ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿಆನ್ಲೈನ್ ಮೂಲಕ ಪಿಎಫ್ (EPF) ವಿಡ್ರಾ ಮಾಡಲು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರವನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
PF ಹಣ ವಿಥ್ ಡ್ರಾ ಮಾಡುವುದು ಹೇಗೆ? | How to Withdraw EPF ?
ಆನ್ಲೈನ್ ಮುಖಾಂತರ ನೀವೇನಾದರೂ ಪಿಎಫ್ ವಿತ್ ಡ್ರಾ (EPF Withdraw) ಮಾಡಲು ಅಥವಾ ಕ್ಲೈಮ್ ಮಾಡಲು ಅರ್ಜಿಯನ್ನು ಸಲ್ಲಿಸುತ್ತೀರಾ ಎಂದರೆ ಕಡ್ಡಾಯವಾಗಿ ಕೆಲಸವನ್ನು (Job) ಬಿಟ್ಟು ಎರಡು ತಿಂಗಳುಗಳಾಗಿರಬೇಕು( 45 Days ). ಎರಡು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ.
ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ನಿಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿ ಪಿಎಫ್ ಅಕೌಂಟಿಗೆ ಹಾಗೂ ನಿಮ್ಮ ಆಧಾರ್ ಕಾರ್ಡಿಗೆ ರಿಜಿಸ್ಟರ್ ಆಗಿರಬೇಕು. ನಿಮ್ಮ ಮೊಬೈಲ್ ನಂಬರ್ ಏನಾದರೂ ಪಿಎಫ್ ಖಾತೆಗೆ ರಿಜಿಸ್ಟರ್ ಆಗಿಲ್ಲ ಎಂದರೆ, ಹತ್ತಿರದ ಪಿಎಫ್ ಆಫೀಸ್ ಅಥವಾ ನಿಮ್ಮ ಎಂಪ್ಲಾಯರ್ ಹತ್ತಿರ ರಿಜಿಸ್ಟರ್ ಮಾಡಿಸಬಹುದು ಹಾಗೆಯೇ ನಿಮ್ಮ ಮೊಬೈಲ್ ಆಧಾರ್ ಕಾರ್ಡಿಗೆ ಲಿಂಕ್ ಆಗಿಲ್ಲ ಎಂದರೆ ನಿಮ್ಮ ಹತ್ತಿರದ ಆಧಾರ್ Center ಗೆ ಹೋಗಿ ಲಿಂಕ್ ಮಾಡಿಸಬಹುದು ನಂತರ ಪಿಎಫ್ ಅನ್ನು ಅಪ್ಲೈ ಮಾಡಬಹುದು.
ಆನ್ಲೈನ್ ಮುಖಾಂತರ ಪಿ ಎಫ್ ಗೆ ಅಪ್ಲೈ ಮಾಡುವ ವಿಧಾನ :
ಈ ಕೆಳಗಿನ ವಿಡಿಯೋ ವೀಕ್ಷಿಸುವ ಮೂಲಕ ಅಥವಾ ಕೆಳಗೆ ಕೊಡಲಾದ ಹಂತಗಳನ್ನು ಅನುಸರಿಸಿ ನಿಮ್ಮ PF withdraw ಮಾಡಿಕೊಳ್ಳಬಹುದು.
