ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ

ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ.

ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ರೈತರ ಮಕ್ಕಳಿಗೆ ನೀಡುತ್ತಿದ್ದ ಮುಖ್ಯಮಂತ್ರಿ ರೈತವಿಧ್ಯಾನಿಧಿ ಈ ವರ್ಗಗಳಿಗೂ ವಿಸ್ತರಣೆ

ಯಶಸ್ವಿನಿ ಯೋಜನೆ ಎಂದೇನು ?

ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗಧಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟಿನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ ಪಡೆಯಬಹುದು .

ಯಶಸ್ವಿನಿ ಕಾರ್ಡ್ ಪಡೆದ 15 ದಿನಗಳ ನಂತರ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಅರ್ಹರಾಗುತ್ತಾರೆ. ಸರ್ಕಾರಿ ಮತ್ತು  ಖಾಸಗಿ ನೌಕರರು ಯಾವುದೇ ವಿಮಾ ಯೋಜನೆಯಲ್ಲಿದ್ದರೆ ಈ ಯೋಜನೆಗೆ ಅರ್ಹರಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಯೋಜನೆಯಲ್ಲಿ ಹಿಂದೆ ಇದ್ದ ಗರಿಷ್ಠ 2 ಲಕ್ಷ ರೂ. ಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಆದರೆ 1 ಕುಟುಂಬದಲ್ಲಿ 4 ಜನರು ಸೇರಿದಂತೆ 5 ಲಕ್ಷಕ್ಕೆ ಮೀರದಂತೆ ಮಾತ್ರ ಆಸ್ಪತ್ರೆ ಸೌಲಭ್ಯ ಪಡೆದುಕೊಳ್ಳಬಹುದು. ಕುಟುಂಬದಲ್ಲಿ ಒಬ್ಬರೇ 5 ಲಕ್ಷ ರೂ.ವರೆಗೆ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. 1 ವರ್ಷದೊಳಗೆ ಒಮ್ಮೆ ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ.

ಇದನ್ನೂ ಓದಿ: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – 2022-23 ನೇ ಸಾಲಿನ ಅರ್ಜಿ ಸಲ್ಲಿಕೆ ವಿವರ

Untitled 1 scaled

ಮಾರ್ಗ ಸೂಚಿಗಳು

1) ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅಡಿ ಅಥವಾ ಕರ್ನಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ 1997 ರಲ್ಲಿ ಅಥವಾ ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002ರ ಅಡಿ ನೋಂದಾಯಿಸಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಯಶಸ್ವಿನಿ ಯೋಜನೆಯ ಅನ್ವಯಿಸುತ್ತದೆ.

2) ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವ ಸಹಾಯ ಗುಂಪುಗಳ ಸದಸ್ಯರು ಹಾಗೂ ಅವರ ಕುಟುಂಬ ವರ್ಗದವರಿಗೂ ಈ ಯೋಜನೆ ಅನ್ವಯಿಸುತ್ತದೆ.

3) ರಾಜ್ಯದ ಯಾವುದೇ ಸಹಕಾರ ಸಂಘ ಗ್ರಾಮೀಣ ಸ್ವಸಹಾಯ ಗುಂಪಿನಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ ಮೂರು ತಿಂಗಳು ರಚಿಸಿದ್ದಲ್ಲಿ ಅವರ ಕುಟುಂಬವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ವಾರ್ಷಿಕ ವಂತಿಗೆ ಪಾವತಿಸಿ ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬ ಎಂದರೆ ಪ್ರಧಾನ ಅರ್ಜಿದಾರರ ತಂದೆ ತಾಯಿ ಗಂಡ ಹೆಂಡತಿ ಗಂಡು ಮಕ್ಕಳು ಮದುವೆಯಾಗದ ಹೆಣ್ಣು ಮಕ್ಕಳು ಸೊಸೆಯಂದಿರು ಮತ್ತು ಮೊಮ್ಮಕ್ಕಳು ಎಂದು ಅರ್ಥೈಸುವುದು

ಇದನ್ನೂ ಓದಿ: ಹೊಸ ಪಡಿತರ ಚೀಟಿ ( ರೇಷನ್ ಕಾರ್ಡ ) ಡೌನ್ಲೋಡ್ ಮಾಡುವ ವಿಧಾನ.

