ] | ಫೆಬ್ರವರಿ 3, 2006 – ಅಕ್ಟೋಬರ್ 8, 2007 |
ರಾಷ್ಟ್ರಪತಿ ಆಳ್ವಿಕೆ | ನವೆಂಬರ್ 20, 2007 – ಮೇ 29, 2008 | |
ಬಿಎಸ್ ಯಡಿಯೂರಪ್ಪ | ಬಿಜೆಪಿ | 30 ಮೇ 2008 – 31 ಜುಲೈ 2011 |
ಡಿವಿ ಸದಾನಂದ ಗೌಡ | ಬಿಜೆಪಿ | 4 ಆಗಸ್ಟ್ 2011 – 12 ಜುಲೈ 2012 |
ಜಗದೀಶ ಶಿವಪ್ಪ ಶೆಟ್ಟರ್ | ಬಿಜೆಪಿ | 12 ಜುಲೈ 2012 – 12 ಮೇ 2013 |
ಸಿದ್ದರಾಮಯ್ಯ | ಕಾಂಗ್ರೆಸ್ | 13 ಮೇ 2013 – 17 ಮೇ 2018 |
ಬಿಎಸ್ ಯಡಿಯೂರಪ್ಪ | ಬಿಜೆಪಿ | ಮೇ 17 2018 – ಮೇ 19 2018 |
ಎಚ್ ಡಿ ಕುಮಾರಸ್ವಾಮಿ | JD(S) [ಕಾಂಗ್ರೆಸ್-JD(S) ಸಮ್ಮಿಶ್ರ] | ಮೇ 23, 2018 – ಜುಲೈ 23, 2019 |
ಬಿಎಸ್ ಯಡಿಯೂರಪ್ಪ | ಬಿಜೆಪಿ | ಜುಲೈ 26, 2019 – ಜುಲೈ 28, 2021 |
ಬಸವರಾಜ ಬೊಮ್ಮಾಯಿ | ಬಿಜೆಪಿ | ಜುಲೈ 28, 2021 – ಮೇ 13, 2023 |
?? | ಕಾಂಗ್ರೆಸ್ | ಮೇ 18, 2023 – ?? |
ದಾಖಲೆಗಳು:
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