ಎಲ್ಲರಿಗೂ ನಮಸ್ಕಾರ, ಇಂದು ನಾವು ವಾಟ್ಸಪ್ಪ್ (Whatsapp) ಅಲ್ಲಿ ಕಂಡುಬರುವ ಹೊಸ ಫೀಚರ್(new feature) ಕುರಿತು ತಿಳಿಸಿಕೊಡಲಾಗುತ್ತದವೆ. ಇತ್ತೀಚಿಗೆ ವಾಟ್ಸಪ್ಪ್ ತನ್ನ ಪ್ಲಾಟ್ಫಾರ್ಮ್ ಅಲ್ಲಿ ಹಲವಾರು ವೈಶಿಷ್ಟತೆಯನ್ನು ಪರಿಚಯಿಸಲು ಸಜ್ಜಾಗಿದೆ. ಚಾಟ್ ಲಾಕ್ , ಎಡಿಟಿಂಗ್( Editing) ಮುಂತಾದವುಗಳನ್ನು ಸಾಲು ಸಾಲಾಗಿ ವಾಟ್ಸಪ್ಪ್ ಫೀಚರ್ ಅನ್ನು Android ಫೋನ್ ಗೆ ಸೇರ್ಪಡೆಮಾಡಲಾಗಿದೆ. ಇವುಗಳ ಜೊತೆ ಜೊತೆಗೆ ಸ್ಕ್ರೀನ್ ಶೇರಿಂಗ್ (Screen sharing) ಹೊಸ ವೈಶಿಷ್ಟತೆಯ ಸಾರಾಣಿಯಲ್ಲಿ ಒಂದಾಗಿದೆ.
ಈ ಸ್ಕ್ರೀನ್ ಶೇರಿಂಗ್ ನ ಸಂಪೂರ್ಣ ಮಾಹಿತಿ ಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ವಾಟ್ಸಪ್ ನಲ್ಲಿ ಬಂದಿದೆ ಸ್ಕ್ರೀನ್ ಶೇರಿಂಗ್ ಫೀಚರ್:
WABetaInfo ನಿಂದ ವರದಿಯ ಪ್ರಕಾರ Android 2.23.11.19 ಅಪ್‌ಡೇಟ್ ಅನ್ನು ಅಳವಡಿಸಿಕೊಂಡ ಬಳಕೆದಾರರು ಈ ಹೊಸದಾದ ಸ್ಕ್ರೀನ್ ಶೇರಿಂಗ್(screen sharing) ವೈಶಿಷ್ಟ್ಯವನ್ನು ಪ್ರವೇಶಿಸಬಹುದಾಗಿದೆ. ವೀಡಿಯೊ ಕರೆ(Video Call) ಗಳ ಸಮಯದಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. ಈ ಪರದೆ ಹಂಚುವಿಕೆ(screen sharing) ಫೀಚರ್ ಅನ್ನು ವೀಡಿಯೊ ಕರೆ ಸಮಯದಲ್ಲಿ ಕೆಳಗಿನ ಟೂಲ್‌ಬಾರ್‌ನಲ್ಲಿ ಹೊಸ ಐಕಾನ್(icon) ಅನ್ನು ಗಮನಿಸಬಹುದಾಗಿದೆ. ಬಳಕೆದಾರರು ತಮ್ಮ ಪರದೆಯನ್ನು ಹಂಚಿಕೊಳ್ಳಲು ಈ ಐಕಾನ್ ಆಯ್ಕೆ ಮಾಡಿಕೊಂಡರೆ, ಅವರ ಸಾಧನದ ಡಿಸ್‌ಪ್ಲೇ( Display )ಯಲ್ಲಿ ಗೋಚರಿಸುವ ಎಲ್ಲವನ್ನೂ ಕಾರ್ಯಗಳನ್ನು ರೆಕಾರ್ಡ್ (Record ) ಮಾಡಲಾಗುತ್ತದೆ ಮತ್ತು ಇತರ ಸದಸ್ಯರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಇದಲ್ಲದೆ, ಬಳಕೆದಾರರು ಪರದೆಯ ವಿಷಯವನ್ನು ಹಂಚಿಕೊಳ್ಳಲು ಒಪ್ಪಿಗೆ ನೀಡಿದರೆ ಮಾತ್ರ ಸ್ಕ್ರೀನ್ ಹಂಚಿಕೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಈ ವೈಶಿಷ್ಟ್ಯವು Google Meet ಮತ್ತು Zoom ನಲ್ಲಿ ಲಭ್ಯವಿರುವ ಸ್ಕ್ರೀನ್ ಹಂಚಿಕೆ ವೈಶಿಷ್ಟ್ಯದಂತೆಯೇ ಕಾರ್ಯನಿರ್ವಹಿಸುತ್ತದೆ. ಯಾವದೇ ಸಮಯದಲ್ಲಿ ಬಳಕೆದಾರರು ಸ್ಕ್ರೀನ್ ಹಂಚಿಕೆ ಪ್ರಕ್ರಿಯೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ಹೊಂದಿರುತ್ತಾರೆ. ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ(Beta) ಪರೀಕ್ಷಕರಿಗೆ ಮಾತ್ರ ಲಭ್ಯವಾಗಿದ್ದು, ಭವಿಷ್ಯದಲ್ಲಿ ಅಪ್ಲಿಕೇಶನ್ ನವೀಕರಣದೊಂದಿಗೆ ಇದು ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು WABetaInfo ಹೇಳಿದೆ.
ಎಲ್ಲೆಲ್ಲಿ ಈ ಸ್ಕ್ರೀನ್ ಶೇರಿಂಗ್ ಲಭ್ಯವಿದೆ :
ಈ ವೈಶಿಷ್ಟತೆಯು ಹಳೆ ಆವೃತ್ತಿಯ ಆಂಡ್ರಾಯ್ಡ್ ಸಿಸ್ಟಮ್ ಅಲ್ಲಿ ಲಭ್ಯವಿರುವುದಿಲ್ಲ ಹಾಗೂ ದೊಡ್ಡ ಪ್ರಮಾಣದ ಗ್ರೂಪ್ ಕರೆಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಸ್ವೀಕರಿಸುವವರು WhatsApp ನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದರೆ ನಿಮ್ಮ ಪರದೆಯ ವಿಷಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇದಲ್ಲದೆ ವಾಟ್ಸಪ್ಪ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅಲ್ಲಿ ಕಳುಹಿಸಿದ ಮೆಸೇಜ್ ಗಳನ್ನು ಎಡಿಟ್ ಮಾಡುಲು ಅನುವು ಮಾಡಿಕೊಟ್ಟಿದ್ದೆ. WhatsApp ಸಂದೇಶ(Message)ಗಳನ್ನು ಕಳುಹಿಸಿದ ನಂತರ 15 ನಿಮಿಷಗಳವರೆಗೆ ಸಂಪಾದಿ(edit)ಸಲು ಮಾತ್ರ ಸಾಧ್ಯ ಎಂಬುವುದು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವಾಗಿದೆ.
ಉಚಿತ ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಹಾಗೆಯೇ ಇಂತಹ ಉತ್ತಮವಾದ ವಾಟ್ಸಪ್ ಹೊಸ ವೈಶಿಷ್ಟ್ಯವನ್ನು ಹೊಂದಿರುವ ಈ ಮಾಹಿತಿಯನ್ನು ನೀವು ಕೂಡ ನಿಮ್ಮ ವಾಟ್ಸಪ್ ನಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳುವ ಅವಕಾಶವಿದೆ. ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
.
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