4) 2022-23ನೇ ಸಾಲಿಗೆ ಈ ಯೋಜನೆ ಅಡಿ ಗ್ರಾಮೀಣ ಸಹಕಾರ ಸಂಘಗಳ ಸ್ವಸಹಾಯ ಗುಂಪುಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ 500 ಗಳೊಂದಿಗೆ ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇಕಡ 20ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂಪಾಯಿ 100 ರೂಗಳನ್ನು ಪಾವತಿಸತಕ್ಕದ್ದು.ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂಪಾಯಿ ಒಂದು ಸಾವಿರಗಳೊಂದಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇಕಡ 20ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂಪಾಯಿ ಎರಡು ನೂರುಗಳನ್ನು ಪಾವತಿಸತಕ್ಕದ್ದು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸದಸ್ಯರಿಗೆ ವಿಷಯ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಗಿಸಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಕೆಯನ್ನು ಸರ್ಕಾರವೇ ಭರಿಸುಸುತ್ತದೆ.ಸಹಕಾರಿ ಮೀನುಗಾರರು ಸಹಕಾರಿ ಬಿಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?

ಸದಸ್ಯರ ಕುಟುಂಬದವರಿಂದ ಸಂಗ್ರಹಿಸಿದ ಒಂಟಿಗೆ ಪೈಕಿ ಪ್ರತಿ ಕುಟುಂಬದ ಕಾಡಿಗೆ ರೂ 10 ರೂಗಳನ್ನು ಸಹಕಾರ ಸಂಘದ ಸದಿಲವಾರು ವೆಚ್ಚಕ್ಕೆ ಮತ್ತು ಯಶಸ್ವಿನಿ ಸದಸ್ಯರನ್ನು ನೋಂದಾಯಿಸಲು ಶ್ರಮಿಸಿದವರಿಗೆ ಪ್ರೋತ್ಸಾಹಧನವಾಗಿ ಸಹಕಾರ ಸಂಘ ಅಥವಾ ಸಂಸ್ಥೆಯು ಇಟ್ಟುಕೊಂಡು ಉಳಿದ ಮೊತ್ತವನ್ನು ಹಣ ಸ್ವೀಕರಿಸಿದ 15 ದಿನಗಳು ಸಂಬಂಧಿಸಿದೆ ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಯಶಸ್ವಿನಿ ಟ್ರಸ್ಟ್ ಹೊಂದಿರುವ ಖಾತೆಗೆ ಜಮಾ ಮಾಡತಕ್ಕದ್ದು ಅಥವಾ ವರ್ಗಾಯಿಸತಕ್ಕದ್ದು ಜಿಲ್ಲಾ ಸಹಕಾರಿ ಬ್ಯಾಂಕುಗಳು ಜಮಾ ಆಗುವ ವಂತಿಗೆಯನ್ನು ಮೊತ್ತವನ್ನು ಸ್ವೀಕರಿಸಿದ ಏಳು ದಿನಗಳು ಅಪೇಕ್ಸ್ ಬ್ಯಾಂಕಿನಲ್ಲಿರುವ ಯಶಸ್ವಿನಿ ಟ್ರಸ್ಟ್ ಖಾತೆಗೆ ಜಮಾ ಮಾಡತಕ್ಕದ್ದು ಅಥವಾ ವರ್ಗಾಯಿಸತಕ್ಕದ್ದು ವಿಳಂಬವಾದಲ್ಲಿ ಆ ಹಣವನ್ನು ಇಟ್ಟುಕೊಂಡ ಸಹಕಾರಿ ಸಂಘ ಅಥವಾ ಸಂಸ್ಥೆಯವರು ಬ್ಯಾಂಕಿನ ನಿಯಮಗಳ ಪ್ರಕಾರ ವಿಳಂಬದ ಅವಧಿಗೆ ಬಡ್ಡಿ ಪಾವತಿ ಮಾಡಲು ಬದ್ಧರಾಗುತ್ತಾರೆ.