https://www.youtube.com/watch?v=7X14gaK9zIg
ಹಂತ 1: ಪೋರ್ಟಲ್‌ಗೆ ಲಾಗ್ ಇನ್ ಮಾಡಿ – EPFO ಪೋರ್ಟಲ್‌ಗೆ ಭೇಟಿ ನೀಡಿ, ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಅಥವಾ ನೇರವಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://unifiedportal-mem.epfindia.gov.in/memberinterface/
ನಿಮಗೇನಾದರೂ ನಿಮ್ಮ UAN ನಂಬರ್ ಗೊತ್ತಿಲ್ಲ ಎಂದರೆ Know Your UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ UAN ನಂಬರನ್ನು ತಿಳಿದುಕೊಳ್ಳಬಹುದು. UAN ತಿಳಿದುಕೊಳ್ಳಲು Know Your UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಪಿಎಫ್ ಅಕೌಂಟಿಗೆ ರಿಜಿಸ್ಟರ್ ಆಗಿರುವಂತಹ 10 ಡಿಸಿಟಿನ ಮೊಬೈಲ್ ನಂಬರ್ ಅನ್ನು ನೀವು ಅಲ್ಲಿ ಎಂಟರ್ ಮಾಡಬೇಕು ನಂತರ ಕ್ಯಾಪ್ಚ ಅನ್ನು ಇಂಟರ್ ಮಾಡಿ. ನಂತರ ರಿಕ್ವೆಸ್ಟ್ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹೀಗೆ ಕ್ಲಿಕ್ ಮಾಡಿದ ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಓಟಿಪಿಯನ್ನು ಎಂಟರ್ ಮಾಡಿದ ನಂತರ ನಿಮಗೆ ನಿಮ್ಮ UAN ನಂಬರ್ ದೊರೆಯುತ್ತದೆUAN ನಂಬರ್ ದೊರೆತ ನಂತರ ನೀವು ಅದನ್ನು ಆಕ್ಟಿವ್ ಮಾಡಬೇಕಾಗಿರುತ್ತದೆ ಇಲ್ಲ ಅಂದರೆ ಪಿಎಫ್ ನಿಮಗೆ ದೊರೆಯುವುದಿಲ್ಲ ಹಾಗಾಗಿ Active your UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಪೇಜಿನಲ್ಲಿ UAN ನಂಬರನ್ನು ಎಂಟರ್ ಮಾಡಿ. ನಂತರ ಕೆಳಗೆ ಹಲವಾರು ಡೀಟೇಲ್ಸ್ ಗಳನ್ನು ನೀವು ಫೀಲ್ ಮಾಡಬೇಕಾಗುತ್ತದೆ ಹೀಗೆ ಫೀಲ್ ಮಾಡಿದ ನಂತರ ಅಥೆಂಟಿಕೇಟ್ UAN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹೀಗೆ ಮಾಡಿ ನಿಮ್ಮ UAN ನಂಬರನ್ನು ನೀವು ಆಕ್ಟಿವೇಟ್ ಮಾಡಿಕೊಳ್ಳಬಹುದು.
ಇ- ಕೆ ವೈ ಸಿ ವಿಧಾನ :
ಮೊದಲಿಗೆ ಮೇನ್ ಪೇಜ್ ಗೆ ಬಂದು ಮ್ಯಾನೇಜ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ E-Kyc ಮೇಲೆ ಕ್ಲಿಕ್ ಮಾಡಿ. ನೀವು ಕೆವೈಸಿಯನ್ನು ಕಡ್ಡಾಯವಾಗಿ ಮಾಡಲೇಬೇಕು. ಕೆವೈಸಿ ಎಂದರೆ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಪ್ಯಾನ್ ಕಾರ್ಡ್ ಸಂಖ್ಯೆ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಹೆಸರು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಪ್ಯಾನ್ ಕಾರ್ಡ್ ಮತ್ತು PF ಅಕೌಂಟ್ ನಲ್ಲಿ ಒಂದೇ ತರಹ ಇರಬೇಕು. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನಿಮ್ಮ ಕಂಪನಿ ಅವರ ಕಡೆಯಿಂದ ವೆರಿಫೈ ಆಗಿರಬೇಕು ಮತ್ತು ಆಗಿರಬೇಕು. ಕೆವೈಸಿಗೆ ಸಲ್ಲಿಸಿದ ನಂತರ ನೀವು ಕೆಲಸ ಮಾಡುತ್ತಿದ್ದ ಕಂಪನಿಯವರು ಕೆವೈಸಿ ಅನ್ನ ಅಪ್ರೂವ್ ಮಾಡುತ್ತಾರೆ ಇಲ್ಲವಾದರೆ ನೀವು ಅವರಿಗೆ ತಿಳಿಸಿ ಅಪ್ರೂವ್ ಮಾಡಿಸಬೇಕು
ಹಂತ 2: ಆನ್‌ಲೈನ್ ಕ್ಲೈಮ್‌ಗಳ ವಿಭಾಗಕ್ಕೆ ಭೇಟಿ ನೀಡಿ – ನೀವು ಲಾಗ್ ಇನ್ ಮಾಡಿದಾಗ, ನೀವು ‘ಆನ್‌ಲೈನ್ ಸೇವೆಗಳು’ ವಿಭಾಗದಲ್ಲಿ ‘ಕ್ಲೈಮ್ (ಫಾರ್ಮ್-31, 19, 10C & 10D)’ ಅನ್ನು ನೋಡಬಹುದು. ಇಲ್ಲಿ PF ಗಾಗಿ ಫಾರ್ ಫಾರ್ಮ್ 19 ಸೆಲೆಕ್ಟ್ ಮಾಡಿಕೊಳ್ಳಿ
ಹಂತ 3:ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ – ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು (UAN ನೊಂದಿಗೆ ಸೀಡ್ ಮಾಡಲಾಗಿದ) ಪರಿಶೀಲನಾ ಪ್ರಕ್ರಿಯೆಯಾಗಿ ನಮೂದಿಸಬೇಕಾಗುತ್ತದೆ
ಹಂತ 4: ನಿಯಮಗಳು ಮತ್ತು ಷರತ್ತುಗಳನ್ನು ದೃಢೀಕರಿಸಿ – ಒಮ್ಮೆ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ, ನೀವು EPFO ನಿಂದ ಹೇಳಲಾದ ನಿಯಮಗಳು ಮತ್ತು ಷರತ್ತುಗಳನ್ನು ದೃಢೀಕರಿಸುವ ಅಗತ್ಯವಿದೆ. ನಂತರ ನೀವು ‘ಆನ್‌ಲೈನ್ ಕ್ಲೈಮ್‌ಗಾಗಿ ಮುಂದುವರೆಯಿರಿ’ ಅನ್ನು ಕ್ಲಿಕ್ ಮಾಡಬಹುದು.
