ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಮೊಬೈಲ್ ಡಾಟಾ ಬೇಗ ಖಾಲಿಯಾಗದಂತೆ ದಿನಪೂರ್ತಿ ಬಳಸುವುದು ಹೇಗೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಸುವ ಪ್ರತಿಯೊಬ್ಬರು, ಮೊಬೈಲ್ ಡೇಟಾವನ್ನು ಬಳಸುತ್ತಿರುತ್ತಾರೆ. ಆದರೆ ಡೇಟಾ ಅರ್ಧ ದಿನದಲ್ಲಿ ಖಾಲಿಯಾಗಿ ಬಿಡುತ್ತದೆ. ಹೀಗೆ ಮೊಬೈಲ್ ಡೇಟಾ ಬೇಗ ಖಾಲಿಯಾಗದಂತೆ ಹೇಗೆ ನೋಡಿಕೊಳ್ಳುವುದು, ಯಾವ ಸೆಟ್ಟಿಂಗ್ಸ್ ಗಳನ್ನು ಮೊಬೈಲ್ ನಲ್ಲಿ ಮಾಡುವುದರಿಂದ ಬೇಗ ಡೇಟಾ ಖಾಲಿಯಾಗುವುದನ್ನು ತಪ್ಪಿಸಬಹುದು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಮೊಬೈಲ್ ಡೇಟಾ ಬೇಗ ಖಾಲಿಯಾಗದಂತೆ, ದಿನಪೂರ್ತಿ ಬಳಕೆ ಮಾಡಲು ಇಲ್ಲಿದೆ ಟ್ರಿಕ್ಸ್ :
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಮಾತ್ರ ಸಾಲದು, ಅದಕ್ಕೆ 24 ಗಂಟೆಗಳ ಇಂಟರ್ನೆಟ್ ಸಂಪರ್ಕವೂ ಕೂಡ ಇರಲೇಬೇಕಾಗುತ್ತದೆ. ಕೆಲವರು ಒಂದು ಜಿಬಿ ಅಥವಾ ಎರಡು ಜಿಬಿ ಡೇಟಾದ ಪ್ಲಾನನ್ನು ದಿನಕ್ಕೆ ಬಳಸುತ್ತಿದ್ದರೆ, ಅವರಿಗೆ ಅರ್ಧ ದಿನದಲ್ಲಿಯೇ ಡೇಟಾ ಖಾಲಿಯಾಗುವ ಸಾಧ್ಯತೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಡೇಟಾ ಬೇಗ ಖಾಲಿಯಾಗದಂತೆ ಹೇಗೆ ದಿನಪೂರ್ತಿ ನಿಭಾಯಿಸುವುದು ಎಂಬುವುದರ ಹುಡುಕಾಟ ನಿಮಗಿದ್ದರೆ, ಈ ಲೇಖನವು ನಿಮಗೆ ಉಪಯೋಗವಾಗುತ್ತದೆ.
ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತಿದ್ದರೆ ಈ ಸೆಟ್ಟಿಂಗ್ಸ್ ಅನ್ನು ಈ ಕೊಡಲೇ ಮಾಡಿ :
1) ಕೆಲವು ಅಪ್ಲಿಕೇಶನ್‌ಗಳಿಗೆ ಡೇಟಾ ಬಳಕೆಯನ್ನು ಮಿತಿಗೊಳಿಸಿ: ಕೆಲವು ಅಪ್ಲಿಕೇಶನ್‌ಗಳಿಗೆ, ಡೇಟಾ ಬಳಕೆಯನ್ನು ಸೀಮಿತಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ. ಇದನ್ನು ಮಾಡುವುದರಿಂದ, ಡೇಟಾವನ್ನು ದೀರ್ಘಕಾಲದವರೆಗೆ ಬ್ಯಾಕಪ್ ಮಾಡಲಾಗುತ್ತದೆ. ಅಪ್ಲಿಕೇಶನ್ಗಳಿಗೆ ಡೇಟಾ ಬಳಕೆಯನ್ನು ಮಿತಿಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ 1: Android ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ, ನಂತರ ಅಪ್ಲಿಕೇಶನ್‌ಗಳನ್ನು ಟ್ಯಾಪ್ ಮಾಡಿ.
ಹಂತ 2: ನಂತರ ನೀವು ಡೇಟಾ ಮಿತಿಯನ್ನು ಮಾಡಲು ಬಯಸುವ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ.
