ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಎಂದು ಶುರುವಾಗುತ್ತದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಜುಲೈ 19ರಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದ್ದರು ಕೂಡ ಅನೇಕರಿಗೆ ಅದರ ಬಗ್ಗೆ ನಂಬಿಕೆ ಇರಲಿಲ್ಲ ಆದರೆ ಇಂದು ಅಂದರೆ ಜುಲೈ 19ರಂದು ಸಿಎಂ ಸಿದ್ದರಾಮಯ್ಯನವರು ಸಂಜೆ 5:00ಗೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ನೀಡುತ್ತಿದ್ದಾರೆ. ಇದರ ಕುರಿತದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ, ಇಂದಿನಿಂದಲೇ ಅರ್ಜಿಯನ್ನು ಸಲ್ಲಿಸಬಹುದು :
ದೊಡ್ಡ ಹಣದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಇಂದು ಸಂಜೆ 5:00 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಹಾಗಾಗಿ ಇಂದಿನಿಂದಲೇ ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾಗಿ ಕಡ್ಡಾಯವಾಗಿ ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ 2000 ಹಣ ಜಮವಾಗಲಿದೆ. ಅರ್ಜಿಯನ್ನು ಸಲ್ಲಿಸುವ ವಿಷಯದಲ್ಲಿ ಸ್ವಲ್ಪ ಬದಲಾವಣೆ ಕೂಡ ಆಗಿದೆ. ಅದೇನೆಂದರೆ ಮೊದಲು ತಿಳಿಸಿದಂತೆ ಗೃಹಲಕ್ಷ್ಮಿಯರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತೆ. ಪತಿ ತೆರಿಗೆದಾರರಾಗಿದ್ದರೆ ಅಂಥವರ ಅಕೌಂಟ್ಗೆ ಹಣ ಬರುವುದಿಲ್ಲ. ಇನ್ನು ಆಧಾರ್ಗೆ ಲಿಂಕ್ ಆಗಿರೋ ಅಕೌಂಟ್ ಬಿಟ್ಟು, ನಿಮ್ಮದೆ ಬೇರೆ ಅಕೌಂಟ್ಗೆ ಹಣ ಬೇಕಾದ್ರೆ ಪಾಸ್ಬುಕ್ನ ಜೆರಾಕ್ಸ್ ಪ್ರತಿ ತೆಗೆದುಕೊಂಡು ಹೋಗಬೇಕು. ಹಾಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ, ತಪ್ಪದೇ ಓದಿ.
ಅರ್ಜಿ ಸಲ್ಲಿಸುವ ವಿಧಾನ :
ಹಂತ 1: ಮೊದಲನೆಯದಾಗಿ ಅರ್ಜಿಯನ್ನು ಎಸ್ಎಮ್ಎಸ್ ಮೂಲಕ ಸಲ್ಲಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಪಡಿತರ ಚೀಟಿ(Ration card) ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಮಾಡಿ.
ಹಂತ 2: ಎಸ್ಎಂಎಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮಗೆ ಸರ್ಕಾರದಿಂದ ಒಂದು ಮೆಸೇಜ್ ಬರುತ್ತದೆ ಅದರಲ್ಲಿ, ಯಾವ ಸ್ಥಳದಲ್ಲಿ ಯಾವ ದಿನಾಂಕಕ್ಕೆ ಎಷ್ಟು ಗಂಟೆಗೆ ತೆರಳಿ ಅರ್ಜಿಯನ್ನು ಸಲ್ಲಿಸಬೇಕು ಎಂಬುವ ಮಾಹಿತಿ ಇರುತ್ತದೆ.
ಹಂತ 3: ಮನೆ ಒಡತಿಯ ಪಡಿತರ ಚೀಟಿ, ಪತಿ ಹಾಗೂ ಮನೆ ಯಜಮಾನ ಆಧಾರ್ ಕಾರ್ಡ್, ಮೊಬೈಲನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.
ಹಂತ 4: ನಂತರ ತಮಗೆ ತಿಳಿಸಲಾದ ಸರ್ಕಾರಿ ಕೇಂದ್ರಗಳಲ್ಲಿ ಅರ್ಜಿಯನ್ನು ಹಾಕಲಾಗುತ್ತದೆ.