ಹಂತ 5: ವಾಪಸಾತಿಗೆ ಕಾರಣವನ್ನು ಆಯ್ಕೆಮಾಡಿ – ನೀವು ಡ್ರಾಪ್‌ಡೌನ್ ಮೆನುವನ್ನು ಕಾಣುತ್ತೀರಿ, ಇದರಿಂದ ನಿಮ್ಮ PF ಖಾತೆಯಿಂದ ಹಿಂತೆಗೆದುಕೊಳ್ಳುವ ಕಾರಣವನ್ನು ನೀವು ಆರಿಸಬೇಕಾಗುತ್ತದೆ. ನೀವು ಅರ್ಹರಾಗಿರುವ ಆಯ್ಕೆಗಳನ್ನು ಮಾತ್ರ ನಿಮಗೆ ತೋರಿಸಲಾಗುತ್ತದೆ.
ಹಂತ 6: ವಿವರಗಳನ್ನು ನಮೂದಿಸಿ ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ – PF ಹಿಂಪಡೆಯಲು ಕಾರಣವನ್ನು ನೀವು ಆಯ್ಕೆ ಮಾಡಿದಾಗ, ನಿಮ್ಮ ಸಂಪೂರ್ಣ ವಿಳಾಸವನ್ನು ನೀವು ನಮೂದಿಸಬೇಕಾಗುತ್ತದೆ ಮತ್ತು ನೀವು ‘ಮುಂಗಡ ಹಕ್ಕು’ ಆಯ್ಕೆಯನ್ನು ಆರಿಸಿದ್ದರೆ ನಿಮ್ಮ ಚೆಕ್/ಪಾಸ್‌ಬುಕ್ ವಿವರಗಳನ್ನು ನೀವು ಅಪ್‌ಲೋಡ್ ಮಾಡಬೇಕಾಗಬಹುದು. ಪರಿಶೀಲನೆಗಾಗಿ ಒಂದು-ಬಾರಿ ಪಾಸ್‌ವರ್ಡ್ (OTP) ಅನ್ನು ವಿನಂತಿಸುವ ಮೊದಲು ನೀವು ಮತ್ತಷ್ಟು ‘ನಿಯಮಗಳು ಮತ್ತು ಷರತ್ತುಗಳನ್ನು’ ಒಪ್ಪಿಕೊಳ್ಳಬೇಕಾಗುತ್ತದೆ
ಹಂತ 7: ಆಧಾರ್ OTP ಪಡೆಯಿರಿ – ಒಮ್ಮೆ ನೀವು ನಿಮ್ಮ ವಿವರಗಳನ್ನು ದೃಢೀಕರಿಸಿದ ನಂತರ ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡರೆ, ನೀವು OTP ಯನ್ನು ವಿನಂತಿಸಬೇಕಾಗುತ್ತದೆ, ಅದನ್ನು ನಿಮ್ಮ ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ, ನಿಮ್ಮ ಹಕ್ಕು ಅರ್ಜಿಯನ್ನು ಸಲ್ಲಿಸಲಾಗುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Form 15G ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನೋಡಿದ್ರಲ್ಲ ಇಷ್ಟು ಈಸಿಯಾಗಿ ನೀವು ಪಿಎಫ್ ಹಣವನ್ನು ಆನ್ಲೈನ್ ಮುಖಾಂತರ ವಿತ್ಡ್ರಾ ಮಾಡಿಕೊಳ್ಳಬಹುದು. ನೀವು ಅಪ್ಲೈ ಮಾಡಿದ 15 ದಿನಗಳಲ್ಲಿ ನಿಮ್ಮ ಅಕೌಂಟಿಗೆ ಹಣ ಬರುತ್ತದೆ. ಇಂತಹ ಮುಖ್ಯವಾದ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