ಹಂತ 3: ನಂತರ ಮೊಬೈಲ್ ಡೇಟಾ ಮೇಲೆ ಟ್ಯಾಪ್ ಮಾಡಿ.
ಹಂತ 4: ಇದು ಹಿನ್ನೆಲೆ ಡೇಟಾವನ್ನು ಸಕ್ರಿಯಗೊಳಿಸಿದ್ದರೆ, ಹಿನ್ನೆಲೆ ಡೇಟಾ ಬಳಕೆಯನ್ನು ಅನುಮತಿಸು ಎಂಬ ಆಯ್ಕೆಯ ಮುಂದೆ ಬಿಳಿ ಮತ್ತು ನೀಲಿ ಟಾಗಲ್‌ಗಳು ಗೋಚರಿಸುತ್ತವೆ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಅದನ್ನು ಆಫ್ ಮಾಡಿ.
2) ಡೇಟಾ ಸೇವರ್ ಮೋಡ್ ಅನ್ನು ಆನ್ ಮಾಡಿ: ಡೇಟಾ ಸೇವರ್ ಮೋಡನು ಆನ್ ಮಾಡುವುದರಿಂದ, ದೀರ್ಘಕಾಲದ ವರೆಗೆ ನಿಮ್ಮ ಮೊಬೈಲ್ ಡೇಟಾವನ್ನು ಬಳಸಬಹುದಾಗಿದೆ. ಹೀಗೆ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ :
ಹಂತ 1: Android ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕಾಗುತ್ತದೆ. ನಂತರ ಸಂಪರ್ಕಗಳಿಗೆ ಹೋಗಿ.
ಹಂತ 2: ನಂತರ ಡೇಟಾ ಬಳಕೆಯ ಮೇಲೆ ಟ್ಯಾಪ್ ಮಾಡಿ.
ಹಂತ 3: ನಂತರ ಡೇಟಾ ಸೇವರ್ ಮೇಲೆ ಟ್ಯಾಪ್ ಮಾಡಿ, ಅದನ್ನು ಆನ್ ಮಾಡಿ.
ಇದರರ್ಥ ಫೋನ್‌ನಲ್ಲಿ ಯಾವ ಅಪ್ಲಿಕೇಶನ್‌ಗಳು ಹಿನ್ನೆಲೆಯಲ್ಲಿ(background) ಡೇಟಾವನ್ನು ಬಳಸುತ್ತವೆ ಮತ್ತು ಯಾವುದನ್ನು ಮಾಡಬಾರದು ಎಂಬುದನ್ನು ಬಳಕೆದಾರರು ನಿಯಂತ್ರಿಸಲು ಸಾಧ್ಯವಾಗುತ್ತದೆ.
3) ಆಪ್ಸ್ ಗಳು ಆಟೋ ಅಪ್ಡೇಟ್ ಆಗುವುದರಿಂದ ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತದೆ:
ಡೀಫಾಲ್ಟ್ ಸೆಟ್ಟಿಂಗ್‌ಗಳಿಂದಾಗಿ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತಿರುತ್ತದೆ. ಕೆಲವೊಮ್ಮೆ ಯಾವುದೋ ಕಾರಣಕ್ಕೋ ಒಂದು ಆಪ್ ಅನ್ನು ಡೌನ್ಲೋಡ್ ಮಾಡಿರುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ಅದು ಬ್ಯಾಕ್ರೌಂಡ್ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ಡೇಟಾ ಖಾಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಆಟೋ ಅಪ್ಡೇಟ್ ಆಫ್ ಮಾಡುವ ವಿಧಾನ :
ಹಂತ 1: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ.
ಹಂತ 2: ನಂತರ ಸೆಟ್ಟಿಂಗ್ಸ್ ನಲ್ಲಿ ಆಟೋ ಅಪ್ಡೇಟ್ ಅನ್ನು ಆಫ್ ಮಾಡಿ.
4) ನೀವು ಲೈಟ್ ಆವೃತ್ತಿಯ ಆಪ್ ಗಳನ್ನು ಡೌನ್ ಲೋಡ್ ಮಾಡುವುದರ ಮೂಲಕವೂ ಕೂಡ, ಮೊಬೈಲ್ ಡೇಟಾ ಹೆಚ್ಚು ಖರ್ಚಾಗುವುದನ್ನು ಉಳಿಸಬಹುದಾಗಿದೆ.