5) ಮದುವೆಯಾಗಿರುವ ಹೆಣ್ಣು ಮಗಳು ಹಾಗೂ ಅವಳ ಮಕ್ಕಳು ತಂದೆ ತಾಯಿ ಅಣ್ಣ ತಮ್ಮ ಕುಟುಂಬದಲ್ಲಿಯೇ ಅಂದರೆ ಪ್ರಧಾನ ಅರ್ಜಿದಾರರ ಕುಟುಂಬದಲ್ಲಿಯೇ ಯಾವುದೇ ಕಾರಣಕ್ಕೂ ವಾಸವಾಗಿದ್ದರೆ ಅವರ ಪಾಲಿನ ವಂತಿಗೆ ಹಣ ಪಾವತಿಸಿದ್ದರೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅದಾಗ್ಯ 2022 23ನೇ ಸಾಲಿನ ಯೋಜನೆಯ ಅವಧಿಯಲ್ಲಿ ಮದುವೆಯಾದ ಹೆಣ್ಣು ಮಗಳು ತಂದೆ ತಾಯಿ ಅಣ್ಣ ತಮ್ಮ ಇವರ ಜೊತೆ ವಾಸವಾಗಿರದೆ ಸಂಘದ ಕಾರ್ಯ ವ್ಯಾಪ್ತಿ ಹೊರಗೆ ವಾಸವಿದ್ದರೆ ಅಂತಹ ಸಂದರ್ಭದಲ್ಲಿ ಈ ಯೋಜನೆ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ ಅವಳೇ ಸಹಕಾರ ಸಂಘದ ಸದಸ್ಯರಾಗಿ ಮೂರು ತಿಂಗಳು ಕಳೆದಿದ್ದಲ್ಲಿ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

Untitled 1 scaled

ಇದನ್ನೂ ಓದಿ: ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

6) 2022 23 ನೇ ಸಾಲಿನಲ್ಲಿ ಮದುವೆಯಾಗದ ಹೆಣ್ಣು ಮಕ್ಕಳಿಗೆ ಪ್ರಧಾನ ಅರ್ಜಿದಾರರು ವಂತಿಗೆ ಪಾವತಿಸಿದ್ದು ಆನಂತರ ಮದುವೆಯಾಗಿದ್ದಲ್ಲಿ ಅಂತಹ ಮದುವೆಯಾದ ಹೆಣ್ಣು ಮಗಳು ಪ್ರಸಕ್ತ ಸಾಲಿನಲ್ಲಿ ಯಶಸ್ವಿನಿ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ.

7) ಯಶಸ್ವಿನಿ ಯೋಜನೆ ಅಡಿ ಈ ಮೇಲೆ ಹೇಳಿರುವ ಅರ್ಹತೆಯುಳ್ಳ ವ್ಯಕ್ತಿಗಳು ಸದಸ್ಯರಾಗಲು ಯಾವುದೇ ವಯೋಮಿತಿ ನಿರ್ಬಂಧ ವಿರುವುದಿಲ್ಲ.