ಇದರ ಕುರಿತಾದ ಯಾವುದೇ ಸಂಬಂಧಿತ ಗೊಂದಲಗಳು ನಿಮಗೆ ಉಂಟಾದಲ್ಲಿ 1902 ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ ಹಣ ಇವರಿಗೆ ಬರುವುದಿಲ್ಲ
- ಮನೆಯಲ್ಲಿ ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ
- GST ಪಾವತಿ ಮಾಡುವ ಕುಟುಂಬಗಳು
- APL, BPL ಕಾರ್ಡ್ ಹೊಂದಿರದ ಕುಟುಂಬಗಳು
- ಮನೆಯಲ್ಲಿ ಮಕ್ಕಳು ಅಥವಾ ಗಂಡ ಅಥವಾ ಹೆಂಡತಿ ಸರ್ಕಾರಿ ನೌಕರರಾಗಿದ್ದರೆ
- ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಾದರೂ ತೆರಿಗೆ ಪಾವತಿಯನ್ನು
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಗೃಹಲಕ್ಷ್ಮೀ ಯೋಜನೆಗೆ ಯಾರು ಅರ್ಹರು..?
ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಯೋಜನೆಯ ಫಲಾನುಭವಿಯಾಗಿರುತ್ತಾರೆ. ರೇಷನ್ ಕಾರ್ಡ್ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೋಂದಣಿ ಸ್ಥಳದ ವಿವರ ಎಸ್ಎಂಎಸ್ ಮೂಲಕ ರವಾನೆ ಮಾಡಲಾಗುವುದು.
‘ಗೃಹಲಕ್ಷ್ಮೀ’ಯೋಜನೆಗೆ ನೋಂದಣಿಗೆ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆಯ ಪಾಸ್ ಬುಕ್ ಬೇಕಾಗಿರುತ್ತದೆ. ಒಂದು ವೇಳೆ ಆಧಾರ್ ನಂಬರ್ ಜೋಡಣೆಯಾಗಿರುವ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಆ ಖಾತೆಯ ಪಾಸ್ ಬುಕ್ ಅಗತ್ಯ. ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ಮನೆಗೆ ತಲುಪಿಸಲಾಗುತ್ತದೆ.
ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ಮನೆಗೆ ತಲುಪಿಸಲಾಗುವುದು. ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ ಮೂಲಕ ಮಂಜೂರಾತಿ ಸಂದೇಶ ರವಾನೆ ಮಾಡಲಾಗುತ್ತದೆ. ಫಲಾನುಭವಿಯ ಆಧಾರ್ ಜೋಡಣೆಯಾಗಿರುವ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡುತ್ತೇವೆ. ಬೇರೆ ಖಾತೆಗೆ ಆರ್ ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗುತ್ತದೆ. ನೋಂದಣಿಗೆ ಯಾವುದೇ ಶುಲ್ಕ, ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗದಿಪಡಿಸಿಲ್ಲ.
ಮನೆಯ ಯಜಮಾನಿ ಯಾರೆಂದು ಹೇಗೆ ತಿಳಿದುಕೊಳ್ಳುವುದು?
ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಯಾರೆಂದು ತಿಳಿದುಕೊಳ್ಳಲು ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010
ಈ ಪುಟದಲ್ಲಿ ನೀವು ಕೇವಲ ನಿಮ್ಮ ಜಿಲ್ಲೆಯನ್ನ ಸೆಲೆಕ್ಟ್ ಮಾಡಿಕೊಂಡು ರೇಷನ್ ಕಾರ್ಡ್ ನಂಬರ್ ಹಾಕಿ submit ಕ್ಲಿಕ್ ಮಾಡಿ
ಇಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಪೂರ್ಣ ಮಾಹಿತಿ ತೋರಿಸುತ್ತದೆ ಇಲ್ಲಿ ನಿಮ್ಮ ಮನೆ ಯಜಮಾನಿಯ ಹೆಸರು ಮತ್ತು ಸದಸ್ಯರ ಹೆಸರು ತೋರಿಸುತ್ತದೆ. ಉಚಿತ ರೂ.2000 ಪಡೆಯಲು ಈ ಮನೆ ಯಜಮಾನಿಯ ಹೆಸರಿನಲ್ಲಿ ನೀವು ಅರ್ಜಿ ಸಲ್ಲಿಸಬೇಕು
ಅನ್ನ ಭಾಗ್ಯದ ಹಣ ಬ್ಯಾಂಕ್ ಖಾತೆಗೆ ಬಂತಾ ಚೆಕ್ ಮಾಡಿ..! ಇಲ್ಲಿದೆ ಡೈರೆಕ್ಟ್ ಲಿಂಕ್
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