5) ನಿಮ್ಮ ಫೋನಿನ ಆಪ್ ಗಳು ವೈಫೈ ಮೂಲಕ ಮಾತ್ರ ಅಪ್ಡೇಟ್ ಆಗುವಂತಹ ಸೆಟ್ಟಿಂಗನ್ನು ಮಾಡಿದರೆ, ನೀವು ಹೆಚ್ಚಿನ ಮೊಬೈಲ್ ಡೇಟಾ ಬಳಕೆಯಾಗುವುದನ್ನು ನಿಯಂತ್ರಿಸಬಹುದಾಗಿದೆ.
6) ಯೂಟ್ಯೂಬ್ ನಲ್ಲಿ ಡೇಟಾವನ್ನು ಹೇಗೆ ಉಳಿಸಬಹುದು:
ದಿನದಲ್ಲಿ ಒಂದು ಬಾರಿಯಾದರೂ ಎಲ್ಲರೂ ಯೂಟ್ಯೂಬ್ ಆಪಿಗೆ ಭೇಟಿ ನೀಡುತ್ತಲೇ ಇರುತ್ತಾರೆ, ಈ ಕೆಳಗಿನ ಸೆಟ್ಟಿಂಗ್ ಅನ್ನು ಮಾಡುವುದರಿಂದ ನಾವು 30% ವರೆಗೂ ಡೇಟಾವನ್ನು ಉಳಿಸಬಹುದು :
ಹಂತ 1: ಮೊದಲಿಗೆ ಯೂಟ್ಯೂಬ್ ಆಪಿಗೆ ತರಲಿ
ಹಂತ 2: ನಂತರ ಸೆಟ್ಟಿಂಗ್ ಗೆ ತೆರಳಿ ಡೇಟಾ ಸೇವಿಂಗ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3 : ನಂತರ ಡೇಟಾ ಸೇವಿಂಗ್ ಮೋಡನ್ನು ಆನ್ ಮಾಡಿ.
7) ಫೋಟೋಸ್ ನಲ್ಲಿ ಡೇಟಾ ಯೂಸೇಜ್ ಅನ್ನು ನಿಯಂತ್ರಿಸುವುದು :
ನಿಮ್ಮ ಫೋಟೋಸ್ ಅಂದರೆ ಗೂಗಲ್ ಫೋಟೋಸ್ಗೆ ತೆರಳಿ, ನಂತರ ಲೋಗೋ ಮೇಲೆ ಕ್ಲಿಕ್ ಮಾಡಿ, ಮುಂದುವರೆದು ಫೋಟೋ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ, ನಂತರ ಬ್ಯಾಕ್ ಅಪ್ ಅಂಡ್ ಸಿಂಟೋನೈಸ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ ಮೊಬೈಲ್ ಡೇಟಾ ಯೂಸೇಜ್ ಎಂಬ ಆಯ್ಕೆಯಲ್ಲಿ, ಡೈಲಿ ಲಿಮಿಟ್ ಫಾರ್ ಬ್ಯಾಕಪ್ ಅನ್ನು ಅನ್ಲಿಮಿಟೆಡ್ ನಿಂದ 10MB ಅಥವಾ 20MBಗೆ ಸೆಟ್ ಮಾಡಿದರೆ ನಿಮ್ಮ ಮೊಬೈಲ್ ಡೇಟಾವನ್ನು ಆದಷ್ಟು ಉಳಿಸಬಹುದಾಗಿದೆ.
ಈ ಮೇಲಿನ ಟ್ರಿಕ್ಸ್ ಗಳನ್ನು ಬಳಸಿಕೊಂಡು, ಮೊಬೈಲ್ ಡೇಟಾವನ್ನು ದಿನಪೂರ್ತಿ ಬಳಸಬಹುದಾಗಿದೆ. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ, ಬಂಧುಗಳಿಗೆ ಹಾಗೂ ಸ್ಮಾರ್ಟ್ ಫೋನ್ ನಲ್ಲಿ ಇಂಟರ್ನೆಟ್ ಬಳಸುತ್ತಿರುವ ಎಲ್ಲರಿಗೂ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Badachi
Badachi,Badachi,Belgaum,Karnataka-591230
Badachi,Badachi,Belgaum,Karnataka-591230