8) ನವಜಾತ ಶಿಶುವಿನ ತಾಯಿ ಹೆಸರು ಯಶಸ್ವಿನಿ ಕಾರ್ಡಿನಲ್ಲಿದ್ದರೆ 30 ದಿನಗಳವರೆಗೆ ತಾಯಿ ಹೆಸರು ಇರುವ ಯಶಸ್ವಿನಿ ಕಾಡಿನ ಆಧಾರದ ಮೇಲೆ ಈ ಯೋಜನೆ ಅಡಿಯಲ್ಲಿ ಬರುವ ಸೌಲಭ್ಯವನ್ನು ನವಜಾತ ಶಿಶು ಪಡೆಯಬಹುದು

9) ಸಮಾಪನಗೊಂಡ ಅಥವಾ ನಿಷ್ಟ್ರೀಯಗೊಂಡ ಸಹಕಾರ ಸಂಘಗಳ ಸದಸ್ಯರು ಮತ್ತು ನೌಕರರ ಸಹಕಾರ ಸಂಘಗಳ ಸದಸ್ಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

10) ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವೇತನ ಪಡೆಯುತ್ತಿದ್ದಲ್ಲಿ ಈ ಯೋಜನೆಗೆ ಅರ್ಹರಿರುವುದಿಲ್ಲ. ಪ್ರಧಾನ ಅರ್ಜಿದಾರರು ಅಥವಾ ಅವನ ಕುಟುಂಬದ ಸದಸ್ಯರು ಯಾವುದೇ ವಿಮಾ ಯೋಜನೆ ಅಡಿಯಲ್ಲಿ ಸದಸ್ಯನಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆ ಅಡಿ ಸದಸ್ಯರಾಗಲು ಅರ್ಹನಿರುವುದಿಲ್ಲ.

11) 2022 23ನೇ ಸಾಲಿಗೆ ನೊಂದಣಿ ಪ್ರಕ್ರಿಯೆಯನ್ನು ದಿನಾಂಕ 1.11.2022 ರಿಂದ ಪ್ರಾರಂಭಿಸಲಾಗುವುದು.

12) 2022-23ನೇ ಯಶಸ್ವಿನಿ ಯೋಜನೆಯ ಅವಧಿ ದಿನಾಂಕ 1.1.2023ರಿಂದ 31.04.2024 ರವರಿಗೆ ಜಾರಿಯಲ್ಲಿರುತ್ತದೆ.

13) ಯಶಸ್ವಿನಿ ಯೋಜನೆಯಡಿ ಸದಸ್ಯರಿಗೆ ಯುನಿಕ್ ಐಡಿ ಸಂಖ್ಯೆಯುಳ್ಳ ಕಾರ್ಡನ್ನು ಒದಗಿಸಲಾಗುವುದು ಸದರಿ ಕಾಡಿನಲ್ಲಿ ಪ್ರಾಥಮಿಕ ಸದಸ್ಯರ ಸಹಕಾರ ಸಂಘದ ಸದಸ್ಯತ್ವದ ವಿವರಗಳು ಮತ್ತು ಅವರ ಕುಟುಂಬ ಸದಸ್ಯರ ವಿವರಗಳು ವಾರ್ಷಿಕ ವಂತಿಕೆ ಪಾವತಿಸಿರುವ ವಿವರ ಹಾಗೂ ಭಾವಚಿತ್ರದ ವಿವರಗಳ ಮಾಹಿತಿಯು ಸಂಗ್ರಹಣೆ ಆಗಿರುತ್ತದೆ ಇದರಲ್ಲಿ ಕುಟುಂಬದ ವಾರ್ಷಿಕ ವೈದ್ಯಕೀಯ ವೆಚ್ಚದ ಮಿತಿಯನ್ನು ಸಹ ಕಾರ್ಡ್ ನಲ್ಲಿ ನಮೂದಿಸಲಾಗಿರುತ್ತದೆ.

14) ಸದರಿ ಕಾರ್ಡನ್ನು ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಹಾಗೂ ಟಿಪಿಎ ಸಂಖ್ಯೆಯಲ್ಲಿ ಉಪಯೋಗಿಸಿದಾಗ ಪ್ರಧಾನ ಅರ್ಜಿದಾರರು ಹಾಗೂ ಅವರ ಅವಲಂಬಿತರ ಸಂಪೂರ್ಣ ಮಾಹಿತಿ ಲಭ್ಯವಾಗುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು.

