ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಅನ್ನ ಭಾಗ್ಯದ 5 ಕೆ.ಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬದಲಾಗಿ ಯಾರಿಗೆ ಹಣ ಸಿಗುವುದರ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ಅನ್ನ ಭಾಗ್ಯದ 5kg ಅಕ್ಕಿಯ ಬದಲಾಗಿ ₹170 ರೂಪಾಯಿಯನ್ನು ಇದೇ ಜುಲೈ ತಿಂಗಳಿನಿಂದ ಗ್ರಾಹಕರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಾರೆ ಅದಕ್ಕೆ ಮುನ್ನ ನೀವು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಮ್ಯಾಪಿಂಗ್ ಮಾಡಿಕೊಳ್ಳಬೇಕಾಗಿರುತ್ತದೆ. ಆದರೆ, ರಾಜ್ಯದಲ್ಲಿ ಸುಮಾರು 6 ಲಕ್ಷ ಕಾರ್ಡುಗಳು ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಪ್ರತಿಯೊಬ್ಬರಿಗೆ ಐದು ಕೆಜಿ ಅಕ್ಕಿ & ಇನ್ನುಳಿದ 5kg ಗೆ ಹಣ
ಯೋಜನೆಯಡಿ, ಒಬ್ಬರು ಸದಸ್ಯರಿರುವ ಕುಟುಂಬಕ್ಕೆ 5 ಕೆಜಿ ಅಕ್ಕಿ, ಇಬ್ಬರು ಸದಸ್ಯರಿರುವ ಕುಟುಂಬಕ್ಕೆ 10 ಕೆಜಿ, ಐದಕ್ಕಿಂತ ಹೆಚ್ಚು ಜನರಿರುವ ಕುಟುಂಬಕ್ಕೆ 25 ಕೆಜಿ ಅಕ್ಕಿ ನಿಗದಿಪಡಿಸಲಾಗಿದೆ. ಒಂದು ಕೆಜಿ ಅಕ್ಕಿಗೆ 34 ರೂ.ಗಳಿಂತೆ ಈ ಕುಟುಂಬಗಳಿಗೆ ಕ್ರಮವಾಗಿ 170 ರೂ., 340 ರೂ. ಹಾಗೂ 850 ರೂ.ಗಳನ್ನು ನೀಡಲಾಗುತ್ತದೆ.
ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಹಣ ಸಿಗುತ್ತದೆ. ರಾಜ್ಯದಲ್ಲಿ ಒಟ್ಟು 1.78 ಕೋಟಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಈ ಬಗ್ಗೆ ಸುಮಾರು 6 ಲಕ್ಷ ಜನರ ಕಾರ್ಡುಗಳು ಬ್ಯಾಂಕಿಗೆ ಲಿಂಕ್ ಆಗಿರುವುದಿಲ್ಲ ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಗ್ರಾಹಕರ ಆಧಾರ್ ಸಂಖ್ಯೆಗೆ ಬ್ಯಾಂಕ್ ಕಡ್ಡಾಯವಾಗಿ ಮ್ಯಾಪಿಂಗ್ ಆಗಿರಬೇಕು. 6 ಲಕ್ಷ ಕಾರ್ಡುದಾರರ ಮನೆಗಳ ಯಾವೊಬ್ಬ ಸದಸ್ಯನೂ ಬ್ಯಾಂಕ್ ಖಾತೆಯನ್ನು ಪಡಿತರ ಚೀಟಿಗೆ ಲಿಂಕ್ ಮಾಡಿಲ್ಲ. ಕೆಲವರ ಬ್ಯಾಂಕ್ ಖಾತೆಗಳು ಲಿಂಕ್ ಆಗಿದ್ದರೂ, ಆ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಲಿಂಕ್ ಆಗಿಲ್ಲ. ಅಂಥವರಿಗೆ ಯೋಜನೆಯ ಹಣ ತಲುಪಿಸಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸಾಧ್ಯವಾಗದೇ ಇರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಹೊಂದಿರುವ ಆಧಾರ್ ಕಾರ್ಡ್ ಮ್ಯಾಪಿಂಗ್ ಆಗಿದಿಯೋ ಅಥವಾ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂದು ಕೆಳಗೆ ಮಾಹಿತಿ ಕೊಡಲಾಗಿದೆ
ಆಧಾರ್ ಕಾರ್ಡ್ ನೊಂದಿಗೆ ಡಿಬಿಟಿ ಲಿಂಕ್ ಮಾಡಿ :
ಡಿಬಿಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಇದರಿಂದಾಗಿ ಮಹಿಳೆಯರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಯೋಜನೆಯ ₹2,000 ಮತ್ತು ಅನ್ನಭಾಗ್ಯದ ₹170 ರೂಪಾಯಿ ಜಮಾ ಆಗುತ್ತದೆ. ಹಾಗಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಡಿಬಿಟಿ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಿ.
ನಿಮ್ಮ ಆಧಾರ್ ಕಾರ್ಡ್ ಹಾಗೂ ಡಿಬಿಟಿ ಲಿಂಕ್ ಆಗಿದೆ ಎಂಬುದನ್ನು ಹೇಗೆ ನೋಡುವುದು?:
ಹಂತ 1: ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. https://resident.uidai.gov.in/bank-mapper
ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನೋಂದಣಿ ಮಾಡಿ ಹಾಗೆ ಕ್ಯಾಪ್ಚರ್ ಅನ್ನು ಎಂಟರ್ ಮಾಡಿ.
ಹಂತ 3: ನಂತರ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್OTP ಬರುತ್ತೆ ಅದನ್ನು ನಮೂದಿಸಿ, ನಂತರ Submit ಮೇಲೆ ಕ್ಲಿಕ್ ಮಾಡಿ
ಹಂತ 4: ನಂತರ ಅದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೋರಿಸುತ್ತದೆ.
ಹಂತ 5: ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನೀವು ಹತ್ತಿರದ ಶಾಖೆಗೆ ತೆರಲಿ ಲಿಂಕ್ ಮಾಡಿಸಬೇಕು.
ಹೀಗೆ ನೀವು ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯನ್ನು ಮ್ಯಾಪಿಂಗ್ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2,000/- ಹಣದ ಪ್ರಯೋಜನವನ್ನು ಪಡೆಯಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಮಹಿಳೆಯರಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