SSP Scholarship: ₹10,000/- ರೂಪಾಯಿ ಈ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ, ಲಿಸ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

WhatsApp Image 2023 07 31 at 8.31.18 AM 1

ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ, SSP ವಿದ್ಯಾರ್ಥಿವೇತನದ  ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.  2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ಇದೀಗ ಸ್ಕಾಲರ್ಶಿಪ್ ಹಣ ಬಿಡುಗಡೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

2022 ಮತ್ತು 23 ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳ SSP ವಿದ್ಯಾರ್ಥಿ ವೇತನ ಈಗಾಗಲೇ ಕೆಲವು ವಿದ್ಯಾರ್ಥಿಗಳಿಗೆ ಜಮಾ ಆಗಿದ್ದು ಇನ್ನು ಅನೇಕ ವಿದ್ಯಾರ್ಥಿಗಳು ಈ SSP ವಿದ್ಯಾರ್ಥಿವೇತನಕ್ಕೆ ಕಾಯುತ್ತಿದ್ದಾರೆ, ಕಳೆದ ವರ್ಷದ ವಿದ್ಯಾರ್ಥಿ ವೇತನದ ಬಗ್ಗೆ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರಲ್ಲಿ ಇದರ ಬಗ್ಗೆ ವಿಚಾರಿಸಿದಾಗ ಇದೇ ಅಗಸ್ಟ್ ತಿಂಗಳು 15ನೇ ತಾರೀಖಿನ ಒಳಗಾಗಿ ಎಲ್ಲಾ ಕೋರ್ಸ್ ವಿದ್ಯಾರ್ಥಿಗಳ SSP ವಿದ್ಯಾರ್ಥಿ ವೇತನ ಅವರ ಖಾತೆಗೆ ಡಿಬಿಟಿ ಮೂಲಕ ಜಮಾ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈಗಾಗಲೇ BA, MA, M.com, BAMS, MBBS ಮತ್ತು ಇನ್ನು ಕೆಲವು ಕೋರ್ಸ್ ಗಳ ವಿದ್ಯಾರ್ಥಿಗಳ ಖಾತೆಗೆವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಮಾ ಆಗಿರುವ ಬಗ್ಗೆ ಕೆಳಗೆ ನೀವು ನೋಡಬಹುದು.

ssp22

ಮತ್ತು 2023 – 24ನೇ ಸಾಲಿನ SSP ವಿದ್ಯಾರ್ಥಿ ವೇತನದ ಅರ್ಜಿ ಆಗಸ್ಟ್ 15 ರ ನಂತರ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಬೇಕಾದ ಎಲ್ಲಾ ದಾಖಲಾತಿಗಳನ್ನು ಈಗಿನಿಂದಲೇ ಸಿದ್ದಪಡಿಸಿಕೊಂಡರೆ ಸರಿಯಾದ ಸಮಯಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು. ಹಾಗಾಗಿ ನಿಮ್ಮ ಸ್ನೇಹಿತರಿಗೂ ಮತ್ತು ಎಲ್ಲಾ ವಿದ್ಯಾರ್ಥಿ ಮಿತ್ರರಿಗೂ ಈ ವರದಿಯನ್ನು ಶೇರ್ ಮಾಡುವ ಮೂಲಕ ಅವರಿಗೂ ಸಹಿತ ನೀವು ಅನುಕೂಲ ಮಾಡಿಕೊಡಬಹುದು.

whatss

SSP ಪ್ರೀ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು : (1 ನೇ ತರಗತಿಯಿಂದ 10ನೇ ತರಗತಿವರೆಗೆ )

  1.  ಅಭ್ಯರ್ಥಿಯ SATS ID ಸಂಖ್ಯೆ
  2. ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್ ಸಂಖ್ಯೆ
  3. ಮೊಬೈಲ್ ನಂಬರ್ಅ
  4. ಭ್ಯರ್ಥಿಯ ಜಾತಿ ಪ್ರಮಾಣಪತ್ರ
  5. ಕುಟುಂಬದ ಆದಾಯ ಪ್ರಮಾಣಪತ್ರ
  6. ಬ್ಯಾಂಕ್ ಖಾತೆ ವಿವರಗಳು
  7. ಬ್ಯಾಂಕ್ ಖಾತೆಯ ವಿವರಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿರುವ ದಾಖಲೆ
  8. NSP ಯ ವಿದ್ಯಾರ್ಥಿವೇತನ ID

    ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

     

    app download

SSP ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು : 11ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸ

  1. ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
  2. ವಿದ್ಯಾರ್ಥಿಗಳ SATS ಸಂಖ್ಯೆ / ಕಾಲೇಜು ನೋಂದಣಿ ಸಂಖ್ಯೆ
  3. ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ
  4. ವಿದ್ಯಾರ್ಥಿಯ ಅಥವಾ ಹೆತ್ತವರ FRUITS ಗುರುತಿನ ಸಂಖ್ಯೆ
  5. ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ಲಿನ ದಾಖಲಾತಿ ಸಂಖ್ಯೆ ( ಅಲ್ಪಸಂಖ್ಯಾತಿಯ  ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ) ಸೂಚನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಮೊದಲು ರಾಷ್ಟ್ರೀಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
  6. ವಿದ್ಯಾರ್ಥಿಯ ಹೆಸರಿನಲ್ಲಿರುವ ಆರ್ ಡಿ ಇಂದ ಶುರುವಾಗುವ ಜಾತಿ ಅಥವಾ ಆದಾಯ ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗದ ( ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ) ಪ್ರಮಾಣ ಪತ್ರಗಳ ಸಂಖ್ಯೆ.
  7. ಇ ದೃಡಿಕರಿಸಿದ ದಾಖಲೆಗಳ ಸಂಖ್ಯೆಗಳು
  8. ಅಂಕಪಟ್ಟಿ
  9. ಶುಲ್ಕ ರಶೀದಿ
  10. ಅಂಗವಿಕಲ ವಿದ್ಯಾರ್ಥಿಯಾಗಿದ್ದಲ್ಲಿ ಭಾರತ ಸರ್ಕಾರದಿಂದ ನೀಡಿರುವ ಅಂಗೈಯಲ್ಲಿ ಅಂಗವಿಕಲ ಕಾರ್ಡ್ ಸಂಖ್ಯೆ

ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ರಶೀದಿಯನ್ನು ಇ-ದೃಢೀಕರಣವನ್ನು ಮಾಡಿಸುವ ಅಗತ್ಯವಿರುವುದಿಲ್ಲ.

SSP ವಿದ್ಯಾರ್ಥಿವೇತನ ಮಂಜೂರಾತಿ ಮಾಡುವ ಇಲಾಖೆಗಳು :

  1. ಸಮಾಜ ಕಲ್ಯಾಣ ಇಲಾಖೆ
  2. ಬುಡಕಟ್ಟು ಕಲ್ಯಾಣ ಇಲಾಖೆ
  3. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
  4. ಕಾರ್ಮಿಕ ಇಲಾಖೆ

ಈ ಯೋಜನೆ ನಿರ್ದಿಷ್ಟವಾಗಿ ಪ.ಜಾ/ಪ.ಪಂ/ಓಬಿಸಿ ಮತ್ತು ಇಬಿ ನಂತಹ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾಗಿದೆ.

SSP ವಿದ್ಯಾರ್ಥಿವೇತನ ಅರ್ಹತೆಗಳು2022-23:

ಈ ವಿದ್ಯಾರ್ಥಿವೇತನವನ್ನು ಪಡೆಯಲು ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿರಬೇಕು ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಅಲ್ಪಸಂಖ್ಯಾತರಾಗಿರಬೇಕು

tel share transformed

ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪಟ್ಟಿ 2022-23 ವೀಕ್ಷಿಸುವುದ ಹೇಗೆ ?

ಎಸ್‌ಎಸ್‌ಪಿ ಅಧಿಕೃತ ವೆಬ್‌ಸೈಟ್ ನಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿಯನ್ನು ನೀಡಲಾಗಿರುತ್ತದೆ. ಈಗಾಗಲೇ ಕರ್ನಾಟಕ ಸರ್ಕಾರ ಕೆಲವು ವಿದ್ಯಾರ್ಥಿಗಳಿಗೆ Ssp ಸ್ಕಾಲರ್ಶಿಪ್ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಹಣ ಬರಬೇಕಿದೆ. ಈಗಾಗಲೇ ನನ್ನ ಖಾತೆಗೆ 10,000 ಹಣ ಬಂದಿದ್ದು ರೈತ ವಿದ್ಯಾ ನಿಧಿ ಸ್ಕೀಮ್ ನಲ್ಲಿ ಬಂದಿದೆ. ಹಾಗಾದರೆ ನಿಮ್ಮ SSP ವಿದ್ಯಾರ್ಥಿ ವೇತನದ ಸ್ಟೇಟಸ್ ಅನ್ನು ಈಗಲೇ ತಿಳಿದುಕೊಳ್ಳೋಣ. ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ1: ಎಸ್‌ಎಸ್‌ಪಿ ಕರ್ನಾಟಕ ವಿದ್ಯಾರ್ಥಿವೇತನದ ಅಧಿಕೃತ ವೆಬ್‌ಸೈಟ್‌ಗೆ https://ssp.postmatric.karnataka.gov.in/ ಭೇಟಿ ನೀಡಿ.

ssp1

ಹಂತ 2:  ಮುಖಪುಟದಲ್ಲಿ, ಮೆನು ಬಾರ್ ಮೇಲೆ ಕ್ಲಿಕ್ ಮಾಡಿ ಮತ್ತು ವಿದ್ಯಾರ್ಥಿಗಳ ಲಾಗಿನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಲಾಗಿನ್ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಲಾಗಿನ್ ಮೇಲೆ ಕ್ಲಿಕ್ ಮಾಡಿ.

ssp 2

ಹಂತ 3: ನೀವು ವಿದ್ಯಾರ್ಥಿ ಸ್ಥಿತಿ ವರದಿ (Year wise Student Status)ಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ Student Id ಮತ್ತು Academic Year ಅನ್ನು ನಮೂದಿಸಿ ಮತ್ತು View ಬಟನ್ ಕ್ಲಿಕ್ ಮಾಡಿ. ( ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ

ssp 3 1

 

ಹಂತ 4: ನಂತರ ಸಂರ್ಪೂರ್ಣ ವಿವರ ನಿಮ್ಮ ಪರದೆಯ ಮೇಲೆ ಮೂಡಲಿದೆ.ಹೀಗೆ, ( ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ )

ssp22

ಹಂತ 5: ಕೊನೆಯದಾಗಿ, ಅದನ್ನು ಪ್ರಿಂಟ್‌ಔಟ್ ತೆಗೆದುಕೊಳ್ಳಿ.“““““`

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

Picsart 23 07 16 14 24 41 584 transformed 1

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

WhatsApp Group Join Now
Telegram Group Join Now

Related Posts

3 thoughts on “SSP Scholarship: ₹10,000/- ರೂಪಾಯಿ ಈ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ, ಲಿಸ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

Leave a Reply

Your email address will not be published. Required fields are marked *

error: Content is protected !!