15) ಯಶಸ್ವಿನಿ ಯೋಜನೆ ಇಡೀ ನೊಂದಾಯಿತ ಸದಸ್ಯರು ಈ ಕಾರ್ಡನ್ನು ಬಳಸಿ ನಗದುರಹಿತ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ.

Untitled 1 scaled

ಇದನ್ನೂ ಓದಿ: ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

16) ಈ ಕೆಳಕಂಡ ಸೌಲಭ್ಯಗಳನ್ನು ಯಶಸ್ವಿನಿ ಸದಸ್ಯರಿಗೆ ಒದಗಿಸಲಾಗುವುದು

a) ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ ಮೂಗು ಗಂಟಲು ವ್ಯಾಧಿಗಳು ಕರಳಿನ ಕಾಯಿಲೆಗಳು ನರಗಳಿಗೆ ಸಂಬಂಧಿಸಿದ ಕಾಯಿಲೆಗಳು ಕಣ್ಣಿನ ಕಾಯಿಲೆಗಳು ಮೂಳೆ ರೋಗಗಳು ಸ್ತ್ರೀಯರಿಗೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಈ ಯೋಜನೆ ಹಿಡಿಯುತ್ತಾರೆ ಅನುಸೂಚಿತ ಸಾಮಾನ್ಯ ರೋಗಿಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.

b) ಪ್ರಾರಂಭಿಕವಾಗಿ ಈ ಹಿಂದಿನ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿದ ನೆಟ್ವರ್ಕ್ ಆಸ್ಪತ್ರೆಗಳನ್ನೇ ಸದ್ಯಕ್ಕೆ ಮುಂದುವರಿಸಲಾಗಿದೆ. ನಂತರ ಹೊಸ ಮಾರ್ಗ ಸೂಚಿಗಳಂತೆ ಟ್ರಸ್ಟ್ ನಲ್ಲಿ ತೀರ್ಮಾನಿಸಿ ನೆಟ್ವರ್ಕ್ ಆಸ್ಪತ್ರೆಗಳನ್ನು ಅಂತಿಮಗೊಳಿಸಲಾಗುವುದು.

c) ಪ್ರಾರಂಭಿಕವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಅಳವಡಿಸಿಕೊಂಡಿರುವ 1650 ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಗೆ ಅಳವಡಿಸಿಕೊಳ್ಳಲಾಗುವುದು. ಮುಂದೆ ಯಶಸ್ವಿನಿ ಟ್ರಸ್ಟ್ ನಲ್ಲಿ ಚರ್ಚಿಸಿ ಅಗತ್ಯತೆ ಕಂಡು ಬಂದಲ್ಲಿ ಚಿಕಿತ್ಸೆಗಳು ಮತ್ತು ದರಗಳ ಪರಿಷ್ಕರಣೆಗೆ ಕ್ರಮವಿಡಲಾಗುವುದು.

d) ಯಶಸ್ವಿನಿ ಸದಸ್ಯರು ಜನರಲ್ ವಾರ್ಡ್ ನಲ್ಲಿ ಸೌಲಭ್ಯ ಪಡೆಯುವಲ್ಲಿ ಅರ್ಹತೆ ಹೊಂದಿರುತ್ತಾರೆ. ಯಶಸ್ವಿನಿ ಯೋಜನೆ ಅಡಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ ಆಸ್ಪತ್ರೆ ವೆಚ್ಚ ಶಸ್ತ್ರಚಿಕಿತ್ಸೆಯ ವೆಚ್ಚ ಆಪರೇಷನ್ ಥಿಯೇಟರ್ ಬಾಡಿಗೆ ಅರೆವಳಿಕೆ ತಜ್ಞರಪಿ ಸರ್ಜನ್ ಫಿ ಕನ್ಸಲ್ಟೆಂಟ್ ಫೀ ಬೆಡ್ ಚಾರ್ಜ್ ನರ್ಸ್ ಫಿ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.

e) ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರರೋಗಿ ಚಿಕಿತ್ಸೆಗೆ ಗರಿಷ್ಠರು ಎರಡು ನೂರು ಗಳ ಮಿತಿ ನಿಗದಿಪಡಿಸಿದ್ದು ನೆಟ್ವರ್ಕ್ ಆಸ್ಪತ್ರೆಗಳು ಇದಕ್ಕಿಂತ ಹೆಚ್ಚಿನ ಶುಲ್ಕವನ್ನು ಸದಸ್ಯರಿಗೆ ವಿಧಿಸತಕ್ಕದ್ದಲ್ಲ. ಈ ಪೈಕಿ ರೂ 100ಗಳನ್ನು ಯಶಸ್ವಿನಿ ಪ್ರಶ್ನೆ ವತಿಯಿಂದ ಪಾವತಿಸಲಾಗುವುದು.

f) ಸದಸ್ಯರು ಯಶಸ್ವಿನಿ ಕಾರ್ಡ್ ಪಡೆದ 15 ದಿನಗಳ ನಂತರ ಯಶಸ್ವಿನಿ ಕಾರ್ಡ್ದಾರರು ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ.

17) ಸದಸ್ಯರ ನೋಂದಣಿಗೆ ಮಾರ್ಗ ಸೂಚಿಗಳು ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳ ಯಾದಿ ಶಸ್ತ್ರಚಿಕಿತ್ಸೆಗಳ ಯಾದಿ ಇವುಗಳು ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು.

18) ಸದಸ್ಯರು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ಒದಗಿಸತಕ್ಕದ್ದು

ಸೌಲಭ್ಯ ಪಡೆಯುವುದು ಹೇಗೆ ?

ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಬೇಕಾದಲ್ಲಿ ತಮ್ಮ ಯೂನಿಕ್ ಐ.ಡಿ. ಸಂಖ್ಯೆ ಹೊಂದಿರುವ ಸದಸ್ಯರ ಉಪಯೋಗಕ್ಕಾಗಿ ನೀಡಲಾದ ಮೂಲ ಗುರುತಿನ ಕಾರ್ಡ್ ಮತ್ತು ಮೂಲ ಹಣ ಪಾವತಿ ರಸೀದಿಯೊಂದಿಗೆ ಯೋಜನೆಯಡಿಯಲ್ಲಿ ಅಂಗೀಕೃತವಾದ ಆಸ್ಪತ್ರೆಗೆ ಭೇಟಿ ನೀಡಬೇಕು. ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಂತಹ ಫಲಾನುಭವಿಗಳ ಆರೋಗ್ಯ ತಪಾಸಣೆ ಮಾಡಿ, ಶಸ್ತ್ರಚಿಕಿತ್ಸೆ ಅವಶ್ಯಕಂಡು ಬಂದಲ್ಲಿ ಮತ್ತು ಸದರಿ ಶಸ್ತ್ರಚಿಕಿತ್ಸೆಯ ಯೋಜನೆಯಲ್ಲಿ ಒಳಗೊಂಡಿದ್ದಲ್ಲಿ, ವಿವರಗಳೊಂದಿಗೆ ಅನುಷ್ಟಾನ ಸಂಸ್ಥೆಗೆ ಇಂಟರ್ ನೆಟ್ ಮುಖಾಂತರ ಪ್ರಸ್ತಾಪ ಕಳಿಸುವರು.ಅನುಷ್ಟಾನ ಸಂಸ್ಥೆಯವರು ಪ್ರಸ್ತಾಪವನ್ನು ಪರಿಶೀಲಿಸಿ ಚಿಕಿತ್ಸಾ ಪೂರ್ವಾ ನುಮತಿ ನೀಡಿದ ನಂತರ ಆಸ್ಪತ್ರೆಯವರು ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವರು.ಯಶಸ್ವಿನಿ ಫಲಾನುಭವಿಗಳು ಆಸ್ಪತ್ರೆಗೆ ಸೇರಿದಾಗ ಶಸ್ತ್ರಚಿಕಿತ್ಸೆಗೆ ಹಣ ಪಾವತಿ ಮಾಡಬೇಕಾಗಿಲ್ಲ. ಈ ಯೋಜನೆಯಲ್ಲಿ ಗುರುತಿಸಿದ ಶಸ್ತ್ರಚಿಕಿತ್ಸೆಗಳು ಕೆಲವೊಂದು ಷರತ್ತುಗಳಿಗೊಳಪಟ್ಟ ನಗದು ರಹಿತವಾಗಿರುತ್ತದೆ. ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಗೆ ಟ್ರಸ್ಟ್ ಭರಿಸುತ್ತದೆ.

ಬಿಲ್ಲಿನ ಪಾವತಿ ಹೇಗೆ ಆಗುತ್ತದೆ ?

ಯಶಸ್ವಿನಿ ಫಲಾನುಭವಿಗಳು, ಆಸ್ಪತ್ರೆಗೆ ಬಿಲ್ಲಿನ ಹಣವನ್ನು ಪಾವತಿ ಮಾಡಬೇಕಾಗಿಲ್ಲ,ಆಸ್ಪತ್ರೆಯವರು ಚಿಕಿತ್ಸಾ ಪೂರ್ವಾನುಮತಿಯಲ್ಲಿ ಮಂಜೂರು ಮಾಡಿದ ಮೊತ್ತಕ್ಕೆ ಬಿಲ್ಲನ್ನು ಅನುಷ್ಟಾನ ಸಂಸ್ಥೆಗೆ ಕಳಿಸುವರು. ಅನುಷ್ಟಾನ ಸಂಸ್ಥೆ ಯವರು ಬಿಲ್ಲನ್ನು ಪರಿಶೀಲನೆ ಮಾಡಿ ಅವು ಯೋಜನೆಯ ಪ್ರಕಾರ ಇದ್ದಲ್ಲಿ ಅವುಗಳನ್ನು ಪಾಸು ಮಾಡಲು ಯಶಸ್ವಿನಿ ಟ್ರಸ್ಟಗೆ ಕಳಿಸುವರು. ಯಶಸ್ವಿನಿ ಟ್ರಸ್ಟ್ ಆಸ್ಪತ್ರೆಗಳ ಬಿಲ್ಲನ್ನು ಮಂಜೂರು ಮಾಡಿದ ನಂತರ ಬಿಲ್ಲಿನ ಮೊತ್ತವನ್ನು ಅನುಷ್ಟಾನ ಸಂಸ್ಥೆಯ ಮೂಲಕ ಆಸ್ಪತ್ರೆಗೆ ಪಾವತಿಸಲಾಗುವುದು.

Untitled 1 scaled

telee

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ

Android Link –  https://play.google.com/store/apps/details?id=com.needsofpublic.universal

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Instagram, FacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ,  ಸರಕು ಸಾಗಾಣಿಕೆ ವಾಹನ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಾ ಅಂಬೇಡ್ಕರ್ ನಿಗಮ ದಲ್ಲಿ ಹೊಸ ಬೈಕ್ ಪಡೆಯಲು ಸಹಾಯಧನ ಅರ್ಜಿ ಆಹ್ವಾನಿಸಲಾಗಿದೆ. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/two-wheeler-scheme-karnataka/

WhatsApp Group Join Now
Telegram Group Join Now

Related Posts

5 thoughts on “ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ

  1. ನಮಗೆ ತುಂಬಾ ಕಷ್ಟ ಇದೆ ನಡೆಯಲು ತುಂಬಾ ದೂರ ಆಗುತ್ತದೆ ನಾವು ಬಾಳ ಬಡವರು ಆದಕಾರಣ ನಮಗೆ ದ್ವಿಚಕ್ರ ಬೈಕನ್ನು ( ವಾಹನ) help maadi please.

Leave a Reply

Your email address will not be published. Required fields are marked *

error: Content is protected !!